‘ಪಾರಿಜಾತವು ಜಾನಪದ ಕಲೆಗಳ ಮುಕುಟವಾಗಿದೆ’ – ಸಾಹಿತಿ ಬಾಲಶೇಖರ ಬಂದಿ

Must Read

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...

ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ಮುಖಂಡರ ಮತಯಾಚನೆ

ಸಿಂದಗಿ: ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ನಾಯಕರು ಯರಗಲ್, ಗಬಸಾವಳಗಿ, ಮೋರಟಗಿ, ಬಗಲೂರ ಗ್ರಾಮ...

ರಾಜಕೀಯ ದ್ವೇಷ; ಮಾಜಿ ಪಟ್ಟಣ ಪಂಚಾಯಿತಿಯ ಸದಸ್ಯನ ಭೀಕರ ಹತ್ಯೆ

ಸಿಂದಗಿ: ನೂತನ ತಾಲೂಕು ಆಲಮೇಲ ಪಟ್ಟಣದ ಗಣೇಶ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ರಾತ್ರಿ 1.30 ಗಂಟೆಯ ಸುಮಾರಿಗೆ ಮಾಜಿ ಪಟ್ಟಣ ಪಂಚಾಯತಿ...

ಕುಲಗೋಡ (ಮೂಡಲಗಿ): ‘ಶ್ರೀಕೃಷ್ಣ ಪಾರಿಜಾತವು ಜಾನಪದ ಕಲೆಗಳ ಮುಕುಟವಾಗಿದ್ದು, ಪಾರಿಜಾತ ಕಲೆಯ ರಕ್ಷಣೆಗಾಗಿ ಸಾಂಸ್ಕೃತಿಕ ವಲಯದೊಂದಿಗೆ ಎಲ್ಲರ ಸಮಷ್ಟಿ ಬದ್ಧತೆ ಅವಶ್ಯವಿದೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.

ಕುಲಗೋಡದ ಬಲಭೀಮ ದೇವರ ಮರುಕಾರ್ತಿಕೋತ್ಸವ ಅಂಗವಾಗಿ ಕುಲಗೋಡ ತಮ್ಮಣ್ಣ ಪ್ರತಿಷ್ಠಾನದಿಂದ ಏರ್ಪಡಿಸಿದ್ದ ‘ಪಾರಿಜಾತ ವೈಭವ-2021’ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸಾಂಸ್ಕೃತಿಕ ಕಾರ್ಯಗಳನ್ನು ಮಾಡಲು ಇಚ್ಛಾಶಕ್ತಿ ಇದ್ದರೆ ಖಂಡಿತ ನೆರವೇರುತ್ತವೆ ಎಂದರು.

ಪಾರಿಜಾತ ಪಿತಾಮಹ ಎನಿಸಿಕೊಂಡಿರುವ ಕುಲಗೋಡ ತಮ್ಮಣ್ಣನ ಹೆಸರಿನಲ್ಲಿ ಪಾರಿಜಾತ ಕಲೆ ಸೇರಿದಂತೆ ಜಾನಪದ ಕಲೆಗಳ ತರಬೇತಿ ಕೇಂದ್ರ ಸ್ಥಾಪಿಸುವ ಬಹುದಿನಗಳ ಬೇಡಿಕೆಯಾಗಿದೆ. ಇದು ಕೇವಲ ಚರ್ಚೆಯಾಗಿ ಉಳಿಯುತ್ತಿದ್ದು, ಕಾರ್ಯರೂಪಕ್ಕೆ ತರಲಿಕ್ಕೆ ಎಲ್ಲರೂ ಬದ್ಧರಾಗಬೇಕಾಗಿದೆ ಎಂದರು.

ಜಾನಪದ ಸಾಹಿತ್ಯ ಮತ್ತು ಕಲೆಗಳ ರೂಪದಲ್ಲಿ ಮಾನವೀಯತೆ ಉಳಿದುಕೊಂಡಿದೆ.

ಆಧುನಿಕತೆ ಒತ್ತಡಕ್ಕೆ ಎಲ್ಲವನ್ನು ಕಳೆದುಕೊಳ್ಳುತ್ತಿದ್ದೇವೆ. ಜಾನಪದ ಕಲೆಗಳನ್ನು ರಕ್ಷಿಸುವ ಮೂಲಕ ದೇಸಿ ಸಂಸ್ಕೃತಿಯನ್ನು ಬೆಳೆಸುವುದು ಅವಶ್ಯವಿದೆ ಎಂದರು.

ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಗ್ರಾಮ ಪಂಚಾಯ್ತಿ ಸದಸ್ಯ ಸತೀಶ ಒಂಟಗೋಡಿ, ಜಿಲ್ಲಾ ಪಂಚಾಯ್ತಿ ಸದಸ್ಯ ಗೋವಿಂದ ಕೊಪ್ಪದ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ, ಡಾ. ಭೀಮಶಿ ಪತ್ತಾರ ಅವರು ಮಾತನಾಡಿ ಪಕ್ಷಾತೀತವಾಗಿ ಎಲ್ಲರೂ ಒಗ್ಗಟ್ಟಾಗಿ ಕುಲಗೋಡ ತಮ್ಮಣ್ಣನ ಹೆಸರಿನಲ್ಲಿ ಶಾಶ್ವತ ಕಾರ್ಯಕ್ಕಾಗಿ ಸರ್ಕಾರಕ್ಕೆ ಒತ್ತಾಯಿಸೋಣ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ.ಬಿ. ಕುದರಿ ಮಾತನಾಡಿ 2022ರ ಪಾರಿಜಾತ ವೈಭವ ಸಂಭ್ರಮದಲ್ಲಿ ಕುಲಗೋಡ ತಮ್ಮಣ್ಣನ ಪ್ರತಿಷ್ಠಾನ ಸ್ಥಾಪನೆಯಾಗಿ, ಅದರ ಎಲ್ಲ ಸಾಧ್ಯತೆಗಳು ಈಡೇರಲಿ. ಅದು ಕಾರ್ಯರೂಪಕ್ಕೆ ಬರುವಲ್ಲಿ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದರು.

ಪ್ರತಿಷ್ಠಾನದ ಅಧ್ಯಕ್ಷ ರಮೇಶ ಕೌಜಲಗಿ ಪ್ರಾಸ್ತಾವಿಕ ಮಾತನಾಡಿ, ಕುಲಗೋಡ ತಮ್ಮಣ್ಣ ಪಾರಿಜಾತ ವೈಭವ ಕಾರ್ಯಕ್ರಮಕ್ಕೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ಡಾ. ಬಿ.ವಿ. ದೇವರ ಹಾಗೂ ಗ್ರಾಮದ ಎಲ್ಲ ಮುಖಂಡರ ಪೋತ್ಸಾಹವು ಶ್ಲಾಘನೀಯವಾಗಿದೆ, ಇದು ಹೀಗೆ ಮುಂದುವರಿಯಲಿ ಎಂದರು.

ಅತಿಥಿಗಳಾದ ನಿವೃತ್ತ ಶಿಕ್ಷಕ ಎಂ.ಎಂ. ಯಲಿಗಾರ, ನಿವೃತ್ತ ಕೃಷಿ ಅಧಿಕಾರಿ ಬಿ.ಜಿ. ನೇಸರಗಿ ಮಾತನಾಡಿದರು.

ಗ್ರಾಮದ ಪ್ರಮುಖರಾದ ಶ್ರೀಕಾಂತ ನಾಯಿಕ, ಸುಭಾಷ ಒಂಟಗೋಡಿ, ಸುಭಾಷ ಕೌಜಲಗಿ, ಶಿವನಗೌಡ ಪಾಟೀಲ, ಪ್ರೊ. ಸೂರ್ಯಕಾಂತ ಬೀಸನಕೊಪ್ಪ, ಸುಭಾಷ ಉಮರಾಣಿ, ಬಸವರಾಜ ದೇವರ, ಕಲ್ಲಪ್ಪ ಬಾಗಿಮನಿ, ಶ್ರೀಪತಿ ಗಣಿ, ರಾಮಣ್ಣ ಭೈರನಟ್ಟಿ, ತಮ್ಮಣ್ಣ ದೇವರ, ಹೆಸ್ಕಾಂ ಶಾಖಾಧಿಕಾರಿ ಶ್ರೀಧರ ಯಲಿಗಾರ, ಮಾರುತಿ ಬಾಗಿಮನಿ, ಅಲ್ಲಪ್ಪ ಪರುಶೆಟ್ಟಿ, ಶಂಕರ ಹಾದಿಮನಿ, ಲಂಕಣ್ಣ ಒಂಟಗೋಡಿ, ಪ್ರವೀಣ ಸೋಮಕ್ಕಣ್ಣವರ, ಹನಮಂತ ಕೊಪ್ಪದ, ಬಸವರಾಜ ಕೊಪ್ಪದ, ಭೀಮಶಿ ಬಿರಾದಾರ, ಸಂತೋಷ ದೇವರ, ರಾಮಣ್ಣ ಲಕ್ಷ್ಮೇಶ್ವರ, ಶ್ರೀಶೈಲ್ ಇಟ್ನಾಳ, ಈರಪ್ಪ ಚಂದರಗಿ, ರೇವಪ್ಪ ಒಡೆಯರ, ಲಕ್ಷ್ಮಣ ಭಜಂತ್ರಿ, ಹನಮಂತ ಮೂಡಲಗಿ, ಸಂಜು ದೇವರ, ಮೂಲಂಗಿ ಬಡಿಗೆಪ್ಪ, ಬಸವರಾಜ ಮುನ್ಯಾಳ ಭಾಗವಹಿಸಿದ್ದರು.

ಗೋಕಾಕದ ಶ್ರೀ ಸರ್ವೇಶ್ವರ ಜಾನಪದ ಕಲಾ ಬಳಗದ ಶ್ರೀಕೃಷ್ಣ ಪಾರಿಜಾತ ಬಯಲಾಟವು ಪ್ರದರ್ಶನಗೊಂಡಿತು.

ರವಿರಾಜ ತಿಪ್ಪಿಮನಿ ನಿರೂಪಿಸಿದರು, ಎಲ್.ಆರ್. ಪೂಜೇರಿ ವಂದಿಸಿದರು.

- Advertisement -
- Advertisement -

Latest News

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...
- Advertisement -

More Articles Like This

- Advertisement -
close
error: Content is protected !!