ಪುಸ್ತಕ ಪರಿಚಯ: ಗಾಂಧೀಜಿ ಜಾಡಿನಲ್ಲಿ ನೌಖಾಲಿಗೊಂದು ಮರುಯಾತ್ರೆ

Must Read

ಲೇಖಕಿ ಜಯಶ್ರೀ ಅಬ್ಬಿಗೇರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯ ಗರಿ

ಬೆಳಗಾವಿ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜನೀಯರಿಂಗ್ ಪ್ರತಿಷ್ಠಾನ ಟ್ರಸ್ಟ ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಸ.ಪ.ಪೂ.ಕಾಲೇಜು ಹಿರೇಬಾಗೇವಾಡಿಯ ಉಪನ್ಯಾಸಕಿ, ಲೇಖಕಿ, ಅಂಕಣಕಾರ್ತಿ ಜಯಶ್ರೀ...

ಮಲ್ಲಪ್ಪ ಕಂಕಣವಾಡಿ ಅವರಿಗೆ ಪಿಎಚ್‍ಡಿ

ಮೂಡಲಗಿ: ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಮಲ್ಲಪ್ಪ ಕೆಂಚಪ್ಪ ಕಂಕಣವಾಡಿ ಅವರು ದೈಹಿಕ ಶಿಕ್ಷಣ ವಿಷಯದಲ್ಲಿ ಡಾ: ಹೆಚ್.ಎಸ್.ಜಂಗೆ ಅವರ...

ಪೋಸ್ಟ್ ಕಾರ್ಡಗಳಲ್ಲಿ ಪ್ರಧಾನಿಗೆ ಶುಭಾಶಯ

ಸಿಂದಗಿ: ಭಾರತೀಯ ಜನತಾ ಪಾರ್ಟಿ ಸಿಂದಗಿ ಮಂಡಲ ವತಿಯಿಂದ ನಗರದ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ವಿಶ್ವ ನಾಯಕ ನಮ್ಮ ಭಾರತದ ಹೆಮ್ಮೆಯ ಪ್ರಧಾನಮಂತ್ರಿ ಮೋದೀಜಿ...

ಪುಸ್ತಕದ ಹೆಸರು : ಗಾಂಧೀಜಿ ಜಾಡಿನಲ್ಲಿ ನೌಖಾಲಿಗೊಂದು ಮರುಯಾತ್ರೆ

ಲೇಖಕರು : ಆಗುಂಬೆ ಎಸ್. ನಟರಾಜ್
ಪುಟ : 304 ಬೆಲೆ “ 300/-
ಪ್ರಕಾಶಕರು : ಹಂಸ ಪ್ರಕಾಶನ ಬೆಂಗಳೂರು -40
ರಕ್ಷಾ ಪುಟ ವಿನ್ಯಾಸ : ನಾರಾಯಣ್ ಮೊದಲ ಮುದ್ರಣ 2015

“ಗಾಂಧೀಜಿ ಜಾಡಿನಲ್ಲಿ ನೌಖಾಲಿಗೊಂದು ಮರುಯಾತ್ರೆ” ಪುಸ್ತಕದಲ್ಲಿ ಒಟ್ಟು ಎರಡು ಭಾಗಗಳಿದ್ದು, ಭಾಗ 1 ರಲ್ಲಿ 8 ಅಧ್ಯಾಯಗಳು, ಭಾಗ 2 ರಲ್ಲಿ 29 ಅಧ್ಯಾಯಗಳು ಇವೆ. ಸದರಿ ಪುಸ್ತಕದಲ್ಲಿ ಹಿಂದೂಗಳ ಹತ್ಯಾಕಾಂಡ ನಡೆದ ನೌಖಾಲಿ ಎನ್ನುವ ಪ್ರದೇಶದಲ್ಲಿ ಶಾಂತಿ ಸ್ಥಾಪಿಸಲು ಪ್ರಯತ್ನಿಸಿದ್ದನ್ನು ಸವಿಸ್ತಾರವಾಗಿ ಘಟನಾವಳಿಗಳ ಆಧಾರದ ಮೇಲೆ ಬರೆಯುತ್ತ ಸಾಗಿದ್ದಾರೆ.

