ದಿನಕ್ಕೊಂದು ಸಾಮಾನ್ಯಜ್ಞಾನ

Must Read

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಎಲ್ಲರೂ ಅವರು ಸರಿದಾರಿಯಲ್ಲಿ ನಡೆಯಬೇಕೆಂದೇ ನಡೆಯುತ್ತಾರೆ. ಆದರೆ, ಕೆಲವು ಮಧ್ಯವರ್ತಿಗಳು ಬಂದು ದಾರಿ ತಪ್ಪಿಸಿ ತಮ್ಮೆಡೆ ನಡೆಸಿಕೊಂಡು ತಮ್ಮ ಬಲ ಹೆಚ್ಚಿಸಿಕೊಳ್ಳುವುದು ಹೆಚ್ಚು. ದಾರಿ ಯಾವುದೇ ಇರಲಿ ನೇರವಾಗಿದ್ದರೆ ಕೊನೆ ತಲುಪುವುದಕ್ಕೆ ಸಾಧ್ಯವಿದೆ. ಇದಕ್ಕೆ ಹೊರಗಿನವರ ಮಧ್ಯಸ್ಥಿಕೆ ಗಿಂತ ಒಳಗಿನವರ ಮಧ್ಯಸ್ಥಿಕೆ ಉತ್ತಮ.

ಆಧ್ಯಾತ್ಮದ ವಿಚಾರವಾಗಲಿ ವೈಜ್ಞಾನಿಕ ವಿಚಾರವಾಗಲಿ ಮಧ್ಯೆ ನಿಂತು ಜನರನ್ನು ತಮ್ಮೆಡೆಗೆ ಸೆಳೆದುಕೊಳ್ಳುವ ಪ್ರಯತ್ನ ಮಧ್ಯವರ್ತಿಗಳು, ಮಾಧ್ಯಮಗಳ ಮೂಲಕ ನಡೆದಿದೆ. ಹಾಗಾದರೆ ಜನರ ಮನಸ್ಸು ಮಾಧ್ಯಮಗಳ ಒಳಗಿದೆಯೆ? ಜನರ ಒಳಗಿದೆಯೆ? ತನ್ನ ತಾನರಿತು ನಡೆಯಬೇಕೆಂಬ ಸಾಮಾನ್ಯ ಜ್ಞಾನ ಮಕ್ಕಳಲ್ಲಿ ಮರೆಯಾಗುತ್ತಿರುವುದೆ ಪೋಷಕರಿಂದ. ಪೋಷಕರಿಗೆ ಮಕ್ಕಳು ತಮ್ಮ ಆಸೆ ಪೂರೈಸೋ ಒಂದು ಜೀವ. ಹೀಗಾಗಿ ತಾನು ಮಾಡಲಾರದ್ದನ್ನು ಮಕ್ಕಳು ಮಾಡಲಿ ಎನ್ನುವ ವ್ಯಾಮೋಹದಲ್ಲಿ ಜೀವನದ ಸತ್ಯ ತಿಳಿಸದೆ, ಹೊರ ಜಗತ್ತಿನ ವಿಚಾರವನ್ನು ತಲೆಗೆ ತುಂಬಿ ಪ್ರಭುದ್ದತೆಯನ್ನು ಹೆಚ್ಚು ಮಾಡಲು ಮಧ್ಯವರ್ತಿಗಳ ಸಹಕಾರ ಪಡೆಯುತ್ತಾರೆ.

ಇದು ಅಗತ್ಯವಾದರೂ ಏನು,ಎಷ್ಟು, ಯಾಕೆ,ಯಾವಾಗ,ಯಾವುದಕ್ಕೆ ಯಾವ ವಿಷಯಗಳನ್ನು ಯಾವ ವಯಸ್ಸಿನಲ್ಲಿ ತಿಳಿಸಬೇಕೆಂಬುದೆ  ತಿಳಿಯದೆ ಬೆಳೆಸೋದರಿಂದ ಅನಾಹುತಗಳೇ ಹೆಚ್ಚಾಗುತ್ತದೆ. ವಿಜ್ಞಾನ ಯುಗ ತುಂಬಾ ಅವಸರದ ಜೀವನ. “ತಾಳಿದವನು ಬಾಳಿಯಾನು ನಿದಾನವೆ ಪ್ರಧಾನ”, ಇವೆಲ್ಲವೂ ಇಂದಿನ ಜಗತ್ತು ಒಪ್ಪಲು ಕಷ್ಟ. ಕಷ್ಟಪಡದೆ ಸುಖ ಪಡುವವರಿಗೆ ಕಷ್ಟ ಬಂದಾಗ ಸಹನೆ ಇರೋದಿಲ್ಲ. ಆದರೆ ಜೀವನದಲ್ಲಿ ಇದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ.

