ದಿನಕ್ಕೊಂದು ಸಾಮಾನ್ಯ ಜ್ಞಾನ

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

ಕೃಷ್ಣ ಪರಮಾತ್ಮ ತನ್ನ ಗೀತೆಯಲ್ಲಿ ಹೇಳುತ್ತಾನೆ. ಕೊನೆಗೆ ನಿನ್ನ ಯಾರೂ ರಕ್ಷಿಸುವುದಕ್ಕೆ ಆಗುವುದಿಲ್ಲ. ನಿನಗೆ ನಿನ್ನ ಜೊತೆಯಲ್ಲಿ ಬರುವುದು ನಿನ್ನ ಧರ್ಮ, ನೀನು ನಂಬಿರುವ ದೈವ, ನಿನ್ನ ಸತ್ಕರ್ಮ, ಎಂದು ಹೇಳಿ ಧರ್ಮ ಸಂರಕ್ಷಣೆ ಗೆ ಅರ್ಜುನನಿಗೆ ಪ್ರೇರೇಪಿಸುತ್ತಾನೆ.

ಆ ಅವನ ಮಾತು ಎಷ್ಟು ನಿಜ ಎಂದು ಈ ಕೊರೋನಾ ದ ಸಂದರ್ಭದಲ್ಲಿ ಗೊತ್ತಾಗುತ್ತಿದೆ.

ಕೊರೋನಾ ಸೋಂಕು ಬಂದ ವ್ಯಕ್ತಿ ಆತ ಆಸ್ಪತ್ರೆಯಲ್ಲಿ ಇದ್ದರೆ ಆತನ ಹೆಂಡತಿ,ಮಕ್ಕಳು, ತಂದೆ, ತಾಯಿ, ಬಂಧು, ಬಳಗ, ಮಿತ್ರ, ಯಾರನ್ನು ಒಳಗೆ ಬಿಡುವುದಿಲ್ಲ, ಆತನನ್ನು ನೋಡಿಕೊಳ್ಳಲು ಬಿಡುವುದಿಲ್ಲ. ಕೊನೆಗೆ ಆತ ಸಂಪಾದಿಸಿದ ದುಡ್ಡು, ಅಧಿಕಾರ ಯಾವುದೂ ಆತನ ಪಕ್ಕದಲ್ಲಿ ಕೂತು ಧೈರ್ಯ ತುಂಬುವ ಕಾರ್ಯವನ್ನು ಮಾಡುವುದಿಲ್ಲ.

- Advertisement -

ಒಂದು ವೇಳೆ ಮನೆಯವರಿಗೆಲ್ಲಾ ಸೋಂಕಾಗಿದ್ದರೇ, ಆತನ ಮನೆಗೆ ಯಾರೂ ಹೋಗುವಂತಿಲ್ಲ, ಯಾರೂ ಹೋಗಿ ಮುಖತಃ ಸ್ಥೈರ್ಯ ತುಂಬುವಂತಿಲ್ಲ.

ಕೊನೆಗೆ ಆತನ ಜೊತೆಗೆ ಇರುವುದು ಆತನ ಧರ್ಮ, ಆತನ ಸತ್ಕರ್ಮ, ಆತ ನಂಬಿದ ದೈವ, ಆತನ ಮನೋಸ್ಥೈರ್ಯ.

ಇದಕ್ಕಾಗ ಇನ್ನೊಬ್ಬರಿಗೆ ಮೋಸ ಮಾಡಿ ಕೋಟಿ ಕೋಟಿ ಸಂಪಾದಿಸಿ, ನಾನು, ನನ್ನದು, ಎಂಬ ಅಹಂಕಾರ.

ಇದಕ್ಕಾಗ ನನ್ನ ಹೆಂಡತಿ, ನನ್ನ ಮಕ್ಕಳು, ನನ್ನ ಭಂದು, ನನ್ನ ಸ್ನೇಹಿತ, ನನ್ನ ಕಾರು, ನನ್ನ ನನ್ನ ನನ್ನ, ನಾನು ನಾನು……….‌ನನ್ನಿಂದಲೇ,……….!

ಈ ಕೊರೋನಾ ಕೂಡ ಪರಮಾತ್ಮ ಪೆಟ್ಟು ಕೊಟ್ಟು ಬುದ್ದಿ ಕಲಿಸಿದ ಎಂದು ಏಕೆ ತಿಳಿದಕೊಳ್ಳಬಾರದು ನಾವು?.

ಈಗಲಾದರೂ ಯಾಕೆ ಸತ್ಕರ್ಮ ಮಾಡಬಾರದು ನಾವು, ಈಗಲಾದರೂ ಯಾಕೇ ದೈವತ್ವದ ಕಡೆಗೆ ನಮ್ಮ ಮನಸ್ಸನ್ನು ಹರಿಸಬಾರದು ?.

ಆತನ ಹಿತ ನುಡಿ ಕೇಳಿ ಒಂದೆರೆಡು ಹನಿ ಬಂದು, ಮನಸ್ಸು ನಿರ್ಮಲ ವಾಯಿತು….

ಅವನ ಗೀತೆಯನ್ನು ಪದೇ ಪದೇ ಕೇಳಬೇಕೆನಿಸುತ್ತಿದೆ…….

ಕೃಪೆ: ಆನಂದ್ ಕೌಂಡಿನ್ಯ ಕೈಪು

ದೊಡ್ಡ ಅಜ್ಞಾನವೆಂದರೆ ನಮ್ಮ ಒಳಗಿನ ಜೀವವನ್ನು ಸರ್ಕಾರ ರಕ್ಷಿಸುವುದೆಂಬ ಅತಿಯಾದ ನಂಬಿಕೆ ವಿಶ್ವಾಸದಲ್ಲಿ, ಸತ್ಯ ತಿಳಿಯದೆ ,ನಮ್ಮ ಕರ್ತವ್ಯ, ಕರ್ಮ, ಧರ್ಮ ಬಿಟ್ಟರೆ ಜೀವ ಶಾಶ್ವತವಲ್ಲ. ಆತ್ಮಶಾಶ್ವತ.
ಆತ್ಮನಿರ್ಭರ ಭಾರತ ಆತ್ಮ ಜ್ಞಾನದಲ್ಲಿದೆ.
ವಿಜ್ಞಾನದಲ್ಲಿಲ್ಲ. ಸರ್ಕಾರ ಆತ್ಮಜ್ಞಾನಿಗಳಿಂದ
ನಡೆದಿದೆಯೇ?


ನಂಬಿಕೆ ಮತ್ತು ವಿಶ್ವಾಸದಿಂದ ಏನು ಬೇಕಾದರೂ ಸಾಧಿಸಬಹುದು ಎನ್ನುವುದರಲ್ಲಿ ಪೂರ್ಣಸತ್ಯ ವಿಲ್ಲ. ಬೌತಿಕ ಜಗತ್ತಿನಲ್ಲಿ ವ್ಯಕ್ತಿಯ ಮೇಲಿಡುವ ನಂಬಿಕೆ ವಿಶ್ವಾಸ ಕೊನೆಯವರೆಗೆ ಉಳಿಸಿಕೊಳ್ಳಲು ಕಷ್ಟ.

ಆಧ್ಯಾತ್ಮ ದಲ್ಲಿ ನಮ್ಮ ಶಕ್ತಿಯ ಮೇಲಿಟ್ಟ ನಂಬಿಕೆ ಹಾಗು ವಿಶ್ವಾಸದಿಂದ ಸಾಧನೆ ಸಾಧ್ಯವೆನ್ನಬಹುದು. ಆದರೂ ಇದನ್ನು ಇತರರು ಗುರುತಿಸದ ಕಾರಣ ಇದನ್ನು ಬಿಟ್ಟು ಹೊರಗಿನ ವ್ಯಕ್ತಿ ಗಳನ್ನು ಆಶ್ರಯಿಸುವುದು ಸಾಮಾನ್ಯವಾಗಿರುತ್ತದೆ.

ಅತಿಯಾದ ಆತ್ಮವಿಶ್ವಾಸವಾಗಲಿ,ಅಹಂಕಾರವಾಗಲಿ, ರಾಜಕೀಯವಾಗಲಿ ಯಾರನ್ನೂ ತೃಪ್ತಿ ಪಡಿಸಲಾಗಿಲ್ಲ. ಸಾಧ್ಯವೂ ಇಲ್ಲ. ನಂಬಿಕೆ,ವಿಶ್ವಾಸವೂ ಇತಿಮಿತಿಯಲ್ಲಿದ್ದರೆ ಉತ್ತಮ. ಯಾರೂ ನಮ್ಮವರೂ ಅಲ್ಲ ಪರರೂ ಅಲ್ಲ.

ಪ್ರಜಾಪ್ರಭುತ್ವದ ಭವಿಷ್ಯವಿರೋದು ಪ್ರಜೆಗಳ ಸಾಮಾನ್ಯಜ್ಞಾನದಲ್ಲಿ. ದೇಶದ ಧರ್ಮರಕ್ಷಣೆ ಮಾಡೋದು ಬಿಟ್ಟು, ತಮ್ಮ ತಮ್ಮ ಸ್ವಾರ್ಥ ಅಹಂಕಾರಕ್ಕೆ ಪ್ರತೇಕ ಧರ್ಮ ಕಟ್ಟಿಕೊಂಡು ಹೊರಬಂದವರಿಗೆ ಈಗಿನ ಅತಂತ್ರಸ್ಥಿತಿಗೆ ಕಾರಣ ತಿಳಿದರೆ, ಮುಂದೆ ದಾರಿಯಿದೆ ಎನ್ನಬಹುದು.

ಗಾಳಿಯಲ್ಲಿ ಹರಡುತ್ತಿರುವ ಕೊರೊನ ಮಾರಿಯನ್ನು ಯಾವ ಧರ್ಮರಕ್ಷಕರೂ ನಿಲ್ಲಿಸಲಾಗಿಲ್ಲ. ಕಾರಣ ನಾನು ಎನ್ನುವ ವ್ಯಕ್ತಿಯಿಂದ ಇದು ತಡೆಯಲಾಗದು. ಇದನ್ನು ಆಧ್ಯಾತ್ಮಿಕ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವ ಬದಲು ಬೌತಿಕವಾಗಿ ರಾಜಕೀಯವಾಗಿ ತಿಳಿದಷ್ಟೂ ಹರಡುವಿಕೆ ತೀವ್ರವಾಗುತ್ತದೆ. ವಿಶೇಷಜ್ಞಾನಿಗಳಿಗೆ ಹೊರಗಿನ ಸತ್ಯ ಕಾಣುತ್ತದೆ, ಧಾರ್ಮಿಕ ವರ್ಗದವರು ಹೊರಗಿನಿಂದ ತಡೆಯುವ ಪ್ರಯತ್ನ ನಡೆಸಿದ್ದಾರೆ.

ಆದರೆ, ಸಾಮಾನ್ಯಜನರ ಒಳಗೇ ಅಡಗಿರುವ ಅಜ್ಞಾನದ ರೋಗಕ್ಕೆ ಔಷಧ ನೀಡುವ ಪ್ರಯತ್ನ ಮಾಡದೆ,ಅವರ ಜೀವನವನ್ನು ನರಕಮಾಡಿದರೆ‌ ಹೋದ ಜೀವ ಮತ್ತೆ ಬಂದಾಗಲೂ ರೋಗವನ್ನು ಹೊತ್ತಿರುತ್ತದಲ್ಲವೆ? ಮಾಧ್ಯಮಗಳ ಸಹಕಾರದಿಂದ ಮನೆಯೊಳಗಿರುವ ಮಹಿಳೆ ಮಕ್ಕಳಿಗೆ ಸದ್ವಿಚಾರದೆಡೆಗೆ ಎಳೆಯುವ ಸತ್ಯದ ಕಾರ್ಯಕ್ರಮ ಹೆಚ್ಚಿಸಬೇಕಿದೆ.

ರಾಜಕಾರಣಿಗಳಾಗಲಿ ಯಾರೇ ಆಗಲಿ ಅವರ ಪ್ರಯತ್ನ ಮಾಡುತ್ತಿದ್ದರೂ ಪ್ರಜೆಗಳ ಅಜ್ಞಾನದ ಮನಸ್ಸನ್ನು ತಡೆಹಿಡಿಯಲು ಆಧ್ಯಾತ್ಮ ದಿಂದ ಮಾತ್ರ ಸಾಧ್ಯ.ಮಾನವನಿಗೆ ಸಾಮಾನ್ಯಜ್ಞಾನವಿಲ್ಲದೆ ವಿಶೇಷ ಸತ್ಯ ತಿಳಿಯುವುದು ವ್ಯರ್ಥ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!