- Advertisement -

ಮೊದಲನೆ ಅಧ್ಯಾಯ ಮೋಟಾರ ಬೈಕನಲ್ಲಿ ಡಾಕಾ ನಗರವನ್ನು ಸುತ್ತಿದ ಅಲ್ಲಿಯ ಸಂದಿಗೊಂದಿ ಅಲ್ಲಿಯ ಜನ ಜೀವನ ವ್ಯವಹಾರ ಪಾಕಿಸ್ತಾನಿ ಜನರ ಬಂಗಾಲಿನ ವಾಸ ಮುಂತಾದ ವಿವರಗಳನ್ನು ಬೈಕ ಚಾಲಕನ ಜೊತೆ ಮಾತನಾಡುತ್ತ ಸಂಭಾಷಣೆಯ ರೂಪದಲ್ಲಿ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.

ಇದೆ ರೀತಿ ಮುಂದಿನ ಅಧ್ಯಾಯಗಳಲ್ಲಿ ಗಾಂಧೀಯವರ ತತ್ವನೀತಿ ಅವರು ಕೈಗೊಂಡ ಕ್ರಮಗಳು ಜರುಗಿದ ಕಾರ್ಯಗಳು 1946 ರಲ್ಲಿ ನೌಖಾಲಿ ನಗರದಲ್ಲಿ ಉಂಟಾದ ದೊಂಬಿ ಮುಸ್ಲಿಂ ಲೀಗನ ಕಾರ್ಯಚಟುವಟಿಕೆ ಬಂಗಾಲದ ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳು ಗಾಂಧೀಜಿಯವರು ನೌಖಾಲಿಯ ಜನರಲ್ಲಿ ಹಿಂದೂ ಮುಸ್ಲಿಂಮರ ಹೃದಯ ಬಾಂಧವ್ಯ ಮೂಡಿಸಿದ್ದು, ಡಾ. ಸೈಯದ ಮೊಹಮ್ಮದರ ಪತ್ರ ಗಾಂಧೀಜಿಯವರ ಮೇಲೆ ಮಾಡಿದ ಪರಿಣಾಮವನ್ನು, ಮುಸ್ಲಿಮರ ರಕ್ಷಣೆ ಅವಶ್ಯಕತೆ ಮುಂತಾದವುಗಳನ್ನು ಎಳೆ ಎಳೆಯಾಗಿ ಮಾರ್ಮಿಕವಾಗಿ ಮೊದಲಭಾಗದ 8 ಅಧ್ಯಾಯದಲ್ಲಿ ಬಿಚ್ಚಿಟ್ಟಿದ್ದಾರೆ.

ಓದುತ್ತ ಓದುತ್ತ ನಾನು ಅದರ ಒಂದು ಪಾತ್ರವೇನೋ ಎನ್ನುವಂತ ಭಾವನೆ ಮೂಡುವದಂತು ಸಹಜ.

ಭಾಗ 2 ರಲ್ಲಿ ನೌಖಾಲಿಯಲ್ಲಿ ನಡೆದ ಹಿಂದೂಗಳ ಮೇಲಿನ ಹಿಂಸೆ ಶಮನಗೊಳಿಸಲು ಗಾಂಧೀಜಿಯವರು ಮಾಡಿದ ಪ್ರಯತ್ನ ಅವರ ಹೋರಾಟದ ಮನೋಭಾವ, ಹೊಮನ್ ಅಭಿಪ್ರಾಯ ವೆಕಾಲಿನ ಉವಾಚಗಳನ್ನೊಳಗೊಂಡ ಭಾರತೀಯರ ಅತಿ ಧಾರ್ಮಿಕತೆ, ದಾಸರ ಬೋಧನೆ ಅದರ ಪರಿಣಾಮ ಬ್ಲಾಕ್ ಆ್ಯಕ್ಟ್ black act ಅದರ ಪರಿಣಾಮ ಹೊವೆಲ್ ಥಾಮ್ಸನ್ ವಾಕ್ಯಗಳಲ್ಲಿ ವಿವೇಕಾನಂದರ ಮಾತುಗಳನ್ನು ಸಂದರ್ಭಾನುಸಾರ ಓದುಗರ ಚಿಂತನೆ ಹೆಚ್ಚುವಂತೆ ಬರೆದಿದ್ದಾರೆ.

