ದಿನಕ್ಕೊಂದು ಸಾಮಾನ್ಯಜ್ಞಾನ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ನನ್ನ ನಾನು ಆಳುವುದು ರಾಜಯೋಗ

ಮತಾಂತರ ವನ್ನು ತಡೆಯುವ ಹಾಗೆ ಪಕ್ಷಾಂತರ, ಜಾತ್ಯಾಂತರ, ಧರ್ಮಾಂತರಕ್ಕೂ ಕಾನೂನು ಬಂದರೆ , ದೇಶಾಂತರ ಹೋಗೋದು ತಪ್ಪುತ್ತದೆಯೇನೋ.ಅವರವರು ಹುಟ್ಟಿದ ನೆಲ ಜಲ,ಧರ್ಮ ಕರ್ಮದ ಪ್ರಕಾರ ಅವರು ಜೀವನ ನಡೆಸುವುದಕ್ಕೂ ಕಾನೂನು ತರಬೇಕಾದ ಪರಿಸ್ಥಿತಿ ಬಂದಿದೆ. ಇದರ ಉದ್ದೇಶ ಅರ್ಥ ಮಾಡಿಸಲು ಅಧ್ಯಾತ್ಮ ಸತ್ಯ ತಿಳಿಸಬೇಕಿದೆ.

ರಾಜಕೀಯದಿಂದ ಸಾಧ್ಯವಾಗದ್ದು ರಾಜಯೋಗದಿಂದ ಸಾಧ್ಯ
ಆದರೆ, ಅಂತಹ ಶಿಕ್ಷಣ ನೀಡುವ ಶಿಕ್ಷಕರು, ಗುರುಗಳು ಬೇಕಿದೆ. ಅವರೆ ರಾಜಕೀಯಕ್ಕೆ ಸಹಕರಿಸಿದರೆ ಯಾವುದೇ
ಸಮಸ್ಯೆಗೆ ಪರಿಹಾರವಿಲ್ಲ.

ರಾಜಕೀಯ ಇತರರನ್ನು ಆಳೋದು, ರಾಜಯೋಗ ನನ್ನ ನಾನು ಆಳಿಕೊಳ್ಳುವುದು.ನನ್ನ ನಾನು ಸರಿಪಡಿಸಿಕೊಂಡು ನಡೆಯೋದು. ಆತ್ಮಸಾಕ್ಷಿಗೆ ತಕ್ಕಂತೆ ನಡೆಯೋದು. ಅಧ್ಯಾತ್ಮ
ಎಂದರೆ ಆದಿ ಆತ್ಮ ಎಂದು ಒಳಗಿನ ಸತ್ಯ ತಿಳಿಯೋದು.

- Advertisement -

ಆದರೆ, ಈಗಿನ ರಾಜಕೀಯವೆ ಒಳಗಿರಲು ಬಿಡುತ್ತಿಲ್ಲವೆಂದರೆ
ಇದಕ್ಕೆ ಸಹಕಾರ ನೀಡಿ ಬೆಳೆಸಿದವರು ಯಾರು? ಅದರಿಂದ ದೂರ ಹೋಗೋದರಿಂದ ಯಾರಿಗೆ ಒಳ್ಳೆಯದಾಗುವುದು?
ಇದಕ್ಕೂ ಕಾನೂನಿನ ಅಗತ್ಯವಿದೆಯೆ? ಸತ್ಯ ತಿಳಿಯುವುದಕ್ಕೆ
ಸಹಕಾರ ಬೇಕಿದೆಯೆ? ದೇವರನ್ನು ಅರ್ಥ ಮಾಡಿಕೊಳ್ಳಲು
ಸರ್ಕಾರ ಬೇಕೆ? .ನನ್ನ ಜೀವ ಉಳಿಸಲು ಸರ್ಕಾರದಿಂದ ಸಾಧ್ಯವೆ? ನಮ್ಮ ನಮ್ಮ ಮೂಲವನ್ನು ತಿಳಿದುಕೊಳ್ಳಲು ಸರ್ಕಾರ ಬೇಕೆ? ಸಾಮಾನ್ಯಜ್ಞಾನವನ್ನು ಹುಟ್ಟುವಾಗಲೆ ಕೊಟ್ಟು ಕಳಿಸಿರುವ ಆ ಬ್ರಹ್ಮನ ಅರಿಯಲು ರಾಜಕೀಯ ಬೇಕೆ? ಮನಸ್ಸನ್ನು ಒಳಗೆಳೆದುಕೊಂಡು ಜೀವನ ನಡೆಸಲು ಹೊರಗಿನ ಸರ್ಕಾರ ಬೇಕೆ? ಒಟ್ಟಿನಲ್ಲಿ ಇಲ್ಲಿ ನಮಗೆ ನಾವೇ ಮೋಸ ಮಾಡಿಕೊಂಡರೂ ಸರ್ಕಾರವೆ ಕಾರಣವಾಗಿದೆ.


