ದಿನಕ್ಕೊಂದು ಸಾಮಾನ್ಯಜ್ಞಾನ

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

ಕಲಿಯುಗದ ಮಾನವ ಅಲ್ಪಜ್ಞಾನಿ ಯಾಗಿದ್ದರೂ ಅಹಂಕಾರಿ ಆಗಿರುತ್ತಾನೆಂಬ ಸತ್ಯ ವಾಸ್ತವ ಜಗತ್ತಿನಲ್ಲಿ ಕಾಣುತ್ತಿದೆ. ಹಾಗಾದರೆ ಆ ಅಲ್ಪ ಜ್ಞಾನವನ್ನೂ ರಾಜಕೀಯಕ್ಕೆ ಸಹಕರಿಸಿ ಕಳೆದುಕೊಂಡರೆ ನಷ್ಟ ಯಾರಿಗೆ? ಆತ್ಮಾವಲೋಕನ ಕ್ಕೆ ರಾಜಕೀಯ ಬೇಡ.

ರಾಜಯೋಗ ಬೇಕು. ಸಹಕಾರ ಸತ್ಯದ ಕಡೆಗೆ ಇದ್ದರೆ ಸದ್ಗತಿ.
ಇಲ್ಲಿ ಧಾರ್ಮಿಕ ಕ್ಷೇತ್ರವೇ ರಾಜಕೀಯ ಕ್ಷೇತ್ರದ ಪರವಾದರೆ ಧರ್ಮದ ಗತಿ ಅಧೋಗತಿ. ರಾಜಪ್ರಭುತ್ವ ದ ಧಾರ್ಮಿಕ ಶಿಕ್ಷಣ ಪ್ರಜಾಪ್ರಭುತ್ವದ ಇಂದಿನ ಜನತೆಗೆ ಕೊಡಲಾಗದೆ ದೇವರನ್ನು ಜನರು ಹೊರಗಿನ ರಾಜಕೀಯದಲ್ಲಿ ಹುಡುಕಿ ಸರ್ಕಾರದ ಹಿಂದೆ ನಡೆದರು.

ಇದಕ್ಕೆ ಸಹಕರಿಸಿದವರಲ್ಲಿ ಧರ್ಮ ಎಂದರೆ ಹೇಳಿದ್ದನ್ನು ಕೇಳಿಕೊಂಡು ಮುಂದೆ ನಡೆದು ಜೀವನ ನಡೆಸುವುದಷ್ಟೆ.ಹೀಗಾಗಿ ಪುರಾಣ ಕಥೆಗಳುಇತಿಹಾಸದ ರಾಜಾಧಿರಾಜರುಗಳು ಭೂಮಿಯ ಮೇಲೆ ಇದ್ದು ಅವರ ಕಥೆ ಕೇಳಿಕೊಂಡು ಪುಣ್ಯ ಗಳಿಸಿದರೋ ಪಾಪ ಹೆಚ್ಚಾಯಿತೋ ಆ ಭಗವಂತನಿಗೇ ಗೊತ್ತು.

- Advertisement -

ಅವರಲ್ಲಿದ್ದ ಸತ್ಯ ಧರ್ಮ,ವನ್ನರಿಯದ ಸಾಮಾನ್ಯ ಮಾನವರಿಗೆ ಪ್ರಚಾರಕರೆ ದೇವರಾಗಿದ್ದಾರೆನ್ನಬಹುದು. ಮನದಲ್ಲಿ, ಮನೆಯಲ್ಲಿ ಇರಬೇಕಾದ ಭಕ್ತಿ ಶ್ರದ್ದೆ, ಪ್ರೀತಿ, ವಿಶ್ವಾಸ,ಶಾಂತಿ ಹೊರಗಿನ‌ ರಾಜಕೀಯದೆಡೆಗೆ ಎಳೆದು ತಂದು ಇಂದು ಮೇಲ್ಮನೆಯವರೆಗೆ ಎಳೆದಾಟ ಹೆಚ್ಚಾಗಿದೆ ಎಂದರೆ ಇದಕ್ಕೆ ಸಹಕಾರ ಕೊಟ್ಟವರು ಯಾರು? ನಾನೇ ಕೊಟ್ಟಿರುವಾಗ ಇದು ತಪ್ಪು ಎನ್ನಲು ನನಗೆ ಅಧಿಕಾರವಿಲ್ಲವಲ್ಲ.

