ದಿನಕ್ಕೊಂದು ಸಾಮಾನ್ಯಜ್ಞಾನ

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

ಉಪ್ಪು ತಿಂದ ಮೇಲೆ……..

ನಮ್ಮ ಸಹಕಾರದಂತೆ ನಮ್ಮ ಸರ್ಕಾರ. ನಮ್ಮ ಜ್ಞಾನಕ್ಕೆ ತಕ್ಕಂತೆ ನಮ್ಮ ಜೀವನ.

ನಾವೆಷ್ಟೇ ಅಧರ್ಮದ ರಾಜಕೀಯತೆಗೆ ಸಹಕಾರ ಕೊಟ್ಟು ಹೆಸರು,ಹಣ,ಅಧಿಕಾರ ಪಡೆಯುವೆವೋಅಷ್ಟೇ ನಮ್ಮೊಳಗಿನ ಸತ್ಯಜ್ಞಾನವೂ ಹಿಂದುಳಿಯುತ್ತದೆ.

- Advertisement -

ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕಲ್ಲವೆ?
ರಾಜಕೀಯತೆ ಎಂದರೆ ಒಬ್ಬರು ಇನ್ನೊಬ್ಬರನ್ನು ಆಳೋದು. ರಾಜಪ್ರಭುತ್ವ ಕಳೆದು ಶತಮಾನವಾದರೂ ಪ್ರಜೆಗಳನ್ನು ಆಳಿ ಹೋದವರಿಗೆ ಮುಕ್ತಿ ಸಿಗದೆ ಪ್ರಜಾ ಪ್ರಭುತ್ವದವರೆಗೂ ಸಾಮಾನ್ಯಜ್ಞಾನವಿಲ್ಲದೆ ಆಳುತ್ತಿದ್ದರೂ ಅದಕ್ಕೆ ಸರಿಯಾಗಿ ಸಹಕರಿಸುವವರಿಗೆ ‌ಸತ್ಯದರ್ಶನ ಆಗದಿರೋದೆ ವಿಪರ್ಯಾಸ.

ನಿಜ, ಪರಮಾತ್ಮನೆ ಎಲ್ಲರನ್ನೂ ನಡೆಸುತ್ತಿರುವುದು.ಹಾಗಾದರೆ ಪರಮಾತ್ಮ ಇರೋದು ಕೇವಲ ಅಧಿಕಾರದಲ್ಲೆ? ರಾಜಕೀಯದಲ್ಲೆ? ಹಣದಲ್ಲೆ? ಚರಾಚರದಲ್ಲಿರುವ ಪರಮಾತ್ಮನಿಗಾಗಿ ಮಾನವ ಪೂಜೆ ಸಲ್ಲಿಸುತ್ತಾ ಎಲ್ಲಾ ಧಾರ್ಮಿಕ ಕಾರ್ಯಕ್ರಮ ನಡೆಸುತ್ತಿದ್ದರೂ ಯಾಕಿಷ್ಟು ಭ್ರಷ್ಟಾಚಾರ ಬೆಳೆಯಿತು?

ಕಲಿಯುಗದಲ್ಲಿ ನಾಮ ಸ್ಮರಣೆಯಿಂದಲೇ ಪರಮಾತ್ಮನ ಸಾಕ್ಷಾತ್ಕಾರ ಮಾಡಿಕೊಂಡ ದಾಸರನ್ನು ಮಹಾತ್ಮರೆಂದು ಪೂಜಿಸುವ ನಾವು ನಮ್ಮೊಳಗೇ ಇರುವ ಪರಮ ಶಕ್ತಿಯನ್ನು ಬಿಟ್ಟುಹೊರನಡೆದ ಸತ್ಯ ತಿಳಿಯಲಾಗಿಲ್ಲ.

