ಬೆಳಗಾವಿ ಸಂಸದರಾಗಿದ್ದ ದಿ.ಸುರೇಶ ಅಂಗಡಿಯವರ ತಾಯಿ ಶ್ರೀಮತಿ ಸೋಮವ್ವಾ ತಮ್ಮ ೯೨ ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಮಗ ಸುರೇಶ ಅಂಗಡಿಯವರ ಮೇಲೆ ತುಂಬಾ ಪ್ರೀತಿ ಇಟ್ಟುಕೊಂಡಿದ್ದ ಸೋಮವ್ವಾ ಮಗನ ನಿಧನಾನಂತರ ಮಾನಸಿಕವಾಗಿ ಕುಗ್ಗಿಹೋಗಿದ್ದರು.
ತಮ್ಮ ಮೂಲಸ್ಥಳ ಕೆಕೆ ಕೊಪ್ಪದಲ್ಲಿಯೇ ವಾಸವಾಗಿದ್ದ ಅವರು ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಕೊರೋನಾ ಮಹಾಮಾರಿ ತೀವ್ರವಾಗಿದ್ದ ಸಂದರ್ಭದಲ್ಲಿ ಮಗ ಸುರೇಶ ಅಂಗಡಿಯವರಿಗೆ ದೆಹಲಿಗೆ ಹೋಗದಿರಲು ಹಠ ಹಿಡಿದಿದ್ದ ಅವರು ಸುರೇಶ ಅಂಗಡಿಯವರು ಕೊರೋನಾಕ್ಕೇ ಬಲಿಯಾಗಿದ್ದರಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದರು.