ಸವದತ್ತಿ 17: ಶ್ರೀಕ್ಷೇತ್ರ ಗುರ್ಲಹೊಸೂರಿನ ಸಂತ ಶ್ರೇಷ್ಠ ರಾಜಾರಾಮ ಮಠದಲ್ಲಿ ದಿ 23.3.2021 ರಿಂದ 30.3.2021ರ ವರೆಗೆ ಸಂತಶ್ರೇಷ್ಟ ರಾಜಾರಾಮ ಮಹಾರಾಜರ 252ನೇ ಜನ್ಮೋತ್ಸವವನ್ನು ಆಚರಿಸಲಾಗುವುದು ಈ ನಿಮಿತ್ಯವಾಗಿ ಶ್ರೀ ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ ಸೋಹಳಾ ಕಾರ್ಯಕ್ರಮ ನಡೆಯುವುದು
ರಾಜಾರಾಮ ಮಠದ ಪೀಠಾಧಿಕಾರಿಗಳಾದ ಮನೋಹರ ಮಲ್ಹಾರ ದೀಕ್ಷಿತರ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.
ಸೋಮವಾರ 22-3-2021 ರಂದು ಸಾಯಂಕಾಲ ಪೋತಿಸ್ಥಾಪನಾ ಕಾರ್ಯಕ್ರಮ. 23.3.2021 ರಿಂದ ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ ನಡೆಯುವುದು.
ಪ್ರತಿದಿನ ಬೆಳಗ್ಗೆ 4 ರಿಂದ 6 ಘಂಟೆಯವರೆಗೆ ಕಾಕಡಾರತಿ.ಬೆಳಿಗ್ಗೆ 7 ರಿಂದ 12.30.ರವರೆಗೆ ಪಾರಾಯಣ ನೈವೇದ್ಯ ಮಹಾಮಂಗಳಾರತಿ. ಸಾಯಂಕಾಲ 6 ರಿಂದ ಪ್ರವಚನ 7 ರಿಂದ 9 ರ ವರೆಗೆ ಕೀರ್ತನೆ ಸಾಂಪ್ರದಾಯಿಕ ಭಜನೆ 27 – 3 – 2021 ರಂದು ಶನಿವಾರ ಪಾರಾಯಣ ಸಮಾಪ್ತಿ ಕಾಲಾಕೀರ್ತನದೊಂದಿಗೆ ಕಾರ್ಯಕ್ರಮ ಮಂಗಳವಾಗುವುದು.
28.3.2021 ರಂದು ಬೆಳಿಗ್ಗೆ 10ರಿಂದ ಭಜನೆ ಸಾಯಂಕಾಲ ಸಾಂಪ್ರದಾಯಿಕ ಭಜನೆ .ಕೀರ್ತನೆ ಅನವಾಲ ಸಂತ ಮಂಡಳಿಯವರಿಂದ ನಡೆಯುವುದು.
30.3.2021.ಮಂಗಳವಾರ ರಂದು ಸಂತಶ್ರೇಷ್ಠ ರಾಜಾರಾಮ ಮಹಾರಾಜರ ತೊಟ್ಟಿಲೋತ್ಸವ ನಡೆಯುವುದು.
ಶ್ರೀಮಠದ ಭಕ್ತರಲ್ಲಿ ತಿಳಿಸುವುದೇನಂದರೆ ಕೋರೋನಾ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ನಾವೆಲ್ಲರೂ ಸರಕಾರದ ಆದೇಶವನ್ನು ಕಡ್ಡಾಯವಾಗಿ ಪಾಲಿಸಲೇಬೇಕಾಗಿದೆ ಆದ್ದರಿಂದ ಮಠದಲ್ಲಿ ದರ್ಶನಕ್ಕೆ ಅವಕಾಶ ಇರುವುದಿಲ್ಲ ಪ್ರಸಾದ ವ್ಯವಸ್ಥೆಯು ಇರುವುದಿಲ್ಲ ಆದ್ದರಿಂದ ಭಕ್ತರು ಸಹಕರಿಸಬೇಕೆಂದು ರಾಜಾರಾಮ ಮಠದ ಸದ್ಬಕ್ತಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