- Advertisement -
ತುಮಕೂರು: ಕಲ್ಪತರು ನಾಡು ತುಮಕೂರಿನಲ್ಲಿ ನಡೆದ 39ನೇ ಪತ್ರಕರ್ತರ ರಾಜ್ಯಮಟ್ಟದ ಸಮ್ಮೇಳನವು ಯಶಸ್ವಿಯಾಗಿ ನಡೆದಿದ್ದು ಈ ಸಮ್ಮೇಳನಕ್ಕೆ ಮತ್ತಷ್ಟು ಮೆರುಗನ್ನು ವಿಶೇಷವಾಗಿ ನೀಡಿದ ವಸ್ತು ಪ್ರದರ್ಶನವು ಸಮ್ಮೇಳನದ ಎಲ್ಲಾ ಪ್ರತಿನಿಧಿಗಳ, ಪತ್ರಕರ್ತರ, ಮೆಚ್ಚುಗೆಗೆ ಪಾತ್ರವಾಯಿತು.
ಇದಕ್ಕೆ ಸಹಕರಿಸಿ ರಾಜ್ಯ ಸಮೇಳನದ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದವರಿಗೆ ಪ್ರಶಂಸಾ ಪ್ರಮಾಣ ಪತ್ರವನ್ನು 39ನೇ ರಾಜ್ಯ ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕರಾದ ಟಿ.ಇ . ರಘುರಾಮ್ ರವರು ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಸಮಿತಿಯ ಸದಸ್ಯರಾದ ಕುಣಿಗಲ್ ಸಿದ್ದಲಿಂಗಸ್ವಾಮಿ, ಹೊಸ ಪ್ರದರ್ಶನ ಸಮಿತಿ ಅಧ್ಯಕ್ಷರಾದ ತಿಪಟೂರು ಕೃಷ್ಣನವರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.