ದಿನಕ್ಕೊಂದು ಸಾಮಾನ್ಯಜ್ಞಾನ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

“ಎಲ್ಲರೊಳಗೊಂದಾಗು ಮಂಕುತಿಮ್ಮ” ಡಿ.ವಿ ಗುಂಡಪ್ಪನವರಂತೆ ಎಲ್ಲಾ ಆಗೋದಿಲ್ಲ. ಅವರೊಳಗಿನ ಒಂದಂಶ ಎಲ್ಲಾ ಪಡೆಯಬಹುದು. ಎಲ್ಲಾ ಮಕ್ಕಳೂ ತಾಯಿ ತಂದೆಯಂತೇ ನಡೆಯಲಾಗದು.ಆದರೂ ಒಂದಂಶ ಇದ್ದೇ ಇರುತ್ತದೆ. ಎಲ್ಲಾ ದೇವರಾಗೋದಕ್ಕೆ ಅಸಾಧ್ಯ. ದೈವಶಕ್ತಿಯ ಒಂದು  ಕಣ ಪ್ರತಿಯೊಬ್ಬರಲ್ಲೂ ಇದೆ. ಹಾಗೆಯೇ ಎಲ್ಲಾ ಅಸುರರಂತೆ ಜೀವನ ನಡೆಸಲಾಗದು.

ಪ್ರತಿಯೊಬ್ಬರಲ್ಲಿಯೂ ಅಸುರೀ ಗುಣವಿದೆ.ಅದೇ ಸ್ವಾರ್ಥ ಅಹಂಕಾರ. ಮಾನವ ಮಧ್ಯವರ್ತಿ ಯಾಗಿ ನಿಂತುಇಬ್ಬರನ್ನೂ ಓಲೈಸಿಕೊಂಡು ತನ್ನ ಜೀವಕ್ಕಾಗಿ  ಜೀವಿಸುವುದು ಸರಿ. ಆದರೆ ಇತರರ ಜೀವನದಲ್ಲಿ ಆಟ ಆಡಲು ಹೋಗಿ ತನ್ನ ಜೀವನವೇಹಿಂದುಳಿದರೆ ನಷ್ಟ ಯಾರಿಗೆ? ವಿಶೇಷ ಜ್ಞಾನಕ್ಕೆ ಸಾಮಾನ್ಯಜ್ಞಾನದಅಡಿಪಾಯ ಅಗತ್ಯ.

ಇದುಸಾಮಾನ್ಯರಲ್ಲಿದೆ. ಅವರನ್ನು ಆಳೋದರಲ್ಲಿ ಅರ್ಥ ವಿಲ್ಲ. ಭಾರತ ದೇಶ ಸಾಮಾನ್ಯಜ್ಞಾನದಿಂದ ಸತ್ಯದೆಡೆಗೆ ನಡೆದು ಮಹಾತ್ಮರಾಗಿ ವಿಶೇಷಜ್ಞಾನಿಗಳಾದವರ ದೇಶವಾಗಿತ್ತು. ಈಗಿದನ್ನು ಸಾಮಾನ್ಯ ಜ್ಞಾನವಿಲ್ಲದೆ ಹೊರಗಿನ ಸತ್ಯವನ್ನು ಒಳಗೆಳೆದುಕೊಂಡು ಅಸತ್ಯ,ಅನ್ಯಾಯ,ಅಧರ್ಮದಿಂದ ಜನ ಸಾಮಾನ್ಯರನ್ನೇ ಆಳೋ ಮಟ್ಟಿಗೆ ಬೆಳೆಯುತ್ತಿದೆ ಎಂದರೆ ಇಲ್ಲಿ ಆಳು ಯಾರು? ಆಳೋರು ಯಾರು?

- Advertisement -

ನಮ್ಮೊಳಗಿನ ಸತ್ಯವನ್ನು ನಾವೇ ತಿಳಿಯಲಾಗದ ಮೇಲೆ ಯಾರ ಸತ್ಯ ನಂಬಿ ಏನು ಉಪಯೋಗ. ಮಧ್ಯವರ್ತಿಗಳು ಅರ್ಧಸತ್ಯದ ವಿಚಾರದಿಂದ ಹಣ,ಅಧಿಕಾರ,ಸ್ಥಾನಮಾನ ಹೆಸರು ಪಡೆದಿರೋದಕ್ಕೆ ಕಾರಣವೆ ಶಿಕ್ಷಣದಲ್ಲಿನ ರಾಜಕೀಯತೆ. ಪೋಷಕರ ಮೂಲ ಶಕ್ತಿ ಮಕ್ಕಳಲ್ಲಿದ್ದರೂ ಅದನ್ನು ಮೊದಲು ಬೆಳೆಸದೆ ಯಾರಿಗೋ ಕೈ ಗೊಂಬೆ ಮಾ ಕಳಿಸಿ ಕಲಿಸಿದರೆ ಮುಂದೆ ಅವರೇ ಪೋಷಕರನ್ನು ಆಳೋದು ಅಳಿಸೋದು.

ಮೂಲವನ್ನು ಬಿಟ್ಟು ರೆಂಬೆ ಕೊಂಬೆಗಳನ್ನು ಗಟ್ಟಿಗೊಳಿಸಲಾಗುವುದೆ?
ಸಮಾಜದ ಓರೆಕೋರೆಗಳು ನಮ್ಮ ಕಣ್ಣಿಗೆ ಬಹಳ ಬೇಗ ಕಾಣುತ್ತದೆ. ಪ್ರಚಾರ ಮಾಡಲು ಅವಕಾಶವಿದ್ದರೆ ಪ್ರಚಾರಕರ ಸಂಖ್ಯೆ ಬೆಳೆಯುತ್ತದೆ. ಮುಂದೆ ನಡೆದಂತೆಲ್ಲಾ ನಾವೂ ಹಾಗೇ ತಪ್ಪು ದಾರಿಯಲ್ಲಿರುವ ಸತ್ಯ ಮರೆತುಹೋಗುತ್ತದೆ.ಇದೇ ಮಾಯೆ. ಮಾಯೆಯಿಂದ ತಪ್ಪಿಸಿಕೊಂಡು ಜೀವನ ನಡೆಸಿದವರು ವಿರಳ. ಸಂನ್ಯಾಸಿಗಳೂ ಇದರ ಹಿಡಿತದಿಂದ ಕಷ್ಟ ಅನುಭವಿಸಿದ್ದಾರೆ.ಭೂಮಿಯೇ ಒಂದು ಮಾಯಾ ಲೋಕ.ಇದರಲ್ಲಿ ತನ್ನ ತಾನರಿತು ನಡೆಯುವುದು ಕಷ್ಟವಾದರೂ ಅಗತ್ಯವಿದೆ. ಇಲ್ಲವಾದರೆ ಇದೇ ಜೀವನದಲ್ಲಿ ದೊಡ್ಡ ಸಮಸ್ಯೆಗಳನ್ನು ಬೆಳೆಸುತ್ತಾ ಒಮ್ಮೆ ಜೀವ ಮಾಯವಾದರೂ ಮತ್ತೆ ಜನ್ಮ ಪಡೆದಾಗ ಅದೇ ಹಿಂದಿನ ಕೊಂಡಿಯಿಂದ ಬಿಡಿಸಿಕೊಳ್ಳಲಾಗದು.

ಅದಕ್ಕಾಗಿ ಇದ್ದಾಗಲೆಬಎಲ್ಲಾ ಸತ್ಯ ತಿಳಿದು ತಿಳಿಸಿ ನಡೆಯುವುದನ್ನು ಕಲಿಯಬೇಕು ಎಂದು ಹಿಂದಿನ ಕಾಲದಲ್ಲಿ ಧಾರ್ಮಿಕ ಆಚರಣೆಗಳಿಂದ ಲ ಪರಿಹಾರ ಕಾರ್ಯ ನಡೆಸಿದ್ದರು. ಈಗಿದು ಕೇವಲ ವ್ಯವಹಾರ ರೂಪದಲ್ಲಿದ್ದರೆ ಋಣ ಅಥವಾ ಸಾಲ ತೀರುವುದೆ? ದೇಹದೊಳಗೆ ಜೀವ ಇರುವಾಗಲೇ ಇದು ಸಾಧ್ಯವಾಗದಿದ್ದರೆ ಹೋದ ಮೇಲೆ ಸಾಧ್ಯವೆ?

