ದಿನಕ್ಕೊಂದು ಸಾಮಾನ್ಯಜ್ಞಾನ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ಹೆಸರಿಗಾಗಿ ಹಣ ಸಂಪಾದನೆಗಿಳಿದಾಗ ಹಣ ನೀಡಿ ಹೆಸರುಗಳಿಸಬೇಕು. ಹಾಗೆಯೆ , ಜ್ಞಾನದಿಂದ ಗಳಿಸಿದ ಹೆಸರಲ್ಲಿ ಹಣವಿಲ್ಲದೆಯೂ ಹೆಸರನ್ನುಳಿಸಬಹುದು. ಆದರೆ, ಒಂದು ಜನ್ಮದ ಹೆಸರು ಇನ್ನೊಂದು ಜನ್ಮದಲ್ಲಿ ಬದಲಾಗುವಾಗ ಹೆಸರೂ ಕಾರಣ ಮಾತ್ರವಷ್ಟೆ.

ದೇವನೊಬ್ಬನೆ ನಾಮ ಹಲವು.ಪ್ರತಿಯೊಬ್ಬರ ಹೆಸರ ಹಿಂದೆ ನಡೆಯದೆ ಜ್ಞಾನದ ಹಿಂದೆ ನಡೆಯುವುದೆ ಉತ್ತಮ ಜೀವನ.ಪರಮಾತ್ಮ ಹೆಸರು ಮಾಡಿದವರಲ್ಲಿ ಮಾತ್ರವಿರೋದಿಲ್ಲ. ಹಣ ಮಾಡಿದವರಲ್ಲಿಯೂ ಇರೋದಿಲ್ಲ. ಯಾರು ಅದಕ್ಕೆ ಸಹಕಾರ,ಸಹಾಯ ಮಾಡಿ ಬೆಳೆಸಿರುವರೋ ಅವರಲ್ಲಿರುವುದನ್ನು ಗಮನಿಸಿದಾಗಲೆ ಪರಮಾತ್ಮನ ದರ್ಶನ.
ಇದರಲ್ಲಿ ಎರಡು ರೀತಿಯ ಮಾರ್ಗವಿದೆ. ಅಧ್ಯಾತ್ಮಹಾಗು ಭೌತಿಕ. ಅಧ್ಯಾತ್ಮ ಮಾರ್ಗ ಕಠಿಣವಾದ್ದರಿಂದ‌ ಭೌತಿಕ ಮಾರ್ಗದ ಹೆಸರು ಜಗತ್ತನ್ನು ನಡೆಸಿದ್ದರೂ ಇದು ತಾತ್ಕಾಲಿಕ ಎನ್ನುವುದನ್ನು ಹಿಂದಿನ ಮಹಾತ್ಮರೆ ತಿಳಿಸಿದ್ದಾರೆ. ಈಗ ಎರಡನ್ನೂ ಸರಿಸಮನಾಗಿ ತಿಳಿದು ನಡೆಯುವ ಅಗತ್ಯವಿದೆ.

ಧಾರ್ಮಿಕ ಕ್ಷೇತ್ರವಾಗಲಿ, ರಾಜಕೀಯ ಕ್ಷೇತ್ರವಾಗಲಿ ಹಣಬಲವಿಲ್ಲದೆ,ಜನಬಲವಿಲ್ಲದೆ ನಡೆಸಲಾಗದು. ಅದರಲ್ಲಿ ಅಧಿಕಾರ ಸ್ಥಾನಮಾನ,ಸನ್ಮಾನ ಪಡೆಯುವುದಕ್ಕೂ ಇದೇ ಮೂಲ ಕಾರಣವಾದ್ದರಿಂದ ಇದನ್ನು ಸಮಾಜವೆ ಕೊಟ್ಟು ಬೆಳೆಸುತ್ತದೆ.

- Advertisement -

ಅಧಿಕಾರ ಸಿಕ್ಕ ನಂತರ ಅಧಿಕಾರವನ್ನು ಸದ್ಬಳಕೆ ಮಾಡಿಕೊಳ್ಳಲು ಬಹಳ ಕಷ್ಟ. ಕಾರಣ, ಇಲ್ಲಿ ಹಣ ಜನರಿಂದ,ಜನರಿಗಾಗಿ ಜನರೆ ನೀಡುವ ಪ್ರಜಾಪ್ರಭುತ್ವದ ಧರ್ಮವನ್ನು ಪ್ರಜೆಗಳಾಗಿ ನಿಂತು ನೋಡಿದಾಗ ಮಾತ್ರ ಸತ್ಯ ಅರ್ಥವಾಗುತ್ತದೆ.

