ದಿನಕ್ಕೊಂದು ಸಾಮಾನ್ಯ ಜ್ಞಾನ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಕೋಶ ಓದು ದೇಶ ಸುತ್ತುವುದರಿಂದ ಜ್ಞಾನ ಬರುವುದೆ?ಇಲ್ಲಿ ಕೋಶ ಹಿಂದಿನ ಕಥೆ, ದೇಶ ಇಂದಿನ ವ್ಯಥೆಯನ್ನು ತಿಳಿಸುತ್ತದೆ. ಕೆಲವು ಕೋಶಗಳು ವ್ಯಥೆಯನ್ನುಎತ್ತಿ ಹಿಡಿದಿದೆ. ಇದನ್ನು ಒಳಗೆಳೆದುಕೊಂಡು ವ್ಯಥೆಯಲ್ಲಿಜೀವನ ನಡೆಸಬೇಕೆ?ನಮ್ಮ ಗುರು ಹಿರಿಯರು ಹಾಕಿಕೊಟ್ಟು,ಬಿಟ್ಟು ಹೋದ ಕೋಶದಲ್ಲಿರುವ ಸತ್ಯಧರ್ಮ ನಮ್ಮ ದೇಶದಲ್ಲಿ ಇಲ್ಲ.‌ ಓದುಗರು ಬಹಳಮಂದಿ ಇದ್ದರೂ ವಿದೇಶ ಸುತ್ತುವವರೆ ಹೆಚ್ಚಾಗಿದ್ದಾರೆ.‌ಕಾಲ ಪ್ರಭಾವ.
ಜ್ಞಾನದಲ್ಲಿ ಎರಡು ವಿಧವಿದೆ ಆತ್ಮಜ್ಞಾನ,ವಿಜ್ಞಾನ.

ಒಂದು ತನ್ನ ಆಂತರಿಕ ಸತ್ಯವನ್ನು ಹೆಚ್ಚಿಸಿದರೆ, ಇನ್ನೊಂದು ಬೌತಿಕದಸತ್ಯ ತಿಳಿಸುತ್ತದೆ. ಕೋಶ ದೇಶವೆರಡೂ ಹೊರಗಿನ ಕಣ್ಣಿಗೆ ಕಾಣುವ ಸತ್ಯ. ಅದರೊಳಗೆ ಅಡಗಿರುವ ಸೂಕ್ಷ್ಮ ವಾದ ಸತ್ಯ ತಿಳಿಯಲು ನಾವು ನಮ್ಮ ಒಳಗಿನ ಸತ್ಯವನ್ನು ತಿಳಿದು ನಡೆಯಬೇಕೆನ್ನುವುದೇ ಇದರ ಉದ್ದೇಶ. ಹಾಗಾದರೆ, ನಾವೀಗ ಕೋಶ ಓದಿ, ದೇಶ ಸುತ್ತಿ ಯಾವ ರೀತಿಯಲ್ಲಿ ನಡೆದು ಸತ್ಯ ತಿಳಿದಿದ್ದೇವೆ. ಇದರಿಂದಾಗಿ ಯಾರಿಗೆ ಲಾಭ ಯಾರಿಗೆ ನಷ್ಟ ಆಗಿದೆ? ಭೂಮಿಯಲ್ಲಿ ಶಾಂತಿ,ಧರ್ಮ,ಸತ್ಯ ನೆಲೆಸಿದೆಯೆ? ಇಲ್ಲಿ ಭೂಮಿ,ಭಾರತಮಾತೆ,ಪ್ರಕೃತಿಮಾತೆ, ಸ್ತ್ರೀಶಕ್ತಿ ಬೇರೆ ಬೇರೆಯಲ್ಲ.

