ದಿನಕ್ಕೊಂದು ಸಾಮಾನ್ಯ ಜ್ಞಾನ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ಪ್ರಜಾಪ್ರಭುತ್ವದ ಧರ್ಮ

ಆಧ್ಯಾತ್ಮದ ವಿಚಾರದಲ್ಲಿ ಹೆಚ್ಚು ಜನರು ಆಸಕ್ತಿ ತೋರಿಸಿ
ಮುಂದೆ ನಡೆಯುವುದು ಕಡಿಮೆ.ಯಾಕೆಂದರೆ ಅದನ್ನು
ಅನುಸರಿಸಲು ಹೋದರೆ ಸತ್ಯ ಹಾಗು ಧರ್ಮ ಸಂಕಟ ಹೆಚ್ಚಾಗಿ ಬೌತಿಕ ಆಸಕ್ತಿ ಬಿಟ್ಟು ಸ್ವತಂತ್ರವಾಗಿ ಜೀವನ ನಡೆಸುವವರೆಗೆ ಬಿಡೋದಿಲ್ಲ. ಹಾಗಾಗಿ ಕಲಿಯುಗದ ಜನರು ಇದಕ್ಕೆ ವಿರುದ್ಧದ ಬೌತಿಕ ಸತ್ಯವನ್ನು ಒಪ್ಪಿಕೊಂಡು ಅಧ್ಯಾತ್ಮದ ವಿಚಾರವನ್ನು ಪ್ರಚಾರಕರಾಗಿ ಬಳಸಿಕೊಂಡು ಧಾರ್ಮಿಕ ವರ್ಗದವರ ಗುಂಪು ಇಂದು ಇದೆ.

ಆದರೆ, ಧರ್ಮ ಎಲ್ಲಿದೆ? ಸತ್ಯ ಎಲ್ಲಿದೆ? ಕೇಳಿದರೆ ಕಷ್ಟವಿದೆ. ಪ್ರಜಾಪ್ರಭುತ್ವದ ಪ್ರಜೆಗಳಿಗೆ ಸ್ವಾತಂತ್ರ್ಯವಿದೆ. ಯಾರಾದರೂ ತಮ್ಮ ಅನುಭವದ ಧಾರ್ಮಿಕ ಸತ್ಯ ತಿಳಿಸುವುದಕ್ಕೂ ನಿಮಗೇನಅಧಿಕಾರವಿದೆ? ಎನ್ನುವ ಮಟ್ಟಿಗೆ ಪ್ರಶ್ನೆ ಕೇಳುವವರಿದ್ದಾರೆಂದಾಗ ಯಾರು ತಾನೆ ಸತ್ಯ ತಿಳಿಸಲು ಹೋಗುತ್ತಾರೆ?

ಅವರವರ ಮೂಲ ಧರ್ಮ ಕರ್ಮವನ್ನು ಅವರ ಹಿಂದಿನ ಗುರುಹಿರಿಯರಿಂದ ತಿಳಿದು ನಡೆದರೂ,ಅದರಲ್ಲಿ ದೋಷ ಹುಡುಕಿ ಮಧ್ಯ ಪ್ರವೇಶ ಮಾಡಿ ,ತಮ್ಮ ಧರ್ಮವೆ ಶ್ರೇಷ್ಠ
ಎಂದು ತಮ್ಮೆಡೆಗೆ ಎಳೆದುಕೊಳ್ಳುವುದರ ಮೂಲಕ
ಜನಬಲ,ಹಣಬಲ ಇರುವ ಕಡೆ ಅಧಿಕಾರವೂ ಇದ್ದು
ಧರ್ಮ ಹಾಗು ಸತ್ಯ ಕೇವಲ ಅಧಿಕಾರ ಇದ್ದವರಿಗೆ ಮಾತ್ರ
ಮೀಸಲು ಎಂದರೆ ಸರಿಯೆ?

