ದಿನಕ್ಕೊಂದು ಸಾಮಾನ್ಯ ಜ್ಞಾನ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಸಾತ್ವಿಕ ಆಹಾರ ಸೇವನೆಯಿಂದ ಆರೋಗ್ಯ ಹೆಚ್ಚಾಗಿರುತ್ತದೆ ಅದರ ಜೊತೆಗೆ ಸಾತ್ವಿಕ ವ್ಯವಹಾರವೂ ಇದ್ದರೆ ಜೀವನ ಉತ್ತಮವಾಗಿರುತ್ತದೆ. ನಮ್ಮ ಜ್ಞಾನಾಭಿವೃದ್ದಿ ನಮ್ಮ ನಮ್ಮ ಧರ್ಮ ಕರ್ಮದಿಂದ ಆಗುತ್ತದೆ ಎನ್ನುವುದೆ ಹಿಂದೂ ಧರ್ಮದ ನಂಬಿಕೆ ವಿಶ್ವಾಸ ಕೂಡ.

ಅದರಂತೆಯೆ ಹಿಂದಿನ ಮಹಾತ್ಮರುಗಳು ಜೀವನ ನಡೆಸುತ್ತಿದ್ದರು.
ಪರಮಾತ್ಮನನ್ನು ಚರಾಚರದಲ್ಲಿ ಕಾಣಲಾಗದಿದ್ದರೂ ಅವನನ್ನು ಪ್ರಕೃತಿಯಲ್ಲಿ ಕಾಣುವ ಮೂಲಕ ಪ್ರಕೃತಿಯ ಆರಾಧನೆ ನಡೆಯಿತು. ಹೀಗೇ ದೇವತಾರಾಧನೆ ಬೆಳೆಯುತ್ತಾ ಮಾನವನ ಮನಸ್ಸು ಹೊರಗಿನ ಆಚರಣೆಯಲ್ಲಿ ಬೆಳೆದುಕೊಂಡು ಹೊರಗೆ ನಡೆದು ಶುದ್ದಾಶುದ್ದತೆಗಳು ಬೆಳೆದವು.

ಮನಸ್ಸನ್ನು ಹತೋಟಿಯಲ್ಲಿಡಲಾಗದೆ , ರಾಜಕೀಯದಿಂದ ತನ್ನ ಅಸ್ತಿತ್ವ ಬೆಳೆಸಿಕೊಳ್ಳಲು ಮಾನವ ಭೂಮಿಯನ್ನು ಆಳುವ ಮಟ್ಟಿಗೆ ಬೆಳೆದ. ಆದರೆ, ಇಲ್ಲಿ ದೇವರು ಬೇರೆ ನಾನೇ ಬೇರೆ ಎನ್ನುವ ಅಹಂಕಾರ ಬೆಳೆದು,ಭೂಮಿಯ ಮೇಲಿದ್ದು ಭೂಮಿಯನ್ನು ತನ್ನ ಹತೋಟಿಗೆ ತರಲು ಸ್ತ್ರೀ ಶಕ್ತಿಯನ್ನು ಬಳಸಿಕೊಂಡು ತನ್ನ ರಾಜಕೀಯವನ್ನು ಎತ್ತರಕ್ಕೆ ಬೆಳೆಸಿಕೊಂಡು ಸಮಾಜದಲ್ಲಿ ಅಸಮಾನತೆ,ಅಸಹಿಷ್ಣುತೆ,ಅನ್ಯಾಯ, ಅಧರ್ಮ, ಅಸಹಕಾರ ಅಸತ್ಯವೆ ತನ್ನ ತಾನರಿಯಲಾಗದೆ ಮಹಾತ್ಮರನ್ನು ಬಡವರೆಂದು ಹಿಂದೆ ತಳ್ಳಿ ವಿಜ್ಞಾನ ಜಗತ್ತು ಇಷ್ಟು ದೂರ ನಡೆದು ಬಂದಿದೆ.

- Advertisement -

ಹಾಗಾದರೆ, ಇಲ್ಲಿ ನಮ್ಮ ಜೀವಕ್ಕೆ ಸಾಕಷ್ಟು ಆಹಾರ ಪ್ರಕೃತಿಯೆ ನೇರವಾಗಿ ಕೊಟ್ಟರೂ ಅದನ್ನು ನಾವು ಬಳಸಿಕೊಳ್ಳಲಾಗದೆ, ರಾಜಸ,ಹಾಗು ತಾಮಸ ಗುಣಗಳ ಆಹಾರ ಸೇವನೆ ಮಾಡಿದಾಗಲೆ ಆತ್ಮಶಕ್ತಿ ಕುಗ್ಗಿ ಬೌತಿಕ ಆಸಕ್ತಿ ಬೆಳೆಯುತ್ತದೆ. ನಾವೆಷ್ಟೇ ಹೊರಗೆ ನಡೆದರೂ ಜೀವ ಶಾಶ್ವತವಲ್ಲ. ಇದನ್ನು ಹುಟ್ಟಿಸುವ ಶಕ್ತಿ ಮಾನವ ಪಡೆದಿಲ್ಲ. ಹೀಗಿರುವಾಗ ಸಾಯಿಸೋದರಲ್ಲಿ ಅರ್ಥ ವಿಲ್ಲ.

ನಮ್ಮ ಆರೋಗ್ಯ ನಮ್ಮ ಆಹಾರ,ವಿಹಾರದ ಮೇಲಿದೆ.
ಇದರಲ್ಲಿ ಸಾತ್ವಿಕ,ರಾಜಸ,ತಾಮಸ ಗುಣಗಳಿರುವಾಗ ಮೂರು ಶಕ್ತಿ ಮಾನವನ ಜೀವನವನ್ನು ನಡೆಸಿದೆ. ಇವುಗಳ
ಉದ್ದೇಶ ವೂ ಬೇರೆ ಬೇರೆಯೆ. ಆದರೆ ಮಾನವನ ಬುದ್ದಿಶಕ್ತಿ
ಮುಂದೆ ಇವನ್ನು ತಿಳಿದರೆ ನಮ್ಮ ಆರೋಗ್ಯಕ್ಕೆ ಸರಿಯಾದ ಆಹಾರ ಸೇವಿಸಬಹುದು.

ಆದರೆ, ಕೇವಲ ಸಾತ್ವಿಕ ಆಹಾರ ಸೇವನೆಯಿಂದ ಸಾತ್ವಿಕ ವ್ಯಕ್ತಿ
ಎನಿಸಿಕೊಳ್ಳಲಾಗದು. ಅದಕ್ಕೆ ಜೊತೆಯಾಗಿ ಸಮಾಜದಲ್ಲಿಯ ಸತ್ಯ ಧರ್ಮ ನ್ಯಾಯ,ನೀತಿ,ಸಂಸ್ಕೃತಿ ಯನ್ನು ಅಷ್ಟೇ ಸತ್ಯದಿಂದ ಅರ್ಥ ಮಾಡಿಕೊಂಡು ಸಾತ್ವಿಕರಿಗೆ ಸಹಕರಿಸಿದಾಗಲೆ ಸಮಾಜದಲ್ಲಿ ಸತ್ಯ ಧರ್ಮ ಹೆಚ್ಚುತ್ತದೆ.

ಅದರಲ್ಲಿಯೂ ರಾಜಕೀಯಕ್ಕೆ ಸಹಕಾರ ನೀಡಿದರೆ ಸತ್ಯದಿಂದ ರಾಜಕೀಯ ನಡೆಸಲಾಗದು.ಹಾಗಾದರೆ ನಮ್ಮ
ಸತ್ಕರ್ಮದ ಫಲ ರಾಜಕೀಯಕ್ಕೆ ಸೇರಿತೆ? ರಾಜಕೀಯದಲ್ಲಿ
ಅಧರ್ಮ ಬೆಳೆದಿದ್ದರೆ ನಮ್ಮ ಸಾತ್ವಿಕ ಜ್ಞಾನದಿಂದ ಯಾರಿಗೆ ಲಾಭವಾಯಿತು? ಕೆಲವು ಸೂಕ್ಷ್ಮ ವಿಚಾರಗಳನ್ನು ನಾವು ಬೇಗ ಗಮನಿಸುವುದಿಲ್ಲ.