ಯಾರ ಮನೆಯಲ್ಲಿ ಸ್ತ್ರೀ ಆತ್ಮಜ್ಞಾನದಿಂದ ಸ್ವತಂತ್ರ ವಾಗಿ ನಡೆಯಲು ಸಾಧ್ಯವಾಗಿದೆಯೋ ಅಲ್ಲಿ ನಿಜವಾದ ಸತ್ಯಕ್ಕೆ ಸ್ಥಾನಮಾನವಿರುತ್ತದೆ. ಆದರೆ, ಇಲ್ಲಿ ಸ್ತ್ರೀ ಯಲ್ಲಿ ಸತ್ಯ ನಿಲ್ಲುವುದಿಲ್ಲವೆನ್ನುವ ಕಾರಣಕ್ಕೆ ಅವಳಿಗೆ ಸತ್ಯ ತಿಳಿಸದೆ ನಡೆಸಿಕೊಂಡವರ ಸಂಖ್ಯೆ ಬೆಳೆದು ಈಗ ಅಸತ್ಯವೇ ಎಲ್ಲೆಡೆ ಸತ್ಯದ ಮುಖ ಅಂಟಿಸಿಕೊಂಡು ನಾಟಕರಂಗವಾಗಿದೆ. ಈ ನಾಟಕದ ಪಾತ್ರಧಾರಿಗಳು ಸಾಕಷ್ಟು ಹಣ,ಅಧಿಕಾರ, ಜನಬಲ ಪಡೆದು ಭೂಮಿಯನ್ನು ತನ್ನ ವಶಪಡಿಸಿಕೊಂಡು ತಾನೇ ಸರಿ ಎಂದರೆ ಭೂಮಿತಾಯಿ ಸುಮ್ಮನಿರಲು ಸಾಧ್ಯವಿಲ್ಲ. ಪ್ರಕೃತಿ ವಿಕೋಪಗೊಳ್ಳದೆ ಇರಲುಕಷ್ಟ.

- Advertisement -

ಒಟ್ಟಿನಲ್ಲಿ ನಾವು ಹೊರಗಿನಿಂದ ಏನೇ ವಿಚಾರ,ವಿಷಯ ತಿಳಿದರೂ ಅದರಿಂದ ನನ್ನ ಆತ್ಮರಕ್ಷಣೆ ಆಗಬೇಕು.ದೇಹರಕ್ಷಣೆಗಾಗಿ ಆತ್ಮವಂಚನೆ ಹೆಚ್ಚಾದರೆ ನಷ್ಟ ಕಟ್ಟಿಟ್ಟ ಬುತ್ತಿ. ನಮ್ಮ ಪುರಾಣದ ರಾಮಾಯಣ, ಮಹಾಭಾರತ ,ಭಗವದ್ಗೀತೆ…. ಗ್ರಂಥಗಳೇ ಇಂದು ಒಬ್ಬೊಬ್ಬರು ಒಂದೊಂದು ಕಥೆ ಸೃಷ್ಟಿ ಮಾಡಿ ತಿರುಚಿರುವಾಗ ,ಉಳಿದ ಸಣ್ಣ ಪುಟ್ಟ ಸಂಸಾರ ಕಥೆಗಳನ್ನು ಸಮಾಜಕ್ಕೆ ಹರಡಿ ಯಾವ ಸತ್ಯ ಉಳಿಸಲಾಗುವುದು. ಹಾಗೆ ಇದನ್ನು ಧರ್ಮ ಎನ್ನಲು ಸಾಧ್ಯವೆ?

“ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ” ಹಾಗೆ ಯಾರದ್ದೋ ಕಥೆಯನ್ನು ನನ್ನ ಕಥೆ ಎನ್ನಲಾಗುವುದೆ?ಇದರಿಂದ ಸಮಾಜ ಸುಧಾರಣೆ ಆದರೆ ಉತ್ತಮ. ಮನರಂಜನೆಯ ವಸ್ತುವಾಗಿ ಇತರರ ಕಥೆಯನ್ನು ಬಳಸಬಾರದು. ಇದೇ ಆತ್ಮದ್ರೋಹವಾಗಿ ಕಾಡುತ್ತದೆ. ಇದು ಅಸುರರಿಗೆ ಪ್ರೇರಣೆಯೂ ಆಗಬಹುದೆನ್ನುವ ಸಾಮಾನ್ಯಜ್ಞಾನ ಇದ್ದರೆ ಕೆಲವು ಸೂಕ್ಮವಾದ ಅನಾವಶ್ಯಕವಾದ ಅಜ್ಞಾನದ ಅಹಂಕಾರ, ಸ್ವಾರ್ಥ ಬೆಳೆಸುವ ಸತ್ಯವನ್ನು ಹೇಳದೆ, ಸಮಾಜದಲ್ಲಿ ಕೆಲವು ಬದಲಾವಣೆ ಮಾಡಬಹುದು.

