ದಿನಕ್ಕೊಂದು ಸಾಮಾನ್ಯ ಜ್ಞಾನ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಗುರುಕುಲ ಅಂದು -ಇಂದು

ಗುರುಕುಲಗಳಲ್ಲಿ ಹಿಂದೆ ಪ್ರಾಥಮಿಕ ಶಿಕ್ಷಣವನ್ನು ಮನೆಬಿಟ್ಟು ದೂರದಲ್ಲಿ ಕೊಡಿಸಲು ಕಾರಣ, ಪೋಷಕರ ವ್ಯಾಮೋಹದಲ್ಲಿದ್ದರೆ ಶಿಕ್ಷಣ ಮೈಗೆ ಹತ್ತೋದಿಲ್ಲ ಎಂದು ಒಂದು ಕಾರಣವಾಗಿತ್ತು. ಹಾಗೆ ಗುರು ಶಿಷ್ಯರ ಪವಿತ್ರವಾದ ಸಂಬಂಧ ಇದರಿಂದ ಬೆಳೆಯುತ್ತಿತ್ತು. ಅದರಲ್ಲಿಯೂ ಮೂಲ ಧರ್ಮಕ್ಕೆ ತಕ್ಕಂತೆ ಶಿಕ್ಷಣ ನೀಡಿ ಸ್ವಾವಲಂಬನೆ ಯ ಜೀವನಕ್ಕೆ ತಯಾರಿ ನಡೆಸೋದಾಗಿತ್ತು.
ಈಗ ಕಾಲಬದಲಾಗಿದೆ.ಪೋಷಕರು ಮಕ್ಕಳಿಂದ ದೂರವಿದ್ದು ಯಾರೋ ಮನೆಯಲ್ಲಿ, ಊರಿನಲ್ಲಿ, ಬಾಡಿಗೆಗೆ ಬಿಟ್ಟ ಹಾಗೆ ಮಕ್ಕಳನ್ನು ಬಿಟ್ಟು ಬೌತಿಕ ಶಿಕ್ಷಣವನ್ನು ನೀಡುತ್ತಾರೆ.

ಇದು ಮುಂದೆ ಪೋಷಕರನ್ನು ಮಕ್ಕಳೇ ದೂರ ತಳ್ಳುವ ಮಟ್ಟಿಗೆ ಬೆಳೆಯಬಹುದೆನ್ನುವ ಮುಂದಾಲೋಚನೆ ಇಲ್ಲದಿದ್ದರೆ ಸಮಾಜ ಸುಧಾರಣೆ ಆಗುವುದು ಕಷ್ಟ.ಇಲ್ಲಿ ಪೋಷಕರಿಬ್ಬರು ಉದ್ಯೋಗಸ್ಥ ರಾದಾಗ ಮನೆಯಲ್ಲಿ ಸರಿನೋಡಿಕೊಳ್ಳುವರಿಲ್ಲವೆಂಬ ಕಾರಣಕ್ಕೆ ಮಕ್ಕಳನ್ನೇ ಹೊರಗೆ ಬಿಟ್ಟು ತಾವು ನಿಶ್ಚಿಂತರಾಗಿರುತ್ತಾರೆ. ಆದರೆ ಕೊನೆಯಲ್ಲಿಅವರೂ ಪೋಷಕರನ್ನು ದೂರ ಮಾಡಿ ನಿಶ್ಚಿಂತರಾಗಿದ್ದರೆ ಮಕ್ಕಳು ಸರಿಯಿಲ್ಲ ಎನ್ನುವುದರಲ್ಲಿ ಅರ್ಥ ವಿಲ್ಲ. ನಾವೇನು ಕೊಟ್ಟಿದ್ದೇವೋ ಅದೇ ತಿರುಗಿ ಸಿಗೋದು.

ಗುರುಕುಲದಲ್ಲಾದರೆ ಆಧ್ಯಾತ್ಮಿಕ ಶಿಕ್ಷಣ ಕೊಟ್ಟು ಮಾನವೀಯತೆ ಬೆಳೆಸುತ್ತಿದ್ದರು. ಆದರೆ ಈಗ ಅದಕ್ಕೆ ವಿರುದ್ದವಾದ ಶಿಕ್ಷಣ ಪಡೆದ ಮಕ್ಕಳನ್ನು ಹೆಚ್ಚಿನ ವಿದ್ಯಾಭ್ಯಾಸ ಕ್ಕಾಗಿ ಹೊರದೇಶದವರೆಗೆ ಕಳುಹಿಸಿ ತಮ್ಮ ಜವಾಬ್ದಾರಿ ಮುಗಿಯಿತೆಂದರೆ ಮಕ್ಕಳೂ ತಮ್ಮ ತಮ್ಮ ಜೀವನವನ್ನು ಬೇರೆಯಾಗಿಯೇ ಇದ್ದು ನಡೆಸುತ್ತಾರೆ.

