ನೇರವಾಗಿ ನಡೆಯುವವರು, ನುಡಿಯುವವರನ್ನು ಜನರು ಮೆಚ್ಚುವುದಿಲ್ಲ. ಹಿಂದೆ ಬಿಟ್ಟು ನಡೆಯುವುದು,ನುಡಿಯುವುದು ಮಧ್ಯಮರು, ಏನೂ ಹೇಳದೆ ಕೇಳದೆ ನಡೆಯುವವರು ಸ್ವತಂತ್ರರು.
ಇವರಲ್ಲಿ ಮಧ್ಯಮರಲ್ಲಿರುವ ಅತಿಯಾದ ಸ್ವಾರ್ಥ ಅಹಂಕಾರ ಮೇಲಿನ ಹಾಗು ಕೆಳಗಿನವರಲ್ಲಿಲ್ಲ. ಆದರೆ ಇವರಿಬ್ಬರೂ ಒಂದಾಗಿ ಚಿಂತನೆ ನಡೆಸುವುದಕ್ಕೂ ಬಿಡದೆ ತಡೆ ಹಾಕೋದರಿಂದ ಸಮಾಜದಲ್ಲಿ ಅಸಮಾನತೆ ಹೆಚ್ಚಾಗಿರೋದು.ನಾವೆಷ್ಟೇ ಮಧ್ಯೆ ನಿಂತು ಸತ್ಯಾಸತ್ಯತೆಯನ್ನು ಹೊರಹಾಕಿದರೂ ನಮ್ಮೊಳಗೆ ಸೇರುವ ಎಲ್ಲಾ ಕರ್ಮಫಲವನ್ನು ನಾವೇ ಅನುಭವಿಸುವಾಗ ಯಾರೂ ಇರೋದಿಲ್ಲ. “ಎಲ್ಲರೊಳಗೊಂದಾಗು ಮಂಕುತಿಮ್ಮ”.
ವ್ಯವಹಾರ ಜ್ಞಾನ ಮೂರನೆ ಅಂಗವಷ್ಟೆ. ತಲೆ,ಭುಜ ಸರಿಯಿಲ್ಲವಾದರೆ ಹೊಟ್ಟೆ ಕೆಡುತ್ತದೆ.ಹೊಟ್ಟೆ ಕೆಟ್ಟರೆ ರೋಗ ಬರುತ್ತದೆ.ರೋಗ ಹೆಚ್ಚಾದರೆ ಕಾಲೂ ಸರಿದಾರಿಯಲ್ಲಿ ನಡೆಯೋದಿಲ್ಲ.
ಸಂಘರ್ಷಕ್ಕೆ ಕಾರಣವೆ ಅರ್ಧಸತ್ಯದ ವಿಚಾರಗಳನ್ನು ಪ್ರಚಾರ ಮಾಡುವ ಮಧ್ಯವರ್ತಿಗಳು,ಮಾನವರು,ಮಹಿಳೆಯರು, ಮಕ್ಕಳು. ಇದರ ಫಲವನ್ನು ಮನುಕುಲವೆ ಅನುಭವಿಸುವುದಂತೂ ಸತ್ಯವೆ. ಹಾಗಾದರೆ ನಾವ್ಯಾರು? ಮಾನವರೆ? ಅಸುರರೆ? ದೇವರೆ?
ನಾನೇ ಬ್ರಹ್ಮ ಎನ್ನುವ ಬದಲಾಗಿ ನಾವೆಲ್ಲರೂ ಆ ಬ್ರಹ್ಮನಿಂದ ಸೃಷ್ಟಿಸಿದ ಮಾನವರಷ್ಟೆ. ಇಲ್ಲಿ ಮಾನವೀಯತೆಗೆ ಸತ್ಯ ಬೇಕು. ಅಸತ್ಯದಿಂದ ಅಸುರತೆ ಬೆಳೆಯುತ್ತದೆ. ಅರ್ಧ ಸತ್ಯವಂತೂ ಇನ್ನೂ ಅತಂತ್ರ ಸ್ಥಿತಿಗೆ ಜೀವ ತಲುಪುತ್ತದೆ. ಮನಸ್ಸಿಗೆ ನೋವು ಆಗುವುದೆನ್ನುವ ಕಾರಣಕ್ಕೆ ಮಕ್ಕಳಿಗೆ ತಪ್ಪು ಸರಿ ತಿಳಿಸದೆ ಬೆಳೆಸಿದರೆ ಅದರ ಪ್ರತಿಫಲ ಪೋಷಕರೆ ಅನುಭವಿಸಬೇಕು.
ಹೀಗೆ ಸಂಸಾರ, ಸಮಾಜ,ದೇಶವನ್ನು ಸರಿ ಮಾರ್ಗದಲ್ಲಿ ನಡೆಸುವುದಕ್ಕೂ ನಮ್ಮಲ್ಲಿ ಸತ್ಯಜ್ಞಾನ ಇರಬೇಕಿದೆ. ಮಿಥ್ಯಜ್ಞಾನ ದ ಇಂದಿನಜಗತ್ತು ವ್ಯವಹಾರದಲ್ಲಿ ಮುಳುಗಿದೆ. ಹಣಕ್ಕಾಗಿ ಹೆಣವನ್ನೂ ಮಾರಾಟ ಮಾಡುವ ಹಂತಕ್ಕೆ ತಲುಪಿದೆ. ಇದಕ್ಕೆ ಸಹಕರಿಸುವವರೂ ಇದ್ದಾರೆ ಎಂದರೆ ಇಲ್ಲಿ ತಪ್ಪು ಯಾರದ್ದು? ವಿಚಾರಗಳನ್ನು ಪ್ರಚಾರ ಮಾಡುವಾಗ ಅದರ ಪರಿಣಾಮದ ಬಗ್ಗೆ ಚಿಂತನೆ ನಡೆಸೋ ಜ್ಞಾನವಿರಬೇಕು. ಇದರಲ್ಲಿ ಮನರಂಜನೆ ಇದ್ದರೆ ಆತ್ಮವಂಚನೆಯ ಫಲ ಜೀವ ಅನುಭವಿಸಲೇಬೇಕಷ್ಟೆ.
ನಾಟಕದ ಜಗತ್ತಿನಲ್ಲಿ ಜೀವನ ನಡೆಸೋ ಮಾನವನ ಮತ್ತೊಂದು ನಾಟಕ ಮನುಕುಲವನ್ನು ಸನ್ಮಾರ್ಗದಲ್ಲಿ ನಡೆಸಬೇಕೇ ಹೊರತು ದುಷ್ಟರನ್ನು ಬೆಳೆಸೋದರಲ್ಲಿದ್ದರೆ ಇದರಿಂದಾಗಿ ಇಡೀ ವಿಶ್ವವೇ ಸಂಕಷ್ಟ ಅನುಭವಿಸುತ್ತದೆ. ಕೊರೊನ ರೋಗವನ್ನು ತಡೆಯಲು ಮದ್ದು ಬಂದಿರಬಹುದು.
ಆದರೆ, ಮಾನವನ ಮಧ್ಯಸ್ಥಿಕೆ ಯಲ್ಲಿ ಅಡಗಿರುವ ಸ್ವಾರ್ಥ ಅಹಂಕಾರದ ಅಜ್ಞಾನವನ್ನು ಹೋಗಲಾಡಿಸಲು ಬೇಕಾದ ಜ್ಞಾನವಿಲ್ಲವಾದರೆಹೊಸಹೊಸ ರೋಗಗಳು ಹುಟ್ಟುತ್ತಲೇ ಇರುತ್ತದೆ. ಇದನ್ನು ಸರ್ಕಾರ ಸರಿಪಡಿಸಬಹುದೆ? ಸತ್ಯದಿಂದ ಸರಿಪಡಿಸಬಹುದೆ? ಸತ್ಯವೇ ದೇವರಾದಾಗ ದೇವತಾರಾಧಕರಲ್ಲಿ ಸತ್ಯವಿದೆಯೆ? ಮಧ್ಯಸ್ಥಿಕೆ ವಹಿಸಿಕೊಂಡು ಮಾನವ ಮಾನವನನ್ನೇ ಆಳೋ ಬದಲು ತನ್ನ ತಾನರಿತು ನೇರವಾಗಿ ನಡೆಯುವುದೆ ಉತ್ತಮ.
ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು