ನೀವು ಹೇಳುವ ಹಿಂದುವಿನ ಯಾವ ಲಕ್ಷಣಗಳೂ ನನ್ನಲ್ಲಿಲ್ಲ..

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

ಹಾಗೆ ನೋಡಿದರೆ ನಾನು ಹಿಂದೂ ಅಂತ ಹೇಳಿಕೊಳ್ಳೋದೆ ಇಲ್ಲ. ನಾನು ಹಿಂದೂ ಅಲ್ಲ. ಹಿಂದೂ ಅಂದರೆ ಗಂಗಾ-ಗಾಯತ್ರೀ-ಗೋವು ಇವು ಪವಿತ್ರ ಅಂತ ಭಾವಿಸೋದು. ಗಂಗಾ ಯಾಕೆ ಪವಿತ್ರ? ನಮ್ಮ ಮಲೆನಾಡಿನ ತುಂಗಾ ಕೂಡ ಪವಿತ್ರ ಅಲ್ಲವೇ?

ಗಾಯತ್ರಿ ಒಂದು ಪ್ರಾರ್ಥನೆ ಆದರೆ ನಾನು ಹಾಡೋ ಪದ್ಯಾನೂ ಗಾಯತ್ರೀನೇ ಇನ್ನು ಗೋವು, ಕಡಿಬಾರದು ಅನ್ನೋದಾದ್ರೆ ಅದೊಂದೇ ಪ್ರಾಣೀನಾ? ಬೇರೆ ಪ್ರಾಣಿಗಳೇನು ಪಾಪ ಮಾಡಿದ್ದಾವೆ? ಅವೂ ಅಷ್ಟೇ ಮುಖ್ಯ. ಪೂಜೆ, ಪುನಸ್ಕಾರ, ವಿಧಿ ಇಂಥವುಗಳನ್ನು ಮಾಡೋರು ಹಿಂದುಗಳಾದರೆ, ಇದಾವುದನ್ನೂ ನಾನೂ ಮಾಡೋದಿಲ್ಲ. ನೀವು ಹೇಳುವ ಹಿಂದುವಿನ ಯಾವ ಲಕ್ಷಣಗಳೂ ನನ್ನಲ್ಲಿಲ್ಲ.

-ಕುವೆಂಪು

- Advertisement -

ಪುಸ್ತಕದ ಮಾಹಿತಿ: ಕುವೆಂಪು ಸಮಗ್ರ ಗದ್ಯ, ಇಲ್ಲಿ ವಿಶ್ವಮಾನವನಾಗಿ, ವಿಶ್ವಶಕ್ತಿಯ ಮಗನಾಗಿ, ಭಾರತಾಂಬೆಯ ಕುಡಿಯಾಗಿ ಕನ್ನಡಮ್ಮನೊಳಗಿದ್ದು ಪ್ರಕೃತಿಯ ಸಣ್ಣ ಜೀವವನ್ನೂ ಪ್ರಕೃತಿಯೊಳಗೆ ಗಮನಿಸುವ ಮಹಾತ್ಮರಿಗೆ ಎಲ್ಲಾ ಒಂದೇ ಎನ್ನುವ ಅದ್ವೈತ ತತ್ವದ ಅರಿವಾಗಲು ಸಾಧ್ಯವಿದೆ.

ಕುವೆಂಪು ರವರು ಅಂತಹ ಮಹಾತ್ಮರಾಗಿ ಹಿಂದುಳಿಯದೆ ಹಿಂದೂ ಆಗಿದ್ದರೂ ನಾನೊಬ್ಬ ವಿಶ್ವ ಮಾನವನೆಂಬ ಅರಿವಿನಲ್ಲಿ ಭಾರತದ ಪವಿತ್ರತೆಯನ್ನು ಎತ್ತಿ ಹಿಡಿದಿದ್ದಾರೆ. ಹಾಗೆಯೇ ಸ್ತ್ರೀ ಶಕ್ತಿಗೆ ಹೇಗೆ ಗೌರವಿಸಿದರೆ ಭೂಮಿ, ಭಾರತಮಾತೆ, ಗಾಯತ್ರಿ ಮಾತೆ, ಗಂಗಾಮಾತೆ,ಗೋಮಾತೆಯನ್ನು ಉಳಿಸಿ l ಬೆಳೆಸಬಹುದೆನ್ನುವ ಸಂದೇಶ ಇದರಲ್ಲಿದೆ. ನಾವು ನಮ್ಮವರನ್ನು ದ್ವೇಷ ಮಾಡುತ್ತಾ ನಡೆದರೆ ಸರಿ ಎನ್ನುವುದಾದರೆ ಪರರನ್ನು ದ್ವೇಷ ಮಾಡುವುದೂ ಸರಿ.

ಆದರೆ, ಹಿಂದೂ ಧರ್ಮದ ಪ್ರಕಾರ ಶತ್ರುಗಳನ್ನು ಪ್ರೀತಿಸುವಷ್ಟು ಆಧ್ಯಾತ್ಮ ಶಕ್ತಿ ನಮ್ಮೊಳಗಿದ್ದಾಗಲೆ ಜ್ಞಾನದಿಂದ ಪರಮಾತ್ಮನ ನೋಡಲು ಸಾಧ್ಯವೆನ್ನಬಹುದು.  ಪರರೆಲ್ಲಾ ಮಿತ್ರರಾದರೆ ಸ್ವರ್ಗ
ನಮ್ಮವರೆ ಶತ್ರುಗಳಾದರೆ ನರಕ. “ರವಿ ಕಾಣದ್ದನ್ನು ಕವಿ ಕಾಣುತ್ತಾನೆ” ಎನ್ನುವುದು ಸತ್ಯ. ರವಿ ಇರೋದು ಹೊರಗಿನ ಬೆಳಕಿನಲ್ಲಿ. ಕವಿ ಬರೆಯೋದು ಒಳಗಿನ ಚೈತನ್ಯ ದಿಂದ.

