ಸವದತ್ತಿ: ‘ಸರಕಾರದ ಆದೇಶದ ಪ್ರಕಾರ ಆಸ್ತಿ ತೆರಿಗೆ ಹೆಚ್ಚಿಸಬೇಕಾದರೆ ಪುರಸಭೆಯ ಎಲ್ಲ ಸದಸ್ಯರ ಅಬಿಪ್ರಾಯ ಪಡೆದು ಹೆಚ್ಚಿಸಿರಿ ಮತ್ತು ಆಸ್ತಿ ತೆರಿಗೆ ಹೆಚ್ಚಿಸಬೇಕಾದರೆ ಅಕ್ಕ ಪಕ್ಕದ ತಾಲೂಕುಗಳಲ್ಲಿ ಯಾವ ರೀತಿ ಯಾವ ಆಧಾರದ ಮೇಲೆ ಹೆಚ್ಚಿಸಿದ್ದಾರೆ ಎಂಬುದನ್ನು ನೋಡಿ ಮತ್ತು ಸವದತ್ತಿ ಪುರಸಭೆಯ ಎಲ್ಲ ಸದಸ್ಯರ ಅಭಿಪ್ರಾಯ ಪಡೆದು ಹೆಚ್ಚಿಸಿರಿ’ ಎಂದು ವಿಧಾನ ಸಭಾ ಉಪ ಸಭಾದ್ಯಕ್ಷರಾದ ಆನಂದ ಮಾಮನಿಯವರು ಮಾತನಾಡಿದರು.
ಅವರು ಸ್ಥಳೀಯ ಪುರಸಭೆಯ ಸಭಾಭವನದಲ್ಲಿ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು ‘2021 -22 ನೇ ಸಾಲಿನಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆಯನ್ನು ಅನುಷ್ಠಾನ ಗೊಳಿಸುವಲ್ಲಿ ಎಲ್ಲರ ಒಪ್ಪಿಗೆ ಪಡೆದು ಮಾಡಿರಿ. ಮತ್ತು ಬೇಸಿಗೆ ಪ್ರಾರಂಭವಾಗಿದ್ದು ವಾಟರಮನ್‍ಗಳು ಸರಿಯಾಗಿ ನೀರು ಬಿಡಬೇಕು ಪಟ್ಟಣದಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಿರಿ ಮತ್ತು ಕೆಲವು ವಾರ್ಡಗಳಲ್ಲಿ ನೀರು ಸಾಕಷ್ಟು ಪೋಲಾಗುತ್ತಿದೆ ನೀರು ವಿನಾಕಾರಣ ಹರಿದು ಹೋಗದಂತೆ ನೋಡಿಕೋಳ್ಳಬೇಕು. ವಾಟರಮನ್‍ಗಳನ್ನು ಬೇರೆ ಬೇರೆ ವಾರ್ಡಗಳಿಗೆ ಬದಲಾಯಿಸಬೇಕು. ಮತ್ತು ಸ್ವಚ್ಚತೆಗೆ ಹೆಚ್ಚಿನ ಗಮನಕೊಟ್ಟು ಕಾರ್ಯ ನಿರ್ವಹಿಸಬೇಕು ಮಾಸ್ಟರಪ್ಲಾನ ಪ್ರೊಜೆಕ್ಟ ತಯಾರಿಸಿ’ ಎಂದು ಅಧಿಕಾರಿಗಳಿಗೆ ಹೇಳಿದರು.
ಸಭೆಯಲ್ಲಿ ಪುರಸಭೆ ಅಧ್ಯಕ್ಷ ರಾಜಶೇಖರ ಕಾರದಗಿ.ಪುರಸಭೆ ಮುಖ್ಯಾಧಿಕಾರಿ ಪಿ ಎಮ್ ಚನ್ನಪ್ಪನವರ ಮತ್ತು ಪುರಸಭೆಯ ಎಲ್ಲ ಸದಸ್ಯರು ಮತ್ತು ನಾಮನಿರ್ದೇಶಿತ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.