ದಿನಕ್ಕೊಂದು ಸಾಮಾನ್ಯ ಜ್ಞಾನ

Must Read

ಲೇಖಕಿ ಜಯಶ್ರೀ ಅಬ್ಬಿಗೇರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯ ಗರಿ

ಬೆಳಗಾವಿ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜನೀಯರಿಂಗ್ ಪ್ರತಿಷ್ಠಾನ ಟ್ರಸ್ಟ ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಸ.ಪ.ಪೂ.ಕಾಲೇಜು ಹಿರೇಬಾಗೇವಾಡಿಯ ಉಪನ್ಯಾಸಕಿ, ಲೇಖಕಿ, ಅಂಕಣಕಾರ್ತಿ ಜಯಶ್ರೀ...

ಮಲ್ಲಪ್ಪ ಕಂಕಣವಾಡಿ ಅವರಿಗೆ ಪಿಎಚ್‍ಡಿ

ಮೂಡಲಗಿ: ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಮಲ್ಲಪ್ಪ ಕೆಂಚಪ್ಪ ಕಂಕಣವಾಡಿ ಅವರು ದೈಹಿಕ ಶಿಕ್ಷಣ ವಿಷಯದಲ್ಲಿ ಡಾ: ಹೆಚ್.ಎಸ್.ಜಂಗೆ ಅವರ...

ಪೋಸ್ಟ್ ಕಾರ್ಡಗಳಲ್ಲಿ ಪ್ರಧಾನಿಗೆ ಶುಭಾಶಯ

ಸಿಂದಗಿ: ಭಾರತೀಯ ಜನತಾ ಪಾರ್ಟಿ ಸಿಂದಗಿ ಮಂಡಲ ವತಿಯಿಂದ ನಗರದ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ವಿಶ್ವ ನಾಯಕ ನಮ್ಮ ಭಾರತದ ಹೆಮ್ಮೆಯ ಪ್ರಧಾನಮಂತ್ರಿ ಮೋದೀಜಿ...

ಹರಿ ಸರ್ವೋತ್ತಮ,ಶಿವ ಸರ್ವೋತ್ತಮನೆಂಬ ವಾದ ವಿವಾದ ಇಂದಿಗೆ ಜೀವವೆ ಸರ್ವೋತ್ತಮ ಎನ್ನುವಂತಾಗಿದೆ. ಜಗತ್ತನ್ನು ನಡೆಸುತ್ತಿರುವ‌ ತ್ರಿಮೂರ್ತಿಗಳು ಸೃಷ್ಟಿ ಸ್ಥಿತಿ ಲಯದ ಕಾರ್ಯ ನಡೆಸುತ್ತಿರುವುದಕ್ಕೆ ಭೂಮಿ ಕಾರಣ.

ಭೂಮಿ ಮೇಲಿರುವ ಎಲ್ಲಾ ಜೀವರಾಶಿಗಳನ್ನು ಮಾನವ ಸೃಷ್ಟಿ ಯೂ ಮಾಡಿಲ್ಲ, ಅದನ್ನು ನಡೆಸುತ್ತಲೂ ಇಲ್ಲವೆಂದ ಮೇಲೆ ಅವುಗಳನ್ನು ಕೊಂದು ಜೀವನ ನೆಡೆಸುವ ಅಧಿಕಾರವೂ ಇರಲಿಲ್ಲ.

ಆದರೆ ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಪ್ರಕೃತಿಯನ್ನು ದುರ್ಬಳಕೆ ಮಾಡಿಕೊಂಡು ದೇಹದೊಳಗೆ ಅಡಗಿದ್ದ ಸಣ್ಣ ಜೀವಕ್ಕೆ ಈಗ ದೊಡ್ಡ ಸವಾಲಾಕಿರುವ‌ ರೋಗ ಹರಡಿದರೆ ಇದನ್ನು ತಡೆಯಲು ಮೇಲಿನ ಪರಮಾತ್ಮನಿಗೆ ಕಷ್ಟ.

- Advertisement -

ಒಳಗಿರುವ ಪರಾಶಕ್ತಿಗೆ ಸಾಧ್ಯವೆನ್ನಬಹುದು. ಹುಟ್ಟು ಸಾವು ನಿರಂತರ ಇದಕ್ಕೆ ತಡೆ ಹಾಕಲು ಹಣದಿಂದ ಕಷ್ಟ. ತಡೆದರೂ ಅದರಿಂದಾಗಿ ತಾತ್ಕಾಲಿಕ ವಷ್ಟೆ.ಹಿಂದೆ ಪುರಾಣದ ಅಸುರರು ಅಮರರಾಗಲು ಎಷ್ಟು ತಪಸ್ಸು ಮಾಡಿ ದೇವರನ್ನು ಒಲಿಸಿಕೊಂಡು ಸಾವನ್ನು ತಡೆಯಲಾಗದು ಎಂದ ಮೇಲಷ್ಟೇ ಹೀಗೇ ,ಇವರಿಂದಲೇ..ಎನ್ನುವ ವರಪಡೆದು ಮೆರೆದಿದ್ದರಂತೆ.

