spot_img
spot_img

ನ್ಯಾನೋ ಕಥೆ.

Must Read

- Advertisement -

★ ಕಮಲಿ ★

ಮಲ್ಲಿಗೆಪುರ ಒಂದು ಪುಟ್ಟ ಹಳ್ಳಿ. ಅಲ್ಲಿಯ ಮಕ್ಕಳು ಪ್ರತಿದಿನ ಗ್ರಾಮದೇವಿಗೆ ನಮಸ್ಕರಿಸಿ ಶಾಲೆಗೆ ಹೋಗುವುದು ವಾಡಿಕೆ.
ಅದರಂತೆ ಕಮಲಿ ಕೂಡ ದೇವಸ್ಥಾನಕ್ಕೆ ಬಂದಾಗ ಪೂಜಾರಪ್ಪ ಅವಳನ್ನು ಒಳಗೆ ಬಿಡದೆ ಅವಮಾನ ಮಾಡಿದ್ದ.
“ನೀನು ಗುಡಿ ಮೆಟ್ಟಿಲು ಕೂಡ ಮುಟ್ಟಬ್ಯಾಡ ನಡಿ ಇಲ್ಲಿಂದ” ಎಂದು ಗದರಿಸಿ ಕಳಿಸಿದ್ದ.

ಈ ಅವಮಾನದಿಂದ ಅವಳ ಸ್ವಾಭಿಮಾನ ಕೆರಳಿತ್ತು.
ಕಾಲವು ಯಾರಿಗಾಗಿಯೂ ಕಾಯುವುದಿಲ್ಲ. ತನ್ನ ಪರಿಶ್ರಮದಿಂದ ಚೆನ್ನಾಗಿ ಓದಿ,ಕಮಲಿ ಈಗ ಜಿಲ್ಲಾಧಿಕಾರಿ ಕಮಲಿಯಾಗಿದ್ದಳು . ಮಲ್ಲಿಗೆಪುರದ ದೇವಿ ಜಾತ್ರೆಯಲ್ಲಿ ಪ್ರಾಣಿಬಲಿ ತಡೆಯುವ ಸರಕಾರದ ಆದೇಶವನ್ನು ಹೊತ್ತು ಕೆಂಪು ಗೂಟದ ಕಾರು ದೇವಸ್ಥಾನದ ಮುಂದೆ ನಿಂತಾಗ ಅದರಿಂದ ಇಳಿದ ಸಾಹೇಬರನ್ನು ನೋಡಿ ಪೂಜಾರಪ್ಪ ಅವಕ್ಕಾದ.

ಮೀನಾಕ್ಷಿ ಸೂಜಿ, ದೇವಗಾಂವ

- Advertisement -
- Advertisement -

Latest News

ವಿದ್ಯಾರ್ಜನೆ ಯಾತಕ್ಕಾಗಿ?

ತಾವು ಕಲಿತು ಆರoಕಿ ಸಂಬಳ ಗಿಟ್ಟಿಸುವ ಕೆಲಸಕ್ಕೆ ಅರ್ಹತೆ ಪಡೆದಿಲ್ಲ. ತನ್ನ ಮಕ್ಕಳು ಪ್ರಾರಂಭದಲ್ಲಿಯೇ ಆರoಕೆ ಸಂಬಳ ಗಿಟ್ಟಿಸುವಾಗ ಯಾವ ಹೆತ್ತವರು ಬೀಗುವುದಿಲ್ಲ ಹೇಳಿ...ಈಗಿನ ದಿನಗಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group