spot_img
spot_img

ಪಂಚಮಸಾಲಿ ಸಮಾಜ ಬಾಂಧವರಿಂದ 2 ಎ ಮಿಸಲಾತಿ ಕೋರಿ ತಹಶೀಲದಾರ ಮೂಲಕ ರಾಜ್ಯಪಾಲರಿಗೆ ಮನವಿ

Must Read

ಮೂಡಲಗಿ : ಕರ್ನಾಟಕ ರಾಜ್ಯದಲ್ಲಿ ಕೃಷಿ ಕೂಲಿಕಾರರಾಗಿರುವ ಲಿಂಗಾಯತ ಪಂಚಮಸಾಲಿ ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಔದ್ಯೋಗಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ ಎಂದು ಮೂಡಲಗಿ ತಾಲೂಕಾ ಪಂಚಮಸಾಲಿ ಲಿಂಗಾಯತ ಅಭಿವೃದ್ದಿ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಹೇಳಿದರು.

ಗುರುವಾರದಂದು ಪಂಚಮಸಾಲಿ ಸಮಾಜ ಬಾಂಧವರು ರಾಜ್ಯ ಸರ್ಕಾರದ 2ಎ ಹಾಗೂ ಲಿಂಗಾಯತ ಬಡ ಸಮಾಜಗಳಿಗೆ ಕೇಂದ್ರ ಒಬಿಸಿ ಮೀಸಲಾತಿಗಾಗಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಒತ್ತಾಯಿಸಿ ತಹಶೀಲ್ದಾರ ಡಿ ಜೆ ಮಹಾತ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, 26 ವರ್ಷಗಳಿಂದಲೂ ಸರ್ಕಾರಕ್ಕೆ ಮನವಿ ಮಾಡುತ್ತಾ ಬಂದಿದ್ದರೂ ಕೂಡಾ ಯಾವುದೇ ಸರ್ಕಾರಗಳು ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲಸಂಗಮದಿಂದ ಬಸವ ಮೃತ್ಯುಂಜಯ ಸ್ವಾಮೀಜಿಯವರು ಬೆಂಗಳೂರಿನವರೆಗೂ ಪಂಚಲಕ್ಷ ಹೆಜ್ಜೆಗಳ ಐತಿಹಾಸಿಕ ಬೃಹತ್ ಪಾದಯಾತ್ರೆಯನ್ನು ಮಾಡಿ, ಅರಮನೆ ಮೈದಾನದಲ್ಲಿ ಪಂಚಮಸಾಲಿ ಒಗ್ಗಟ್ಟಿನ ಶಕ್ತಿ ದರ್ಶನವನ್ನು ಯಶಸ್ವಿಗೈದು ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲಾಯಿತು. ಆದರೂ ಸರ್ಕಾರ ಸ್ಟಷ್ಟವಾದ ಸ್ಪಂದನೆ ನೀಡಿಲ್ಲ. ಜಗದ್ಗುರುಗಳು ಹಾಗೂ ಸಮಾಜದ ಗಣ್ಯರು ಧರಣಿ ಸತ್ಯಾಗ್ರಹವನ್ನು ಕೈಗೊಂಡಿದ್ದಾರೆ ಎಂದು ಹೇಳಿದರು.

ಶೀಘ್ರವಾಗಿ ರಾಜ್ಯಪಾಲರು 2ಎ ಪಟ್ಟಿಗೆ ಸೇರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ರಾಜ್ಯದ ಪಂಚಮಸಾಲಿ ಸಮಾಜದ ಪರವಾಗಿ ಮನವಿ ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ.

ಪಂಚಮಸಾಲಿ ಸಮಾಜದ ಬಾಂಧವರಿಗೆ ಹಾಗೂ ಅವರ ಮಕ್ಕಳ ಭವಿಷ್ಯಕ್ಕಾಗಿ 2ಎ ಮೀಸಲಾತಿಯನ್ನು ನೀಡುವಂತೆ ಸರ್ಕಾರಕ್ಕೆ ಯುವ ಮುಖಂಡ ಈಶ್ವರ ಢವಳೇಶ್ವರ ಪತ್ರ ಚಳುವಳಿಗೆ ಚಾಲನೆ ನೀಡುವುದರ ಜೊತೆಗೆ ವಿದ್ಯಾರ್ಥಿಗಳು ಸಹ ಪತ್ರ ಬರೆಯುವ ಮೂಲಕ ಪತ್ರ ಚಳವಳಿಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಪಂಚಮಸಾಲಿ ಸ್ವಾಮೀಜಿಗಳ ಆದೇಶದಂತೆ ಪತ್ರ ಚಳವಳಿ ಮೂಲಕ ಸರ್ಕಾರಕ್ಕೆ ಮೀಸಲಾತಿಯನ್ನು ನೀಡುವಂತೆ ಒತ್ತಾಯಿಸಿ ತಾಲೂಕಿನ ಎಲ್ಲ ಗ್ರಾಮಗಳ ಬಾಂಧವರಿಂದ ಪತ್ರ ಬರೆಯಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಂಚಮಸಾಲಿ ಮುಖಂಡರಾದ ನಿಂಗಪ್ಪ ಪಿರೋಜಿ, ಶ್ರೀಶೈಲ ಬಳಿಗಾರ,ಸಿದ್ದು ಗೋಕಾಕ, ಮಹಾದೇವ ಶೆಕ್ಕಿ, ಮಹಾಂತೇಶ ಕುಡಚಿ, ಗಿರೀಶ ಢವಳೇಶ್ವರ, ಮದನ ದಾನನ್ನವರ, ಯುವ ಮುಖಂಡ ಈಶ್ವರ ಢವಳೇಶ್ವರ, ಮಲ್ಲಪ್ಪ ಹಂಚಿನಾಳ, ರಮೇಶ ಶೆಕ್ಕಿ, ನಾಗರಾಜ ಬಾಗೋಜಿ ಇನ್ನಿತರರು ಇದ್ದರು.

- Advertisement -
- Advertisement -

Latest News

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ...
- Advertisement -

More Articles Like This

- Advertisement -
close
error: Content is protected !!