ಕಲಿಗಾಲದಲ್ಲಿ ತಪಸ್ಸು ಮಾಡೋ ಶಕ್ತಿಯಿಲ್ಲದೆ, ಜೀವ ಇದ್ದವರನ್ನು ದಾರಿ ತಪ್ಪಿಸಿ ಜೀವ ತೆಗೆಯೋ ಸಂಚು ಮಾಡಿ ಜನರಲ್ಲಿ ಭಯ ಹುಟ್ಟಿಸುವವರ ಸಂಖ್ಯೆ ಬೆಳೆದಿದೆ.

ಏನು ಮಾಡಿದರೂ ಯಾರೂ ಶಾಶ್ವತವಲ್ಲ. ಈ ಸಾಮಾನ್ಯ ಜ್ಞಾನ ಇದ್ದರೆ ಅವರವರ ಜೀವಕ್ಕೆ ಅವರೆ ಕಾವಲುಗಾರರಾಗಿ ಸತ್ಕರ್ಮದಿಂದ ,ದಾನ,ಧರ್ಮದಿಂದ ಆ ಪರಮಾತ್ಮನೆಡೆಗೆ ಸಾಗಲು ಚಿಂತನೆ ನಡೆಸಿದರೆ ಯಾರು ಯಾರನ್ನೂ ನಡೆಸೋ ಅಗತ್ಯವಿಲ್ಲ. ನಮ್ಮ ಸಹಕಾರ ಉತ್ತಮ ಚಿಂತನೆಗೆ ಹೆಚ್ಚಾದರೆ ಆರೋಗ್ಯರಕ್ಷಣೆ ಸಾಧ್ಯ. ಎಲ್ಲಾ ದೇವತೆಗಳೂ ಅವರವರ ಕೆಲಸ ಕಾರ್ಯ ನಡೆಸುತ್ತಿದ್ದರೂ ಮಾನವ ತನ್ನ  ವ್ಯವಹಾರದ ಲಾಭಕ್ಕಾಗಿ ದೈವತ್ವ ಮರೆತು ಆಳಿದರೆ ಜೀವಕ್ಕೆ ಮುಕ್ತಿ ಸಿಗುವುದೆ?

ಕಾಲಬಂದಾಗ ಹೋಗಲೇಬೇಕು.ಇದರಲ್ಲಿ ಒಳ್ಳೆಯವರೂ ಕೆಟ್ಟವರೂ ಇರುವುದರಿಂದ ಭಗವಂತನ ಇಚ್ಚೆಯಿಲ್ಲದೆ ಏನೂ ನಡೆಯದು ಎನ್ನುವುದಂತೂ ಸತ್ಯ. ಭೂಮಿಯಲ್ಲಿ ಸತ್ಯ ಧರ್ಮಕ್ಕೆ ಬೆಲೆ ಕಡಿಮೆಯಾಗಿ,ಭೂ ಭಾರ ಹೆಚ್ಚಾದಂತೆ ಪ್ರಕೃತಿ ವಿಕೋಪ ಹೆಚ್ಚಾಗುತ್ತದೆ.

ಆಗ ಮಾನವರು ಶಾಂತಿಯಿಂದ. ಧರ್ಮದ ಕಡೆ ನಡೆಯೋ ಪ್ರಯತ್ನ ಪಟ್ಟರೆ ಶಾಂತವಾಗುತ್ತದೆ. ಅದರಲ್ಲೂ ರಾಜಕೀಯತೆ ಬೆಳೆಸಿದರೆ ಕಷ್ಟ ನಷ್ಟ ಹೆಚ್ಚಾಗುತ್ತದೆ. ಧಾರ್ಮಿಕ ಕಾರ್ಯಕ್ರಮಗಳು ಭ್ರಷ್ಟರಹಣದಲ್ಲಿ ನಡೆಸುವುದರಿಂದ ಶಕ್ತಿ ಯಾರಿಗೆ ಹೋಗುತ್ತದೆ? “ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮಸ್ಮರಣೆ ಒಂದಿದ್ದರೆ ಸಾಕೋ” ಪರಮಾತ್ಮನ ದಾಸರಿಗೂ, ಪರಕೀಯರ ದಾಸರಿಗೂ ಎಷ್ಟೋ ವ್ಯತ್ಯಾಸವಿದೆ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಲೇಖಕಿ ಜಯಶ್ರೀ ಅಬ್ಬಿಗೇರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯ ಗರಿ

ಬೆಳಗಾವಿ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜನೀಯರಿಂಗ್ ಪ್ರತಿಷ್ಠಾನ ಟ್ರಸ್ಟ ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಸ.ಪ.ಪೂ.ಕಾಲೇಜು ಹಿರೇಬಾಗೇವಾಡಿಯ ಉಪನ್ಯಾಸಕಿ, ಲೇಖಕಿ, ಅಂಕಣಕಾರ್ತಿ ಜಯಶ್ರೀ...
- Advertisement -

More Articles Like This

- Advertisement -
close
error: Content is protected !!