ದಿ.24 ರಿಂದ ಕ್ಲಾಸ್ ಸದುಪಯೋಗಪಡಿಸಿಕೊಳ್ಳಲು ಕರೆ

Must Read

ಸಿಂದಗಿ: 2020-21ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸುಧಾರಿಸುವ ನಿಟ್ಟಿನಲ್ಲಿ ದಿ. 24ರಿಂದ ಪರೀಕ್ಷೆ ನಡೆಯುವ ವರೆಗೂ ಪ್ರತಿಯೊಂದು ವಿಷಯದ ಕುರಿತು ಒಂದೊಂದು ದಿನದಂತೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿದ್ಯಾರ್ಥಿಗಳಿಗೆ ಕ್ಲಾಸ್‍ಗಳಲ್ಲಿ ತಿಳಿಸಿಕೊಡಲಾಗುತ್ತಿದೆ ಕಾರಣ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ವ್ಹಿ.ವಾಯ್ ದೇವಣಗಾಂವ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ ಅವರು, ಒಟ್ಟು 7 ಕನ್ನಡ ವಲಯದ ಗ್ರುಪ್‍ಗಳು ಆಂಗ್ಲ 1, ಉರ್ದು 1, ಒಟ್ಟು 9 ವಲಯಗಳಿಂದ 9 ನೋಡಲ್ ಅಧಿಕಾರಿಗಳ ನೇತೃತ್ವದಲ್ಲಿ 100 ಪ್ರೌಡಶಾಲೆಗಳಿಂದ ಕಲಿಕೆಯಲ್ಲಿ ಹಿಂದುಳಿದ 765 ವಿದ್ಯಾರ್ಥಿಗಳಿಗೆ ಕ್ಲಾಸ್‍ಗಳ ಮೂಲಕ ವಿಷಯ ಬೋಧನೆ ಮಾಡಲಾಗುತ್ತಿದೆ ಇಂದು ನಡೆದ ಪ್ರಥಮ ಕನ್ನಡಭಾಷೆಯ ಕುರಿತು ನಡೆಸಿದ ಕ್ಲಾಸಿನಲ್ಲಿ 765 ಹಾಜರಿದ್ದು ಅತೀ ಯಶಸ್ವಿಯಾಗಿ ಜರುಗಿದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ, ನೋಡಲ್ ಅಧಿಕಾರಿ ಎಸ್.ಬಿ.ಕಮತಗಿ ಇದ್ದರು.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group