ಹಿಂದಿನ ಜನ್ಮದ ಕರ್ಮಫಲ

ಒಂದು ಮಗು ಒಂದು ಕುಟುಂಬ, ಧರ್ಮ,ಜಾತಿ,ಸ್ಥಳದಲ್ಲಿ ಹುಟ್ಟಲು ಕಾರಣವೆ ಅದರ ಹಿಂದಿನ ಜನ್ಮದ ಋಣ ಹಾಗು ಕರ್ಮಫಲ. ಇದನ್ನು ಮಾನವ ಭೂಮಿಯ ಮೇಲೆ ಬದಲಾವಣೆ ಮಾಡಲು ಹೋಗಿ ,ಇನ್ನಷ್ಟು ಋಣ ಹಾಗು ಕೆಟ್ಟ ಕರ್ಮಕ್ಕೆ ಜೀವ ಬಲಿಯಾದರೆ ನಷ್ಟ ಯಾರಿಗೆ? ಪರಮಾತ್ಮನ ಇಚ್ಚೆ ಯೆ ಬೇರೆಯಾದಾಗ ಬದಲಾವಣೆಯಿಂದ ಸಮಸ್ಯೆಗಳೇ ಹೆಚ್ಚಾಗುತ್ತದೆ.

ಎಲ್ಲರಲ್ಲಿಯೂ ಹುಟ್ಟುವಾಗಲೆ ಹೊತ್ತು ಬಂದ ಸಾಮಾನ್ಯಜ್ಞಾನದ ಜೊತೆಗೆ ವಿಶೇಷವಾದ ಜ್ಞಾನವೂ ಬೇರೆ ಬೇರೆ ಆಗಿರುತ್ತದೆ. ಆದರೆ ಅದನ್ನು ಗುರುತಿಸಿ ಶಿಕ್ಷಣ ನೀಡದೆ, ವಿರುದ್ದ ದಿಕ್ಕಿನಲ್ಲಿ ಸರ್ಕಾರದ ಹಿಂದೆ ನಡೆದರೆ ಜ್ಞಾನ ಕುಸಿದು ಪರಾವಲಂಬನೆ ಬೆಳೆದು ಆತ್ಮಶಕ್ತಿ ಕುಸಿದರೆ ಅನಾರೋಗ್ಯಕರ ಸಮಾಜ ಸೃಷ್ಟಿ ಆಗುತ್ತದೆ.

ಇದಕ್ಕೆ ಪರಿಹಾರವೂ ನಮ್ಮೊಳಗೆ ಇದ್ದರೂ ಗುರುತಿಸುವ ಬುದ್ದಿ ಕಳೆದುಕೊಂಡು ಹೊರಗೆ ನಡೆದಿರೋದೆ ಭಾರತೀಯರ ಈ ಅಂತರಗಳಿಗೆ ಕಾರಣವೆನ್ನಬಹುದು.

ಎಷ್ಟೇ ಅಂತರವಿದ್ದರೂ ಎಲ್ಲಾ ಬಂದಿರೋದು ಒಂದೆ ಮೂಲದಿಂದ ಆ ಮೂಲ ತಿಳಿದವರು ಬೇಗ ಹಿಂದೆ
ತಿರುಗಿ ನಡೆಯುತ್ತಾರೆ. ಮುಂದೆ ಹೋದವರಿಗೆ ಬಹಳ ಕಷ್ಟವಾಗುತ್ತದೆ

ಅಷ್ಟೇ. ಸ್ವದೇಶಕ್ಕೂ ವಿದೇಶಕ್ಕೂ ಅಂತರವಿತ್ತು. ಆದರೆ, ಈಗಸ್ವದೇಶವನ್ನು ವಿದೇಶ ಮಾಡಲು ಹೋದವರಿಗೆ ಅಧಿಕಾರ,ಹಣವಿದ್ದರೂ ಸತ್ಯಜ್ಞಾನವೆ

ಇಲ್ಲವಾದರೆ ಪರಮಾತ್ಮ ಒಲಿಯುವನೆ? ಪರದೇಶ ಒಲಿಯುವುದೆ? ಒಟ್ಟಿನಲ್ಲಿ ನಮ್ಮ ಅಜ್ಞಾನದ ಫಲವೇ ಇಂದಿನ ಸಮಾಜದ ಅಂತರ. ಇದನ್ನು ಕಾನೂನಿನಿಂದ ಸರಿಪಡಿಸಲಾಗುವುದೆ? ಆಧ್ಯಾತ್ಮ ದ ಸತ್ಯ ಅನುಭವಿಸಿಯೇ ತಿಳಿಯಬೇಕು.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!