ದಿನಕ್ಕೊಂದು ಸಾಮಾನ್ಯಜ್ಞಾನ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ರಕ್ತ ಸಂಬಂಧವೆಂದು ಬಿಗಿಯಾಗಿ ಹಿಡಿದುಕೊಳ್ಳಲು ಹೋಗಿ ಈಗ ಬೇರೆಯವರಿಂದ ರಕ್ತ ಪಡೆದೂ ಬೇರೆ ಧರ್ಮ,ಜಾತಿ,ಸಂಸ್ಕೃತಿ, ಪಂಗಡ,ಪಕ್ಷದ ಪಕ್ಷಪಾತದಿಂದ ಹೊರಬರಲಾಗದೆ ,ಮನುಕುಲ ಆತ್ಮವಂಚನೆ ಮಾಡಿಕೊಂಡರೂ ಸರಿ ಜೀವ ಉಳಿಸಿಕೊಳ್ಳುತ್ತೇವೆಂದುಕೊಂಡರೆ, ಆತ್ಮ ಶಾಶ್ವತ ಜೀವವಲ್ಲ.

ನಾವು ಹಲವು ವಿಚಾರಗಳಲ್ಲಿ ಒಂದು ಚೌಕಟ್ಟನ್ನು ಹಾಕಿಕೊಂಡು ನಾನು,ನನ್ನದು,ನನ್ನವರು,ನನ್ನಿಂದ, ನನಗಾಗಿ ನಾನೇ ಎನ್ನುವ ಮಟ್ಟಿಗೆ ಬೆಳೆಸಿಕೊಂಡು ಕೊನೆಯಲ್ಲಿ ಅದನ್ನು ಉಳಿಸಿಕೊಳ್ಳಲು ಶತಪ್ರಯತ್ನ ಮಾಡಿದರೂ ನಾನೇ ಉಳಿಯುವುದಿಲ್ಲ. ಇದೊಂದು ವಾಸ್ತವ ಸತ್ಯ. ನಮ್ಮಇಂದಿನ ಈ ಸ್ಥಿತಿಗೆ ಕಾರಣವೆ ಇದು.
ನಮ್ಮ ಜೀವ ಶಾಶ್ವತವಲ್ಲ ಎನ್ನುವ ಸಾಮಾನ್ಯಜ್ಞಾನ. ಎಲ್ಲರೊಳಗಿದ್ದರೂ ಹೊರಗಿನ ಸತ್ಯದ ಹಿಂದೆ ಬಿದ್ದ ಸಂಬಂಧ ನನ್ನ ಒಂದು ಚೌಕಟ್ಟಿಗೆ ಸಿಲುಕಿಸಿ ಈ ಕಡೆ ಒಳಗೆ ನಡೆಯಲಾಗದೆ, ಹೊರಗೆ ಹೋಗಲಾಗದೆ ಮಧ್ಯೆ ಸಿಲುಕಿದ ಜೀವಕ್ಕೆ ಮುಕ್ತಿ ಸಿಗಲು ಕಷ್ಟ.

ಅದ್ವೈತ ತತ್ವದ ಪ್ರಕಾರ ಒಂದು ಎನ್ನುವುದರಲ್ಲಿ ಏಕತೆ,ಸಮಾನತೆ,ಐಕ್ಯತೆ,ಒಗ್ಗಟ್ಟು, ಸ್ವಸತ್ಯದ ನಡೆ ನುಡಿ, ಸ್ವಾಭಿಮಾನ, ಸ್ವಾತಂತ್ರ್ಯ, ಸಹಬಾಳ್ವೆ…ಎಲ್ಲಾ ಬರುತ್ತದೆ. ಆದರೆ, ಇದನ್ನು ತಿಳಿಯದೆ ತತ್ವವನ್ನು ರಾಜಕೀಯವಾಗಿ ಬಳಸಿದರೆ ಅದರಿಂದ ಹುಟ್ಟಿದ ಅನೇಕತೆಯನ್ನು ಒಂದು ಮಾಡೋದು ಕಷ್ಟವೆ. ಭಾರತೀಯರ ಅನೇಕತೆಯಲ್ಲಿ ಏಕತೆಯನ್ನು ಹುಡುಕುವ ಕೆಲಸದಲ್ಲಿ ರಾಷ್ಟೀಯತೆಯಿರಬೇಕಿತ್ತು.