ಗಾಂಧೀಜಿಯರ ಅಹಿಂಸಾವಾದದ ಪರಿಣಾಮ ಭಾರತೀಯರನ್ನು ಯಾವ ಮಟ್ಟಕ್ಕೆ ತಂದು ನಿಲ್ಲಿಸಿತು. ಅದು ಬ್ರಿಟಿಷರಿಗೆ ಹೇಗೆ ವರವಾಯಿತು, ನೆಹರುರವರ ನೀತಿ, ಡಾ ರಾಜೇಂದ್ರಪ್ರಸಾದರು ಅಹಿಂಸಾ ಚಳವಳಿಯನ್ನು ಪೂರ್ಣ ಒಪ್ಪಿರುವುದಿಲ್ಲ ಎನ್ನುವ ನಿಜಾಂಶ ತಿಳಿಸಿದ್ದಾರೆ.

ನೌಖಾಲಿಯಲ್ಲಿ ಶಾಂತಿಯಾತ್ರೆ ಕೈಗೊಂಡಿದ್ದಾಗ ಮಹಿಳಾ ಮಣಿಗಳಾದ ಸರೋಜಿನಿನಾಯ್ಡು ಸುಚೇತಾ ಕೈಪಲಾನಿ, ನಾಗರತಮ್ಮ ಮುದ್ದುಪಳನಿಯವರ ಪರಿಚಯದೊಂದಿಗೆ ಪಾತ್ರ ಹಿಂಸೆ ಇಲ್ಲದೆ ಅಹಿಂಸೆಯ ಸುಖವು ಹೇಗೆ ಎನ್ನುವದನ್ನು ಹೆರಿಗೆ ಉದಾಹರಣೆಯೊಂದಿಗೆ ವಿವರಿಸಿದ್ದಾರೆ. ಮುಂದಿನ ಅಧ್ಯಾಯಗಳಲ್ಲಿ ಮಾನವರ ಗುಣಗಳು ಸಂತರ ನುಡಿಗಳು ಪಾಲನೆಗಳು ಗುರಿ ಉದ್ದೇಶ ಸತ್ಯವೆ ದೇವರು ಸತ್ಯದ ಅರ್ಥ ವಿವರಣೆ ಸ್ವತಂತ್ರ ಪೂರ್ವಲ್ಲಿ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಪಾತ್ರ ಪರಿಣಾಮ ಸಿಪಾಯಿದಂಗೆ ರಾಜ್ಯಡಳಿತ ಅದರಲ್ಲಿ ಹೈದರಬಾದ ನಿಜಾಮ ಮುನ್ಪೀ ಆಡಳಿತ ನೌಖಾಲಿಯ ಸಂಖ್ಯೆ ದಂಗೆಗೆ ಅತಿ ಜನ ಸಂಖ್ಯೆ ಹೇಗೆ  ಕಾರಣವಾಯ್ತು ಎನ್ನುವುದರ ವಿವರಣೆ ಸತ್ಯಾಗ್ರಹದ ಕುರಿತು ಅರಬಿಂದೊ ಅವರ ಮಾತುಗಳು (ಅಧ್ಯಾಯ 10 ರಲ್ಲಿ) ಮದನಲಾಲ ಢೀಂಗ್ರಾರವರ ಪ್ರಾಣಾರ್ಪಣೆ ಅಷ್ಟೆ ಅಲ್ಲದೆ ಜೀವನ ಮತ್ತು ಆತ್ಮಹತ್ಯೆಗಳ ವಿಚಾರ ಒಬ್ಬರು ಇನ್ನೊಬ್ಬರನ್ನು ಹಿಡತದಲ್ಲಿಟಿಕ್ಕೊಂಡ ಪರಿ ಒಂದೋ ಎರಡೋ ಎಷ್ಟು ವಿಸ್ತ್ರತ ನಮಗೆ ಗೊತ್ತೆ ಇಲ್ಲದ, ವಿಚಾರಕ್ಕೆ ನಿಲುಕದ ವಿಷಯಗಳು ಸಾಮಾನ್ಯ ವಿಷಯವೇನೋ ಎನ್ನುವಂತೆ ಚರ್ಚಿತವಾಗಿವೆ.