- Advertisement -

ಭಾರತೀಯರಾಗಿ ಭಾರತಮಾತೆಯ ಪವಿತ್ರ ಭೂಮಿಯಲ್ಲಿದ್ದು ಭಾರತಮಾತೆಯ ಮಕ್ಕಳಾದ ಪ್ರಜೆಗಳಿಗೆ ಧರ್ಮ ಶಿಕ್ಷಣ ನೀಡಲು ಸ್ವಾತಂತ್ರ್ಯ ನಮಗೆ ಸಿಕ್ಕಿದ್ದರೂ, ಯಾರೋ ಬಂದು ಅಧಿಕಾರ ಪಡೆದು ರಾಜಕೀಯ ಬೆಳೆಸಿಕೊಂಡು ದೇಶವನ್ನು ಆಳಲು ಬಿಟ್ಟುಅವರನ್ನು ಹೊಡೆದೋಡಿಸಲು ದೇಶಭಕ್ತರು ಹುಟ್ಟಿ ಬರಬೇಕಾಯಿತು.

ಕೊನೆಗೂ ದೇಶಭಕ್ತರ ಜೀವ ಪ್ರಾಣ ಹೋಗಿ ಸ್ವಾತಂತ್ರ್ಯ ಪಡೆದ ಭಾರತವನ್ನು ಮತ್ತೆ ವಿದೇಶ ಮಾಡಲು ಹೊರಟರೆ ಇಲ್ಲಿ ಧರ್ಮ ಯಾವುದು? ಇದಕ್ಕೆಲ್ಲ ಕಾರಣವೆಂದರೆ ನಾವು ನಮ್ಮ ಸುಖಕ್ಕಾಗಿ ಬೌತಿಕ ಸತ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡು ಆಧ್ಯಾತ್ಮಿಕ ಸತ್ಯವನ್ನು ಪ್ರಚಾರಕ್ಕೆ ಸೀಮಿತಮಾಡಿಕೊಂಡು ಮಧ್ಯವರ್ತಿಗಳಾಗಿರೋದು.

ಇದನ್ನು ಸರಿಪಡಿಸಲು ನಮಗೆ ಅಧಿಕಾರ,ಹಣ ಬೇಕೆಂದರೆ, ಅಧಿಕಾರ ಹಣ ಇದ್ದವರಿಗೆ ಪೂರ್ಣಸತ್ಯ ತಿಳಿಯಲಾಗದು.
ಪೂರ್ಣಸತ್ಯ ತಿಳಿದವರಿಗೆ ಅಧಿಕಾರ
ಹಣವಿರದು.

ಹಲ್ಲಿದ್ದವರಿಗೆ “ಕಡಲೆಯಿಲ್ಲ,ಕಡಲೆಯಿದ್ದವರಿಗೆ ಹಲ್ಲಿಲ್ಲ” ಒಟ್ಟಿನಲ್ಲಿ ಧರ್ಮ ನಮ್ಮನ್ನು ರಕ್ಷಿಸುವುದೋ ನಾವು ಧರ್ಮವನ್ನು ರಕ್ಷಿಸುವುದೋ? ನಾನು ಬಂದಾಗ ಪೂರ್ಣತೆ ಇರೋದಿಲ್ಲ.

ಪೂರ್ಣವಾದಾಗ ನಾನಿರೋದಿಲ್ಲ. ನನ್ನ ನಡೆಸಿರುವ ಶಕ್ತಿಯೇ ಎಲ್ಲರನ್ನೂ ನಡೆಸಿದ್ದರೂ ಎಲ್ಲರಿಗೂ ಕಾಣೋದಿಲ್ಲ. ಹೀಗಾಗಿ ಅಧ್ಯಾತ್ಮದ ವಿಚಾರ ಕಗ್ಗಂಟಾಗಿ ವಾದ ವಿವಾದದಲ್ಲಿ ಸಿಲುಕಿದೆ.