ಸತ್ಯಜ್ಞಾನ ಒಳಗಿದೆ ಮಿಥ್ಯಜ್ಞಾನ ಹೊರಗಿದೆ. ವಿಜ್ಞಾನ ಜಗತ್ತಿನಲ್ಲಿ ಹೊರಗಿನ ದೇಹ ಬೆಳೆಸಿಕೊಂಡು ದೇಹಕ್ಕೆ ಆಹಾರ ಕೊಟ್ಟು ಬೆಳೆದರೆ, ಜ್ಞಾನದ ಜಗತ್ತಿನಲ್ಲಿ ಒಳಗಿನ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಬೇಕಾದ ಸತ್ಯವನ್ನರಿತು ಮಿತವಾದ ಹಿತವಾದ ಆಹಾರ,ವಿಹಾರದಿಂದ ಸಾತ್ವಿಕತೆಯ ಶಿಕ್ಷಣ ಪಡೆದು ಅಮರರಾದರು. ಈಗ ನಾವು ಅಮರರಾದವರ ಹೆಸರಲ್ಲಿ ನಮ್ಮ‌ಹೆಸರು ಬೆಳೆಸಿಕೊಳ್ಳುವ ರಾಜಸ,ತಾಮಸದೆಡೆಗೆ ನಡೆದರೆ ಕವಿ ಕಾಣೋದನ್ನು ಕಾಣಲಾಗದು. ರವಿಯಷ್ಟೆ ಕಾಣಬಹುದು.

ಇದೂ ಅರ್ಧದಿನವಷ್ಟೆ.ಅಂದರೆ ಅರ್ಧಸತ್ಯ ತಿಳಿದರೆ ಅತಂತ್ರ ಜೀವನವಾಗುತ್ತದೆ. ತಿನ್ನುವುದಕ್ಕಾಗಿ ಜೀವನವಲ್ಲ. ತಿಳಿಯುವುದಕ್ಕಾಗಿಯೂ ಜೀವನವಲ್ಲ. ತಿಳಿದುತಿರುಗಿ ನಡೆಯುವುದೇ ಜೀವನ. ಹಿಂದೂ ಧರ್ಮ ಶ್ರೇಷ್ಠ ವಾದದ್ದೆ. ಆದರೆ ಹಿಂದೂಗಳೆಲ್ಲರೂ ಶ್ರೇಷ್ಠ ರೆಂದಲ್ಲ. ಶ್ರೇಷ್ಠ ತೆಗೆ ಬೇಕಿದೆ ಶ್ರೇಷ್ಠ ಸತ್ಯಜ್ಞಾನ.

ಕನಿಷ್ಠ ವಿಚಾರವನ್ನು ಎತ್ತಿ ಹಿಡಿದು ಜೀವನ ನಡೆಸದೆ,ಶ್ರೇಷ್ಠ ವಿಚಾರವನ್ನು ತಿಳಿದು ಜೀವನ ನಡೆಸಿದಾಗಲೆ ಹಿಂದೂಗಳು ಮುನ್ನೆಡೆಯಲು ಸಾಧ್ಯ. ಹಿಂದುಳಿದವರನ್ನು ಉನ್ನತ ವ್ಯಕ್ತಿತ್ವ,ತತ್ವಗಳ ಶಿಕ್ಷಣದಿಂದ ಮೇಲೆ ತರುವ‌ ಬದಲಾಗಿ ಸಾಲ,ಹಣ ,ಅಧಿಕಾರ ನೀಡಿ ಮೇಲೆತ್ತಿ
ನಿಲ್ಲಿಸಿದರೆ, ನಿಲ್ಲಿಸಿ ದವರು ಶಾಶ್ವತವೆ? ಅಥವಾ ಮೇಲೆ ನಿಂತವರು ಶಾಶ್ವತವೆ? ಜೀವ‌ ಮತ್ತೆ ಭೂಮಿ ಮೇಲಿದ್ದೇ ಹೋದರೂ ಜ್ಞಾನವಿಲ್ಲದ ಕಾರಣ ಜನಿಸಿ ಮತ್ತೆ ಸತ್ಯ ತಿಳಿದು ಧರ್ಮ ಕರ್ಮದ ಹಾದಿ ಹಿಡಿಯಲೇಬೇಕೆನ್ನುತ್ತದೆ ಹಿಂದೂ ಧರ್ಮ. ಪರಧರ್ಮ ಇದನ್ನು ಒಪ್ಪದಿದ್ದರೂ ಇದೇ ಸತ್ಯ.

ಭೂಮಿಯಲ್ಲಿ ಮಾತ್ರ ಅನೇಕ ದೇವರು,ಧರ್ಮ,ಜಾತಿ,ಜೀವ ಇರೋದು. ಪರಲೋಕದಲ್ಲಿ ಇದಕ್ಕೆ
ಬೆಲೆಯಿಲ್ಲ.

“ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ”
ಎಲ್ಲರೊಳಗಿರುವ ಪ್ರಾಣ,ಜೀವ ಶಾಶ್ವತವಲ್ಲ. ಹೊರಗಿನಿಂದ ಒಳ ಹಾಕಿಕೊಳ್ಳುವ ಮೊದಲು ಚಿಂತನೆ ನಡೆಸಿದರೆ ಉತ್ತಮ. ಮೂಲ ಪ್ರಾಣಿಗಳಾದರೂ ಪ್ರಕೃತಿಯ ಪರ ಜೀವನ ನಡೆಸುತ್ತವೆ. ಆದರೆ, ಮಾನವ?

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!