ಗಾಂಧೀಜಿಯ ಅಹಿಂಸಾ ಸಿದ್ಧಾಂತ ಒಪ್ಪಿ ನಡೆಯುವಂತಾದರೆ ಖಡ್ಗಕೆ ತುಕ್ಕು ಹಿಡಿಯವಂತಾಗುತ್ತದೆ! ನಪುಂಸಕತನವನ್ನು ಬಿಂಬಿಸುವ ಒಬ್ಬ? ಕಥಾನಾಯಕನ ಮಹಾಕಾವ್ಯವಾಗುತ್ತಿತು. ಎನ್ನುವ ಲೇಖಕರ ಲೇಖನಿ ಹರಿತವಾದ ಮಾತುಗಳು ಎಂತವರನ್ನು ಚಿಂತನೆಗೆ ಒಯ್ಯುತ್ತವೆ. 14 ನೇ ಅಧ್ಯಾಯದಲ್ಲಿ ವಲ್ಲಭಭಾಯಿ ಪಟೇಲರ ನಿಲುವು ಅವರು ಗಾಂಧೀಜಿಯವರಿಂದ ದೂರ ಸರಿದಿದ್ದ ಹುನ್ನಾರ 15 ನೇ ಅಧ್ಯಾಯದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಆಶ್ರಯದ ಅನಿವಾರ್ಯತೆ 16 ನೇ ಅಧ್ಯಾಯದ Truth is pathless land ಸತ್ಯ ಎಂಬುದು ಪಥವಿಲ್ಲದ ನೆಲ ಎನ್ನುವ ನುಡಿ ಹೇಳಿದ ವಿಶ್ವಗುರು ಕೃಷ್ಣಮೂರ್ತಿಯವರ ಬಗ್ಗೆ 17ನೇ ಅಧ್ಯಾಯದಲ್ಲಿ ಹಿಂದೂ ಮುಸ್ಲಿಂ ಐಕ್ಯತೆಯಿಂದ ಸ್ವಾತಂತ್ರ್ಯ ಗಳಿಕೆ ಹೇಗೆ ಸಾಧ್ಯ ಎನ್ನುವದು, 18 ರಲ್ಲಿ ಮೊಹದಿವರಗಿ ಮಣೆ ಹಾಕಿದ್ದರಿಂದ ಭಾರತೀಯ ಹಿಂದುಗಳ ಮೇಲಾದ ಪರಿಣಾಮ, ಅಧ್ಯಾಯ 19 ರಲ್ಲಿ ಮಿತಪರಿವರ್ತನೆ ಅದರ ಪರಿಣಾಮ, 20 ರಲ್ಲಿ ಯೂರೋಪಿನ ಕ್ರಾಂತಿಗಳು ಪರಿಣಾಮ ಸತ್ಯ ಅಹಿಂಸೆಯ ತತ್ವ ನೌಖಾಲಿ, ಬಿಹಾರ ಹತ್ಯಾಕಾಂಡಗಳಲ್ಲಿ ಸೋತಿದ್ದು, ಗಾಂಧೀಜಿಯವರ ಸತ್ಯ, ಸತ್ಯನಿಷ್ಠೆ ಸಾಧನೆ ಪರಿಣಾಮ ಅದರಿಂದಾದ ಸೋಲು ಗೆಲವು ಹಾನಿ ನಷ್ಟಗಳ ಪರಿಚಯ ಅಬ್ಬಾ ಓದಿಯೇ ಸವಿಯ ಬೇಕು.

21 ನೇ ಅಧ್ಯಾಯದಲ್ಲಿ ಸ್ವರಕ್ಷಣೆ ಗಾಂಧೀಜಿಯವರ ಅಹಿಂಸಾ ತತ್ವದಿಂದ ಆದ ಲಾಭ ಹಾನಿಗಳು ಮೂಲಭೂತ ಸೌಕರ್ಯಗಳ ಕೊರತೆ ಮಾರ್ಗರೈಟ್ ಬಕ್ ವೈಟ್ ಅಮೇರಿಕದ ಪ್ರಸಿದ್ಧ ಪೋಟೋ ಜರ್ನಲಿಸ್ಟಳ ಅಭಿಪ್ರಾಯಗಳು ಅವಳು ಕಂಡಂತೆ ಭಾರತದ ಪರಿಸ್ಥತಿ ಸ್ವದೇಹ ದಂಡನೆ ಹಾನಿ/ಉಪಯೋಗ ಅದಕ್ಕೆ ನೆಹರುರವರ ಹೇಳಿಕೆ ಕಾನೂನಿನ ವ್ಯವಸ್ಥೆ ಬರ್ಟ್ರಂಡ ರಸೆಲ್ ರ ಸಮಾಜವಾದದ ಅಭಿಪ್ರಾಯ ವ್ಯಕ್ತಿಯ ಸ್ವಪ್ರತಿಷ್ಠೆ ಪಾಕಿಸ್ತಾನ ದಿಂದ ಓಡಿ ಬಂದ ಹಿಂದೂ ನಿರಾಶ್ರಿತರು ಘೋರಿ ಮಸೀದಿಗಳಲ್ಲಿ ಬಿಡಾರ ಹೂಡಿದ್ದರೆ ಆ ದೇವಸ್ಥಾನಗಳ ಅವಶ್ಯಕತೆ ಏನು ಎನ್ನುವರ ಕುರಿತು ಬರ್ಕವೈಟ್ ಅವರ ಪ್ರಶ್ನೆಗಳು ಕೊಳಚೆಗೇರಿ ದೆಹಲಿಯ ಜನರು ಉತ್ತರಿಸಿದ ಚರ್ಚೆ ಮಾರ್ಮಿಕವಾಗಿದೆ.

