ಪಟ್ಟಣಶೆಟ್ಟಿಗೆ ತನು ಕನ್ನಡ, ಮನ ಕನ್ನಡ ಪ್ರಶಸ್ತಿ

Must Read

ಸಿಂದಗಿ – ವಿಜಯಪುರದ ತನು ಫೌಂಡೇಶನ್ ಕೊಡ ಮಾಡುವ ರಾಜ್ಯಮಟ್ಟದ ತನು ಕನ್ನಡ ಮನ ಕನ್ನಡ ರಾಜ್ಯ ಪ್ರಶಸ್ತಿಗೆ ಪಟ್ಟಣದ ಸಾಮಾಜಿಕ ಹೋರಾಟಗಾರ
ಮುತ್ತು ಪಟ್ಟಣಶೆಟ್ಟಿ ಆಯ್ಕೆಯಾಗಿದ್ದಾರೆ.

ಇದೇ ಡಿಸೆಂಬರ್ 15 ರಂದು ಸಂಜೆ 4 ಗಂಟೆಗೆ ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರವೇರಲಿದೆ.

ಈ ವೇಳೆ ಲೇಖಕ ಮಂಜುನಾಥ್ ಜುನಗೊಂಡ ವಿರಚಿತ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ನೆರವೇರಲಿದೆ.
ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ಮುತ್ತು ಪಟ್ನಶೆಟ್ಟಿಯವರಿಗೆ ಶಾಸಕ ಅಶೋಕ ಮನಗೂಳಿ, ಗುತ್ತಿಗೆದಾರ ಮುತ್ತು ಮುಂಡೇವಾಡಗಿ ಮತ್ತು ಅವ್ವ ಫೌಂಡೇಶನ್, ರಾಗ ರಂಜಿನಿ ಸಂಗೀತ ಅಕಾಡೆಮಿ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Latest News

ತಾಲೂಕಿನ ಜನರಿಗೆ ನ್ಯಾಯ ದೊರಕಿಸಲು ಅನುಕೂಲ – ನ್ಯಾ. ಮೂ. ಮುದಗಲ್ಲ

ಮೂಡಲಗಿ: -ಪಟ್ಟಣದಲ್ಲಿ ಹೊಸದಾಗಿ ನ್ಯಾಯಾಲಯ ಪ್ರಾರಂಭ ಆಗುವುದರಿಂದ ತಾಲೂಕಿನಲ್ಲಿರುವ ಜನರಿಗೆ ನ್ಯಾಯ ದೊರಕಿಸಿಕೊಳ್ಳಲು ಸಹಕಾರಿಯಾಗುವುದು ಎಂದು ಕರ್ನಾಟಕ ಉಚ್ಛ ನ್ಯಾಯಾಲಯ ಹಾಗೂ ಬೆಳಗಾವಿ ಜಿಲ್ಲಾ ನ್ಯಾಯಾಲಯದ...

More Articles Like This

error: Content is protected !!
Join WhatsApp Group