ಸಮಾನತೆಯಲ್ಲಿ ಸತ್ಯದ ಜೊತೆಗೆ ಧರ್ಮ, ಧರ್ಮದ ಜೊತೆಗೆ ಕರ್ಮ(ಕೆಲಸ). ನುಡಿಯ ಜೊತೆಗೆ ನಡೆ, ಬದುಕಿನ ಜೊತೆಗೆ ಬರಹ, ಜೀವಾತ್ಮನ ಜೊತೆಗೆ ಪರಮಾತ್ಮ, ಭೂಮಿಯ ಜೊತೆಗೆ ಆಕಾಶ, ಸ್ತ್ರೀ ಜೊತೆಗೆ ಪುರುಷ ಶಕ್ತಿಯನ್ನು ಸರಿಸಮನಾಗಿ ಕಾಣಬಹುದು. ಆದರೆ, ಹೊರಗಿನಿಂದ ನಾವು ಓದಿ, ನೋಡಿ, ಸುತ್ತಿಕೊಂಡು ಒಳಗೆ ನಡೆಯದಿದ್ದರೆ ಪೂರ್ಣಸತ್ಯ ತಿಳಿಯಲಾಗದು. ಅದ್ವೈತ ಎಂದರೆ ಸಮಾನತೆ, ಒಂದು,ಒಗ್ಗಟ್ಟು, ಸತ್ಯ, ಒಮ್ಮತ,‌…ಇವುಗಳು ಹೊರಗಿಲ್ಲ ಒಳಗಿದೆ.‌ ತನ್ನ ಹೆಸರು,ಅಧಿಕಾರ, ಸ್ಥಾನಮಾನ,ಸನ್ಮಾನವು ಕ್ಷಣಿಕ ಸುಖ ನೀಡಬಹುದು. ಇದರಿಂದಾಗಿ ದೇಶದ ಮಾನ ಹೋದರೆ ಕಷ್ಟ.ಇಷ್ಟಕ್ಕೂ ನಾವ್ಯಾರು,? ನಮ್ಮ ಆತ್ಮಜ್ಞಾನದಿಂದ ನಮಗೆ ತೃಪ್ತಿ, ಶಾಂತಿ ಇದನ್ನು ಸ್ವಾರ್ಥ ಎನ್ನಲಾಗದು.

ಓದಿ ತಿಳಿದ ವಿದ್ಯೆಗಿಂತ ಜ್ಞಾನವೇ ಶ್ರೇಷ್ಠ. ಹಾಗೆ ದೇಶ ಸುತ್ತಿ ನೋಡಿದ್ದೆಲ್ಲಾ ಸತ್ಯವೂ ಅಲ್ಲ ಶಾಶ್ವತವೂ ಅಲ್ಲ. ಹೀಗೇ ಮನಸ್ಸನ್ನುಹೊರಗೇ ಹರಿ ಬಿಟ್ಟರೆ ಒಳಗಿನ ಸತ್ಯ ಹಿಂದುಳಿಯುತ್ತದೆ. ನಿಜ, ಓದು ಬಹಳ ಮುಖ್ಯ ಆದರೆ, ಅದು ನಮ್ಮ ಆಂತರಿಕ ಶಕ್ತಿ ಬೆಳೆಸುವಂತಿರಬೇಕಷ್ಟೆ. ಹಿಂದಿನ ಮಹಾತ್ಮರೆಲ್ಲರೂ ವಿದ್ಯಾವಂತ ರಲ್ಲ. ಜ್ಞಾನಿಗಳು. ಅನುಭವದಿಂದ ತಿಳಿದ ಸದ್ವಿಚಾರ ಅವರನ್ನು ಮಹಾತ್ಮರಾಗಿಸಿತ್ತು. ಇಂದಿನ ಮಕ್ಕಳಿಗೆ ನಾವೇನು ಕಲಿಸುತ್ತಿದ್ದೇವೆ? ನಮಗೇ ಗೊತ್ತಿಲ್ಲ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!