ದಿನಕ್ಕೊಂದು ಸಾಮಾನ್ಯಜ್ಞಾನ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಗುರು ಶನಿ ಗ್ರಹಗಳ ಸಮಾಗಮದಿಂದ ಭೂ ಗ್ರಹಕ್ಕೆ ತೊಂದರೆ ಆಗುವುದಂತೆ, ಅದಕ್ಕಾಗಿ ರಾಜಕೀಯಕ್ಕೆ ತೊಂದರೆಯಂತೆ ಹೀಗೇ ಗ್ರಹಗಳ ಮೇಲೇ ತಪ್ಪು ಹೋರಿಸಿಕೊಂಡು ಒಳಗಿನ ಗ್ರಹಚಾರ ಬೆಳೆಸಿಕೊಂಡರೆ ಗುರುವಿನ ಗುರಿಯೂ ಅರ್ಥ ಆಗೋದಿಲ್ಲ.

ಶನಿಕಾಟವೂ ತಪ್ಪೋದಿಲ್ಲ. ಭೂಮಿಯನ್ನು ರಾಜಕೀಯವಾಗಿ ಬಳಸಿಕೊಳ್ಳುವ ಅಜ್ಞಾನವೂ ಹೋಗೋದಿಲ್ಲ. ಗ್ರಹಗಳು ಸ್ವಚ್ಚವಾಗೇ ಇರುತ್ತದೆ.ಮಾನವ ಸ್ವಚ್ಚವಾಗಬೇಕಿದೆ.ಇದು ಸತ್ಯಜ್ಞಾನದಿಂದ ಮಾತ್ರ ಸಾಧ್ಯ.ವಿದೇಶಿ ವಿಜ್ಞಾನದಿಂದಲ್ಲ.


ಹಿಂದೆ ಮಹಾತ್ಮರ ಕಾಲದಲ್ಲಿ ಆಕಾಶದಲ್ಲಿ ಸ್ವತಂತ್ರ ವಾಗಿ ತಿರುಗಿಕೊಂಡಿದ್ದ ಗ್ರಹಗಳು ಈಗ ಭೂಮಿಯ ಜನರೆಡೆಗೆ ಬಂದು ಕಾಡುತ್ತಿದೆ. ಇದಕ್ಕೆ ಕಾರಣ ಭೂಮಿಯ ಜನರು ಅದನ್ನು ತನ್ನೆಡೆಗೆ ಸೆಳೆದುಕೊಳ್ಳಲು ನೆಡೆಸಿದ ವ್ಯವಹಾರ ಜ್ಞಾನ.

- Advertisement -

ಭೂಮಿಯೇ ಒಂದು ಗ್ರಹ. ಅದರ ಸಣ್ಣ ಜೀವ ಮಾನವ.
ಇಡೀ ಆಕಾಶದಲ್ಲಿರುವ ಗ್ರಹಗಳನ್ನು ಆಳಲು ಹೋದರೆ ಬಿಡುವರೆ? ಆ ಮಹಾಕಾಶವನ್ನು ಭೂಮಿಯ ಮೇಲಿದ್ದೇ
ತಮ್ಮ ಜ್ಞಾನಶಕ್ತಿಯಿಂದ ತಿಳಿದು ತಿಳಿಸಿದ್ದ ಹಿಂದಿನ ಮಹಾತ್ಮರುಗಳನ್ನೂ ಬಿಡದೆ ನಾನೇ ದೇವರು ಎಂದರೆ ಸರಿಯೆ?

ಮೊದಲು ಮಾನವನಾಗು ನಂತರ ಮಹಾತನಾಗು ಎಂದರೂ
ಕೇಳದೆ ಮಹಾತ್ಮರನ್ನು ಹೊರಗೆಳೆದು ರಾಜಕೀಯ ನಡೆಸಿ ತನ್ನ ಅಲ್ಪ ಜ್ಞಾನವನ್ನು ಸರಿಯಾಗಿ ಬಳಸಿಕೊಳ್ಳದೆ ಇತರರ
ಸಾಮಾನ್ಯಜ್ಞಾನಕ್ಕೂ ಬೆಲೆಕೊಡದೆ ರಾಜಕೀಯಕ್ಕಿಳಿದ ಸತ್ಯ
ಧರ್ಮ ಇಂದು ಹೊರಗೆ ದೇವರನ್ನು ಗ್ರಹಗಳನ್ನು,ದೇಶದ
ಶಿಕ್ಷಣವನ್ನೂ ಬಿಡದೆ ವ್ಯವಹಾರದಿಂದ ಹಣ,ಅಧಿಕಾರ, ಸ್ಥಾನ ಮಾನ ಪಡೆದರೆ ಜನಬಲ,ಹಣಬಲ ಇದ್ದರೂ ತನ್ನ
ಜ್ಞಾನಬಲ ಬಿಟ್ಟು ತನಗೆ ನಷ್ಟ ಆಗಿದ್ದರೂ ಬೇರೆಯವರ
ಕಷ್ಟ ನಷ್ಟವನ್ನು ಸರಿಪಡಿಸಲು ಹೋದರೆ ಸಾಧ್ಯವೆ?