ರಾಜಕೀಯ ಬಿಟ್ಟು ಚಿಂತನೆ ನಡೆಸಿದರೆ ಸತ್ಯದರ್ಶನ ಸಾಧ್ಯ. ವರ್ಣಪದ್ದತಿಯಲ್ಲಿದ್ದ ಮೂಲ ಧರ್ಮಕ್ಕೆ ತಕ್ಕಂತೆ ಕ ಬೌತಿಕಾಸಕ್ತಿ ಹೆಚ್ಚಾಗಿ ಸಾಲದ ಹೊರೆ ಹೆಚ್ಚಾಗಿದೆ. ಸಾಲದಿಂದ ಬಿಡುಗಡೆ ಪಡೆಯಲು ಸತ್ಕರ್ಮದಿಂದ ಸಾಧ್ಯ. ಸತ್ಯದಲ್ಲಿ ಕರ್ಮ ಅಥವಾ ಕೆಲಸ ಮಾಡುವುದು. ಸತ್ಯವೇಗೊತ್ತಿಲ್ಲವಾದರೆ ನಮ್ಮ ಆತ್ಮಸಾಕ್ಷಿಗೆ ತಕ್ಕಂತೆ ನಡೆಯಬಹುದು.

ಸಮಾಜದೊಳಗೆ ಸಂಸಾರವಿದೆ, ದೇಶದೊಳಗೆ ದೇಹವಿದೆ. ಪರಮಾತ್ಮನೊಳಗೆಬಜೀವಾತ್ಮನಿರೋದು. ತಾಯಿಯೊಳಗಿಂದ ಬಂದ ಜೀವ ಮತ್ತೆ ಸೇರೋದು ಎಲ್ಲಿಗೆ? “ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ” ಪೋಷಕರಲ್ಲೇ ಇರದ ಸತ್ಯ ಮಕ್ಕಳಿಗೆ ಹೊರಗಿನಿಂದ ಕಲಿಸಬಹುದು.

ಆದರೆ ಪೋಷಕರ ಸಹಕಾರ,ಸಹಾಯವಿಲ್ಲವಾದರೆ ಸಾಧ್ಯವಿಲ್ಲ. ಭಾರತ ದೇಶದೊಳಗೆ ಸೇರಿಕೊಂಡ ಅಸಂಖ್ಯಾತ ಧರ್ಮ,ದೇವರು,ಜಾತಿ,ಪಕ್ಷದ  ಭಿನ್ನಾಭಿಪ್ರಾಯದ ರಾಜಕೀಯತೆಗೆ ಇಂದು ದೇಶ ವಿದೇಶದೆಡೆಗೆ ಹೋಗುತ್ತಿದೆ.

ತವರು ಬಿಟ್ಟು ಹೊರ ನಡೆದ ಸ್ತ್ರೀ ಗೆ ತವರಿನ ವ್ಯಾಮೋಹ ಕೊನೆಯಾಗಲು ಕಷ್ಟ. ಆದರೆ, ತವರಿನಲ್ಲಿಯೇ ಅವಳಿಗೆ ಸಿಗದ ಗೌರವ,ಪ್ರೀತಿ,ವಿಶ್ವಾಸ ಹೊರಗೆ ಸಿಕ್ಕಿದರೆ ತಿರುಗಿ ನೋಡುವುದೂ ಇಲ್ಲ. ಸ್ತ್ರೀ ಜ್ಞಾನಶಕ್ತಿಯನ್ನು ಕಳೆದುಕೊಂಡರೆ ಇಡೀ ಮನುಕುಲಕ್ಕೆ ಕಷ್ಟ ನಷ್ಟ. ಯಾವುದೇ ಆಗಲಿ ಅತಿಯಾದರೆ ಗತಿಗೇಡು. ಆಳವಾಗಿ ಇಳಿದಿರುವ ಬೇರನ್ನು ಕಿತ್ತು ಹಾಕೋ ಶಕ್ತಿ ಮನುಕುಲಕ್ಕಿಲ್ಲ. ಇದು ಸತ್ಯ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು.

- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!