ಪಟ್ಟಣದ ಪ್ರತಿಷ್ಠಿತ ಸೊಸೈಟಿಯಲ್ಲಿ ಒಂದಾದ ಮಹಿಳಾ ಅರ್ಬನ್ ಸೊಸೈಟಿ ಯಲ್ಲಿ ಇಂದು ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಇಂದು ನಡೆದ ಸಮಾರಂಭದಲ್ಲಿ ಸೊಸೈಟಿಯ ಸಿಬ್ಬಂದಿವರ್ಗ ಮತ್ತು ಆಡಳಿತ ಮಂಡಳಿಯ ಸಮ್ಮುಖದಲ್ಲಿ ಸಿಹಿ ಹಂಚುವ ಮೂಲಕ ಸಂಭ್ರಮದಿಂದ ಆಚರಿಸಿದರು.
ಈ ಸಂದಭ೯ದಲ್ಲಿ ಉಪಾಧ್ಯಕ್ಷೆ ಶಾಂತಾ ಜುಂಜರವಾಡ ಮಾತನಾಡಿ ಮಹಿಳೆಯರು ಸಬಲರಾಗುವಲ್ಲಿ ನಮ್ಮ ಸಂಸ್ಥೆ ಸದಾ ಒಂದು ಹೆಜ್ಜೆ ಮುಂದೆ ಇರುತ್ತದೆ ಎಂದು ಹೇಳಿದರು.
ಮಹಾದೇವಿ ನಿರ್ವಾಣಿ, ನೀಲವ್ವ ನಿರ್ವಾಣಿ , ಇಂದ್ರವ್ವಾ ನಾಶಿ, ರುಕ್ಮಿಣಿ ನಾಶಿ , ಬಸವ್ವ ಜುಂಜರವಾಡ್, ಗೌರವ್ವ ಬೀರನಾಲ್ ಇವರ ಸಮ್ಮುಖದಲ್ಲಿ ಆಚರಿಸಿದರು.
ಸೊಸೈಟಿಯ ಸಿಬ್ಬಂದಿವರ್ಗದವರು ಉಪಸ್ಥಿತರಿದರು.