ಹಣ ಕೊಟ್ಟು ತಿರುಗಿ ಪಡೆಯುವುದರಿಂದ ಯಾವುದೇ ಜ್ಞಾನ ಸಿಗೋದಿಲ್ಲ. ನಿಸ್ವಾರ್ಥ ಸೇವೆ ಎನ್ನುವವರಲ್ಲಿ ಸ್ವಾರ್ಥತುಂಬಿದ್ದರೆ ಅಧರ್ಮ, ಹಾಗೆಯೇ ಪ್ರತಿಯೊಬ್ಬರನ್ನೂ ಪರಮಾತ್ಮನೆ ನಡೆಸುವುದಾದರೆ ನಾನ್ಯಾರು? ಈ ಪ್ರಶ್ನೆಗೆ ಉತ್ತರಹುಡುಕಲು ಬಂದ ಜೀವರಿಗೆ ಪ್ರಶ್ನೆ ಹಾಕಿಕೊಳ್ಳಲಾಗದಷ್ಟು ಬೌತಿಕಾಸಕ್ತಿ ಬೆಳೆದರೆ, ಆಧ್ಯಾತ್ಮ ಆಗೋದಿಲ್ಲ.

ಹೀಗೇ ಇಂದಿನ ಸಮಾಜದಲ್ಲಿ ನಾವು ನಮ್ಮ ಕಣ್ಣೆದುರೆ ಭ್ರಷ್ಟಾಚಾರ ಇದ್ದರೂ ಹೇಳೋ ಸ್ವಾತಂತ್ರ್ಯ ಇದ್ದರೂ ನಮ್ಮಲ್ಲೇ ಅಡಗಿರುವ ರಾಜಕೀಯತೆ ಅದನ್ನು ತಡೆದು,ಅದಕ್ಕೆ ಸಹಕರಿಸುತ್ತಿದ್ದರೆ ಪಾಪ ಮಾಡಿದವರ ಕರ್ಮಫಲವನ್ನು ಸಹಕರಿಸಿದವರೆ ಹೆಚ್ಚಾಗಿ ಅನುಭವಿಸಬೇಕೆನ್ನುವುದು ಸತ್ಯವಾಗಿ ಕಾಣುತ್ತಿದೆ.

ಹಿಂದಿನ ರಾಜರ ಕಾಲದಲ್ಲಿ ಇದನ್ನುಸ್ವಯಂ ರಾಜನೆ ಅನುಭವಿಸಬೇಕಾಗಿತ್ತು.ಇಂದು ಪ್ರಜೆಗಳೆ ಅನುಭವಿಸಬೇಕಿದೆ. ಕೊರೊನ ದ ಮೂಲ ವಿದೇಶಿವ್ಯವಹಾರ, ಆಹಾರ, ವಿಹಾರ, ಶಿಕ್ಷಣ. ಇದನ್ನು ಒಳಗೆಳೆದುಕೊಂಡು ಸಹಕರಿಸಿದ ಭಾರತೀಯರಿಗೀಗ ಔಷಧವನ್ನುಕಂಡುಹಿಡಿಯಲಾಗದೆ,ತಿರುಗಿ ವಿದೇಶಿಗಳ ಮೊರೆ ಹೋದರೆ,ಜೀವ ಉಳಿಸಲು ಹಣದಿಂದ ಆಗುವುದೆ?

ಸಾತ್ವಿಕ ಆಹಾರ,ಶಿಕ್ಷಣ, ವ್ಯವಹಾರವನ್ನು ಭಾರತೀಯರು ಹಿಂದೆ ತೋರಿಸಿಕೊಟ್ಟು ಸ್ವತಂತ್ರ ಜ್ಞಾನವನ್ನು ಪಡೆದು, ಮಹಾತ್ಮರಾಗಿದ್ದರು ಈಗ , ಅವರನ್ನು ಹಿಂದುಳಿದ ಬಡವರೆಂದು ಸಾಲ ಕೊಟ್ಟು ಸರ್ಕಾರದ ಹಿಂದೆ ನಿಲ್ಲಿಸಿದರೆ ರೋಗ ಹೆಚ್ಚಾಗುವುದಿಲ್ಲವೆ?

ಜೀವಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ.ಹಾಗೆ ಜ್ಞಾನಕ್ಕೂ ಬೆಲೆಕಟ್ಟಲಾಗದು. ಆದರೆ ಈಗ ಇದಕ್ಕೆ ಬೆಲೆಕಟ್ಟಿ ಆತ್ಮಹತ್ಯೆ ಹೆಚ್ಚುಮಾಡಿದರೆ , ಆಧ್ಯಾತ್ಮಿಕ ವಿಚಾರದೊಳಗಿದ್ದ ಸಾಮಾನ್ಯಜ್ಞಾನ ತಿಳಿಯಲಾಗೋದಿಲ್ಲ. ಒಟ್ಟಿನಲ್ಲಿ ಇಲ್ಲಿ ಹೆಸರು,ಹಣ,ಅಧಿಕಾರ ಸ್ಥಾನದಲ್ಲಿದ್ದವರ ಜೀವಕ್ಕೆ ಬೆಲೆ ಹೆಚ್ಚು,ಇಲ್ಲದಿರುವವರ ಜೀವಕ್ಕೆ ಬೆಲೆಯಿಲ್ಲ.

ಹೀಗಾಗಿ ಸಮಾಜದಲ್ಲಿ ಎಲ್ಲಾ ಒಂದಲ್ಲ ಒಂದು ರೀತಿ ಹೆಸರುಮಾಡುವುದರಲ್ಲಿ ಮುಳುಗಿ, ಮುಂದಿನ ಭವಿಷ್ಯ ಹೆಸರಿನಲ್ಲಿದೆ.

*ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು*

- Advertisement -
- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!