ಮಾಯೆ ನಮ್ಮನ್ನು ಆವರಿಸಿರುತ್ತದೆ
ಇದಕ್ಕೆ ಕಾರಣವೆ ಸಂಗ.ಸಂಘಟನೆಯಲ್ಲಿ ಸತ್ಯವಿದ್ದರೆ ಸತ್ಸಂಗ
ಎಷ್ಟೇ ಶುದ್ದವಾದ ಆಹಾರ ಸೇವಿಸಿದರೂ ನಮ್ಮ ಸಂಘಟನೆ
ಸರಿಯಾಗಿಲ್ಲವಾದರೆ, ಸಹಕಾರ ಸರಿಯಿಲ್ಲವಾದರೆ ವ್ಯರ್ಥ.
ಆಧ್ಯಾತ್ಮ ದ ಆಳ ಅಗಲವನ್ನು ಹೊರಗಿದ್ದು ತಿಳಿಯಲಾಗದು.

ಒಳಗಿದ್ದು ಒಳಹೊಕ್ಕಿದಾಗಲೆ ಅಲ್ಪ ಸ್ವಲ್ಪ ತಿಳಿಯಬಹುದಷ್ಟೆ
ಕಲಿಗಾಲದ ಮನುಕುಲಕ್ಕೆ ತನ್ನ ತಾನು ಆಳಿಕೊಳ್ಳಲು ಶಕ್ತಿಯಿಲ್ಲ. ಇತರರನ್ನು ಆಳೋ ಅಜ್ಞಾನವಿದೆ. ಅಂದರೆ ಇಲ್ಲಿ
ಆಳುತ್ತಿರುವುದು ಯಾರು? ದಾಸರು,ಶರಣರು ಸಂತರು, ಜ್ಞಾನಿಗಳು, ಮಹಾತ್ಮರುಗಳು ಯಾರನ್ನಾದರೂ ಆಳಲು ಹೋಗಿದ್ದರೆ? ಯಾಕೆ? ಎಂದರೆ ಇಲ್ಲಿ ಆಳಾಗಿ ಜೀವನ ನಡೆಸೋದು ಆಳುವುದಕ್ಕಿಂತ ದೊಡ್ಡದು ಎಂದು.

ಅಂದರೆ ಪರಮಾತ್ಮನ ಸತ್ಯಕ್ಕೆ ಶರಣಾದರೆ,ದಾಸರಾದರೆ ಮುಕ್ತಿ ಎನ್ನುವುದಾಗಿದೆ. ಇದು ಭಾರತೀಯರಾಗಿ ತಿಳಿದು ನಡೆಯಲು ನಾವು ಭಾರತಾಂಬೆಯ ಜ್ಞಾನಶಕ್ತಿಯನ್ನು ಅರ್ಥ ಮಾಡಿಕೊಂಡರೆ ಉತ್ತಮ. ಇದಕ್ಕೆ ವಿರುದ್ದದ ಶಿಕ್ಷಣವೆ ಇಂದು ಹೆಚ್ಚು ಹೆಚ್ಚು ಭಾರತೀಯರನ್ನು ಆಳಾಗಿ ದುಡಿಯುವಂತೆ ಮಾಡಿದೆ. ಅದೂ ವಿದೇಶಿ ಕಂಪನಿಗಳ ಕೈ ಕೆಳಗೆ ಹಾಗಾದರೆ
ನಾವೆಷ್ಟು ಸ್ವತಂತ್ರ ರು? ಆತ್ಮಾವಲೋಕನ ಅಗತ್ಯವಿಲ್ಲವೆ?.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!