spot_img
spot_img

ದೇಶಹಿತದ ವಿಷಯದಲ್ಲಿ ಒಗ್ಗಟ್ಟೇಕೆ ಸಾಧ್ಯವಾಗುತ್ತಿಲ್ಲ ?

Must Read

spot_img
- Advertisement -

ನಾವು ಕೇಳಿರುತ್ತೇವೆ ; ಜಪಾನೀಯರು ತಮ್ಮ ಪ್ರಧಾನಿಯ ಒಂದು ಕೆಲಸವನ್ನು ವಿರೋಧಿಸುತ್ತಾರೆ ಆದರೆ ದೇಶದ ಕುರಿತ ಅವರ ಒಂದು ಕರೆಗೆ ಒಂದೇ ದನಿಯೆಂಬಂತೆ ಬೆಂಬಲ ನೀಡುತ್ತಾರೆ. ಅಮೇರಿಕನ್ನರು ಟ್ರಂಪ್ ಅವರನ್ನು ಕೆಲವು ವಿಷಯಗಳಲ್ಲಿ ವಿರೋಧಿಸುತ್ತಾರೆ ಆದರೆ ದೇಶದ ಭದ್ರತೆ ವಿಷಯ ಬಂದಾಗ ಬೇಷರತ್ ಬೆಂಬಲ ಟ್ರಂಪ್ ಗೇ ನೀಡುತ್ತಾರೆ.

ಆದರೆ ನಮ್ಮ ದೇಶದಲ್ಲಿ ? ದೇಶದ ಪ್ರಧಾನಿ ಯಾರೇ ಆಗಿರಲಿ ಅವರಿಗೆ ಪರವಾಗಿರುವವರು, ವಿರುದ್ದವಾಗಿರುವವರು ಇದ್ದೇ ಇರುತ್ತಾರೆ. ಇರಬೇಕು. ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಒಂದು ವಿರೋಧ ಪಕ್ಷ ಸಕ್ರಿಯವಾಗಿದ್ದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಅಭಿವೃದ್ಧಿ ಅಥವಾ ಇನ್ಯಾವುದೇ ಆಂತರಿಕ ವಿಷಯಗಳಲ್ಲಿ ಪಕ್ಷ ಪಕ್ಷಗಳಲ್ಲಿ ಭಿನ್ನಾಭಿಪ್ರಾಯವಿರುವುದು ಸಹಜ. ದೇಶವಾಳುವವರು ಎಂಥ ಮುತ್ಸದ್ದಿಯೇ ಆಗಿರಲಿ ಪ್ರತಿಪಕ್ಷವನ್ನು ಕಡೆಗಣಿಸಲಾಗದು.

ಅದರ ಸಲಹೆ ಸೂಚನೆಗಳನ್ನು ತಿರಸ್ಕರಿಸಲಾಗದು. ಆಡಳಿತದ ಕುರಿತಾಗಿ ಪ್ರತಿಪಕ್ಷದವರಿಗೆ ಸೂಕ್ತ ಉತ್ತರ ನೀಡಬೇಕಾಗುತ್ತದೆ. ಅದೇ ಪ್ರಜಾಪ್ರಭುತ್ವದ ಬುನಾದಿ. ದೇಶದ ಪ್ರಜೆಗಳ ಹಿತದೃಷ್ಟಿಯಿಂದಲೂ ಒಳ್ಳೆಯದು. ಇಲ್ಲವಾದರೆ ದೇಶದಲ್ಲಿ ಸರ್ವಾಧಿಕಾರ ತೋರಿಬರುತ್ತದೆ. ಆದ್ದರಿಂದ ವಿರೋಧ ಪಕ್ಷಗಳ ಪ್ರಸ್ತುತತೆಯೇ ಪ್ರಜಾಪ್ರಭುತ್ವದ ಸೌಂದರ್ಯ ಎಂದರೆ ತಪ್ಪಾಗಲಾರದು.