- Advertisement -

ರಾಷ್ಟ್ರೀಯ ಶಿಕ್ಷಣ ನೀತಿ ಆ ಆ ರಾಜ್ಯದ ಮೂಲ ಶಿಕ್ಷಣವನ್ನು ಬೆಳೆಸಬೇಕಿತ್ತು.ದೇಶದೊಳಗೆ ತುಂಬಿಕೊಂಡಿರುವ ವಿದೇಶಿ ವ್ಯವಹಾರಜ್ಞಾನ ಪ್ರಜೆಗಳ ಜೀವನವಾಗಿರುವಾಗ, ಅದರ ಮೂಲ ಶಿಕ್ಷಣವೆ ಇದಕ್ಕೆ ಕಾರಣ ಎಂಬುದರ ಅರಿವು ಇದ್ದವರಿಗೆ ಮಾತ್ರ ಈಗಿನ ಸ್ಥಿತಿಗೆ ಕಾರಣ ಹಾಗು ಪರಿಹಾರ. ನಮ್ಮೊಳಗೆ ಇರುವ ಸತ್ಯದರ್ಶನ ಸಾಧ್ಯ.

ಇದು ಭಾರತೀಯರ ಆತ್ಮಶಕ್ತಿಯನ್ನು ಬೆಳೆಸುತ್ತದೆ. ಸರ್ಕಾರದರಾಜಕೀಯತೆ ಬೆಳೆದಿರೋದೆ ಪ್ರಜೆಗಳ ಸಹಕಾರದಿಂದ. ಇದು ಪ್ರಜೆಗಳ ಸಾಲ ಬೆಳೆಸಿರುವಾಗ, ಅದನ್ನು ತೀರಿಸೋದು ಪ್ರಜಾಧರ್ಮ. ಪರಕೀಯರ ಶಿಕ್ಷಣ,ಧರ್ಮ,ವ್ಯವಹಾರ, ಬಂಡವಾಳ,ಸಾಲವನ್ನು ಇನ್ನಷ್ಟು ಬೆಳೆಸಿ,ಅಧಿಕಾರ ಕ್ಕಾಗಿ ನಮ್ಮವರನ್ನೇ ವಿರೋಧಿಗಳಾಗಿಸಿಕೊಂಡರೆ ಇದರಿಂದ ಲಾಭ ಯಾರಿಗೆ?
ಇಬ್ಬರ ಜಗಳ ಮೂರನೆಯವರಿಗೆ ಲಾಭ. ಈ ರಾಜಕೀಯ ತಿಕ್ಕಾಟ ಮನೆ ಮನೆಯೊಳಗೆ ಬೆಳೆದಿರುವಾಗ ರಕ್ತ ಸಂಬಂಧದಲ್ಲಿ ನಿಜವಾದ ಶುದ್ದತೆ ಎಲ್ಲಿರುವುದು?

ಸ್ವಾರ್ಥ ಸುಖಕ್ಕಾಗಿ ಬೌತಿಕ ಜಗತ್ತಿನಲ್ಲಿ ಬೇಡಿಕೊಂಡು ಸರ್ಕಾರದ ಹಿಂದೆ ಬಿದ್ದು ಸಾಲ ,ಸೌಲಭ್ಯಗಳನ್ನು ಪಡೆದು ಅದು ಬೆಳೆದು ನಿಂತಾಗ ವಿದೇಶಿಗಳನ್ನು ಆಶ್ರಯಿಸಿ,ಅವರ ಕೆಳಗೆ ಕೆಲಸ ಮಾಡಿ ಹಣ,ಅಧಿಕಾರ,ಸ್ಥಾನಮಾನ ಪಡೆದವರು ದೇಶದ ಪರವಾಗಿ ನಿಲ್ಲಲು ಸಾಧ್ಯವೆ? ಋಣ ತೀರಿಸಲು ಸಾಧ್ಯವೆ? ನೆಲ ಜಲ ಸರ್ಕಾರ ಎಲ್ಲಕ್ಕೂ ದೇಶಬೇಕು.

