ಬೀದರ – ನಾಡಿನ ಜನತೆ ಸರ್ಕಾರಿ ಕಚೇರಿಗಳಿಗಾಗಿ ಅಲೆಯುವದನ್ನು ತಪ್ಪಿಸಲು ಪ್ರತಿ ಜಿಲ್ಲಾ ಮತ್ತು ತಾಲೂಕಿಗೊಂದು ಮಿನಿ ವಿಧಾನ ಸೌಧ ವನ್ನು ನಿರ್ಮಾಣ ಮಾಡಿದಂತೆ ಹತ್ತು ವರ್ಷಗಳ ಹಿಂದೆ ಔರಾದ ತಾಲೂಕಿನ ಜನರ ಅನಕೂಲಕ್ಕೋಸ್ಕರ ಔರಾದ ಪಟ್ಟಣದಲ್ಲಿ ಮಿನಿ ವಿಧಾನ ಸೌಧವನ್ನು ನಿರ್ಮಿಸಲಾಯಿತು
ಆದರೆ ಈ ಸಂಕೀರ್ಣದಲ್ಲಿ ತಾಲೂಕ ಮಟ್ಟದ ಸರ್ಕಾರಿ ಕಚೇರಿ ಗಳು ಪ್ರಾರಂಭ ಗೊಂಡು ಹತ್ತು ವರ್ಷಗಳೆ ಕಳೆದರೂ ಸಂಕೀರ್ಣದ ಆವರಣದಲ್ಲಿ ಇಲ್ಲಿಯ ವರೆಗೆ ಯಾವುದೇ ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸದೆ ಮೀನ ಮೇಷ ಎಣಿಸುತಿರುವದು ವಿಪರ್ಯಾಸವೆ ಸರಿ. ಆದರೆ ಕಳೆದ ಸಂಮಿಶ್ರ ಸರ್ಕಾರದ ಪತನದ ನಂತರ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಈ ಕ್ಷೇತ್ರ ವನ್ನೆ ಪ್ರತಿನಿಧಿಸಿ ಸಚಿವ ಸ್ಥಾನ ಪಡೆದ ಪ್ರಭು ಚವ್ಹಾಣ ಒಂದು ಜಿಲ್ಲೆಯಲ್ಲ ಎರಡು ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ಮೇಲೆ ಸ್ಥಳಿಯರು ಇನ್ನು ಮುಂದೆ ನಮ್ಮೆಲ್ಲಿಯೇ ಸಮಸ್ಯೆ ಗಳಿಗೆ ಪರಿಹಾರ ದೊರಕುವ ಕಾಲ ಬಂದಿದೆ ಎಂದು ಆಸೆಯಿಂದ ನೋಡುತಿದ್ದರು. ಎರಡು ವರ್ಷಗಳೇ ಕಳೆಯುತಿದ್ದರು ಇಲ್ಲಿಯವರೆಗೆ ಯಾವುದೆ ಕ್ರಮಕ್ಕೆ ಮುಂದಾಗದ ಸಚಿವ ಪ್ರಭು ಚವ್ಹಾಣ ಅವರು ಇದ್ದಕಿದ್ದ ಹಾಗೆ ಕಳೆದ ತಾಲೂಕ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಹಸಿಲ್ದಾರರ ಮೇಲೆ ಆಕ್ರೋಶ ವ್ಯಕ್ತ ಪಡಿಸಿ ಒಂದು ವಾರದಲ್ಲಿ ತಾಲೂಕಿನ ಸಂಕೀರ್ಣದ ಆವರಣದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ತಾಕೀತು ಮಾಡುತಿರುವುದನ್ನು ನೋಡಿದರೆ ಕೈಲಾಗದ ಗಂಡ ಕೈಲಾಸ ಕಂಡ ಎಂಬ ಗಾದೆ ನೆನಪಿಗೆ ಬರುತ್ತದೆ.
ಏಕೆಂದರೆ ಕಳೆದ ಹದಿಮೂರು ವರ್ಷಗಳಿಂದ ಈ ಕ್ಷೇತ್ರದ ಶಾಕರಾಗಿ ಪ್ರತಿನಿಧಿಸುತಿರುವ ಸಚಿವ ಪ್ರಭು ಚವ್ಹಾಣ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ಬೀದರ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ವಹಿಸಿದ್ದೇ ಮೇಲು ಇಲ್ಲಿಯವರೆಗೆ ಈ ಆವರಣದಲ್ಲಿ ಯಾವುದೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅನುದಾನ ನೀಡದೇ ತನ್ನ ತಪ್ಪನು ಮುಚ್ಚಿಕೊಳ್ಳಲು ಅಧಿಕಾರಿಗಳ ಮೇಲೆ ಗೂಬೆ ಕೂಡಿಸುವ ಸಚಿವರನ್ನು ನೋಡಿದರೆ ಈ ಮೇಲಿನ ಗಾದೆ ಸೂಕ್ತ ಎಂದು ಹೇಳಬಹುದು.
ಜನರ ಮೇಲೆ ತಮಗೆ ಕಾಳಜಿ ಇದ್ದರೆ ಕ್ಯಾಮರಾ ಗಳ ಮುಂದೆ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸುವುದನ್ನು ಬಿಟ್ಟು ಮೂಲಭೂತ ವ್ಯವಸ್ಥೆ ಕಲ್ಪಿಸಿ ಕೊಡುವರೋ ಅಥವಾ ಜನರು ಆಡಿಕೊಳ್ಳುವ ಗಾದೆಯಂತೆ ನಾನು ಇದ್ದೇನೆ ಎಂದು ಒಪ್ಪಿಕೊಳ್ಳುವರೋ ಕಾದು ನೋಡಬೇಕು
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