- Advertisement -

ಆದರೆ ನಮ್ಮ ದೇಶದಲ್ಲೇನಾಗುತ್ತಿದೆ ? ವಿರೋಧ ಪಕ್ಷಗಳಿವೆ ಆದರೆ ಎಲ್ಲವೂ ಪೂರ್ವಗ್ರಹ ಪೀಡಿತವಾಗಿವೆ. ನರೇಂದ್ರ ಮೋದಿ ಪ್ರಧಾನಿಯಾದ ಮೇಲಂತೂ ಈ ವಿರೋಧ ಪಕ್ಷಗಳ ಪೂರ್ವಗ್ರಹ ಲಿಮಿಟ್ ಮೀರಿದೆ. ಸರ್ಕಾರದ ಪ್ರತಿ ನಿರ್ಣಯವನ್ನೂ ವಿರೋಧಿಸುವುದು ಇವರ ಕರ್ತವ್ಯವೆಂಬಂತೆ ವಿರೋಧಿ ನಾಯಕರು ಭಾವಿಸಿರುವಂತಿದೆ. ಸರ್ಕಾರದ ಹೆಸರು, ಆದರೆ ವಿರೋಧ ಮಾತ್ರ ನರೇಂದ್ರ ಮೋದಿಯವರದು ! ಈ ಮೋದಿಯೆಂಬ ವ್ಯಕ್ತಿ ಏನೇ ಮಾಡಲಿ ಅದಕ್ಕೆ ವಿರೋಧ ಮಾಡುವುದು ! ಅದು ದೇಶದ ಹಿತದಲ್ಲೇ ಇರಲಿ, ಇಲ್ಲದಿರಲಿ. ಒಟ್ಟಿನಲ್ಲಿ ವಿರೋಧಿಸುವುದೇ ಒಂದಂಕಿಯ ನಿರ್ಧಾರ ಈ ವಿರೋಧ ಪಕ್ಷಗಳದು.

ಅದೇನೋ ಸರಿ. ವಿರೋಧ ಮಾಡುವವರಿಗೇನೂ ಮಾಡಲಾಗದು. ಅದು ಒಪ್ಪುವಂಥದ್ದೇ ಆಗಿದ್ದರೆ ವಿರೋಧವನ್ನು ಒಪ್ಪಲೇಬೇಕು. ಆದರೆ ಈಗ ನಮ್ಮ ದೇಶದಲ್ಲೇನಾಗುತ್ತಿದೆ ? ನರೇಂದ್ರ ಮೋದಿಯೆಂದರೇನೆ ಉರಿದು ಬೀಳುವ ವರ್ಗವೊಂದು ಉದ್ಭವವಾಗಿದೆ. ಅವರನ್ನು ಅತ್ಯಂತ ಹೀನ ಶಬ್ದಗಳಲ್ಲಿ ಟೀಕಿಸುವುದು ಇವರ ಈ ಜನ್ಮದ ಗುರಿಯೆಂಬಂತೆ ಇವರು ವರ್ತಿಸುತ್ತಿದ್ದಾರೆ. ಹೀಗೆಲ್ಲ ಇವರ ಕಡೆಯಿಂದ ಬೈಸಿಕೊಳ್ಳುವ ಅಪರಾಧವನ್ನು ಮೋದಿ ಮಾಡಿದ್ದಾರೆಂದರೆ, ದೇಶದಲ್ಲಿ ಯಾವುದೇ ಹಗರಣಗಳಿಲ್ಲದ ಆಡಳಿತ ನಡೆಸಿದ್ದು, ಮಧ್ಯಮವರ್ಗದವರನ್ನು ಶೋಷಿಸುತ್ತಿದ್ದ ತೆರಿಗೆ ಪದ್ಧತಿಗೆ ಸುಧಾರಣೆ ತಂದಿದ್ದು, ಮಹಿಳೆಯರ ಮೇಲಿನ ಶೋಷಣೆ ತಪ್ಪಿಸಲು ತಲಾಖ್ ನಿಷೇಧದಂಥ ಕಾಯ್ದೆ ಜಾರಿಗೆ ತಂದಿದ್ದು, ಪಾಕಿಸ್ತಾನವನ್ನು ಬಗ್ಗು ಬಡಿದದ್ದು, ಚೀನಾ ತಲೆಯೆತ್ತದಂತೆ ಮಾಡಿದ್ದು, ಎಲ್ಲ ದೇಶಗಳೊಡನೆ ಮಿತೃತ್ವ ಬೆಳೆಸಿದ್ದು, ಗಂಗೆಯನ್ನು ಸ್ವಚ್ಛಗೊಳಿಸಿದ್ದು, ಭ್ರಷ್ಟರ ನಿದ್ದೆಗೆಡಿಸಿದ್ದು, ತುಷ್ಟೀಕರಣ ರಾಜಕಾರಣ ಮಾಡದೇ ಇರುವುದು, ಒಂದು ರಾಜ್ಯಕ್ಕೇ ಸೀಮಿತವಾಗಿದ್ದ ಆರ್ಟಿಕಲ್ 370 ಹಾಗೂ 35A ರದ್ದು ಮಾಡಿದ್ದು, ಉಗ್ರರನ್ನು ಹೊಸಕಿ ಹಾಕುತ್ತಿರುವುದು, ಚೇಲಾಗಳಿಗೆ ಯಾವುದೇ ಪ್ರಶಸ್ತಿಗಳನ್ನು ಕೊಡದೇ ಇರುವುದು, ಕಟ್ಟ ಕಡೆಯ ವ್ಯಕ್ತಿಗೂ ಸನ್ಮಾನ ಸಿಗುವಂತೆ ಮಾಡಿದ್ದು, ಡಿಜಿಟಲ್ ಇಂಡಿಯಾ ಮೂಲಕ ಬಡವರಿಗೆ ನೇರವಾಗಿ ಹಣ ಸಿಗುವಂತೆ ಮಾಡಿದ್ದು, ಮಹಿಳಾ ರಕ್ಷಣೆಗೆ ಕಾಯ್ದೆ ತಂದಿದ್ದು, ನಾಗರಿಕ ಕಾಯ್ದೆ ಜಾರಿಗೆ ತಂದಿದ್ದು….ಒಂದೇ ಎರಡೇ ಈ ಮೋದಿಯ ಅಪರಾಧಗಳು !
ಅವರ ಈ ಆಡಳಿತದಿಂದ ಕೆಲವರಿಗೆ ಉಸಿರಾಡಲೇ ಕಷ್ಟವಾಗುತ್ತಿದೆ. ಇಷ್ಟು ದಿನ ಬಾಲಬಡುಕರಿಗೆ ಪ್ರಶಸ್ತಿಗಳ ರೊಟ್ಟಿ ತುಂಡು ಹಾಕುತ್ತ, ಒಂದು ವರ್ಗದವರ ತುಷ್ಟೀಕರಣ ಮಾಡುತ್ತ, ಎಲ್ಲವನ್ನೂ ಪುಕ್ಕಟ್ಟೆ ಹಂಚಿದಂತೆ ಮಾಡಿ ಅದರಲ್ಲೇ ಹಗರಣಗಳನ್ನು ಮಾಡಿಕೊಂಡು ಹೊಟ್ಟೆ ಮೇಲೆ ಕೈಯಾಡಿಸುತ್ತ ಸುಖವಾಗಿದ್ದವರಿಗೆ ಈ ಮೋದಿಯಿಂದಾಗಿ ಸಂಕಷ್ಟ ಬಂದೊದಗಿತಲ್ಲ ! ಪಾಕಿಸ್ತಾನ, ಚೀನಾವೆಂಬ ಎರಡು ವಿರೋಧಿ ನೆರೆ ದೇಶಗಳು ಏನೇ ಉದ್ಧಟತನ ಮೆರೆದರೂ ತುಪ್ಪ ಸವರಿಕೊಂಡು ಇರುತ್ತಿದ್ದ ಭಾರತವೆಲ್ಲಿ ? ದಾಳಿ ಮಾಡಿದವನ ಮನೆಯೊಳಗೇ ಹೊಕ್ಕು ನಡ ಮುರಿದು ಬರುತ್ತಿರುವ ಇಂದಿನ ಭಾರತವೆಲ್ಲಿ ? ಆದರೂ ಸ್ವದೇಶದ ವಿರಾಟಕ್ಕೆ ಸಾಕ್ಷಿ ಕೇಳುವ ಹೀನ ಮನಸ್ಥಿತಿಯ ವಿರೋಧ ಪಕ್ಷಗಳಿವೆಯೆಂಬುದೇ ಭಾರತಕ್ಕೆ ಇರುವ ಒಂದು ಕಪ್ಪು ಚುಕ್ಕೆ.

