spot_img
spot_img

ತಾಲ್ಲೂಕು ಮಟ್ಟದ ಚಿತ್ರಕಲಾ ಶಿಕ್ಷಕರ ಕಾರ್ಯಾಗಾರ ಉದ್ಘಾಟನೆ

Must Read

spot_img

‘ಚಿತ್ರಕಲೆ ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುತ್ತದೆ’

ಮೂಡಲಗಿ: ‘ಚಿತ್ರಕಲೆಯು ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸಿ ಅವರನ್ನು ಬೌದ್ಧಿಕವಾಗಿ ಗಟ್ಟಿಗೊಳಿಸುತ್ತದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ್ ಮನ್ನಿಕೇರಿ ಹೇಳಿದರು.

ಇಲ್ಲಿಯ ಮೇಘಾ ಶಿಕ್ಷಣ ಸಂಸ್ಥೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರ ಕಚೇರಿ, ಜಿಲ್ಲಾ ಡಯಟ್ ಆಶ್ರಯದಲ್ಲಿ ಜರುಗಿದ ಮೂಡಲಗಿ ತಾಲ್ಲೂಕು ಮಟ್ಟದ ಚಿತ್ರಕಲಾ ಶಿಕ್ಷಕರ ಕಾರ್ಯಾಗಾರ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಪಠ್ಯ ಮತ್ತು ಚಿತ್ರಕಲೆ ಒಂದಕ್ಕೊಂದು ಪೂರಕವಾಗಿದೆ ಎಂದರು.

ಶಾಲೆಗಳಲ್ಲಿರುವ ಚಿತ್ರಕಲಾ ಶಿಕ್ಷಕರು ತಮ್ಮ ಕಲಾ ಪ್ರಕಾರದಲ್ಲಿ ಶ್ರದ್ಧೆಯಿಂದ ಕಾರ್ಯಮಾಡಿ ಚಿತ್ರಕಲೆಯನ್ನು ಬೆಳೆಸಬೇಕು ಎಂದರು.
ಶಾಲೆಗಳಲ್ಲಿ ಚಿತ್ರಕಲೆ ಉಳಿಯಬೇಕು. ರಾಜ್ಯದಲ್ಲಿ ಖಾಲಿ ಇರುವ ಚಿತ್ರಕಲಾ ಶಿಕ್ಷಕರ ನೇಮಕ ಮಾಡುವಂತೆ ಇಲಾಖೆಯ ಸಭೆಯಲ್ಲಿ ತಾವು ಒತ್ತಾಯಿಸುವುದಾಗಿ ತಿಳಿಸಿದರು.

ಕಾರ್ಯಾಗಾರ ಉದ್ಘಾಟಿಸಿದ ಚಿಕ್ಕೋಡಿ ಡಯಟ್ ಉಪನ್ಯಾಸಕಿ ಭಾರತಿ ಸನದಿ ಮಾತನಾಡಿ, ಚಿತ್ರಕಲಾ ಶಿಕ್ಷಕರಿಗೆ ಚಿತ್ರಕಲೆ ಅಲ್ಲದೆ ಶಾಲೆಗಳಲ್ಲಿ ಬೇರೆ ವಿಷಯಗಳ ಒತ್ತಡ ಸಹ ಇದೆ. ಹಾಗಾಗದಂತೆ ಇಲಾಖೆಯು ನೋಡಿಕೊಳ್ಳಬೇಕಾಗಿದೆ. ಚಿತ್ರಕಲೆ ಉಳಿಸುವ ನಿಟ್ಟಿನಲ್ಲಿ ಎಲ್ಲರ ಪ್ರಯತ್ನ ಇರಬೇಕು ಎಂದರು.

ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿದ ಬಾಲಶೇಖರ ಬಂದಿ ಮಾತನಾಡಿ ಚಿತ್ರಕಲೆ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ರೂಪಿಸುತ್ತದೆ. ಶಿಕ್ಷಣ ಮತ್ತು ಸಾಹಿತ್ಯ ಜನರನ್ನು ಪರಿಣಾಮಕಾರಿಯಾಗಿ ಮುಟ್ಟಿಸುವಲ್ಲಿ ಚಿತ್ರಕಲೆಯ ಪಾತ್ರ ಅತ್ಯಂತ ಮಹತ್ವದಾಗಿದೆ ಎಂದರು.

ಮಂಜುನಾಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಲಕ್ಷ್ಮಣ ಅಡಿಹುಡಿ ಮಾತನಾಡಿ, ಚಿತ್ರಕಲಾವಿದರಿಗೆ ಮತ್ತು ಚಿತ್ರಕಲೆಗೆ ತಮ್ಮ ಪ್ರೋತ್ಸಾಹ ನಿರಂತರವಾಗಿರುತ್ತದೆ ಎಂದರು.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಎ. ದೇವರುಷಿ ಚಿತ್ರಕಲಾ ಶಿಕ್ಷಕರ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಿ, ಚಿತ್ರಕಲಾ ಶಿಕ್ಷಕರ ಸಮಸ್ಯೆಗಳಿಗೆ ಇಲಾಖೆಯು ಗಮನ ನೀಡಬೇಕು ಎಂದು ಮನವಿ ಮಾಡಿಕೊಂಡರು.

ಮೇಘಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಲ್ಲಪ್ಪ ಗಾಣಿಗೇರ, ಜಿಲ್ಲಾ ಸಂಘಟನೆಯ ಕಾರ್ಯದರ್ಶಿ ರಾಜಶೇಖರ ಭರಮವಡೆಯರ, ರಾಯಬಾಗ ತಾಲ್ಲೂಕು ಅಧ್ಯಕ್ಷ ಕರೆಪ್ಪ ನಾಯಿಕ, ಸಂಪನ್ಮೂಲ ವ್ಯಕ್ತಿಗಳಾಗಿ ಎ.ಆರ್. ಕುರಬರ, ಜೆ.ಬಿ. ದೇವರಮನಿ, ಜಿ.ಆರ್. ಭಾಗೋಜಿ, ಬಿ.ಐ. ಬಡಿಗೇರ ಭಾಗವಹಿಸಿದ್ದರು.

ತಾಲ್ಲೂಕಿನ 22 ಪ್ರೌಢ ಶಾಲಾ ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಸುಭಾಷ ಕುರಣಿ ಪ್ರಾಸ್ತಾವಿಕ ಮಾತನಾಡಿದರು, ಆರ್.ಎಸ್. ಬಡೇಸ್ ಸ್ವಾಗತಿಸಿದರು, ಬಿ.ಐ. ಬಡಿಗೇರ ನಿರೂಪಿಸಿದರು, ಗೀತಾ ಗಾಣಿಗೇರ ವಂದಿಸಿದರು.

- Advertisement -
- Advertisement -

Latest News

ಸೈನಿಕರಂತೆ ಸದಾ ಸೇವೆ ಸಲ್ಲಿಸುವ ಪೊಲೀಸರ ಕಾರ್ಯ ಸ್ತುತ್ಯರ್ಹ- ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಸಾರ್ವಜನಿಕರ ನೆಮ್ಮದಿ ಬದುಕಿಗೆ ಪೊಲೀಸರು ರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದು ಸ್ತುತ್ಯರ್ಹವೆಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದರು. ರವಿವಾರದಂದು ತಾಲೂಕಿನ ಕುಲಗೋಡ...
- Advertisement -

More Articles Like This

- Advertisement -
close
error: Content is protected !!