ದಿನಕ್ಕೊಂದು ಸಾಮಾನ್ಯ ಜ್ಞಾನ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಲೇಖಕರಾಗುವುದು ಹೇಗೆ? ಎಂಬ ವಿಚಾರವನ್ನು ಕೇವಲ ಹೇಳಿ, ಕೇಳಿ,ಓದಿ ಬರೆಯುವುದರಿಂದ ಲೇಖನದ ವಿಚಾರ ಆಧ್ಯಾತ್ಮಿಕ ವಾಗಿ ಬೆಳೆಸಲಾಗದು.ಮಹಾತ್ಮರ ಬರವಣಿಗೆಯನ್ನು ನಾವು ಮುಂದಿಟ್ಟುಕೊಂಡು ಅವರಂತೆ ಬರೆಯುತ್ತೇವೆ ಎನ್ನಲಾಗದು.

ಅವರ ಅನುಭವ ಜ್ಞಾನವೆ ಬೇರೆ ನಮ್ಮ ಜ್ಞಾನವೆ ಬೇರೆ.ಅವರ ಕಾಲವೇ ಬೇರೆ ನಮ್ಮ ಕಾಲವೆ ಬೇರೆ.ಅವರ ಶಿಕ್ಷಣವೆ ಬೇರೆ, ನಮ್ಮ ಶಿಕ್ಷಣವೆ ಬೇರೆ. ಆದರೆ ಭೂಮಿ, ಆಕಾಶ ಒಂದೆ. ಮಾನವನ ಜ್ಞಾನಕ್ಕೆ ತಕ್ಕಂತೆ ಜೀವನ ನಡೆಯುತ್ತದೆ.

ಇದನ್ನು ನಾವು ಪುರಾಣ,ಇತಿಹಾಸ ದಿಂದಲೂ ಬದಲಾವಣೆಯೊಳಗಿನ ಸತ್ಯ ಅಸತ್ಯದ ನಡುವೆ ಬೆಳೆದ ರಾಜಕೀಯದಿಂದ ಬೆಳೆಸಿರುವಾಗ ಈಗಲೂ ನಾನು ಶ್ರೇಷ್ಠ ಲೇಖಕ ,ಲೇಖಕಿ ಎನ್ನುವುದರಲ್ಲಿ ಯಾವುದೇ ಅರ್ಥವಿಲ್ಲ.

- Advertisement -

ಬರೆಯುವ ಕೈಗಳು ನನ್ನದು,ಬರೆಸುವ ಶಕ್ತಿ ಬೇರೆಯದು.ನಾವೀಗ ಓದುತ್ತಿರುವ,ಬಳಸುತ್ತಿರುವ, ಎಲ್ಲಾ ವಿಷಯ,ವಸ್ತುಗಳ ಹಿಂದೆ ಕಾಣದ ಎಷ್ಟೋ ಶಕ್ತಿಯಿದ್ದರೂ ಅದನ್ನು ನಮ್ಮದೆ ಎನ್ನುವ ಬಾವನೆಯಲ್ಲಿ ಬಳಸಿಕೊಂಡು ನಂತರ ಬಿಡುವುದಕ್ಕೆ ಮಾಯೆ ಎಂದರು.

ಇಲ್ಲಿ ಹೆಣ್ಣು, ಹೊನ್ನು,ಮಣ್ಣುಗಳನ್ನು ಮಾಯೆ ಎಂದವರು ಬಹಳ ಮಂದಿ.

ಆದರೆ, ಶಿವಶರಣರು ಇದನ್ನು ಮಾಯೆ ಎನ್ನುವುದನ್ನು ಬಿಟ್ಟು , ಅದರಲ್ಲಿ ಅಡಗಿರುವ ಶಕ್ತಿಯನ್ನು ಗುರುತಿಸುವ ಜ್ಞಾನ ಬೆಳೆಸಿಕೊಳ್ಳಲು ಕರ್ಮಯೋಗಕ್ಕೆ ಅಡಿಪಾಯ ಹಾಕಿಕೊಟ್ಟರು. ಆದರೆ, ಅಡಿಪಾಯವನ್ನು ಬಿಟ್ಟು ರಾಜಕೀಯಕ್ಕೆಇಳಿದ ಮಾನವರಿಗೆ ಕರ್ಮ ಎಂದರೆ ಕೆಲಸ ಎನ್ನುವ ಸಾಮಾನ್ಯ ಪದ ಅರ್ಥವಾಗದೆ,ಕೆಲಸಮಾಡದೆಯೇ ಕೈಲಾಸ ಕಾಣೋದಕ್ಕೆ ಸಾಧ್ಯವೆ?