ಒಟ್ಟಿನಲ್ಲಿ ಗ್ರಹಚಾರ. ಸುತ್ತುತ್ತಿರೋದು ಕೊಟ್ಟು ಪಡೆಯೋ
ವ್ಯವಹಾರ ಜ್ಞಾನದಿಂದ. ಇದರಲ್ಲಿ ಮಾನವೀಯತೆಯ ಧರ್ಮ. ಇದ್ದರೆ ಸಮಾಜದಲ್ಲಿ ಜೀವಕ್ಕೆ ಬೆಲೆಯಿದೆ. ಇಲ್ಲ
ಜೀವನಕ್ಕೆ ಬೆಲೆಯಿಲ್ಲ.

ಎಷ್ಟೇ ಹಣ ಸಂಪಾದಿಸಿದರೂ ಅದೊಂದು ಸಮಾಜದ ಋಣ ಆಗಿರುವಾಗ ನಿಸ್ವಾರ್ಥ ಸಮಾಜ ಸೇವೆ ಮಾಡದಿದ್ದರೆ ಜನ್ಮದಲ್ಲಿ ಶಾಂತಿ ಸಿಗೋದಿಲ್ಲ. ಗ್ರಹಗಳ ಹಿಂದೆ ನಡೆಸಿದವರು ಶ್ರೀಮಂತ ರಾದರು. ನಾವೇ ಒಂದು ಗ್ರಹದ ಅಧೀನದಲ್ಲಿರುವಾಗ ಅದನ್ನು ಸರಿಯಾಗಿ ತಿಳಿಯದಿರೋದೆ ಗ್ರಹಚಾರ. ಗ್ರಹದ ಪ್ರಭಾವ ತೀವ್ರವಾದಾಗ ಸುಮ್ಮನೆ ಸ್ವಗೃಹ ದೊಳಗಿದ್ದು ಚಿಂತನೆ ನಡೆಸಿ ಸತ್ಯಾಗ್ರಹ ಮಾಡಿದರೆ ಸತ್ಯವೆ ರಕ್ಷಿಸುತ್ತದೆ.ಸತ್ಯವೆ ದೇವರಲ್ಲವೆ?

ಮನೆಮನೆಯೊಳಗೆ ಅಡಗಿರುವ ಗ್ರಹಗಳನ್ನು ಅರ್ಥ ಮಾಡಿ ಕೊಂಡರೆ ಉತ್ತಮ. ಕಾಲಗ್ರಹ ಪೀಡಿತವಾಗಿದೆ. ಆದರೂ
ನಮಗೆ ಆ ಭಗವಂತನ ಅನುಗ್ರಹವಿದೆ. ಮಾನವನಿಗೆ ಸಂಗ್ರಹ ಮಾಡುವ ದುರಭ್ಯಾಸವೆ ಗ್ರಹಗಳ ಚಲನಾವಲನಕ್ಕೆ ಕಾರಣವಾಗಿದೆ. ಗ್ರಹಣವನ್ನು ತಪ್ಪಿಸಲಾಗದ
ವಿಜ್ಞಾನ ಜಗತ್ತು ಗ್ರಹಗಳ ಮೇಲೆ ಲಗ್ಗೆ ಹಾಕುವ ಪ್ರಯತ್ನ
ನಡೆಸಿ ಮನುಕುಲಕ್ಕೆ ಗ್ರಹಣದ ಛಾಯೆ ಹೆಚ್ಚಾಗಿದೆ. ಇದನ್ನು
ಯಾವ ಗ್ರಹದಿಂದ ತಪ್ಪಿಸಲಾಗುವುದು?

ಪ್ರತಿಯೊಬ್ಬರಲ್ಲಿಯೂ ಅಡಗಿರುವ ಈ ಗ್ರಹಚಾರವನ್ನು
ಸದಾಚಾರದಿಂದ,ಸತ್ಯದಿಂದ, ಸನ್ಮಾರ್ಗದಿಂದ,ಸತ್ಸಂಗದಿಂದ
ಸಮಾನತೆಯಿಂದ,ಸಹೃದಯದಿಂದ ಶಾಂತಿಯಿಂದ ಅರ್ಥ
ಮಾಡಿಕೊಳ್ಳಲು ಬೇಕಿದೆ ಸ್ವತಂತ್ರ ಜ್ಞಾನ. ಇದು ಒಳಗಿದೆ
ಹೊರಗಿಲ್ಲ. ಪ್ರಕೃತಿಯನ್ನು, ಭೂಮಿಯನ್ನು ಆಳಲು ಹೋಗಿ
ಆಕಾಶದಲ್ಲಿದ್ದ ಎಲ್ಲಾ ಗ್ರಹಗಳನ್ನು ಭೂಮಿಗೆ ತಂದು ನಿಲ್ಲಿಸಿ
ರಾಜಕೀಯ ನಡೆಸಿದರೆ ಸರಿಯೆ?

ಅಪ್ಪ ನೆಟ್ಟ ಆಲದ ಮರ ಎಂದು ನೇಣುಹಾಕಿಕೊಳ್ಳಲಾಗುವುದೆ? ಆಲದ ಮರಕ್ಕೂ ವಯಸ್ಸಾಗುತ್ತದೆ. ಆದರೆ ಅದರ ವಯಸ್ಸಿನ ಅವಧಿ ಹೆಚ್ಚು.

ಇದಕ್ಕೆ ಕಾರಣ ಅದರೊಳಗಿದ್ದ ಸಾತ್ವಿಕ ಶಕ್ತಿ. ಇದನ್ನು ಇಂದು ನಾವು ಹಿಂದಿನವರ ಸಾತ್ವಿಕತೆಗೆ ಕಾರಣ ತಿಳಿದು ಗಿಡಗಳನ್ನು
ನೆಟ್ಟು ಸರಿಯಾದ ಗೊಬ್ಬರ ಹಾಕಿ ಪೋಷಣೆ ಮಾಡುವುದಕ್ಕೂ ನಮ್ಮಲ್ಲಿ ಸಾತ್ವಿಕ ಸತ್ಯವಿರಬೇಕು. ಇದೇ ಇಲ್ಲದೆ ಗ್ರಹಗಳನ್ನು ನೋಡುತ್ತಾ ಸುಮ್ಮನಿದ್ದರೆ ಹೇಗೆ?

ನಿರಾಕಾರ ಶಕ್ತಿ ನಮ್ಮೊಳಗೇ ಇಲ್ಲವಾದರೆ ಗ್ರಹಚಾರ ಹೆಚ್ಚು.
ನಮ್ಮ ಗ್ರಹಚಾರವನ್ನು ತಡೆಯಲು ಹೊರಗಿನಿಂದ ಪ್ರಾಣಿ,ಪಕ್ಷಿ,ಗಿಡ,ಮರ, ಪ್ರಕೃತಿಯನ್ನೇ ದುರುಪಯೋಗ ಪಡಿಸಿಕೊಂಡರೆ ಇದೇ ಮುಂದಿನ ಜನ್ಮದಲ್ಲಿ ದೊಡ್ಡ ಸಂಚಕಾರ ತರುತ್ತದೆ ಎಚ್ಚರ.

ಆದರೂ ಕೆಲವು ಸಾತ್ವಿಕಾಚರಣೆಗಳು ನಮ್ಮ ರಕ್ಷಣೆಗಾಗಿ
ಮಾಡಿಕೊಂಡರೆ ಜೀವವಿರುವಾಗಲೆ ಸತ್ಯ ತಿಳಿಯಬಹುದು.
ಆದರೆ ಆಚರಣೆಯಿಂದ ಸಮಾಜವಾಗಲಿ,ಪರಿಸರವಾಗಲಿ
ಪ್ರಕೃತಿಯಾಗಲಿ ಅಶುದ್ದವಾದರೆ ಕಷ್ಟ ನಷ್ಟ. ಕಷ್ಟವಿಲ್ಲದೆ
ಸುಖವಿಲ್ಲ. ಸುಖದ ನಂತರ ಕಷ್ಟವಿದೆ. ಕೇವಲ ಸುಖಕ್ಕಾಗಿ
ಜೀವನವಲ್ಲ. ಜೀವನ ಎಂದರೆ ಜೀವಿಗಳ ವನ. ಒಬ್ಬರಿಗೊಬ್ಬರು ಹೊಂದಿ ಬಾಳುವುದೆ ಸ್ವರ್ಗ ಎಂದಿದ್ದಾರೆ
ಮಹಾತ್ಮರು. ಹಣದಿಂದ ಹೊಂದಿಕೆಯಾಗೋದಿಲ್ಲ. ಗುಣದಿಂದ ಹೊಂದಿಕೊಳ್ಳಬೇಕು. ಇದಕ್ಕೆ ಜ್ಞಾನವೇ ಮುಖ್ಯ. ವಿಜ್ಞಾನವಲ್ಲ.

*ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು*

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!