ಈಗಲೂ ಮಕ್ಕಳಿಗೆ ಅದೇ ದಾರಿಯಲ್ಲಿ ನಡೆಸಿರುವಾಗ ಯಾವ ದೇವರ ಪೂಜೆ ಮಾಡಿದರೂ ನಮ್ಮ‌ ಬೇಡಿಕೆ ಕೇವಲ ಬೌತಿಕ ಜಗತ್ತಿನಲ್ಲಿ ಹೆಸರು,ಹಣ,ಅಧಿಕಾರವೆ ಆಗಿರುತ್ತದೆ.ಅದಕ್ಕೆ ತಕ್ಕಂತೆ ದೇವರೂ ಹೊರಗಿನಿಂದ ನೀಡಿದರೆ ನಾವು ಅದೃಷ್ಟವಂತರು. ಇಲ್ಲವಾದರೆ ಅದನ್ನು ಬಲವಂತವಾಗಿಯಾದರೂ ಪಡೆಯುವ ಹೋರಾಟ ನಡೆಸಿದರೆ ಇದು ಸಾಲದ ರೂಪದಲ್ಲಿ ಕಾಡುವ ಸತ್ಯ ತಿಳಿಯಲಾಗದು.

ಧಾರ್ಮಿಕ ವರ್ಗದವರು ಈ ಸತ್ಯವನ್ನು ಶಿಕ್ಷಣದ ಮೂಲಕ ಜನಸಾಮಾನ್ಯರವರೆಗೆ ತಿಳಿಸುವ ಬದಲು ತಮ್ಮದೇ ಒಂದು ಚೌಕಟ್ಟನ್ನು ಹಾಕಿಕೊಂಡು ತಾವೂ ದೇವರು,ಧರ್ಮದ ಹೆಸರಲ್ಲಿ ವ್ಯವಹಾರ ನಡೆಸಿ ಹಣಬಲ,ಜನಬಲ ಪಡೆದಾಗ ಸತ್ಯ ತಿಳಿಯದೆ ಜನರ ಅಜ್ಞಾನ ಮಿತಿಮೀರಿ ಬೆಳೆಯುತ್ತದೆ.

ಭೀಷ್ಮಾಚಾರ್ಯರಂತಹ ಮಹಾತ್ಮರಿಗೇ ಋಣಭಾಧೆ ತಡೆಯಲಾಗದ ಮೇಲೆ ಸಾಮಾನ್ಯರಾದ ನಮ್ಮ ಕಥೆ ಕೇಳಬೇಕೆ? ಋಣ ತೀರಿಸಲು ಜ್ಞಾನವಿರಬೇಕು. ಜ್ಞಾನದಲ್ಲಿ ಸತ್ಯವಿರಬೇಕು
ಸತ್ಯಜ್ಞಾನವೇ ಮಿಥ್ಯಜ್ಞಾನದೊಳಗಿದ್ದು ರಾಜಕೀಯಕ್ಕೆ ಬಲಿ ಆದರೆ ರಕ್ಷಿಸಲು ಸಾಮಾನ್ಯ ಜ್ಞಾನ ತಿಳಿದರೆ ಸಾಕು.

ಸಾಮಾನ್ಯಜ್ಞಾನ ಮಾನವರೊಳಗಿನ ರಾಜಯೋಗದಲ್ಲಿದೆ. ನಮ್ಮನ್ನು ನಾವರಿತು ಸತ್ಯಕ್ಕೆ ಸಹಕರಿಸುವುದಾಗಿದೆ. ಪ್ರಜಾಪ್ರಭುತ್ವದ ಪ್ರಜೆಗಳಿಗೆ ಈಗ ಸ್ವಾತಂತ್ರ್ಯವಿತ್ತು. ಆದರೆ ವಿಜ್ಞಾನದ ಹಿಂದೆ ನಡೆದು ಆತ್ಮಜ್ಞಾನ ಹಿಂದುಳಿದ ಕಾರಣ ತಮ್ಮ ಆಯಸ್ಸಿನ ಬಲು ಪಾಲು ರಾಜಕೀಯತೆ ಹಿಂದೆ ನಡೆದು ರಾಜಯೋಗ ಹಿಂದೆ ನಿಂತಿದೆ.

ಹಿಂದಿರುಗಿ ಬರಲು ಸಾಧ್ಯವಾದವರು ಪ್ರಯತ್ನಪಟ್ಟರೆ ಸಾಧ್ಯವಿದೆ. ಇದನ್ನು ಮಾನವೀಯತೆ ಎನ್ನಬಹುದು.
ನಮ್ಮ ಒಂದು ಸಹಕಾರದಿಂದ ಸತ್ಯ ಬೆಳೆದರೆ ದೇವರೆಡೆಗೆ ನಡೆದಂತೆ.ಸತ್ಯವೆ ದೇವರು. ಹಾಗಾದರೆ ನಾವು ಸತ್ಯವಂತರೆ?

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!