ಲಿಫಾಮೋ ಅಂದರೆ ಇದು ಕೊಬ್ಬಿನಿಂದ ಶೇಖರಣೆಯಾಗುವಂತಹ ಗಡ್ಡೆಯಾಗಿದೆ ಇದು ಕಾಯಿಲೆಯಲ್ಲ. ಬದಲಾಗಿ ನಮ್ಮ ದೇಹದಲ್ಲಿ ಹೆಚ್ಚಾಗಿ ಕೊಬ್ಬು ಸಂಗ್ರಹವಾಗಿ ಚರ್ಮದಲ್ಲಿ, ಕೈ ಕಾಲುಗಳಲ್ಲಿ, ದೇಹದ ಮುಂತಾದ ಭಾಗದಲ್ಲಿ ಈ ಒಂದು ಗಡ್ಡೆ ಶೇಖರಣೆಯಾಗಿ ಗಂಟಿನ ಮಾದರಿಯಲ್ಲಿ ನಮಗೆ ಕಾಣುತ್ತದೆ. ಇದರಿಂದ ಯಾವುದೇ ರೀತಿಯಾದಂತಹ ಅನಾರೋಗ್ಯ ತೊಂದರೆಗಳು ಉಂಟಾಗುವುದಿಲ್ಲ ಆದರೆ ನೋಡುವುದಕ್ಕೆ ಒಂದು ಮಾದರಿಯಲ್ಲಿ ಭಾಸವಾಗುತ್ತದೆ. ಇದರಿಂದ ಯಾವುದೇ ರೀತಿಯಾದಂತಹ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ ಹಾಗಾಗಿ ಇದರ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಇನ್ನೂ ಈ ಒಂದು ಗಡ್ಡೆಗಳು ಯಾಕೆ ಬರುತ್ತದೆ ಎಂಬುದಕ್ಕೆ ನಿಖರವಾದ ಕಾರಣಗಳು ಕೂಡ ದೊರೆತಿಲ್ಲ. ಆದರೂ ಕೂಡ ಕೆಲವೊಂದಷ್ಟು ಮನೆ ಮದ್ದುಗಳನ್ನು ಬಳಸುವುದರಿಂದ ಈ ಒಂದು ಸಮಸ್ಯೆಯಿಂದ ನೀವು ಪಾರಾಗಬಹುದು.
ಆ ವಿಧಾನ ಯಾವುದು ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಇಂದು ನಿಮಗೆ ತಿಳಿಸುತ್ತೇವೆ.
ಮೊದಲಿಗೆ ಒಂದು ಪಾತ್ರೆಗೆ ಎರಡು ಗ್ಲಾಸ್ ನೀರನ್ನು ಹಾಕಿ ಈ ನೀರನ್ನು ಕುದಿಯಲು ಬಿಡಬೇಕು ಮತ್ತೊಂದು ಕಡೆ ಮತ್ತೊಂದು ಬಟ್ಟಲಿಗೆ ಒಂದು ಟೇಬಲ್ ಸ್ಪೂನ್ ಅಲೋವೆರಾ ಜೆಲ್ ಹಾಗೂ ಅರ್ಧ ಟೇಬಲ್ ಸ್ಪೂನ್ ಅರಿಶಿಣದ ಪುಡಿ ಮತ್ತು ಮೂರರಿಂದ ನಾಲ್ಕು ಜಜ್ಜಿದ ಬೆಳ್ಳುಳ್ಳಿಯನ್ನು ಹಾಕಿ ಎಲ್ಲವನ್ನು ಕೂಡ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕುದಿಯುತ್ತಿರುವ ನೀರಿನಲ್ಲಿ ಬಟ್ಟಲಿನ ಸಮೇತ ಈ ಒಂದು ಮಿಶ್ರಣವನ್ನು ಇಟ್ಟು ಡಬಲ್ ಬಾಯಿಲ್ ಮಾಡಿಕೊಳ್ಳಬೇಕು. ಹೀಗೆ ಬಿಸಿ ನೀರಿನಲ್ಲಿ ಆಲೋವೆರ ಜೆಲ್, ಅರಿಶಿನದ ಪುಡಿ ಮತ್ತು ಬೆಳ್ಳುಳ್ಳಿ ಎಲ್ಲವೂ ಕೂಡ ಚೆನ್ನಾಗಿ ಮಿಕ್ಸ್ ಆಗುತ್ತದೆ. ನಂತರ ಈ ಮಿಶ್ರಣವನ್ನು ನಿಮಗೆ ಗಡ್ಡೆ ಇರುವಂತಹ ಜಾಗದ ಮೇಲೆ ಪ್ರತಿನಿತ್ಯ ಹಚ್ಚುತ್ತ ಬರಬೇಕು ಹೀಗೆ ಮಾಡುವುದರಿಂದ ಕ್ರಮೇಣವಾಗಿ ಗಡ್ಡೆ ಕರಗುತ್ತದೆ.
ಸಂಗ್ರಹ : ಕೇಶವ ನಾರಾಯಣ