ದಿನಕ್ಕೊಂದು ಸಾಮಾನ್ಯ ಜ್ಞಾನ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

ಅದ್ವೈತ ದ್ವೈತ ದವರ ಅಸಮಾಧಾನ ಭಿನ್ನಾಭಿಪ್ರಾಯ ದಿಂದ ಧರ್ಮ ಕುಸಿದು ಅಧರ್ಮ ಹೆಚ್ಚಾಗಿದೆ. ತತ್ವಗಳ ಉದ್ದೇಶ ಮನುಕುಲವನ್ನು ಒಗ್ಗಟ್ಟಿನಿಂದ ಬೆಳೆಸೋದಾಗಿತ್ತು. ಪರಮಾತ್ಮನೊಳಗೆ ಜೀವಾತ್ಮನಿರುವಾಗ ಇಬ್ಬರೂ ಒಂದೆ ಎನ್ನುವ ಅದ್ವೈತ, ದಿನಕಳೆದಂತೆ ನಾನೇ ಬೇರೆ ನೀನೇ ಬೇರೆ ಆದರೂ ಒಬ್ಬರನ್ನೊಬ್ಬರು ಅಂಟಿಕೊಂಡು ಜೀವನ ನಡೆಸುವುದು ಸತ್ಯ.

ಇಡೀ ವಿಶ್ವವೇ ಆವರಿಸಿರುವ ಪರಮಾತ್ಮ ಇಂದು ನಮ್ಮೊಳಗೇ ಕಾಣದೆ ಹೊರಗೆ ಹುಡುಕುತ್ತಾ ಆಕಾರದತ್ತ ನಡೆದು ದೇವನೊಬ್ಬನೆ ನಾಮ ಹಲವು ಆಗಿದೆ. ಎಲ್ಲರಿಗೂ ಪರಮಾತ್ಮನೆ ದೊಡ್ಡವನು ,ಆದರೆ ಆಚರಣೆ ವಿಚಾರ ಬಂದಾಗ ಪರಮಾತ್ಮ ಕಾಣೋದಿಲ್ಲ. ಬೌತಿಕ ಆಚರಣೆಯಲ್ಲಿ ಹೆಚ್ಚಾದ ವ್ಯವಹಾರ, ಸ್ವಾರ್ಥ ಅಹಂಕಾರದ ಬೇಡಿಕೆಗಳು ರಾಜಕೀಯಕ್ಕೆ
ತಿರುಗಿ ಈಗಿದರಲ್ಲಿ ಮೇಲು ಕೀಳು ಹೆಚ್ಚಾಗಿರುವಾಗ ತತ್ವದ
ಉದ್ದೇಶ ಹಿಂದುಳಿಯಿತು.

ನಾನ್ಯಾರು? ಈ ಪ್ರಶ್ನೆಗೆ ಉತ್ತರ ಯಾವ ಗುರು ಹಿರಿಯರಿಂದ ,ಪುಸ್ತಕ,ಪುರಾಣಗಳಿಂದ ತಿಳಿಯಲು ಸಾಧ್ಯವೆ? ನಮ್ಮೊಳಗೇ ಅಡಗಿರುವ‌ ಉತ್ತರವನ್ನು ಒಳಹೊಕ್ಕು ನೋಡದೆ ಹೊರಗಿದ್ದು ನನ್ನ ನಾಮವನ್ನು ಜಪ ಮಾಡುತ್ತಾ ನಾನೇ ದೇವರು ಎಂದರೆ ಸರಿಯೆ? ನಾನೆಂಬುದಿಲ್ಲ ಎನ್ನುವ ಅದ್ವೈತ ಸತ್ಯವನ್ನು ಅರ್ಥ ಮಾಡಿ ಕೊಳ್ಳಲು ನಾನು ಹೋಗಬೇಕು.ಅಹಂಕಾರ ಹೋಗಬೇಕು.

- Advertisement -

ಎನ್ನುವ ಕಾರಣಕ್ಕಾಗಿಯೇ ದಾಸಾನುದಾಸರು ಪರಮಾತ್ಮನ ನಾಮಸ್ಮರಣೆಯೇ ಕಲಿಯುಗದಲ್ಲಿ ಶ್ರೇಷ್ಠ ಎಂದರು. ನಾಮಸ್ಮರಣೆ ಮಾತ್ರ ಮಾಡುತ್ತಾ ಕೂತರೆ ಜೀವನ ನಡೆಯಲ್ಲ ನಾಮಸ್ಮರಣೆಯ ಜೊತೆಗೆ ಕಾಯಕವೂ ಶುದ್ದವಾದಾಗಲೆ ಒಳಗಿನ ಪರಮಾತ್ಮನ ಅರಿವಾಗಲು ಸಾಧ್ಯ. ಆಂತರಿಕ ಜ್ಞಾನಕ್ಕೆ ಕೊಡಬೇಕಾದ ಶಿಕ್ಷಣ ಬಿಟ್ಟು ಬೌತಿಕ ವಿಜ್ಞಾನ ನೇರವಾಗಿ ಮಕ್ಕಳೊಳಗೆ ತುಂಬಿದರೆ ಸತ್ಯಜ್ಞಾನ ಎಲ್ಲಿಂದ ಸಿಗಬೇಕಿದೆ?

ಒಟ್ಟಿನಲ್ಲಿ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ತಮ್ಮೊಳಗೇ ಅಡಗಿದ್ದ ವಿಶೇಷವಾದ ಆಧ್ಯಾತ್ಮ ಸತ್ಯವನ್ನು ಬಿಟ್ಟು ಹೊರಗೆ ನಡೆದು,ಮಕ್ಕಳನ್ನೂ ಅದೇ ದಾರಿಯಲ್ಲಿ ನಡೆಸುತ್ತಾ ಆಕಾಶ ತೋರಿಸಿದ್ದಾರೆ.ಭೂಮಿ ಮೇಲೇ ನಿಂತಿರುವ ಸತ್ಯ ಹಿಂದೆ ತಳ್ಳಿ ತತ್ವವನ್ನು ಹೊರಗೆಳೆದಿದ್ದಾರೆ. ಹೊರಗೆಳೆದ ಮೇಲೆ ಒಳಗೆ  ತೆಗೆದುಕೊಳ್ಳಲು ಸಮಯಬೇಕಿದೆ. ಒಳಗೆ ತೆಗೆದುಕೊಳ್ಳಲು
ಕಷ್ಟವಿದೆ. ಕಷ್ಟಪಟ್ಟರೆ ಸುಖವಿದೆ.

ಹೊರಗಿನ ಸಾಧನೆಗೆ ಕಷ್ಟ ಪಟ್ಟ ಹಾಗೆಯೇ ಒಳಗಿನ ಸಾಧನೆಗೂ ಕಷ್ಟ ಪಡಲೇಬೇಕೆನ್ನುವುದು ಸತ್ಯ. ಆಧ್ಯಾತ್ಮಿಕ ಸಾಧನೆಯ ಕಷ್ಟ ಆತ್ಮಕ್ಕೆ ತೃಪ್ತಿ, ಶಾಂತಿ ನೀಡುತ್ತದೆ ಎನ್ನುವ ಕಾರಣಕ್ಕಾಗಿಯೇ ಮಹಾತ್ಮರುಗಳು ಬೌತಿಕಾಸಕ್ತಿ ಬಿಟ್ಟು ನಡೆದರು.ಇದನ್ನು ರಾಜಯೋಗ ಎಂದರು. ಆದರೆ ಇಂದು ರಾಜಕೀಯದಲ್ಲಿದ್ದರೆ ರಾಜಯೋಗ ಎನ್ನುವ ಮಟ್ಟಿಗೆ ಅಜ್ಞಾನ ಬೆಳೆದಿದೆ.

ತಂತ್ರಜ್ಞಾನ ದಿಂದ ರಾಜಕೀಯ ಬೆಳೆದಿದೆ. ತತ್ವಜ್ಞಾನ ದಲ್ಲಿ ರಾಜಯೋಗವಡಗಿದೆ. ನಾವೀಗ ಇವೆರಡರ ಮಧ್ಯೆ ನಿಂತು ಸತ್ಯ ಶೋಧನೆ ಮಾಡಲು ಪೈಪೋಟಿ ನಡೆಸಿದರೆ ಸತ್ಯ ಸಿಗುವುದೆ? ಇದು ನಮ್ಮೊಳಗೇ ಅಡಗಿದೆ. ಸತ್ಯವೆ ದೇವರು.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!