spot_img
spot_img

ನಮ್ಮ ಭಾರತಿಯ ಜನತಾ ಪಕ್ಷಕ್ಕೆ ಕಾರ್ಯಕರ್ತರೇ ಆಧಾರ ಸ್ತಂಭ – ಆನಂದ ಮಾಮನಿ

Must Read

ಸವದತ್ತಿ: ಮುಂಬರುವ ದಿನಗಳಲ್ಲಿ ಮುಂದಿನ ಚುನಾವಣೆಗಳಲ್ಲಿ ಜಯ ಸಾಧಿಸುವ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು ಕೆಲಸ ಮಾಡಬೇಕು ನಮ್ಮ ಭಾರತಿಯ ಜನತಾ ಪಕ್ಷಕ್ಕೆ ಕಾರ್ಯಕರ್ತರೇ ಆಧಾರ ಸ್ತಂಭ ಮೊನ್ನೆ ನಮ್ಮ ತಾಲೂಕಿನಲ್ಲಿ ನಡೆದಂತಹ ಗ್ರಾಮ ಪಂಚಾಯತ ಚುನಾವಣೆಯಲ್ಲಿ 28.ಗ್ರಾಮ ಪಂಚಾಯಿತಿಗಳಲ್ಲಿ 22 ಗ್ರಾಮ ಪಂಚಾಯಿತಿಗಳು ಭಾರತೀಯ ಜನತಾ ಪಕ್ಷದ ಮಡಿಲಿಗೆ ಬಂದದ್ದು ತಮ್ಮೆಲ್ಲರ ಸಹಕಾರದಿಂದ ಮತ್ತು ಪಕ್ಷದ ಕಾಯಕರ್ತರ ಶ್ರಮದಿಂದ. ದಿ.ಸುರೇಶ ಅಂಗಡಿಯವರ ಸ್ಥಾನ ತೆರವಾದ ನಂತರ ಮುಂದೆ ನಡೆಯುವ ಲೋಕಸಭಾ ಉಪ ಚುನಾವಣೆಯಲ್ಲಿಯೂ ಸಹ ನಾವೆಲ್ಲರೂ ಶ್ರಮವಹಿಸಿ ಕೆಲಸ ಮಾಡಿ ನಮ್ಮ ತಾಲೂಕಿನಲ್ಲಿ ಹೆಚ್ಚಿನ ಮತಗಳ ಅಂತರದಿಂದ ಭಾರತೀಯ ಜನತಾ ಪಕ್ಷ ಗುರುತಿಸಿದಂತಹ ಅಭ್ಯರ್ಥಿಯನ್ನು ನಾವು ಆಯ್ಕೆ ಮಾಡುತ್ತೇವೆ ಎಂದು ಉಪ ಸಭಾದ್ಯಕ್ಷ ಆನಂದ ಮಾಮನಿ ಮಾತನಾಡಿದರು.

ಅವರು ಸ್ಥಳೀಯ ಮಾಮನಿ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಾಲಯದ ಉದ್ಘಾಟನೆ ಮಾಡಿ ಮಾತನಾಡುತ್ತ “ನಾವು ನಮ್ಮ ಭಾರತೀಯ ಜನತಾ ಪಕ್ಷದ ಸಿದ್ದಾಂತ ತಳಹದಿಯ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು, ಮುಂದೆ ನಡೆಯಲಿರುವ ತಾಲೂಕು ಪಂಚಾಯತ ಜಿಲ್ಲಾ ಪಂಚಾಯತ ಚುನಾವಣೆಗಳನ್ನು ಸವಾಲಾಗಿ ಸ್ವೀಕರಿಸಿ ಎದುರಿಸಿ ಜಯ ಸಾಧಿಸೋಣ ಆ ನಿಟ್ಟಿನಲ್ಲಿ ನಮ್ಮ ಪಕ್ಷದ ಕಾರ್ಯಾಲಯವನ್ನು ತೆರೆದು ಪ್ರತಿ ನಿತ್ಯ ಪಕ್ಷದ ಹಿರಿಯರು ಮತ್ತು ಪುರಸಭೆ ಸದಸ್ಯರು ಸರಕಾರದಿಂದ ನಾಮ ನಿರ್ದೆಶನಗೊಂಡ ಸದಸ್ಯರು. ನಮ್ಮ ಪಕ್ಷದ ಮುಖಂಡರು ಒಗ್ಗಟ್ಟನಿಂದ ನಮ್ಮ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡೋಣ.ಪಕ್ಷವನ್ನು ಬೆಳೆಸುವಲ್ಲಿ ಎಲ್ಲರ ಸಹಕಾರ ಬೇಕು. ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಜಗದೀಶ ಶಿಂತ್ರಿ. ಜಗದೀಶ ಕೌಜಗೇರಿ ಮಹಿಳಾ ಮೋರ್ಚಾ ಅದ್ಯಕ್ಷರಾದ ಡಾಕ್ಟರ ನಯನಾ ಭಸ್ಮೇ. ಚಂದ್ರು ಅಳಗೋಡಿ. ಡಾಕ್ಟರ ಶಂಕರಲಿಂಗಪ್ಪ. ಡಾಕ್ಟರ ಹೇಮಂತ ಭಸ್ಮೇ.ಯುವ ಮೋರ್ಚಾ ಅದ್ಯಕ್ಷ ರಾಜು ಸಾಲಿಮಠ. ಭಾರತೀಯ ಜನತಾಪ್ಷದ ಪ್ರಕೋಷ್ಟಗಳ ಮುಖಂಡರು ಹಾಗೂ ಪುರಸಭೆ ಸದಸ್ಯರು ಉಪಸ್ಥಿತರಿದ್ದರು.

ಈರಣ್ಣ ಚಂದರಗಿ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಮಾಡಿದರು.

 

- Advertisement -
- Advertisement -

Latest News

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ...
- Advertisement -

More Articles Like This

- Advertisement -
close
error: Content is protected !!