spot_img
spot_img

ತುಷ್ಟೀಕರಣ ಎಂಬುದು ಸಾಕಿದ ಹೆಬ್ಬಾವಿನಂತೆ, ಅಳತೆ ನೋಡಿ ನುಂಗುತ್ತದೆ !!

Must Read

- Advertisement -

ಎಂಥ ಮಾರ್ಮಿಕವಾದ ಮಾತು !

ಒಂದು ಕಥೆ ವಾಟ್ಸಪ್ ನಲ್ಲಿ ಬಂದಿತ್ತು. ಈ ಮಾರ್ಮಿಕ ಕಥೆಯ ಮರ್ಮ ಬಿಚ್ಚಿ ಇಡುತ್ತದೆ. ಮುಖ್ಯವಾಗಿ ಢೋಂಗಿ ಜಾತ್ಯತೀತವಾದಿಗಳು ಹಾಗೂ ಒಂದು ವರ್ಗದ ತುಷ್ಟೀಕರಣ ಮಾಡುವ ರಾಜಕಾರಣ ಮಾಡುವವರು ಓದಲೇಬೇಕು.

ಆತ ಒಂದು ಹೆಬ್ಬಾವನ್ನು ಸಾಕಿದ್ದ. ಅದರ ಮೇಲೆ ಅದೆಷ್ಟು ಅಕ್ಕರಾಸ್ತೆ ಬೆಳೆಸಿಕೊಂಡಿದ್ದನೆಂದರೆ ಅದರ ಜೊತೆಯೆ ಮಲಗುತ್ತಿದ್ದ. ಅದನ್ನು ಎಲ್ಲ ಕಡೆಗೆ ಒಯ್ಯುತ್ತಿದ್ದ. ಅದನ್ನು ಇಷ್ಟ ಪಡದವರ ಮನೆಗಳಿಗೆ ಹೋಗುವುದನ್ನೇ ಬಿಟ್ಟ. ಅದರಿಂದ ಸಮಾರಂಭಗಳಿಗೆ ಹೋಗುವುದನ್ನು ನಿಲ್ಲಿಸಿದ. ಇಂತಿಪ್ಪ ಅವನಿಗೆ ಸ್ವಲ್ಪ ದಿನದ ನಂತರ ತನ್ನ ಮುದ್ದಿನ ಹಾವು ಏನೂ ತಿನ್ನುತ್ತಿಲ್ಲವೆಂದು ಗೊತ್ತಾಯ್ತು. ಅವನಿಗೆ ಯೋಚನೆ ಶುರುವಾಯ್ತು. ಬಹುಶಃ ಆರೋಗ್ಯ ಹದಗೆಟ್ಟಿರಬಹುದು ಎಂದು ಪಶುವೈದ್ಯರ ಬಳಿ ಕರೆದುಕೊಂಡ ಹೋದ. ವೈದ್ಯರು ಇವನ ಕಥೆಯನ್ನೆಲ್ಲಾ ಕೇಳಿಸಿಕೊಂಡರು ತನ್ನ ಹಾಸಿಗೆಯಲ್ಲಿ ಮಲಗಿಸಿಕೊಳ್ಳುತ್ತಿದ್ದೆ ಎಂದಾಗ ಗಾಬರಿಯಾದರು.

- Advertisement -

ಎಲ್ಲಾ ಕೇಳಿಸಿಕೊಂಡ ಮೇಲೆ ಅದರ ಅರೋಗ್ಯದ ಬಗ್ಗೆ ಚಿಂತಿತನಾಗಿದ್ದವನಿಗೆ ಕೆಲವು ಪ್ರಶ್ನೆ ಕೇಳಿದರು. ಎಷ್ಟು ದಿನದಿಂದ ಆಹಾರ ಸೇವಿಸಿಲ್ಲ? ಮೂರು ನಾಲ್ಕು ದಿನವಾಗಿದೆ ಉತ್ತರ ಬಂತು. ನಿಮ್ಮನ್ನು ಆಗಾಗ ಸುತ್ತಿ ಕೊಳ್ಳುತ್ತಾ? ಹೌದು ಪ್ರೀತಿ ತೋರಿಸಲು ನನ್ನನ್ನು ಅಪ್ಪಿಕೊಳ್ಳುತ್ತೆ. ಹೂಂ ಆಗಾಗ ನಿಮ್ಮ ಉದ್ದಕ್ಕೂ ಮೈಚಾಚಿ ಮಲಗುತ್ತಾ? ಹೌದು ನನ್ನನ್ನು ಅನುಕರಿಸುತ್ತೆ ಎಂದ ಖುಷಿಯಿಂದ.