ನಮ್ಮ ಮಕ್ಕಳು ಹೊರದೇಶದವರೆಗೆ ಹೋದರೆ ನಮಗೆ ಗೌರವ ಹೆಮ್ಮೆ ಎನ್ನುವ ನಮ್ಮ ಅಜ್ಞಾನದಲ್ಲಿ, ನಾವೇ ಆರಿಸಿ ಕಳಿಸಿದ ನಾಯಕರುಗಳು ಮೇಲ್ಮನೆಯವರೆಗೆ ಹೋಗಿದ್ದಾರೆ ಇದೂ ಹೆಮ್ಮೆಯ ವಿಚಾರವೆ. ಆದರೆ, ಅಲ್ಲಿಗೆ ಹೋಗಿ ಮಾಡುತ್ತಿರುವ ಕೆಲಸ ನಾವೀಗ ನೇರವಾಗಿ ನೋಡುತ್ತಿದ್ದೇವೆ.

ಆದರೆ, ಹೊರದೇಶಕ್ಕೆ ಕಳಿಸಿದ ನಮ್ಮ ಮಕ್ಕಳನ್ನು ನಾವು ಹೀಗೆ ಕಾಣಲು ಸಾಧ್ಯವಿಲ್ಲ ದ ಕಾರಣ ನಾವು ಬಹಳ ಗೌರವ ಪ್ರತಿಷ್ಟಿತ ವ್ಯಕ್ತಿಗಳಾದರೂ ಅದೂ ಕೂಡ ನಮ್ಮನ್ನು ಪಾತಾಳಕ್ಕೆ ತಳ್ಳಿರುವ ಆಧ್ಯಾತ್ಮದ ಸತ್ಯ ತಿಳಿಯದವರು ನಮ್ಮಮೂಲ ಜ್ಞಾನವನ್ನು ಬಿಟ್ಟು ರಾಜಕೀಯಕ್ಕೆ ಇಳಿದಿರುವುದನ್ನು ಪ್ರಗತಿ ಎನ್ನುತ್ತಾರೆ.
ಇದನ್ನು ಸಾಮಾನ್ಯಜ್ಞಾನ ಇದ್ದವರು ಸಹಕರಿಸಿ,ಪ್ರೋತ್ಸಾಹ ನೀಡಿದರೆಮುಂದೆ ಇದೇ ಗತಿ ನಮಗೂ ಆಗುವುದೆನ್ನುವುದಷ್ಟೆ ಸತ್ಯ. ನಮ್ಮ ಭಾರತೀಯರ ಅಹಂಕಾರದ ರಾಜಕೀಯದಲ್ಲಿ ನಮ್ಮಸಹಕಾರವಿರುವಾಗ ಇದನ್ನು ನಾವು ತಪ್ಪು ಎನ್ನಲಾಗದು.

ಗಾಂಧೀಜಿಯವರ ಅಸಹಕಾರ ಚಳುವಳಿಯ ಮುಖ್ಯ ಉದ್ದೇಶ ಎಲ್ಲಿಯವರೆಗೆ ನಾವು ಪರರ ಅಧೀನದಲ್ಲಿರುವ ಅವರ ವಸ್ತು, ವಸ್ತ್ರ, ಜ್ಞಾನ,ವಿಜ್ಞಾನ,ಶಿಕ್ಷಣ, ಆಚರಣೆ, ಕಾನೂನು, ನ್ಯಾಯ, ಧರ್ಮ, ಸಂಸ್ಕೃತಿ ಯನ್ನು ಬಳಸಿಕೊಂಡು ಜೀವನ ನಡೆಸುವೆವೋ ಅಲ್ಲಿಯವರೆಗೆ ನಮಗೆ ಸ್ವತಂತ್ರವಾಗಿ ಜೀವನ ನಡೆಸಲಾಗದು ಎಂಬ ಆಧ್ಯಾತ್ಮ ಅರ್ಥ ವಿದೆ.

ಆಧ್ಯಾತ್ಮ ಎಂದರೆ,ಆದಿ ಆತ್ಮ .ಇದು ನಮ್ಮೊಳಗೆ ಇರುವ ಸತ್ಯದ ಮೂಲಕ ಬೆಳೆಸಿಕೊಂಡರೆ ರಾಜಯೋಗ, ಹೊರಗಿನ ಮಿಥ್ಯದರಾಜಕೀಯಕ್ಕೆ ಬಳಸಿದರೆ ರಾಜಕೀಯ. ಹಾಗಾದರೆ ನಾವು ಯಾವುದಕ್ಕೆ ಬಳಸಿದ್ದೇವೆ?

ನಮ್ಮ ತಪ್ಪಿಗೆ ಶಿಕ್ಷೆಯೂ ನಮಗೆ ಆಗುವುದಲ್ಲವೆ? ಬಡತನವನ್ನು ವಿಜ್ಞಾನದ ಹಣದಿಂದ ಅಳಿಸುವುದೆ ಅಜ್ಞಾನ.ಬಡತನ ಇರೋದೆ ಶಿಕ್ಷಣದ ವಿಚಾರದಲ್ಲಿ.ಶಿಕ್ಷಣದಲ್ಲಿಯೇ ಸತ್ಯನಾಶ ಮಾಡಿ ಎಲ್ಲರೊಳಗೆ ರಾಜಕೀಯ ಬೆರೆಸಿದರೆ ಇದುಮುಂದಿನ ಭಾರತೀಯರಿಗೆ ಸ್ವತಂತ್ರ ವಾಗಿ ಜೀವನ ನಡೆಸಲು ಸಹಕರಿಸುವುದೆ? ಈಗಲೇ ನಮ್ಮ ರಾಜಕೀಯದಪರಿಸ್ಥಿತಿ ಹೀಗಿದೆ ಮುಂದೆ ಹೇಗಿರಬಹುದು?

ನಮ್ಮ ಸಾತ್ವಿಕ ಜ್ಞಾನದ ಫಲ ಯಾರಿಗೆ ಸೇರುತ್ತಿದೆ? ದೇಶದ ಧರ್ಮ ಉಳಿಸಲು ರಾಜಕೀಯದಿಂದ ಸಾಧ್ಯವೆ?
ಶಾಸಕ ಭವನದ ಶಿಲಾನ್ಯಾಸನಕ್ಕೆ ಧಾರ್ಮಿಕ ವರ್ಗದ ಸಹಕಾರವಿದೆ. ಆದರೆ, ನಮ್ಮದೇ ಭಾರತೀಯ ಶಿಕ್ಷಣವನ್ನುಜಾರಿಗೊಳಿಸಿ ಜನರ ಅಜ್ಞಾನವನ್ನು ದೂರ ಮಾಡುವ‌ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಲು ತಿಳಿಸಿದವರನ್ನು ಮೂಲೆಗುಂಪು ಮಾಡಿದರೆ ಇದು ಧರ್ಮವಲ್ಲ. ದೇಶದ ಲ್ಲಿ ನಡೆಯುತ್ತಿರುವ ಪ್ರತಿಯೊಂದು ಕಾರ್ಯಕ್ರಮವೂ ಜನಸಾಮಾನ್ಯರ ಸಹಕಾರ,ಹಣದಿಂದ ನಡೆದಿರುವಾಗ, ಅವರ ಆಧ್ಯಾತ್ಮ ದಪ್ರಗತಿಗೆ ಸಹಕರಿಸುವುದೂ ನಮ್ಮ ಧರ್ಮ. ಅದರ ವಿರುದ್ದ ಯಾರಾದರೂ ನಡೆದಿದ್ದರೆ ಇದರ ಪರಿಣಾಮ ಭಯಂಕರ ಆಗಿರುತ್ತದೆ.

ಸತ್ಯನಾಶ,ಧರ್ಮ ನಾಶ. ಮಾಡುವವರಿಗೆ ನಾವೇ ತಿಳಿಯದೆ ಸಹಕರಿಸಿರುವುದನ್ನು ಸೂಕ್ಮವಾಗಿ ತಿಳಿದರೆಇಂದಿನ ನಮ್ಮ ಭಾರತದ ಪರಿಸ್ಥಿತಿಗೆ ಕಾರಣದ ಜೊತೆಗೆ ಪರಿಹಾರವೂ ನಮ್ಮೊಳಗೆ ಇರುತ್ತದೆ. ನಾವೀಗ ಸ್ವತಂತ್ರ ಪ್ರಜೆಆಗಿದ್ದರೆ ನಮ್ಮ ಸತ್ಯ ನಮ್ಮೊಳಗಿರಬೇಕಲ್ಲವೆ?

ಕೊರೊನವನ್ನೂ ಬಿಡದೆ, ಉತ್ತಮ ಕಾರ್ಯವನ್ನು ನಿಲ್ಲಿಸಿದ ವರಿಗೆ ರಾಜಕೀಯದ ದೊಂಬರಾಟ,ಸ್ವಾರ್ಥ ದಲ್ಲಿ ಅಡಗಿರುವ ಅಜ್ಞಾನ ಯಾಕೆ ಕಾಣುತ್ತಿಲ್ಲ? ಇದು ರಾಜಕಾರಣಿ ಗಳ ತಪ್ಪಲ್ಲ ಮಧ್ಯವರ್ತಿಗಳ ತಪ್ಪು. ಹಾಗಾದರೆ ಮಧ್ಯವರ್ತಿಯಾರು? ನೇರವಾಗಿ ಭಗವಂತನ ತಲುಪಲು ನಾಮಜಪದ ನಿತ್ಯಕಾಯಕ ಸಾಕು. ಆದರೆ ಕಾಯಕವೆ ರಾಜಕೀಯದಲ್ಲಿ ಮುಳುಗಿದ್ದರೆ ಭಗವಂತ ಕಾಣುವನೆ?

