ದಿನಕ್ಕೊಂದು ಸಾಮಾನ್ಯಜ್ಞಾನ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ಶ್ರೀ ರಾಮಚಂದ್ರ ಸೂರ್ಯವಂಶ,ಶ್ರೀ ಕೃಷ್ಣ ಚಂದ್ರವಂಶದವರು. ಭೂಮಿ ಸೂರ್ಯನ ಸುತ್ತ ತಿರುಗಿದರೆ, ಚಂದ್ರ ಭೂಮಿಯ ಸುತ್ತ ತಿರುಗುತ್ತಾನೆ. ಭೂಮಿಯ ಮೇಲಿರುವ ಮನುಕುಲ ಯಾರ ಸುತ್ತ ತಿರುಗಬೇಕು?


ನಮ್ಮೊಳಗಿನ ವಿಶೇಷವಾದ ಶಕ್ತಿಯನ್ನು ಬಳಸಿಕೊಳ್ಳಲು ಎಷ್ಟೋ ಜನರು ಕಾಯುತ್ತಿರುತ್ತಾರೆ. ಆದರೆ ಅದು ನಮ್ಮನ್ನು ಹೊರಗೆಳೆದು ಪರಮಾತ್ಮನಿಂದ ದೂರ ಮಾಡಿದರೆ ನಷ್ಟ ನಮಗೆ ಎನ್ನುವ ಸತ್ಯ ತಿಳಿದರೆನಮ್ಮನ್ನು ನಾವು ಆಳಿಕೊಳ್ಳಲು
ಸಾಧ್ಯವಿದೆ. ಹೊರಗಿನ ಹೊಗಳಿಕೆ,ತೆಗಳಿಕೆ ಅವರವರ ಸ್ವಾರ್ಥ ಕ್ಕೆ ಸೀಮಿತ.

ಇದ್ದೂ ಇಲ್ಲದಂತೆ ತಟಸ್ಥ ರಾಗಿ ನೋಡಿದರೆ ನಮ್ಮ ಜ್ಞಾನಕ್ಕೆ ತಕ್ಕಂತೆ ಜೀವನ ಇರುತ್ತದೆ. ಹೊಗಳುವವರೆಲ್ಲಾ ನಮ್ಮವರಲ್ಲ.ತೆಗಳುವವರೆಲ್ಲಾ ವೈರಿಗಳಲ್ಲ. ಹಾಗಾದರೆ ನಾವು ಯಾರ ಹಿಂದೆ ನಡೆಯಬೇಕು? ಪರಮಾತ್ಮನ ಹಿಂದೆಯೋ ಪರದೇಶದ ಹಿಂದೆಯೋ? ನಡೆಸುವವನು ಒಳಗಿದ್ದಾನೆ.ಆದರೆ ನಡೆಯುವವರು ಹೊರಗಿದ್ದಾರೆ. ಹೊರಗಿರುವವರನ್ನು ಒಳಗೆ
ಎಳೆಯೋದು ಆಧ್ಯಾತ್ಮ ಸತ್ಯ.ಒಳಗಿದ್ದವರನ್ನು ಹೊರಗೆಳೆಯೋದು ಬೌತಿಕ ಸತ್ಯ. ಭಾರತೀಯರು ಮೊದಲು
ಒಳಗಿದ್ದೇ ಸತ್ಯ ಧರ್ಮವನ್ನರಿತು ಧರ್ಮರಕ್ಷಕರಾಗಿದ್ದರು.

- Advertisement -

ಆದರೆ, ಕಲಿಗಾಲವೋ ಶಿಕ್ಷಣದ ಪ್ರಭಾವವೋ ಈಗ ಒಳಗಿರುವವರೆಲ್ಲರೂ ಹೊರಗೆ ಬಂದು ಹೋರಾಟ ನಡೆಸುವಂತಾಗಿದೆ. ಹೋರಾಟ ಯಾರ‌ವಿರುದ್ದ ನಡೆದಿದೆ? ನಮ್ಮವರ ವಿರುದ್ದವೆ ನಡೆದಿದೆ. ಮನೆ ಮನೆಯಲ್ಲಿ ರಾಮಾಯಣ,ಮಹಾಭಾರತದ ಪ್ರಚಾರವಾಗುತ್ತಿದ್ದರೂ ಅದು ಜನರ ಅಜ್ಞಾನಕ್ಕೆ ಅರ್ಥ ವಾಗದೆ ಅದರಲ್ಲಿದ್ದ ರಾಜಕೀಯ ಎತ್ತಿ ಹಿಡಿದು ತಾನೂ ಶ್ರೀ ರಾಮನಂತೆ ಎಂದರೆ ಸಂಸಾರದೊಳಗೆ ಸೀತೆ ಇರಲು ಸಾಧ್ಯವಿಲ್ಲ. ಹಾಗೆ ಶ್ರೀ ಕೃಷ್ಣನ ರಾಜಯೋಗ ಬಿಟ್ಟು ರಾಜಕೀಯವನ್ನು ಎತ್ತಿ ಹಿಡಿದು ಧರ್ಮ ಧರ್ಮ ಗಳಲ್ಲಿ ಬಿರುಕು ಬಿಟ್ಟಿದೆ.