ಆದರೆ, ಅದರ ಮೂಲ ಧರ್ಮ ಕರ್ಮ ಶಿಕ್ಷಣ,ಸಂಸ್ಕೃತಿ, ಭಾಷೆ ನಮ್ಮೊಳಗಿಲ್ಲವಾದರೆ ದೇಹವಿದೆ. ಆತ್ಮಜ್ಞಾನವಿಲ್ಲ ಎಂದ ಹಾಗೆ. ಕಾಲ ಮಿಂಚಿ ಹೋಗಿದೆ.

ಮುಂದಿನ ಪೀಳಿಗೆಗೆ ಏನು ಕೊಡಬೇಕೆಂಬುದರ ಬಗ್ಗೆ ಚಿಂತನೆ ನಡೆಸುವ ಸ್ವಾತಂತ್ರ್ಯ ಇನ್ನೂ ನಮಗಿದೆ. ನಿಜವಾದ ಜ್ಞಾನ ನಮಗಿದ್ದರೆ ದಾರಿ ಇದೆ. ಇದಕ್ಕೆ ಪೋಷಕರ ಸಹಕಾರ ಬೇಕಿದೆ.
ಮಧ್ಯವರ್ತಿಗಳ ಕುತಂತ್ರದಿಂದ ಬೆಳೆದಿರುವ ಈ ಅಧರ್ಮಕ್ಕೆ ಮಧ್ಯವರ್ತಿಗಳು ಅನುಭವಿಸಬೇಕಿದೆ. ಒಟ್ಟಿನಲ್ಲಿ ನಾನು ಹೋಗಿ ನಾವು ಆಗಬೇಕಿದೆ. ನಮ್ಮ ಚೌಕಟ್ಟನ್ನು ಬಿಟ್ಟು ಮನಸ್ಸನ್ನು ವಿಸ್ತಾರಗೊಳಿಸಿಕೊಂಡರೆ ಸತ್ಯಕ್ಕೆ ಜಯವಿದೆ.
ಚೌಕಟ್ಟು ಸಂಸಾರಕ್ಕೆ ಅಗತ್ಯವಿದೆ.ದೇಶದ ಪ್ರಶ್ನೆ ಬಂದಾಗ ಸಮಾಜ ಸುಧಾರಣೆಗೆ ಬಂದಾಗ ಎಚ್ಚರವಾದರೆ ಉತ್ತಮ.ಇಲ್ಲಿ

ಯಾರೂ ಶಾಶ್ವತವಲ್ಲ. ಯಾರೂ ರಾಜರಲ್ಲ. ಯಾರೂ ಹಿಂದುಳಿದವರಲ್ಲ. ಮುಂದುವರೆದವರಂತೂ ಯಾರೂ ಇಲ್ಲ.ಆತ್ಮಜ್ಞಾನಕ್ಕಾಗಿ ನಾವೇ ಕಷ್ಟಪಡಬೇಕು. ಕಷ್ಟಪಟ್ಟರೆ ಸುಖವಿದೆ. ರಾಜಕೀಯದ ಹಿಂದೆ ಬಿದ್ದವರ ಜ್ಞಾನ ನಷ್ಟ.

ಯಾವುದೋ ಅನಗತ್ಯವಾದ ವಿಚಾರಗಳನ್ನು ಮುಂದಿಟ್ಟುಕೊಂಡು ಮನರಂಜನೆಯಲ್ಲಿ ಮೈಮರೆತು ಮನೆ ಮನೆಯಲ್ಲಿ ಮಾಧ್ಯಮ ಗಳ ವಿಚಾರ ತಲುಪಿಸಲು ಸಹಕಾರಹೆಚ್ಚಾಗಿದೆ.

ಆದರೆ, ಇದರಿಂದಾಗಿ ನಮ್ಮಲ್ಲೇ ಅಡಗಿರುವ ಮಹಾಶಕ್ತಿಯ ದುರುಪಯೋಗ ಆಗುತ್ತಿರುವ ಬಗ್ಗೆ ಚಿಂತನೆನಡೆಸಲು ಸಾಧ್ಯವಾಗದಿರೋದೆ ವಿಪರ್ಯಾಸ. ಸತ್ಯವೆ ದೇವರು ಎನ್ನುವವರಿಗೆ ಸತ್ಯ ತಿಳಿಸಲಾಗದ ಪರಿಸ್ಥಿತಿ. ಇದೇಅಲ್ಲವೆ ದುರಾದೃಷ್ಟ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!