ಮೂಡಲಗಿ : ಭಾರತೀಯ ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ತವರೂರಿಗೆ ಆಗಮಿಸಿದ ಪಟ್ಟಣದ ಸಂತೋಷ ಅಪ್ಪಾಸಾಬ ಜಾದವ ಯೋಧರನ್ನು ಮೂಡಲಗಿ ಪಿ ಕೆ ಪ್ರುಟ್ ಮಾಟ೯ ವತಿಯಿಂದ ಆತ್ಮಿಯವಾಗಿ ಬರಮಾಡಿ ಕೊಂಡು ಸನ್ಮಾನಿಸಲಾಯಿತು.
ಸೈನಿಕನಾಗಿ ತಂದೆ ತಾಯಿ ಮಕ್ಕಳನ್ನು ಬಿಟ್ಟು ದೇಶ ಸೇವೆ ಮಾಡಿದ್ದಕ್ಕೆ ಈಗ ನಿಜವಾದ ಗೌರವ ಸಿಕ್ಕಿದೆ. ನಾವು ಸೇನೆಯಿಂದ ಮಾತ್ರವೇ ನಿವೃತ್ತಿಯಾಗಿದ್ದು, ದೇಶ ಸೇವೆಗೆ ಸದಾ ಸಿದ್ಧ. ಜಿಲ್ಲೆಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಬೇಕು’ ಎಂದು ನಿವೃತ್ತ ಯೋಧ ಸಂತೋಷ ಜಾದವ ಹೇಳಿದರು.
ಈ ಸಂದರ್ಭದಲ್ಲಿ ಪ್ರಕಾಶ ಕಾಳಪ್ಪಗೋಳ, ಅರ್ಜುನ ಗಾಣಿಗೇರ, ಬಸವರಾಜ ಬಡಿಗೇರ, ಮೋಹನ ಜಾದವ ಅನೇಕರು ಹಾಜರಿದ್ದರು.