spot_img
spot_img

ದೀಪಧಾರಿಣಿ – ನೂರು ವಸಂತಗಳ ಕಂಡ ಮೊಡೆಲ್ ಕಥೆ

Must Read

ಹಳದಣಕರ ಗೀತಾ.

ಜಗತ್ತಿನ ಜಲತರಂಗ  ಸವೋ೯ತ್ಕಷ್ಟ ಮೂರು ಚಿತ್ರಗಳಲ್ಲಿ  ಈ ಒಂದು ಚಿತ್ರವೂ ಹೆಮ್ಮೆಯ ಸ್ಥಾನ ಪಡೆದಿದೆ. ರಾಜಾ ರವಿವರ್ಮ
ಈ ಚಿತ್ರದಲ್ಲಿನ  ದೀಪಧಾರಿಣಿ ಹುಡುಗಿ  ಗೀತಾ ತಾಯಿ ಪುಣೇಕರ. ಇವರು ನೂರನೇ ವಷ೯ಕ್ಕೆ ಪದಾಪ೯ಣೆ ಮಾಡಿದ್ದಾರೆ. ಕೊಲ್ಹಾಪುರ ದಲ್ಲಿ ವಾಸಿಸುವ  ನೂರನೇ ವಷ೯ದ ಗೀತಾ ತಾಯಿಯ ಕಥೆ ಇದು.

ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ
“ಗ್ಲೋ ಅಪ್ ಹೋಪ್” ಎಂಬ ಹೆಸರಿನ ಜಗತ್ ಪ್ರಸಿದ್ಧ ದೀಪಧಾರಿಣಿ ಚಿತ್ರವಿದೆ.ಇದರ ಜೊತೆಗೇ ರಾಜಾ ರವಿವರ್ಮನ ೧೬ಚಿತ್ರಗಳಿವೆ.
ಈ “ದ ಲೇಡಿ ವಿಥ್ ಲ್ಯಾಂಪ್”” ಅಥಾ೯ತ
“ಗ್ಲೋ  ಆಪ್ ಹೋಪ್” ಅದೇ ದೀಪಧಾರಿಣಿ ಚಿತ್ರ !
ಎಲ್ಲರ ಕಣ್ ಸೆಳೆದು ಮನಸೂರೆಗೊಳ್ಳುತ್ತದೆ.

ಚಿತ್ರದ ಅಕ್ಕ ಪಕ್ಕದಲ್ಲಿ ರಾಮಾಯಣ ಮಹಾಭಾರತದ ಮತ್ತು ಮಧ್ಯಕಾಲೀನ ರಾಜಾ ರವಿವರ್ಮನ ಚಿತ್ರಗಳಿದ್ದರಿಂದ ಇದೂ ಅವರದೇ ಚಿತ್ರ ಎಂದು ಬಹಳ ಜನರು ತಿಳಿದಿದ್ದಾರೆ.

ಆದರೆ ನಿಜ ಸಂಗತಿ ಏನೆಂದರೆ ಇದು ಸಾವಂತ್ ವಾಡಿಯ ಸಾವಳಾರಾಮ ಹಳದಣಕರ ಎಂಬ ಚಿತ್ರಕಾರನ ಕುಂಚದಿಂದ ಸಾಕಾರ ವಾಗಿದೆ.
ಆಗ ಹಳದಣಕರ ಗೀತಾ ೧೫ ವಷ೯ದ ಹುಡುಗಿ. ದೀಪಾವಳಿಯ ಹಬ್ಬದ ಸಂದಭ೯. ಗೀತಾ ಸಂಭ್ರಮದಿಂದ ಓಡಾಡಿಕೊಂಡು ದೀಪಗಳನ್ನು ಹಚ್ಚುತ್ತಿದ್ದಳು.ಆಗ ತಂದೆ ಹಳದಣಕರರಿಗೆ ಈ ದೃಶ್ಯವನ್ನು ಚಿತ್ರಿಸಬೇಕೆಂಬ ಇಚ್ಛೆಯಿಂದ ಅವರು ಗೀತಾಳ ಕೈಯಲ್ಲಿ ದೀಪವನ್ನು ಕೊಟ್ಟು ಕುಂಚದಿಂದ ಚಿತ್ರವನ್ನು ಕಾಗದದ ಮೇಲೆ ಚಿತ್ರಿಸಿದರು. ಈ ಚಿತ್ರವೇ ಇತಿಹಾಸದಲ್ಲಿಯೇ ಸ್ಥಾಪಿತವಾಗಿ ಈ ಐತಿಹಾಸಿಕ ಚಿತ್ರವನ್ನು  ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್ ಅವರು  ಮೂರು ಸಾವಿರಕ್ಕೆ   ಖರೀದಿಸಿ ಅದನ್ನು ರಾಜಾ ರವಿವರ್ಮನ ಚಿತ್ರಗಳ ಸಾಲಿನಲ್ಲಿ ಇರಿಸಲಾಯಿತು.

ಇಂದು ಈ ಚಿತ್ರದ ಮೊಡೆಲ್ ಆದ ದೀಪಧಾರಿಣಿ ಗೀತಾತಾಯಿಯವರ ನೂರನೇ ಹುಟ್ಟು ಹಬ್ಬದ ಸಂಭ್ರಮ.ಅವರ ಕುಟುಂಬದವರಿಗೆ ಸುವರ್ಣ ಮಹೋತ್ಸವ ಸಮಾರಂಭದ ಸಂಭ್ರಮ.ಕೊಲ್ಹಾಪುರದಲ್ಲಿ ಹಳದಣಕರ ಇವರ  ಕಲಾಚಿತ್ರ ಕಲಾ ಪರಂಪರೆಗಾಗಿಯೂ ಸಂಸ್ಮರಣೀಯ ದಿನ.ಗೀತಾತಾಯಿಯವರು ಕೊಲ್ಹಾಪುರದಲ್ಲಿ ಸಂಭ್ರಮಾಚರಣೆಯನ್ನು ಆಚರಿಸಿ ಕೊಳ್ಳುತ್ತಿದ್ದಾರೆ.ಕಲಾ ಇತಿಹಾಸ ದಲ್ಲೇ ಇದೊಂದು ಅವಿಸ್ಮರಣೀಯ ಸಂಭ್ರಮದ  ದಿನ !!

ರಾಧಾ ಶಾಮರಾವ್
ಧಾರವಾಡ

- Advertisement -
- Advertisement -

Latest News

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ...
- Advertisement -

More Articles Like This

- Advertisement -
close
error: Content is protected !!