- Advertisement -

ಆದರೆ, ಪೋಷಕರು ಮಾತ್ರ ಮಕ್ಕಳಿಗಾಗಿ ಬೌತಿಕ ಆಸ್ತಿ ಮಾಡಿಡೋದನ್ನು ಬಿಡದೆ ಕೊನೆಗಾಲದಲ್ಲಿಯಾದರೂನಮನ್ನು ನೋಡಿಕೊಂಡರೆ ಸಾಕು ಎಂದು ನಿರೀಕ್ಷೆಯಿಟ್ಟು ಕೊಂಡು ಕಾಯುತ್ತಾರೆ. ಬಹಳ ದೂರ ಹೋದ ಮಕ್ಕಳಿಗೆಅವರ ಮನಸ್ಸು ಅರ್ಥ ವಾಗೋದಕ್ಕೆ ಧಾರ್ಮಿಕ ಪ್ರಜ್ಞೆ ಇದ್ದರೆ ಉತ್ತಮ. ಇಲ್ಲವಾದರೆ, ಅವರಿಗೆ ಮಾಡಿಟ್ಟ ಆಸ್ತಿಮಾರಿ, ಯಾವುದಾದರೂ ಉತ್ತಮವಾದ ವೃದ್ದಾಶ್ರಮ ನೋಡಿ ಪೋಷಕರನ್ನು ಬಿಟ್ಟು ದೂರವೆ ಉಳಿಯುತ್ತಾರೆ.

  • ಸೋಲುಗಳಿಂದ ನಾವುಯಾವತ್ತೂ ಕಂಗೆಡಬಾರದು. ಯಾಕೆಂದರೆ, ಅತ್ಯಂತ ಯಶಸ್ವಿಎನಿಸಿರುವ ಗಣಿತ ಕೂಡ ಶೂನ್ಯದಿಂದಲೇ ಆರಂಭವಾಗುವುದು.
  • ನಮ್ಮ ಕನಸಗಳನ್ನು ನನಸಾಗಿಸಿಕೊಳ್ಳುವಲ್ಲಿ ಆಲಸ್ಯ ತೋರಿದರೆ ಅದು ಇನ್ನೊಬ್ಬರ ಪಾಲಾಗಿ ಹಳಹಳಿಕೆಯೊಂದೇ ನಮ್ಮ ಪಾಲಿಗುಳಿದೀತು
  • ವಿನಾಕಾರಣ ಟೀಕಿಸುವವರು, ಕೊಂಕುಮಾತುಗಳನ್ನು ಆಡುವವರು ಇದ್ದಾರೆಂದ ಮಾತ್ರಕ್ಕೆ ನಿಯೋಜಿತ ಕಾರ್ಯದಿಂದ ಹಿಂದೆಯುವುದು ಸಲ್ಲ. ಗುರಿಯೆಡೆಗೇ ದೃಷ್ಟಿ ನೆಟ್ಟು ಕೆಲಸ ಮಾಡುವುದು ಸರ್ವಕಾಲಕ್ಕೂ ಅಪೇಕ್ಷಿಣಿಯ.
  • ಬದುಕು ಹೇಗಿರಬೇಕು ಎಂದರೆ ಬೆಳಿಗ್ಗೆ ಎದ್ದಾಗ ದೃಢ ನಿರ್ಧಾರವಿರಬೇಕು. ರಾತ್ರಿ ಮಲಗುವಾಗ ಆತ್ಮ ತೃಪ್ತಿ ಇರಬೇಕು.
  • ದುಡ್ಡಿರಬೇಕು ಅಥವಾ ದುಡಿತಾ ಇರಬೇಕು. ಇಲ್ಲವಾದಲ್ಲಿ ಸಂಬಂಧಿಕರ “ನಮ್ಮವರೆಂಬ” ಲಿಸ್ಟಿನಲ್ಲಿ ನಾವಿರೋದೆ ಇಲ್ಲ.
  • ಬದುಕಿನಲ್ಲಿ ನಾಳೆಯು ಇಂದಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಇರುವ ಎರಡನೇ ಅವಕಾಶ, ಅದನ್ನು ಉಪಯೋಗಿಸಿಕೊಳ್ಳೋಣ.
  • ಸ್ಪಷ್ಟಿಕರಣ ಎಲ್ಲಿ ಕೊಡಬೇಕೆಂದರೆ, ಎಲ್ಲಿ ನಮ್ಮ ಮಾತನ್ನು ಕೇಳುವ ಮತ್ತು ಅರ್ಥ ಮಾಡಿಕೊಳ್ಳುವ ಹೃದಯ ವೈಶಾಲ್ಯತೆ ಇರುವ ಜನರು ಇದ್ದಾರೆ ಅಲ್ಲಿ. ನಮ್ಮನ್ನು ತಪ್ಪು ತಪ್ಪಾಗಿ ಅರ್ಥೈಸೆಕೊಂಡವರಿಗೆಲ್ಲ ಸಮರ್ಥನೆ ಕೊಡಲು ಹೋದರೆ, ನಮ್ಮ ದೃಷ್ಟಿಯಲ್ಲಿ ನಾವೇ ” ಕುಗ್ಗಿ ” ಹೋದಂತೆ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!