- Advertisement -

ವಾಸ್ತವತೆಯನ್ನು ಅರ್ಥ ಮಾಡಿಕೊಳ್ಳಲು ಪುರಾಣ,ಇತಿಹಾಸದ ರಾಜಕೀಯ ಬೇಡ. ಆದರೆ, ಇಂದು ಮಧ್ಯವರ್ತಿಗಳು ಜೀವನ ನಡೆಸಿರೋದೆ ರಾಜಕೀಯದಿಂದ. ಅಂದರೆ, ಎಲ್ಲಾ ವಿಚಾರದಲ್ಲೂ ಮಸತ್ಯ ತಿಳಿಯದೆ ಜನರೆಡೆಗೆ ಹರಡುವುದರಿಂದ ಮನರಂಜನೆ ಸಿಗಬಹುದು.

ಅದರಿಂದಾಗಿ ಸಮಾಜ ಹಾಳಾಗುತ್ತಿರುವ ಸತ್ಯವನ್ನು ಯಾರೇ ತಿಳಿಸಿದರೂ ಅದರಲ್ಲಿಯೂ ತಮ್ಮ ವ್ಯವಹಾರ ಬೆಳೆಸಿಕೊಂಡರೆ , ಅವರಕರ್ಮಕ್ಕೆ ಅವರ ಸಂಸಾರವೂ ಕಷ್ಟ ನಷ್ಟ ಅನುಭವಿಸಬೇಕೆನ್ನುವುದು ಆಧ್ಯಾತ್ಮ ಸತ್ಯ.

ಇದರಲ್ಲಿ ಧಾರ್ಮಿಕ, ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದ ಮಧ್ಯವರ್ತಿಗಳು ಜನರನ್ನು ನೇರವಾಗಿ ನಡೆಯಲು ಬಿಟ್ಟರೆ ಉತ್ತಮ. ಇಲ್ಲವಾದರೆ,ಸರಿ ತಪ್ಪು ಯಾವುದೆನ್ನುವುದರ ಜ್ಞಾನ ಪಡೆದು ಮುಂದಾಗಬೇಕು. ದೇಶದೊಳಗೆ ಇರುವ ಮೂರೂ ವರ್ಗಗಳಪ್ರತಿಯೊಂದು ಕರ್ಮವನ್ನು ದೇಶ ಅನುಭವಿಸುತ್ತಿದೆ.

ಹಾನಷ್ಟವಿಲ್ಲ.ದೇಹಕ್ಕೆ ನಷ್ಟ.ಜನ್ಮಕ್ಕೆ ನಷ್ಟ. ದೇವಾಸುರರ ಮಾಧ್ಯಮವಾಗಿರುವ ಮಾನವನ ಶರೀರವನ್ನು ವಿಜ್ಞಾನ ಅಂಗಾಂಗಗಳನ್ನು ಗುರುತಿಸಿ ಆರೋಗ್ಯಕ್ಕೆ ಸಹಕರಿಸಿದರೆ, ಆಧ್ಯಾತ್ಮ ಅಂಗಾಂಗದೊಳಗಿರುವ‌ ದೈವಶಕ್ತಿ ಗುರುತಿಸಿ ದೈವಸಾಕ್ಷಾತ್ಕಾರಕ್ಕಾಗಿ ಆರೋಗ್ಯ ಹೆಚ್ಚಿಸುತ್ತದೆ. ಇವೆರಡರ ಮಧ್ಯೆ ನಿಂತ ಮನಸ್ಸು ಅರ್ಧಸತ್ಯವನ್ನಷ್ಟೇ ತಿವಿರೋಧಿಸಿದರೆ ಮನುಕುಲ ಅತಂತ್ರಸ್ಥಿತಿಗೆ ತಲುಪುತ್ತದೆ ಎನ್ನಬಹುದಷ್ಟೆ.