ದೇಶದ ಮೂಲ ಶಿಕ್ಷಣವನ್ನು ಹಿಂದೆ ನಿಲ್ಲಿಸಿ,ವಿದೇಶಿ ಶಿಕ್ಷಣವನ್ನು ಎತ್ತಿ ಏಣಿಗೇರಿಸುವ ಪ್ರಜೆಗೆ ದೇಶದ ಋಣ ತೀರಿಸಲು ಜ್ಞಾನ ಬೇಡವೆ? ವಿದೇಶಿ ಹಣದಿಂದ ದೇಶದ ಸಾಲ ತೀರುವುದೆ? ವಿದೇಶಿಗಳೆ ಆಳುವರೆ? ಧರ್ಮದ ಪ್ರಕಾರ ನಡೆಯಲು ಈಗ ಪ್ರಜಾಪ್ರಭುತ್ವದ ಪ್ರಜೆಗೆ ಸಾಮಾನ್ಯಜ್ಞಾನ ಇದ್ದರೆ ಸಾಕು.

“ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ” ಇದರಲ್ಲಿ ನಮ್ಮಮ್ಮ ಕಾಣದಿದ್ದರೆ ಅಧರ್ಮ ವಲ್ಲವೆ? ಹೋಗಲಿ . ಅಮ್ಮನ ಮಾತಿಗೆ ಬೆಲೆಕೊಟ್ಟು ವಿದೇಶಕ್ಕೆ ಹಾರಿದವರಿಗೆ ಸ್ವತಂತ್ರ ಜ್ಞಾನ ಸಿಕ್ಕಿತೆ?. ಇಲ್ಲಿ ಯಾರನ್ನೂ ಏನೂ ಕೇಳೋ ಹಾಗಿಲ್ಲ. ಹೇಳೋ ಹಾಗಿಲ್ಲ. ನಮ್ಮನ್ನ ನಾವೇ ತಿಳಿದರೆ ಸಾಕು. ಈ ಸ್ವಾತಂತ್ರ್ಯ ಇದ್ದರೆ ನಾವೇ ಸ್ವತಂತ್ರರು.

ಸ್ವಾಮಿ ವಿವೇಕಾನಂದರು ” ಏಳಿ ಎದ್ದೇಳಿ ಗುರಿ ಮುಟ್ಟೋವರೆಗೆ ನಿಲ್ಲದಿರಿ” ಎಂದ ಸಂದೇಶ ಪ್ರತಿಯೊಬ್ಬರಿಗೂ ತಲುಪಿಸುವ ಕೆಲಸ ನಡೆದಿದೆ. ಆದರೆ ಎಲ್ಲಾ ಹೋಗುತ್ತಿರುವುದು ಹೊರದೇಶದ ಕಡೆಗೆ, ಪರಕೀಯರ ಕಡೆಗೆ ರಾಜಕೀಯದ ಕಡೆಗೆ, ಬೌತಿಕ ವಿಜ್ಞಾನದ ಕಡೆಗೆ ಆದರೆ ಅವರ ಸಂದೇಶದೊಳಗಿದ್ದ ರಾಜಯೋಗಕ್ಕೆ
ದಾರಿ ಎಲ್ಲಿರುತ್ತದೆ?

ಪ್ರಚಾರ ಮಾಡಿದವರೆಲ್ಲರೂ ವಿವೇಕಾನಂದರಾಗಿದ್ದರೆ ದೇಶವೇ ವಿವೇಕನಂದಮಯವಾಗಿರುತ್ತಿತ್ತು. ಹಾಗೆಯೇ ಎಲ್ಲಾ ಅದ್ವೈತಿಗಳೂ ಶಂಕರರಾಗೋದಿಲ್ಲ, ಎಲ್ಲಾ ಮಾಧ್ವರೂ ಮಧ್ವಾಚಾರ್ಯ ರಾಗೋದಿಲ್ಲ ಹಾಗೆಯೇ ಭಾರತದಲ್ಲಿರುವವರೆಲ್ಲರೂ ಭಾರತೀಯರಾಗಲು ಹೇಗೆ ಸಾಧ್ಯ? ಸಾಧ್ಯವಾಗೋದಕ್ಕೆ ಬೇಕಿದೆ ಭಾರತೀಯತೆ ಬೆಳೆಸೋ ಶಿಕ್ಷಣ. ಅದರಲ್ಲಿಯೂ ರಾಜಕೀಯತೆ ತುಂಬಿದರೆ ನಷ್ಟವೆ ಗತಿ. ಕಾಲಾಯ ತಸ್ಮೈ ನಮ: ಯಾವುದನ್ನು ತಡೆಯಲು ಹೋದರೂ ಅದು ಇನ್ನೊಂದು ರೂಪತಳೆದು ಬೆಳೆಯುತ್ತದೆ.

ಹೀಗಾಗಿ ಮಾನವ ತನ್ನ ಕೆಟ್ಟ ಮನಸ್ಸನ್ನು ತಡೆಹಿಡಿದುಕೊಂಡು ಒಳಗಿದ್ದು ಹೊರಗಿನ ವಿಚಾರದಲ್ಲಿರುವ ಸತ್ಯವನ್ನಷ್ಟೇ ಒಪ್ಪಿಕೊಂಡರೆ ನಾವು ನಾವಾಗಿರಬಹುದು. ಇದಕ್ಕೆ ಯಾವುದೇ ಹೊರಗಿನ ರಾಜಕೀಯತೆ ಅಗತ್ಯವಿಲ್ಲ.

ನಮ್ಮ ಮನಸ್ಸು ನಮ್ಮೊಳಗಿರಬೇಕು. ಉತ್ತಮ ವಿಚಾರವಿದ್ದರೆ
ಹರಡಬೇಕು. ಕೆಟ್ಟ ವಿಚಾರಕ್ಕೆ ಸಹಕಾರ ಕೊಟ್ಟರೆ ಕೆಟ್ಟದ್ದೇ ಒಳಗೆ ಸೇರುವುದಲ್ಲವೆ? ಏನನ್ನು ನೋಡುತ್ತೇವೋ? ಕೇಳುತ್ತೇವೋ,‌ ಮಾಡುತ್ತೇವೋ, ಓದುತ್ತೇವೋ , ಅದೇ ನಮ್ಮ
ಜೀವನವಾಗುತ್ತದೆ.

ಹೀಗಾಗಿ ಕೊನೆ ಯಲ್ಲಿ ವಾನಪ್ರಸ್ಥಾಶ್ರಮ ಹಿಂದಿನ ಕಾಲದಲ್ಲಿತ್ತು. ಈಗಿನ ಆಶ್ರಮಗಳೂ ಭ್ರಷ್ಟರ ಹಣದಲ್ಲಿ ನಡೆಯುತ್ತಿದ್ದರೆ ಯಾರಿಗೆ ಶಕ್ತಿ ಬರುತ್ತದೆ? ಮೂಲ ತಿಳಿದು ನಡೆದರೆ ಉತ್ತಮ ಮಾರ್ಗ ಮನೆಯಲ್ಲಿದ್ದೇ ಕಾಣಲು ಸಾಧ್ಯವೆನ್ನಬಹುದು.

ಒಟ್ಟಿನಲ್ಲಿ ಪ್ರಜಾಪ್ರಭುತ್ವದ ಪ್ರಜೆಗಳಿಗೆ
ಸ್ವಾತಂತ್ರ್ಯ ವಿದೆ. ಅದು ದೇಶದ ಧರ್ಮಶಿಕ್ಷಣದ ಪರ, ಮಾನವಧರ್ಮ,ನೈತಿಕತೆಯ ಬಳಸಿದರೆ ಮಾತ್ರ ಪರಮಾತ್ಮನ ದರ್ಶನ. ಇಲ್ಲವಾದರೆ ಪರಾಧೀನರ ದರ್ಶನ.

*ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು*

- Advertisement -
- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!