ದೇಶ ರಕ್ಷಣೆ ಹೆಸರಿನಲ್ಲಿ ಆಶ್ರಯದಾತರ ನೆರವಿಲ್ಲದೆ ಬದುಕು ದುಸ್ತರ ಎನ್ನುವ ಪರಿಸ್ಥಿತಿ ಬಂದಿದ್ದು ಸತ್ಯದ ಹೆಸರಿನಲ್ಲಿ ಸ್ವಾಭಿಮಾನ ಮರೆಯಾದಂತ ಪರಿಸ್ಥಿತಿ ಓದುಗನನ್ನು ಮತ್ತೇ ಅರ್ಥ ಹುಡುಕುವಂತೆ ಮಾಡುತ್ತದೆ. ಅಹಿಂಸಾ ತತ್ವ ಅಮರವಾಗಿ ಆಚರಿಸಲಾದ ತತ್ವವಾದ ವಿಪರ್ಯಾಸ ನಿಜಕ್ಕೂ ನಾವು ಈಗ ಹೇಗೆ ಬದುಕಬೇಕು ಎನ್ನುವ ವಿಧಾನ ಚಿಂತಿಸಿ ಅನುಸರಿಸಬೇಕು ಎನ್ನುವದನ್ನು ಲೇಖಕರು ಜನರಿಗೆ ಬಿಟ್ಟಿದ್ದಾರೆ. ತುಂಬಾ ಆಳದ ವಿಷಯ ವಿಮರ್ಶೆಯೊಳಗೊಂಡ ನಿರೂಪಣೆ ಸಾಕ್ಷಿ ದಾಖಲೆ ಸಹಿತ ಅನಾವರಣಗೊಂಡ ಪುಸ್ತಕ ಇದಾಗಿದೆ.

ಗಾಂಧೀಜಿ ಜಾಡಿನಲ್ಲಿ ನೌಖಾಲಿಗೊಂದು ಮರುಯಾತ್ರೆ ಹೆಸರೇ ಒಂದು ಮುಗಿಯದ ಯಾತ್ರೆಯ ಪಯಣವಿದಾಗಿದೆ ಲೇಖಕರಿಗೆ ಅಭಿನಂದನೆಗಳು ಅವರ ಚರವಾಣಿ 9481423004.

ಶ್ರೀಮತಿ. ಲಲಿತಾ ಎಂ. ಕ್ಯಾಸನ್ನವರ ಹಲಗಾ, ಬೆಳಗಾವಿ

- Advertisement -
- Advertisement -

Latest News

ಲೇಖಕಿ ಜಯಶ್ರೀ ಅಬ್ಬಿಗೇರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯ ಗರಿ

ಬೆಳಗಾವಿ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜನೀಯರಿಂಗ್ ಪ್ರತಿಷ್ಠಾನ ಟ್ರಸ್ಟ ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಸ.ಪ.ಪೂ.ಕಾಲೇಜು ಹಿರೇಬಾಗೇವಾಡಿಯ ಉಪನ್ಯಾಸಕಿ, ಲೇಖಕಿ, ಅಂಕಣಕಾರ್ತಿ ಜಯಶ್ರೀ...
- Advertisement -

More Articles Like This

- Advertisement -
close
error: Content is protected !!