ಮೈಸೂರು – ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ನವಿಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ ಶೋಭಾರವರು ಎಂದಿನಂತೆ ಶಾಲೆಗೆ ತೆರಳಲು ಬಸ್ ಹತ್ತಲು ಸಬರ್ಬನ್ ಬಸ್ ಸ್ಟ್ಯಾಂಡ್ ಗೆ ತೆರಳುವ ಸಂದರ್ಭದಲ್ಲಿ ಪೀಪಲ್ಸ್ ಪಾರ್ಕ್ ಬಳಿ ಗರ್ಭಿಣಿ ಮಹಿಳೆಯು ಪ್ರಸವದ ನೋವು ತಡೆಯಲಾರದೆ ಚೀರಾಡುತ್ತಿದ್ದಳು.
ಅದನ್ನ ಕಂಡ ಸುತ್ತಮುತ್ತಲು ಇದ್ದ ಪುರುಷರು ಯಾರಾದರು ಹೆಣ್ಣು ಮಕ್ಕಳು ಬಂದು ಗರ್ಭಿಣಿ ಸ್ತ್ರೀಗೆ ಸಹಾಯ ಮಾಡುವಂತೆ ಕೋರಿದರು. ಆಗ ದೈಹಿಕ ಶಿಕ್ಷಕರಾದ ಶೋಭ ಮೇಡಂರವರು ಗರ್ಭಿಣಿ ಸ್ತ್ರೀಗೆ ಪ್ರಸವ ಮಾಡಿಸಲು ಸಹಕರಿಸಿ ಎರಡು ಹೆಣ್ಣು ಜೀವದ ರಕ್ಷಣೆಯನ್ನು ಮಾಡಿ ಮಾನವೀಯತೆಯನ್ನು ಮೆರೆದಿದ್ದಾರೆ.
ಇದಕ್ಕೆ ಜಿಲ್ಲಾ ಶಿಕ್ಷಕರ ಸಂಘದಿಂದ ಶೋಭ ಮೇಡಂ ರವರಿಗೆ ಸನ್ಮಾನಿಸಿ ಅವರ ಮಾನವೀಯ ಮೌಲ್ಯವು ನಮ್ಮ ಶಿಕ್ಷಣ ಇಲಾಖೆಗೆ ಮಾದರಿಯಾಗಿದೆ ಎಂದು ಶುಭ ಹಾರೈಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಸೋಮೇಗೌಡರು,ಖಚಾಂಜಿ ಗಳಾದ ಮಹದೇವ್,ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಮಾಲಿಂಗಿ ಸುರೇಶ್,ಸಂಘಟನಾ ಕಾರ್ಯದರ್ಶಿಗಳಾದ ರೇವಣ್ಣ, ಶಾಸಕರ ಆಪ್ತ ಸಹಾಯಕರಾದ ಮಂಜುನಾಥ್, ದೈಹಿಕ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷರಾದ ನಾಗರಾಜು,ಬಿ ಆರ್ ಪಿ ಗಳಾದ ಶ್ರೀಕಂಠ ಶಾಸ್ತ್ರಿ,ಅಂಕೇಶ್,ಸಿ ಆರ್ ಪಿ ಗಳಾದ ವೀಣಾಶ್ರೀ ,ಶಿಕ್ಷಕರಾದ ಆಶಾ ಬಾಯಿ,ಅನ್ನಪೂರ್ಣ ನಗರಪಾಲಿಕೆ ಸದಸ್ಯರಾದ ಛಾಯ ರವರುಗಳು ಹಾಜರಿದ್ದರು.