ದಿನಕ್ಕೊಂದು ಸಾಮಾನ್ಯಜ್ಞಾನ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಅಶೋಕನಂತಹ ಮಹಾಚಕ್ರವರ್ತಿಯ ಚಕ್ರವನ್ನು ಭಾರತ ರಾಷ್ಟ್ರ ದ್ವಜದ ಮಧ್ಯೆ ಇಟ್ಟುಈ ಕಡೆ ರಾಜಕೀಯ ಇನ್ನೊಂದು ಕಡೆ ರಾಜಯೋಗವನ್ನು ಪ್ರಚಾರ ಮಾಡಿ, ಶಿಕ್ಷಣದಲ್ಲಿಯೇ ರಾಜಕೀಯವನ್ನು ಎತ್ತಿ ಹಿಡಿದಿರುವಾಗ ದೇಶ ಅಜ್ಞಾನದ ಹೋರಾಟ,ಹಾರಾಟ,ಮಾರಾಟದಲ್ಲೇ ಇರುತ್ತದೆ.ಪುರಾಣ ಪುರುಷರ ಕಥೆಗಳೂ ಇದರಿಂದ ಬೇರೆಯಾಗಿಲ್ಲ.

ಮಧ್ಯವರ್ತಿಗಳ ಅರ್ಧಸತ್ಯದ ಸ್ವಾರ್ಥ ಅಹಂಕಾರವನ್ನು ಸರ್ಕಾರ ತಡೆಯಲಾಗುವುದೆ?


ಶತ್ರು ಗಳನ್ನು ಪ್ರೀತಿಸು ಎನ್ನುವ ಹಿಂದೂ ಧರ್ಮದ ಪ್ರಕಾರ ಎಷ್ಟು ಜನರು ನಡೆದಿದ್ದಾರೆ? ನಡೆಯಲಾಗಿದೆ? ನಮ್ಮೊಳಗಿನ ಅಜ್ಞಾನದಲ್ಲಿ ನಮಗೆ ಯಾರು ಸಹಾಯ ಮಾಡುವರೋ ಅವರು ನಮ್ಮ ಮಿತ್ರರು. ಯಾರು ಅಸಹಕಾರ ತೋರಿಸುವರೋ ಅವರು ಶತ್ರುಗಳು.

- Advertisement -

ಇದನ್ನು ಬೌತಿಕ ಜಗತ್ತು ಒಪ್ಪಿಕೊಂಡು ಮುಂದೆ ಬಂದಿದೆ. ಆದರೆ, ಅಧ್ಯಾತ್ಮದ ಪ್ರಕಾರ ಇದು ತಪ್ಪು ಕಲ್ಪನೆ. ಮಾನವನ ಜನ್ಮಕ್ಕೆ ಕಾರಣವಾಗಿರುವ ಅವನ ಹಿಂದಿನ ಜನ್ಮದ ಋಣ ಅಥವಾ ಸಾಲ,ವನ್ನು ತೀರಿಸಲು ಬಂದ ಜೀವ ಸ್ವತಂತ್ರ ವಾಗಿ, ಸ್ವಾವಲಂಬನೆ, ಸತ್ಯ,ಧರ್ಮದ ದಾರಿಯಲ್ಲಿ ಕರ್ಮ ಅಥವಾ ಕೆಲಸ ಮಾಡಿ ಸಮಾಜ ಸೇವೆ ಮಾಡಿದಾಗಲೆ ಮುಕ್ತಿ, ಮೋಕ್ಷ ಎನ್ನುವುದಾದರೆ ಸಮಾಜದಿಂದ ನಾವೆಷ್ಟೇ ಪಡೆದರೂ ಅದೊಂದು ಸಾಲ.

ಹಾಗೆಯೇ ನಮ್ಮವರಿಂದ ಪಡೆದಿರೋದೂ ಸಾಲ ವಾಗಿ
ಅದನ್ನು ತೀರಿಸಲು ಕಷ್ಟಪಟ್ಟು ದುಡಿಯಲೇಬೇಕು.

ಯಾವಾಗ ನಮಗೆ ನಮ್ಮವರು ಸುಖವಾಗಿ ಬೆಳೆಸಿ ಕಷ್ಟದ ಅರಿವನ್ನು ನೀಡದಿದ್ದರೆ ಮುಂದೆ ದೊಡ್ಡವರಾದಾಗಲೂ ಕಷ್ಟಪಡದೆ ಇತರರ ಹಿಂದೆ ನಡೆದುಕೈಚಾಚುವ‌ ಪರಿಸ್ಥಿತಿ ಬರುತ್ತದೆ. ಹೀಗಾಗಿ ಮಕ್ಕಳಿಗಾಗಲಿ ಯಾರಿಗೇ ಆಗಲಿ ಸ್ವಾವಲಂಬನೆ ಯನ್ನು ಕಲಿಸಬೇಕಿದೆ.