ಒಂದು ಸಣ್ಣ ರಾಜಕಾರಣಿಗಳ ತಪ್ಪು ಎತ್ತಿ ಹರಡುವ ಮಧ್ಯವರ್ತಿ ಗಳು ಸತ್ಯವನ್ನು ಎತ್ತಿ ಹಿಡಿದು ಸಹಕರಿಸಿದ್ದರೆ ದೇಶ ಎಷ್ಟೋ ಶಾಂತಿಯಿಂದ ಮುಂದೆ ನಡೆಯಬಹುದಿತ್ತು.

ತಮ್ಮ ಸ್ವಾರ್ಥ ಕ್ಕೆ ರಾಜಕೀಯವನ್ನು ದಾರಿ ತಪ್ಪಿಸಿ ಮನರಂಜನೆಯಲ್ಲಿ ಮುಳುಗಿ,ಜನಸಾಮಾನ್ಯರ ಬಡತನವನ್ನು ಹೆಚ್ಚಿಸಿದರೆ ಇದರಿಂದ ಲಾಭ ಯಾರಿಗೆ ನಷ್ಟ ಯಾರಿಗೆ?
ಇಲ್ಲಿ ಮಧ್ಯವರ್ತಿಗಳು ಎಲ್ಲಾ ಕ್ಷೇತ್ರದಲ್ಲಿಯೂ ತಮ್ಮ ಕಾರ್ಯ ನಡೆಸಿದ್ದಾರೆ. ನಾವೂ ಅದರಲ್ಲಿ ಒಬ್ಬರಾಗಿರಬಹುದು.

ಆದರೆನಮ್ಮ ಉದ್ದೇಶ ಸ್ವಾರ್ಥ ರಹಿತವಾಗಿದ್ದು ಸತ್ಯಜ್ಞಾನದ ಪರವಿದ್ದರೆ ಸರಿ, ಅಜ್ಞಾನದ ಪರವಿದ್ದರೆ ತಪ್ಪು. ಅದರ ಫಲವನ್ನು ನಾವೇ ಉಣ್ಣಬೇಕೆನ್ನುವುದಷ್ಟೆ ಸತ್ಯ. ಕರ್ಮಫಲವನ್ನು ಜೀವವೆ ಅನುಭವಿಸಬೇಕೆನ್ನುವುದೆ ಆಧ್ಯಾತ್ಮದ ಸತ್ಯ.

ಈ ವಿಚಾರವಾಗಿ ಯಾರಾದರೂ ಮಾಧ್ಯಮಗಳಲ್ಲಿ ಚರ್ಚೆ ನಡೆಸಲು ಸಾಧ್ಯವೆ?/ ನಡೆಸಿದರೂ ಮಾಧ್ಯಮದವರು ಪೂರ್ಣ ಸತ್ಯ ಹೊರ ಬರದಂತೆ ತಡೆಯುವುದೂ ಸತ್ಯವೆ.ಕಾರಣವಿಷ್ಟೆ ಮಾಧ್ಯಮಗಳಿಗೆ ಬೇಕಾಗಿರುವುದು ಹಣ ಮಾತ್ರ ,ಸತ್ಯ ಕಣ್ಣಿಗೆ ಕಾಣದೆ ಮಿಥ್ಯದ ವಿಜ್ಞಾನವನ್ನು ಬೆಳೆಸಿರುವ ಜಗತ್ತಿನಲ್ಲಿ ಮನರಂಜನೆಯ ಜೊತೆಗೆ ಆತ್ಮವಂಚನೆಯೂ ನಡೆದಿದೆ.ಹಾಗಾದರೆ ನಾವು ಯಾರ ಮಾತು ಕೇಳಿ ನಡೆದಿದ್ದೇವೆ? ಇದರಿಂದ ನಮ್ಮ ಕಷ್ಟ ನಷ್ಟ ತಪ್ಪಿತೆ? ಆತ್ಮಜ್ಞಾನ ಬಂದಿದೆಯೆ?

“ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ”ಮೇಲ್ಮನೆ ಎಂದರೆ ರಾಜಕೀಯದ್ದಲ್ಲ. ರಾಜಯೋಗದ್ದು.ಮೇಲ್ಮನೆ ಜಗಳದಲ್ಲಿ ನಮ್ಮ ಸಹಕಾರ ಎಷ್ಟಿದೆ?

*ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು*

- Advertisement -
- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!