ಪ್ರತಿಯೊಬ್ಬರೂ ಕರ್ಮಯೋಗಿಗಳೆ, ಆದರೆ ಅದರಲ್ಲಿ ಧರ್ಮ ಸತ್ಯ ಇಲ್ಲದೆ ರಾಜಕೀಯದ ಹಂಗಿನಲ್ಲಿ ದುಡಿದರೆ ಜ್ಞಾನಸಿಗದೆ ಜೀವ ನಾನೇ ಮಾಡಿದ್ದು,ಮಾಡಿಸಿದ್ದುಬರೆದದ್ದು, ಓದಿದ್ದು,ನಡೆದದ್ದು…ಎನ್ನುವ ಅರ್ಧಸತ್ಯದ ಮಧ್ಯೆ ನಿಂತರೆ ಪೂರ್ಣಸತ್ಯ ತಿಳಿಯಲು ಮುಂದೆ ನಡೆಯಬೇಕು. ಬರವಣಿಗೆ ಬರದಿರುವವರಿಗೆ ಓದಲೂ ಬಾರದ ಕಾರಣಯಾರು ಹೇಳಿದರೂ ಅದೇ ಸತ್ಯವೆಂದುಕೊಂಡು ನಂಬುತ್ತಾರೆ.

ಹೀಗಾಗಿ ಹಿಂದಿನ ಎಷ್ಟೋ ಅವಿದ್ಯಾವಂತರು ಹೊರಗಿನಿಂದ ಕೇಳಿಸಿಕೊಂಡು ಹೊರಗಿನ ಸತ್ಯಕ್ಕೆ ಅಂಟಿಕೊಂಡರು. ನಾವೆಷ್ಟು ಹೊರಗಿನಿಂದ ಸೇರಿಸಿಕೊಳ್ಳುವೆವೋ ಅದೇ ನಮ್ಮನ್ನು ಆಳುವಾಗ ನಮಗೆ ತಿಳಿಯದೆ ಮುಂದೆ ನಡೆಯುತ್ತೇವೆ.

ಇದರಿಂದಾಗಿ ಮನುಕುಲಕ್ಕೆ ಒಳ್ಳೆಯದಾದರೆ ಮಹಾತ್ಮರಾಗುತ್ತೇವೆ. ಇಲ್ಲ ಇದರಿಂದಲೇ ಮನುಕುಲದ ಅಜ್ಞಾನ ಬೆಳೆದು ವಿನಾಶದತ್ತನಡೆದರೆ ಅದೇ ಮುಂದೆ ಜೀವಕ್ಕೆ ಹಿಂಸೆ ಆಗುತ್ತದೆ. ಈ ಕಾರಣಕ್ಕೆ ಹಿಂದಿನವರು ಆತ್ಮಾನುಸಾರ ನಡೆಯಲಾಗದ ಪರಿಸ್ಥಿತಿಯಲ್ಲಿ ಪರಮಾತ್ಮನಿಗೆ ಶರಣಾಗಿರುತ್ತಿದ್ದರು.

ಶರಣರ ಜೀವನಕ್ಕೂ, ದಾಸರ ಜೀವನಕ್ಕೂ ವ್ಯತ್ಯಾಸವಿದ್ದರೂ ಇಬ್ಬರೂ ಮಹಾತ್ಮರೆ . ಶರಣರ ವಚನಗಳು ಈಗ ಬರವಣಿಗೆಯಲ್ಲಿ ಹೊರಬಂದಿದೆ ಆದರೆ ಅವರ ಅನುಭವ ನಮಗಾಗಿಲ್ಲ ಹಾಗೆ ದಾಸರೂ ಪರಮಾತ್ಮನಿಗೆ ದಾಸರಾಗಿದ್ದರು.

ಅಂದರೆ ಸತ್ಯದ ಪರ ನಡೆದಿದ್ದರು. ಇದರಲ್ಲಿ ಲೇಖನ ಬರೆಯಬಾರದೆಂಬುದಿಲ್ಲ. ಬರೆಯುವಾಗ ಭವಿಷ್ಯದ ಬಗ್ಗೆ ವಿಚಾರ ಅಗತ್ಯವಿದೆ. ನಮ್ಮ ಬರವಣಿಗೆಯಿಂದ ಆತ್ಮಜ್ಞಾನ ಹೆಚ್ಚಾದರೆ ಶಾಂತಿ,ಇಲ್ಲವಾದರೆ ಕ್ರಾಂತಿ. ಆದರೂ‌ ಬರವಣಿಗೆ ನಮ್ಮ ಮನಸ್ಸಿಗೆ ತೃಪ್ತಿ ಕೊಡುತ್ತದೆ ಎನ್ನಬಹುದು. ಮನಸ್ಸು ಒಂದೇ ರೀತಿಯಲ್ಲಿ ಇರುವುದಿಲ್ಲ.

ಮನಸ್ಸಿಗೆ ಬಂದದ್ದೇ ಸತ್ಯವಲ್ಲ.
ಸತ್ಯವಾಗಿರೋದು ಮನಸ್ಸಿಗೆ ಬರೋದೂ ಕಷ್ಟ. ಅದಕ್ಕಾಗಿ ಬರವಣಿಗೆ ಮನರಂಜನೆಯ ಮಾಧ್ಯಮ ಮಾತ್ರ ಆಗದೆ ಆತ್ಮರಕ್ಷಣೆಯ ಮಾಧ್ಯಮವಾದರೆ ಸಮಾಜದಲ್ಲಿ ಸಮಾನತೆಗೆ ಸ್ಥಾನ ಸಿಗಬಹುದು.

ಬರೆಯುವ ಕೆಲಸ ಒಬ್ಬ ಮಾಡಿದರೆ, ಅದನ್ನು ಹಂಚಿ ಓದುವ ಕೆಲಸ ಅನೇಕರು ಮಾಡುತ್ತಾರೆ. ಇದು ಎಷ್ಟೋ ಜನರ ಜೀವನವನ್ನು ಉದ್ದಾರ ಮಾಡಬಹುದು. ಹಾಳುಮಾಡಲೂಬಹುದು. ಈ ಕಾರಣಕ್ಕೆಯಾರೋ ಬರೆದದ್ದನ್ನು ತನ್ನ ಹೆಸರಲ್ಲಿ ಹಂಚಿಕೊಂಡು ಹಣ ಹೆಸರು,ಅಧಿಕಾರ ಪಡೆದರೆ ಅಧರ್ಮ. ಜೀವನದಲ್ಲಿ ಬರವಣಿಗೆಯಿರಬಹುದು. ಬರವಣಿಗೆಯೇ ಜೀವನವಾದರೆ ಅದರ ಮೂಲ ಬೇರೆ ಆಗಿರುತ್ತದೆ.

ಆ ಪರಮಾತ್ಮನ ಇಚ್ಚೆ ಬೇರೆ ಆದಾಗ ನಾನಿರೋದಿಲ್ಲ. ಅವನೇ ನಿಂತು ಬರೆಸುವಾಗ ನಾನಿರೋದಿಲ್ಲ. ನಾನಿದ್ದಾಗ ಅವನು ಕಾಣೋದಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಲು ಒಳ ನಡೆಯಬೇಕು. ಕಾರಣ ಅಧ್ಯಾತ್ಮ ಬೌತಿಕ ಎರಡರಲ್ಲಿ ವ್ಯತ್ಯಾಸವಿಷ್ಟೆ. ಒಂದು ಸತ್ಯದ ಬೆನ್ನತ್ತಿದರೆ, ಇನ್ನೊಂದು ಮಿಥ್ಯದ ಬೆನ್ನತ್ತಿ ನಡೆಯೋದು. ಇವೆರಡರ ಮಧ್ಯೆ ಮನುಕುಲ ನಿಂತಿದೆ. ನಾವೀಗ ಸಾಮಾನ್ಯಜ್ಞಾನವುಳ್ಳ ಮಾನವರಷ್ಟೆ.

ಮಹಾತ್ಮರಾಗಲು ನಮ್ಮೊಳಗಿನ ಸತ್ಯವೆ ದೇವರಾಗಬೇಕು. ಯಾರದ್ದೋ ಕಥೆಯಲ್ಲಿ ಸತ್ಯ ಹುಡುಕೋ ಬದಲಾಗಿ ನಮ್ಮ ಇಂದಿನ ಕಥೆಯಲ್ಲಿ ಸತ್ಯವಿದೆಯೆ ಪರೀಕ್ಷಿಸಿ ಕೊಂಡರೆ ಸಾಕಲ್ಲವೆ?
ಸತ್ಕರ್ಮದಲ್ಲಿ ಸತ್ಯದ ದಾರಿಯಲ್ಲಿ ನಡೆದವರಿಗೆ ಪರಮಾತ್ಮನ ದರ್ಶನ ಆಗಿದೆ ಎಂದಾಗ ನಮ್ಮ ದಾರಿ ಯಾವುದು? ಪರಮಾತ್ಮ ಪರದೇಶದಲ್ಲಿರುವನೆ? ಪರದೇಶದವರ ವ್ಯವಹಾರಕ್ಕೆ ಶರಣಾಗಿ ನಮ್ಮ ಜ್ಞಾನ ಹಿಂದೆ ನಿಲ್ಲಿಸಿದರೆ ನಷ್ಟ ಯಾರಿಗೆ? ಆತ್ಮಾವಲೋಕನಕ್ಕೆ ಸರ್ಕಾರ ಬೇಕೆ? ಈ ವಿಚಾರ ಅರ್ಥ ಮಾಡಿಕೊಳ್ಳಲು ಸುಲಭ.‌ಆದರೆ ಒಪ್ಪಿಕೊಳ್ಳಲು ಕಷ್ಟ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!