ಅದ್ವೈತದ ಪ್ರಕಾರ ಹೇಳುವುದಾದರೆ ಯಾವ ವಿಚಾರದಲ್ಲಿ ವಾದಕ್ಕೆ ವಿರೋಧಕ್ಕೆ ಸ್ಥಳವಿರುವುದೋ ಅಲ್ಲಿ ಗೊಂದಲವಿದೆ.
ಪೂರ್ಣ ಸತ್ಯದಲ್ಲಿ ವಾದ ವಿವಾದಗಳಿರುವುದಿಲ್ಲ. ಭಾರತ ದೇಶದ ಪರವಾಗಿ ನಿಂತರೆ ಪ್ರಜೆಗಳಾದವರಿಗೆ ಯಾವುದೇ ಗೊಂದಲವಿರಬಾರದಿತ್ತು. ಆದರೆ ಈಗಿನ ಪರಿಸ್ಥಿತಿ ದೇಶದ ವಿರೋಧ ನಡೆದಿರುವವರ ಸಂಖ್ಯೆ ಬೆಳೆದಿದೆ.

ಕಾರಣ ಕೇವಲ ಸ್ವಾರ್ಥ ಪೂರಿತ ಜೀವನ. ನಿಸ್ವಾರ್ಥ, ನಿರಹಂಕಾರ, ಸರಳ,ಸ್ವಾಭಿಮಾನ, ಸ್ವಾವಲಂಬನೆ ,ಸತ್ಯ ಪರಿಪಾಲನೆ ಇವುಗಳನ್ನು ಪ್ರಚಾರ ಮಾಡುವುದು ಸುಲಭದ ಕೆಲಸ. ಆದರೆ ಅದರಂತೆ ನಡೆಯುವುದು ಬಹಳ ಕಷ್ಟ. ಹೀಗಾಗಿ ಅಧ್ಯಾತ್ಮದ ವಿಚಾರದಲ್ಲಿ ಎಷ್ಟೋ ಸತ್ಯಾಸತ್ಯತೆ ಗಳನ್ನು ಸೇರಿಸಿ
ಕೊಂಡು ,ಪುರಾಣ,ಇತಿಹಾಸವನ್ನು ತಿರುಚಿಕೊಂಡು ಮಧ್ಯೆ ವ್ಯವಹಾರವನ್ನು ನಡೆಸಿಕೊಂಡು ಮುನ್ನೆಡೆದಾಗಲೆ ಹಣ,ಅಧಿಕಾರ,ಹೆಸರು ಮಾಡಲು ಸಾಧ್ಯ.

ಹೀಗಾಗಿ ಅಧರ್ಮ ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಂಡು ರಾಜಕೀಯ ನಡೆಸಿದೆ. ರಾಜಕೀಯದಿಂದ ಧರ್ಮ ರಕ್ಷಣೆ ಮಾಡಲು ಇದು ರಾಜರ ಕಾಲವಲ್ಲದ ಕಾರಣ‌ ,ಪ್ರಜಾಪ್ರಭುತ್ವ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಆದರೆ, ಎಲ್ಲದ್ದಕ್ಕೂ ಒಂದು
ಅಂತ್ಯವಿದ್ದ ಮೇಲೆ ಕಾಲ ಚಕ್ರದ ತಿರುಗುವಿಕೆಗೆ ಮಾನವ
ತಲೆಬಾಗಲೇಬೇಕಲ್ಲವೆ.