ವೈದ್ಯರು ನಿಟ್ಟುಸಿರು ಬಿಡುತ್ತಾ ಹೇಳಿದರು.

ನೋಡಿ ನಿಮ್ಮ ಪ್ರಾಣಿ ಪ್ರೀತಿ ನಿಜಕ್ಕೂ ಒಳ್ಳೆಯದೆ ಅದರ್ಶಪ್ರಾಯವೇ ಹೌದು, ಅದರೆ ಹಾವು ಎಂದಿಗೂ ಅದು ಪ್ರಾಣಿಯೇ. ನೀವಂದುಕೊಂಡಂತೆ ಅದು ನಿಮ್ಮ ಮೇಲಿನ‌ ಪ್ರೀತಿಗೆ ಜೊತೆಯಲ್ಲಿ ಮಲಗುತ್ತಿಲ್ಲ ಅಪ್ಪಿಕೊಳ್ಳಲು ಸುತ್ತಿಕೊಳ್ಳುತ್ತಿಲ್ಲ. ಅದು ನಿಮ್ಮ ಗಾತ್ರ ಅಳೆದು ಹಾಕಿದೆ. ನಿಮ್ಮ ಉದ್ದ ಅಳೆದುಕೊಂಡಿದೆ. ಈಗ ಹಸಿವಿನಿಂದಿರುವುದು ನಿಮ್ಮನ್ನು ನುಂಗಲು ಸಿದ್ದತೆ ಮಾಡಿಕೊಳ್ಳುತ್ತಿದೆ ಎಂಬುದು ನೀವು ಅರಗಿಸಿಕೊಳ್ಳಲೇ ಬೇಕಾದ ಕಟು ಸತ್ಯ. ಹಾವು ಯಾವತ್ತಿಗೂ ಹಾವೇ ಅದರ ಗುಣ ಬಿಟ್ಟು ಬದುಕಲಾರದು ಎಂಬುದು ನಿಮಗೆ ಅರಿವಿರಬೇಕಷ್ಟೆ. ಮೊದಲು ಅದನ್ನು ಕಾಡಿಗೆ ಬಿಡಿ ಎಂದು ಹೇಳಿದರಂತೆ.

- Advertisement -

ಈ ಕಥೆ ಈಗ್ಯಾಕಪ್ಪ ಎಂದಿರಾ? ಭಾರತದಲ್ಲಿ ಭಯೋತ್ಪಾದನೆ ಹೀಗೆ ಹೆಬ್ಬಾವಿನಂತೆಯೇ ಇದೆ. ನೀವೆಷ್ಟೆ ಮುದ್ದಿನಿಂದ ಸಾಕಿದರೂ ಅದೂ ಹೆಬ್ಬಾವೆ ನುಂಗುವುದೇ ಅದರ ಗುಣ. ಯಾರೆಲ್ಲಾ ಅವರನ್ನು ಸಮರ್ಥಿಸುತ್ತಿದ್ದಾರೊ ಅವರಿಗೆ ಹೆಬ್ಬಾವಿಗೆ ಬೆಂಬಲ ಕೊಡುತ್ತಿದ್ದೇವೆಂಬ ಅರಿವಿದೆಯೊ ಇಲ್ಲವೊ ಗೊತ್ತಿಲ್ಲ. ಯಾವುದೊ ಆದರ್ಶದ ತೆವಲಿಗೆ ಬಿದ್ದು ಇಡೀ ಭಾರತವನ್ನು ನುಂಗುವರಿಗೆ ಬೆಂಬಲಕ್ಕೆ ನಿಂತಿದ್ದಾರೆ. ಇದು ಸುಳ್ಳು ಎನ್ನುವರು ನೋಡ ಬೇಕಿರುವುದು ಅಲ್ಲೆಲ್ಲಿಯದೊ ಇರಾನ್ ಇರಾಕ್ ಗ್ರೀಕ್ ಮೆಸಪಟೋಮಿಯ ದೇಶಗಳನ್ನಲ್ಲ ಇಲ್ಲೆ ಪಕ್ಕದ ನಮ್ಮದೆ ಕಾಶ್ಮೀರವನ್ನು, ಉದಾಹರಣೆಯಾಗಿ ತೆಗೆದುಕೊಳ್ಳಬೇಕಿರುವುದು ಪಕ್ಕದ ರಾಜ್ಯ ಕೇರಳವನ್ನು ಅದೆಲ್ಲಾ ಬಿಡಿ. ಕಾರವಾರದಿಂದ ಕೇರಳದವರೆಗಿನ ಹೆದ್ದಾರಿಯಲ್ಲಿ ಪಯಣಿಸುವಾಗ ಎಡ ಭಾಗಕ್ಕೆ ತಿರುಗಿ ನೋಡು ಸಾಕು. ಅದೂ ದೂರವೆನಿಸಿದರೆ ಪಾದರಾಯನಪುರ ಗೋರಿಪಾಳ್ಯ ಡಿಜೆಹಳ್ಳಿ ಕೆಜೆಹಳ್ಳಿ ಎಂಎಸ್ ಪಾಳ್ಯಗಳನ್ನು ನೋಡಿ.