- Advertisement -

ಇಲ್ಲಿಯ ಅನ್ನ ತಿಂದು ಪಾಕಿಸ್ತಾನಕ್ಕೆ ಜೈ ಎನ್ನುವ ಜನ ಬೆಳಕೂಡ,,ಳೆ ಪಾಕಿಸ್ತಾನದಲ್ಲಿ ಇದ್ದಿದ್ದರೆ ಬೇರೆ ದೇಶಕ್ಕೆ ಜೈ ಅನ್ನುತ್ತಿದ್ದರೆ? ದೇಶದ ಪ್ರಧಾನಿಯನ್ನು ಹೀನಾಯವಾಗಿ ಬೈಯುತ್ತಿದ್ದರೆ? ಸೈನಿಕರ ಪರಾಕ್ರಮಕ್ಕೆ ಸಾಕ್ಷಿ ಕೇಳುತ್ತಿದ್ದರೆ ? ಆ ದೇಶದ ಬಹುಸಂಖ್ಯಾತರ ವಿರುದ್ಧ ಬಹಿರಂಗವಾಗಿ ಮಾತನಾಡಿ ಬದುಕಿ ಉಳಿಯುತ್ತಿದ್ದರೆ ? ದೇಶವನ್ನು ತುಂಡು ತುಂಡು ಮಾಡುತ್ತೇವೆ ಅಂತ ಬಾಯಿ ಬಡಿದುಕೊಂಡು ಬದುಕುತ್ತಿದ್ದರೆ ?
ಸಾಧ್ಯವೇ ಇಲ್ಲ…..ಅದೆಲ್ಲ ಭಾರತದಲ್ಲಿ ಮಾತ್ರ ಸಾಧ್ಯವಾಗುತ್ತಿದೆ. ಯಾಕೆ ? ದೇಶ ಪ್ರೇಮಿಗಳಿಗಿಲ್ಲಿ ಕಿಮ್ಮತ್ತಿಲ್ಲ. ಅವರನ್ನೇ ಅಪರಾಧಿಗಳಂತೆ ನೋಡಲಾಗುತ್ತಿದೆ ಯಾಕೆ ? ದೇಶ ಹಿತದ ಪ್ರಶ್ನೆ ಬಂದಾಗ ಒಗ್ಗಟ್ಟೇಕೆ ನಮ್ಮಲ್ಲಿ ಸಾಧ್ಯವಾಗುತ್ತಿಲ್ಲ ?

ಉಮೇಶ ಬೆಳಕೂಡ, ಮೂಡಲಗಿ
(‘ ಹೊಸ ದಿಗಂತ ‘ ದಲ್ಲಿ ಪ್ರಕಟಿತ)

- Advertisement -
- Advertisement -

Latest News

ರಾಜ್ಯದ ರಸ್ತೆ ಕಾಮಗಾರಿಗಳು ಸೆ.2024 ರೊಳಗೆ ಪೂರ್ಣ ; ಮೇಲ್ಮನೆಗೆ ಗಡಕರಿ ಉತ್ತರ

ಮೂಡಲಗಿ: ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ 663 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 241 ಕಿ.ಮೀ ಉದ್ದದ 36 ರಾಜ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group