ಇಲ್ಲಿ ಯಾರೂ ಧರ್ಮ ರಕ್ಷಕರೂ ಇಲ್ಲ. ಅಧರ್ಮ ರಕ್ಷಕರೂ ಇಲ್ಲ. ಅವರವರ ಧರ್ಮ ಕರ್ಮವೆ ಅವರನ್ನು ರಕ್ಷಿಸುತ್ತದೆ ವಿರುದ್ದ ನಡೆದವರಿಗೆ ಶಿಕ್ಷೆಯೂ ಇದೆ. ಕಾರಣ ಮಾತ್ರನಾದವ ಮಾನವನಿಗೆ ನಾನೇ ಎಲ್ಲವನ್ನೂ ಮಾಡುತ್ತಿರುವುದೆಂಬ ಮಾಯೆ ಆವರಿಸಿರುವಾಗ ಇಲ್ಲಿ ಆಧ್ಯಾತ್ಮಿಕ ಸತ್ಯ -ಬೌತಿಕ ಸತ್ಯ ,ಸತ್ಯಜ್ಞಾನ- ಮಿಥ್ಯ ಜ್ಞಾನ ಭೂಮಿ -ಆಕಾಶ, ಸತ್ಯ-ಅಸತ್ಯ ಅದ್ವೈತ-ದ್ವೈತ ಹೀಗೇ ವಿರುದ್ದ ದಿಕ್ಕಿನಲ್ಲಿ ನಡೆದರೂ ಒಂದೇ.

ಸತ್ಯವೆಂದರೆ ಭೂಮಿ ಮೇಲಿರುವ ಜೀವ ತನ್ನ ಹುಟ್ಟು ಸಾವುಗಳ
ಮದ್ಯೆ ಮಂತ್ರ ತಂತ್ರ ಯಂತ್ರದ ಸುಳಿಯಲ್ಲಿ ಜೀವನ ನಡೆಸಿರುವುದಷ್ಟೇ ಸತ್ಯ. ಇದಕ್ಕೆ ಕಾರಣವೆ ಋಣ ಹಾಗೂ ಕರ್ಮ ಫಲ. ಋಣ ಎಂದರೆ ಸಾಲ, ಕರ್ಮ ಎಂದರೆ ಕೆಲಸ. ಕೆಲಸಮಾಡದೆ ಸಾಲ ಪಡೆದರೆ ಮುಕ್ತಿ ಯಿಲ್ಲ. ಕೆಲಸಮಾಡಿ ಸಾಲ ತೀರಿಸಿದರೆ ಮುಕ್ತಿ.

ಅದರಲ್ಲಿಯೂ ಧರ್ಮ ಹಾಗು ಸತ್ಯದ ಮಾರ್ಗದಲ್ಲಿ ಕೆಲಸ ಮಾಡಬೇಕು ಎನ್ನುವುದು ಹಿಂದಿನ ಮಹಾತ್ಮರೆಲ್ಲರೂ ಅನುಭವದಿಂದ ತಿಳಿದು,ತಿಳಿಸಿ,ನಡೆದು ನಡೆಸಿರುವಾಗ ನಮ್ಮ ನಮ್ಮ ಮೂಲ ಧರ್ಮ ಕರ್ಮಕ್ಕೆ ತಕ್ಕಂತೆ ಜೀವನ ಇದ್ದರೆ ಆತ್ಮತೃಪ್ತಿ, ಆತ್ಮಜ್ಞಾನ ಇದ್ದಲ್ಲಿಯೇ ಸಿಗುತ್ತದೆ. ಇದನ್ನು ಹೊರಗೆ ಹುಡುಕಿದರೆ ಸಿಗೋದಿಲ್ಲ.

ಆಂತರಿಕ ಶುದ್ದಿಗೆ ಯೋಗ ಬೇಕು. ಯೋಗ ಎಂದರೆ ಯೋಗಾಸನ ಅಲ್ಲ. ಯೋಗಿಯಾಗಬೇಕೆನ್ನುವುದಾಗಿದೆ. ಸ್ಥಿತಪ್ರಜ್ಞ ಎಂದರೆ ಇಂದಿನ ಪರಿಸ್ಥಿತಿಗೆ ನಾನೆಷ್ಟು ಕಾರಣನೆಂಬ ಸತ್ಯವರಿತು ಪ್ರಜ್ಞಾವಂತನಾಗಿರೋದು. ಇದು ಪ್ರತಿಯೊಬ್ಬ ಪ್ರಜೆಗಳ ಧರ್ಮ.ಇದೇ ಪ್ರಜಾಪ್ರಭುತ್ವದ ಧರ್ಮ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!