ನಿಮಗೆ ಫೇಸ್ಬುಕ್ಕಿನಲ್ಲಿ ಇರುವ ಸ್ನೇಹಿತರಲ್ಲಿ 95% ನಷ್ಟು ಜನ ಅದರಲ್ಲಿ ಅಯ್ಯೊ ಕೋಮುವಾದದಿಂದ ನಾನು ದೂರ, ಅಯ್ಯೊ ರಾಜಕೀಯ ನನಗಲ್ಲ, ಛೇ ನಾನು ಅದನ್ನೆಲ್ಲಾ ಮಾತನಾಡಲ್ಲ ಬೆಂಬಲಿಸಲ್ಲ ಹಾಗೆಲ್ಲಾ ಮಾತನಾಡಿದ್ರೆ ಜನ ಏನಂದ್ಕೊಳಲ್ಲ ಎಂಬ ಹುಸಿ ಇಮೇಜ್ ಬೆಳೆಸಿಕೊಂಡಿರುವ ಮನಸ್ಥಿತಿಯವರೆ.

ಇವರಿಗೆಲ್ಲಾ ಕಾಶ್ಮೀರದಿಂದ ಓಡಿ ಬಂದು ದೆಹಲಿಯಲ್ಲಿ ಗುಡಿಸಲುಗಳಲ್ಲಿ ದಿನ ನೂಕುತ್ತಿರುವವರ ಕಥೆ ಗೊತ್ತಿಲ್ಲ. ತಮ್ಮ ಬುಡಕ್ಕೆ ಬಂದಾಗ ಇವರ ಗೋಳಾಟ ನೋಡಲು ಕಷ್ಟ. ರಾಜ್ಯ ಕಾಂಗ್ರೆಸಿನದ್ದು ಇದೇ ಪರಿಸ್ಥಿತಿ. ಬಿಸಿ ತುಪ್ಪ ಉಗುಳಲೂ ಆಗದ ನುಂಗಲೂ ಅಗದ ಪರಿಸ್ಥಿತಿ. ಹುಲಿ ಸವಾರಿ ಇಳಿದೂ ಹೋಗಲು ಆಗದ ಸಂಕಟ. ಅವರಿಗೆ ಬೆಂಬಲಿಸುವ ಕವಿರಾಜಮಾರ್ಗಗಳ ಪರಿಸ್ಥಿತಿಯೂ ಇದೇ ಆಗಲಿದೆ. ಒಮ್ಮೆ ಅವರ ವಿರುದ್ದ ಸಣ್ಣ ಮಾತನಾಡಲಿ ಹೆಬ್ಬಾವಿನಂತೆ ಅವರ ನಿಜ ರೂಪ ದರ್ಶನ ಮಾಡಿಸುತ್ತಾರೆ.

(ಈ ಕಥೆ ಬರೆದವರು ಯಾರೇ ಆಗಿರಲಿ ಅವರಿಗೊಂದು ನಮನ. ಇದು ನಮ್ಮ ಕಣ್ಣು ತೆರೆಸಿದರೆ ಭಾರತ ಉಳಿಯುತ್ತದೆ.)

- Advertisement -
- Advertisement -

Latest News

ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಎನ್.ಎಸ್.ಎಸ್. ಶಿಬಿರ ಸಹಕಾರಿ: ಡಾ. ಸಂಜೀವ ತಳವಾರ

ಮೂಡಲಗಿ: ವಿದ್ಯಾರ್ಥಿಗಳು ಸೇವಾ ಮನೋಭಾವ ರೂಢಿಸಿಕೊಳ್ಳಲು ಮತ್ತು ತಮ್ಮ ಬದುಕನ್ನು ಸಾರ್ಥಕ ಪಡಿಸಿಕೊಳ್ಳಲು ಎನ್‌.ಎಸ್‌.ಎಸ್‌ ವಾರ್ಷಿಕ ವಿಶೇಷ ಶಿಬಿರಗಳು ಉತ್ತಮ ಅವಕಾಶ ಒದಗಿಸಿಕೊಡುತ್ತವೆ ಎಂದು ರಾಣಿ...
- Advertisement -

More Articles Like This

- Advertisement -
close
error: Content is protected !!
Join WhatsApp Group