spot_img
spot_img

ನಕಲಿ ಸಿಡಿ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿ ಹಳ್ಳೂರ ಜಿಪಂ ವ್ಯಾಪ್ತಿಯ ಮುಖಂಡರು, ಗ್ರಾಮಸ್ಥರಿಂದ ಪ್ರತಿಭಟನೆ, ಮನವಿ

Must Read

ಮೂಡಲಗಿ: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರಗೊಂಡ ಸಿಡಿ ನಕಲಿಯದ್ದಾಗಿದೆ ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಸಿಬಿಐಗೆ ಅಥವಾ ಸಿಓಡಿಗೆ ವಹಿಸುವಂತೆ ಶುಕ್ರವಾರದಂದು ಹಳ್ಳೂರ ಜಿ ಪಂ ವ್ಯಾಪ್ತಿಯ ಹಳ್ಳೂರ, ಶಿವಾಪೂರ(ಹ), ಖಾನಟ್ಟಿ, ಮುನ್ಯಾಳ, ರಂಗಾಪೂರ, ಕಮಲದಿನ್ನಿ, ಪಟಗುಂದಿ, ಧರ್ಮಟ್ಟಿ ಮುಖಂಡರು ಹಾಗೂ ಗ್ರಾಮಸ್ಥರು ಪ್ರತಿಭಟನೆ ಮಾಡಿ ನಂತರ ಉಪತಹಶೀಲದಾರ ಎಸ್ ಎ ಬಬಲಿಯವರಿಗೆ ಮನವಿ ನೀಡಿದರು.

ಈ ಸಂದರ್ಭದಲ್ಲಿ ಮುಖಂಡ ಬಿ ಜಿ ಸಂತಿ ಮಾತನಾಡಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಬಗ್ಗೆ ಮಾಧ್ಯಮದಲ್ಲಿ ಬಿತ್ತರಗೊಳ್ಳುತ್ತಿರುವ ಸಿಡಿ ನಕಲಿಯಾಗಿದ್ದು. ರಮೇಶ ಜಾರಕಿಹೊಳಿ ಅವರ ಪ್ರಭಾವವನ್ನು ಕುಗ್ಗಿಸಲು ಅಸ್ಲೀಲ ವಿಡಿಯೋ ಚಿತ್ರಗಳನ್ನು ಎಡಿಟ್ ಮಾಡಿ ರಮೇಶ ಜಾರಕಿಹೊಳಿ ಅವರ ವರ್ಚಸ್ಸಿಗೆ ಮಸಿ ಬಳೆಯಲು ಸಂಚು ಮಾಡಲಾಗಿದೆ ಅವರ ಜನಪ್ರಿಯತೆ ಸಹಿಸದ ವಿರೋದಿಗಳು ಷಡ್ಯಂತ್ರ ರೂಪಿಸಿದ್ದು ಇದು ಸಂಪೂರ್ಣ ನಕಲಿಯಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸಿಡಿ ಬಗ್ಗೆ ಸತ್ಯ ಸಂಗತಿ ಹೊರಬರಬೇಕು, ಆಗ ಮಾತ್ರ ಪ್ರಕರಣದ ಕುರಿತು ನೈಜ ಸಂಗತಿ ಹೊರಬಿಳಲಿದ್ದು ನಕಲಿ ಸಿಡಿ ಬಗ್ಗೆ ಸಮಗ್ರ ತನಿಖೆ ನಡೆಸಿ ಪ್ರಕರಣ ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಿವಿಧ ಗ್ರಾಮಗಳ ಮುಖಂಡರಾದ ಹನಮಂತ ತೇರದಾಳ, ಮಲ್ಲಿಕಾರ್ಜುನ ಕಬ್ಬೂರ, ಶಿವಬಸು ಜುಂಜರವಾಡ,ಕೆಂಪಣ್ಣ ಮುಧೋಳ, ಸಿದ್ದಪ್ಪ ಹಾದಿಮನಿ, ರಮೇಶ ಮೇತ್ರಿ, ಮಾರುತಿ ಮಾವರಕರ, ಸುರೇಶ ಡಬ್ಬನ್ನವರ, ಮಹಾದೇವ ಮಾಸನ್ನವರ, ಪೈಗಂಬರ ಮುಜಾವರ, ಚನಗೌಡ ಪಾಟೀಲ, ಮಹಾದೇವ ಬಡ್ಡಿ, ಲಕ್ಕಪ್ಪ ಹುಚರಡ್ಡಿ, ಮಲ್ಲಪ್ಪ ಹೊಸಟ್ಟಿ ಹಾಗೂ ಅನೇಕ ಮುಖಂಡರು, ಗ್ರಾಮಸ್ಥರು ಇದ್ದರು.

- Advertisement -
- Advertisement -

Latest News

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ...
- Advertisement -

More Articles Like This

- Advertisement -
close
error: Content is protected !!