ಉಚಿತವಾಗಿ ಸಾಲ,ಸೌಲಭ್ಯಗಳನ್ನು ನೀಡಿ ಬೆಳೆಸಿದ ಸರ್ಕಾರ , ಒಂದು ಬಾರಿ‌ ನಿಲ್ಲಿಸಿದರೆ ಅದನ್ನು ನಂಬಿ ನಡೆದವರು ವಿರೋಧ ವ್ಯಕ್ತಪಡಿಸುವುದು ಸಹಜ.ಕಾರಣ ಅಜ್ಞಾನ. ಇದಕ್ಕೆ ಪ್ರತಿಯಾಗಿ ಜನರಿಗೆ ಸಾಲ ಎಂದರೇನೆಂಬ ಅರಿವನ್ನು ಮೊದಲೇ ಶಿಕ್ಷಣದಲ್ಲಿಯೇ ತಿಳಿಸಿದ್ದರೆ, ಸರ್ಕಾರದ ಹಣ ಸಾಲ, ಸೌಲಭ್ಯಗಳನ್ನು ಬೇಡಿ ಬದುಕುವವರ ಸಂಖ್ಯೆ ಕಡಿಮೆಯಾಗಿರುತ್ತಿತ್ತು. ಇದು ಮಕ್ಕಳ ಪೋಷಕರಿಗೂ ಅನ್ವಯಿಸುತ್ತದೆ.

ಸಾಲ ಮಾಡುವುದು ಸುಲಭ.ಆದರೆ ತೀರಿಸೋದೆ ಕಷ್ಟ. ಅನವಶ್ಯಕ ಸಾಲ ಮಾಡದೆ, ಮಾಡಿದರೂ ತೀರಿಸದೆ ಇದ್ದರೆ ಅದೇ ಶೂಲವಾಗಿ ಜೀವನದಲ್ಲಿ ಕಷ್ಟ ನಷ್ಟಕ್ಕೆ ಕಾರಣವಾಗುವುದೆನ್ನುವುದು ಅಧ್ಯಾತ್ಮ ಸತ್ಯ. ಹೀಗಾಗಿ ನಮಗೆ ಯಾರಾದರೂ ಸಾಲ ಕೊಡುವವರಿದ್ದರೆ,ಅಥವಾ ಉಚಿತವಾಗಿ ಸಹಕಾರ ನೀಡುವವರಿದ್ದರೆ ಅವರನ್ನು ಮಿತ್ರರೆಂದುಕೊಂಡರೆ ತಪ್ಪು ಕಲ್ಪನೆ.

ಭೂಮಿ ಮೇಲಿನ ಪ್ರತಿಯೊಂದೂ ಋಣ ಅಥವಾ ಸಾಲದ ರೂಪದಲ್ಲಿ ಮಾನವನಿಗೆ ಕಾಡುತ್ತದೆ.

ಋಣ ತೀರಿಸಲು ಭೂ ಸೇವೆ ಮಾಡಲೇಬೇಕು. ಹೀಗಾಗಿ
ರೈತರನ್ನು ಭೂಮಿ ಪುತ್ರರು ಎನ್ನುವುದು. ಇವರಿಗೆ ಮಾತ್ರ
ಭೂಮಿ ಹುಟ್ಟುವಾಗಲೆ ಪೋಷಕರ ಮೂಲಕ ಬಳುವಳಿ
ಆಗಿ ಬಂದಿರುತ್ತದೆ.

ಅದನ್ನು ಮಾರೋದರಿಂದಾಗಲಿ,  ಅದರ ಮೇಲೆ ಸಾಲ ಮಾಡೋದರಿಂದಾಗಲಿ ಜೀವಕ್ಕೆ ಮುಕ್ತಿ ಸಿಗೋದಿಲ್ಲ ಎನ್ನುತ್ತಾರೆ ಮಹಾತ್ಮರು. ಇಂದಿನ‌ ದಿನಗಳಲ್ಲಿ ಇದನ್ನು ಪರದೇಶದವರಿಗೆ ಬಿಟ್ಟು ಕೊಟ್ಟು ಅವರ ಕೈ ಕೆಳಗೆ ದುಡಿಯುವ ಯುವ ಪೀಳಿಗೆ ಪರರನ್ನು ಮಿತ್ರರೆಂದರೆ ? ಶತ್ರುಗಳು ಯಾರು? ನಮ್ಮವರೆ ಶತ್ರುಗಳೆ? ನಮಗೆ ನಾವೇ ಶತ್ರುಗಳು ಇದಕ್ಕೆ ನಮ್ಮೊಳಗೆ ಅಡಗಿರುವ‌ ಅತಿಯಾದ ಅಹಂಕಾರ ಸ್ವಾರ್ಥ ಚಿಂತನೆಯೆ ಕಾರಣವೆನ್ನಬಹುದು.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!