ಜ್ಞಾನ ವಿಜ್ಞಾನ,ಕಷ್ಟ ಸುಖ, ಭೂಮಿ ಆಕಾಶ, ಸ್ತ್ರೀ ಪುರುಷರ ನಡುವೆ ನಡೆಯೋ ಭಿನ್ನಾಭಿಪ್ರಾಯ ಕ್ಕೆ ಅಜ್ಞಾನದ ವ್ಯವಹಾರಜ್ಞಾನವೇ ಕಾರಣ. ವ್ಯವಹಾರವೇ ಜೀವನವಾಗದೆ ಜೀವನದಲ್ಲಿ ವ್ಯವಹಾರವಿದ್ದರೆ ಉತ್ತಮ ಶಾಂತಿ ಕಾಣಬಹುದು. ದೇವರು ಎಲ್ಲರೊಳಗೂ ಇದ್ದಾರೆ.ಹೊರಗಿನ ದೇವರ ಮಧ್ಯಸ್ಥಿಕೆ ಹೆಚ್ಚಾದರೆ ಒಳಗೆ ನಡೆಯಲಾಗದು.ಹಾಗೆಯೇ ಸಂಸಾರದ ಸಮಸ್ಯೆಗಳಿಗೆ ಸಂಸಾರದೊಳಗೆ ಪರಿಹಾರ,ದೇಶದ ಸಮಸ್ಯೆಗೆ ಪ್ರಜೆಗಳೊಳಗೆ ಪರಿಹಾರ ವಿದೇಶಿಗಳಿಂದ ಪಡೆದಷ್ಟೂ ಸಮಸ್ಯೆ ಬೆಳೆಯುತ್ತದೆ. ಹೀಗೇ ಎಷ್ಟೋ ಸಣ್ಣ ಸಮಸ್ಯೆ ದೊಡ್ಡದು ಮಾಡಿ ಹರಡುವುದು ಮಧ್ಯವರ್ತಿಗಳು. ಹೀಗಾಗಿ ಸಮಾಜದಲ್ಲಿ ಶಾಂತಿ ಮರೆಯಾಗಿ,ಕ್ರಾಂತಿ ಬೆಳೆದಿದೆ. ಕ್ರಾಂತಿಯ ಮೂಲವೇ ಮಧ್ಯವರ್ತಿ ಆದಾಗ ಅವನ ಬಿಟ್ಟು ನಡೆದರೆ ನಿಧಾನವಾದರೂ ಮೂಲ ಗುರಿ ತಲುಪಬಹುದು.

ಒಳ್ಳೆಯದು ಕೆಟ್ಟದ್ದು ಎ ಒಳ್ಳೆಯದು ಹೆಚ್ಚಾದರೆ ಶಾಂತಿ ಇಲ್ಲವಾದರೆ ಅಶಾಂತಿ. ಅತಿಆಸೆಯೇ  ಮಧ್ಯವರ್ತಿಗಳನ್ನು ಬೆಳೆಸಿರುವುದು. ಕೆಲವರಷ್ಟೇ ಉತ್ತಮ ಕಾರ್ಯ ಮಧ್ಯವರ್ತಿ ಗಳಾಗಿ ನಡೆಸಿದ್ದಾರೆ. ಇವರಿಗೆ ಜನರ ಉತ್ತಮ ಸಹಕಾರ ಸಿಗುವುದು ಮುಖ್ಯವಾಗಿದೆ.

ಕಾಲಚಕ್ರ ತಿರುಗಿದಾಗಲೆ ಸತ್ಯ ತಿಳಿಯೋದಲ್ಲವೆ? ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ.ಮಾನವ ದೇವಾಸುರರ ಮಧ್ಯವರ್ತಿ. ಕಾರಣಮಾತ್ರದವನು.ಅದ್ವೈತ ಸಿದ್ದಾಂತದಲ್ಲಿ ಶ್ರೀ ಶಂಕರಾಚಾರ್ಯರೇ ತಿಳಿಸಿದಂತೆ ನಾನೆಂಬುದಿಲ್ಲ. ಇಲ್ಲಿ ಒಳಗಿದ್ದು ನಡೆಸೋ ಶಕ್ತಿಯೇ ಬೇರೆ ಹೊರಗಿನ ಶಕ್ತಿಯೇ ಬೇರೆ.ಈ ಸತ್ಯಜ್ಞಾನ ತಿಳಿಯವುದಕ್ಕೂ ಮಧ್ಯವರ್ತಿಗಳು ಬೇಕು.ಆದರೆ ಪೂರ್ಣಸತ್ಯ ತಿಳಿದು ನಡೆದಿರಬೇಕು. ಕಲಿಗಾಲದಲ್ಲಿ ಹುಡುಕಬೇಕು. ನಮ್ಮೊಳಗಿನ ಮಧ್ಯವರ್ತಿ ಯಾರೆಂದು ತಿಳಿದು ನಡೆದರೆ ಸಾಕು.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...
- Advertisement -

More Articles Like This

- Advertisement -
close
error: Content is protected !!