‘ತಲ್ಲೂರು ರಾಯನಗೌಡರ ಶೋಧಗಳು’ ರಾಷ್ಟ್ರೀಯ ವಿಚಾರ ಸಂಕಿರಣ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಮಹಾವಿದ್ಯಾಲಯದ ಆತಿಥ್ಯದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಣಿ ಚನ್ನಮ್ಮ ಅಧ್ಯಯನ ಪೀಠದಿಂದ ‘ಕಿತ್ತೂರ ರಾಣಿ ಚನ್ನಮ್ಮ ಸಂಶೋಧನೆ ಮತ್ತು

ಇತಿಹಾಸ ಮಂಡಳ: ತಲ್ಲೂರು ರಾಯನಗೌಡರ ಶೋಧಗಳ’ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕರಣವನ್ನು ಫೆ. 24ರಂದು ಬೆಳಿಗ್ಗೆ 10.30ಕ್ಕೆ ಏರ್ಪಡಿಸಿರುವರು.

ವಿಚಾರ ಸಂಕಿರಣವನ್ನು ಸಂಸ್ಥೆಯ ಅಧ್ಯಕ್ಷ ಬಸಗೌಡ ಪಾಟೀಲ ಉದ್ಘಾಟಿಸುವರು, ಅಧ್ಯಕ್ಷತೆಯನ್ನು ಪ್ರೊ. ಎಸ್.ಎಂ. ಗಂಗಾಧರಯ್ಯ ವಹಿಸುವರು, ಮುಖ್ಯ ಅತಿಥಿಗಳಾಗಿ ರಾಣಿ ಚನ್ನಮ್ಮ ವಿವಿಯ ಸಿನೆಟ್ ಸದಸ್ಯ ಹನುಮಂತಯ್ಯ ಶಿಗ್ಗಾಂವವಹಿಸುವರು. ಪ್ರೊ. ಆರ್.ಎಂ. ಷಡಕ್ಷರಯ್ಯ ಆಶಯ ಭಾಷಣ ಮಾಡುವರು.

- Advertisement -

ಗೋಷ್ಠಿಗಳು: ಮೊದಲ ಗೋಷ್ಠಿಯಲ್ಲಿ ಡಾ. ಮೈತ್ತಾಯಿಣಿ ಗದಿಗೆಪ್ಪಗೋಳ ‘ರಾಯಣಗೌಡರ ಜೀವನಾದರ್ಶಗಳು’, ಡಾ. ಸುರೇಶ ಹನಗಂಡಿ ‘ಕಿತ್ತೂರ ರಾಣ ಚನ್ನಮ್ಮ ಸಂಶೋಧನೆ ಮತ್ತು ಇತಿಹಾಸ

ಮಂಡಳ: ಸಂರಚನೆ, ಬೆಳವಣಿಗೆ’ ಕುರಿತು ಮಾತನಾಡುವರು. ಎರಡನೇ ಗೋಷ್ಠಿಯಲ್ಲಿ ಪ್ರಕಾಶ ಗಿರಿಮಲ್ಲನ್ನವರ ‘ಕಿತ್ತೂರ ರಾಣಿ ಚನ್ನಮ್ಮ ಇತಿಹಾಸ ಮತ್ತು ಸಂಶೋಧನಾ ಮಂಡಳದ ಸಾಹಿತ್ಯ’ ಕುರಿತು, ಯಲ್ಲಪ್ಪ ಕಡಕೋಳ ‘ತಲ್ಲೂರು ರಾಯನಗೌಡರ ಶೋಧಗಳು’ ಕುರಿತು ಮತ್ತು ಮೂರನೇ ಗೋಷ್ಠಿಯಲ್ಲಿ ಡಾ. ಎಂ. ರಂಗಸ್ವಾಮಿ ‘ಕಿತ್ತೂರ ಚರಿತ್ರೆ ಮರು ನಿರ್ಮಾಣದ ಪ್ರಯತ್ನಗಳು’ ಮತ್ತು ಈಶ್ವರಚಂದ್ರ ಬೆಟಗೇರಿ ಅವರಿಂದ ಕಿತ್ತೂರ ಚನ್ನಮ್ಮ ಪಾತ್ರದ ಪ್ರಾತ್ಯಕ್ಷಿಕೆ’ ಜರುಗುವುದು.

ಸಮಾರೋಪ: ಸಮಾರೋಪದಲ್ಲಿ ಸಾಹಿತಿ ಯ.ರು. ಪಾಟೀಲ, ಪ್ರೊ. ಎಸ್.ಎಂ. ಗಂಗಾಧರಯ್ಯ, ಕಾಲೇಜು ಆಡಳಿತಾಧಿಕಾರಿಗಳು ಭಾಗವಹಿಸುವರು ಎಂದು ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!