ಪುಸ್ತಕ ಪರಿಚಯ: ಮತ್ತೆ ವಸಂತ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಕೃತಿ ಹೆಸರು : ಮತ್ತೆ ವಸಂತ

ಕವಿ: ಶ್ರೀ ಆರ್.ಎಸ್.ಪಾಟೀಲ
ಪುಟಗಳು: ೧೪೨
ಬೆಲೆ : ೧೫೦
ಪ್ರಕಾಶನ : ಎಸ್.ಎಲ್.ಎನ್.ಪಬ್ಲಿಕೇಷನ್.
ಬೆಂಗಳೂರು.

ಕರೋನಾ ಕಾಲದ ಲಾಕಡೌನ್ ಸಮಯವನ್ನು ಲೇಖಕರು ವ್ಯರ್ಥ ಪೋಲು ಮಾಡದೇ ಅನೇಕ ಸುಂದರ ಕವಿತೆಗಳನ್ನು ರಚಿಸಿ ” ಮತ್ತೆ ವಸಂತ” ಎಂಬ ತಲೆಬರಹದಲ್ಲಿ ಸಂಕಲನ ಪ್ರಕಟಿಸಿದ್ದಾರೆ ಕವಿ ಶ್ರೀ ಆರ್.ಎಸ್.ಪಾಟೀಲ ಸಾಲಹಳ್ಳಿ ಇವರು.
ಈ ಸಂಕಲನದಲ್ಲಿ ಒಟ್ಟು ೮೦ ಕವಿತೆಗಳಿದ್ದು ಶ್ರೀ ಶಿವಯೋಗಿ ಹಿರೇಮಠರ ಸುಂದರವಾದ ಮುನ್ನುಡಿ ಇದೆ.

- Advertisement -

ಕವಿತೆಗಳು ಎಲ್ಲೂ ವಾಚ್ಯವಾಗದೇ ಹೃದ್ಯವಾಗಿದ್ದು ನಿರರ್ಗಳವಾಗಿ ಹರಿದು ಬಂದದ್ದು ಲೇಖಕರ ಕವಿತಾ ಕೌಶಲ್ಯಕ್ಕೆ ಹಿಡಿದ ಕನ್ನಡಿಯಾಗಿವೆ.

” ಕುಡುಕ, ಮಹಾತಾಯಿ, ಬದುಕಿನಾ ಪಯಣ, ಮುಂಗಾರು , ನಾ ಸತ್ತ ಗಳಿಗೆ” ಪ್ರಸ್ತುತ ಸಾಮಾಜಿಕ ಸನ್ನಿವೇಶಕ್ಕೆ ಅಗತ್ಯ ಒಳನೋಟ ಕೊಡಿವ ಕವಿತೆಗಳಾಗಿವೆ.

“ಕುಡುಕ ” ಪದ್ಯದಲ್ಲಿ …..ಮದುವೆಯ ಹೊಸ್ತಿಲಲ್ಲಿರುವ ಕನ್ಯೆ ತನ್ನ ಗಂಡನಾದವನು ಹೇಗಿರಬೇಕು ಎಂಬ ನಿರ್ಧಾರ ತಳೆಯುವಲ್ಲಿ ಕುಡಿತದ ವಿವಿಧ ಕೆಟ್ಟ ಆಯಾಮಗಳನ್ನು : ಮಡದಿಗಿಂತಲೂ ಮಿಗಿಲಾದದ್ದು – ಮದ್ಯ, ಗಂಡನನ್ನು ಮದವೇರಿಸುವುದು – ಮದ್ಯ,
ಬಾಳು ನರಕ ಮಾಡುವುದು – ಮದ್ಯ

ಗಂಡನ ಮಾನ ಮರ್ವಾದೆ ತೆಗೆವುದು – ಮದ್ಯ ” ಎಂಬ ಸಂಗತಿಗಳ ಅನಾವರಣವಿದೆ.

ಬದುಕಿನಾ ಪಯಣ ಕವಿತೆ : ಚಾಡಿಕೋರರು ಆಡಿಕೊಳ್ಳುವವರ ಜಗತ್ತಿನಲ್ಲಿ

ಯಾರು ಒಲಿದರೇನು .?
ಯಾರು ಮುನಿದರೇನು..?

ದೂರಲಾರೆನು ಈ ಕ್ಷಣಿಕ ಬದುಕಿನಲ್ಲಿ
ಯಾರು ಅಮರರು ಇಲ್ಲಿ ಕ್ಷಣಿಕ ಬದುಕಿನಲ್ಲಿ ಎಂದು ಹೇಳುತ್ತಾ ತಾವೆ ಒಂದು ತಮ್ಮ ದಾರಿ ತೋಡಿಕೊಂಡು ನಡೆವ ಮಾರ್ಗ ಓಣಿಯಲ್ಲಿ ಆಗುವ ಜಗಳಗಳಿಗೆ ಒಂದು ತಿಲಾಂಜಲಿಯಂತೆ ಮಾರ್ಗದರ್ಶನವಾಗಿದೆ.

“ಮುಂಗಾರು” ಕವಿತೆ

ಕಾರಿರುಳ ಕತ್ತಲೆಯ ಬಿರಿದ ಗರ್ಭದಲಿಂದ ತೂರಿ ಬಂತು ಮಿಂಚು ಮಿಂಚಿ ಹರಿದ ಬೆಂಕಿಯ ಹಾವು ಬಿರಿದ ಭುವಿಯಲಡಗಿ ಮಾರಿ ತೆರದಲಿ ಕೆಂಡ ತೂರಿ ತೂರಿ

ಸಾಲುಗಳಲ್ಲಿ ಓದುಗ ತೊಯ್ದು ಹೋಗುತ್ತಾನೆ. ಕತ್ತಲೆ ಮತ್ತು ಮಿಂಚುಗಳ ಭೀಕರತೆ ಮುಂಗಾರು ಮಳೆಯ ಅರ್ಭಟದ ನಾಂದಿಯಾಗಿದೆ.

“ಮಹಾತಾಯಿ ” ಕವಿತೆ ಹೆಣ್ಣಿನ ಸಹನೆ ಮೇರು ಪರ್ವತಕೆ ಸಮ ಎಂದು ಸಾರುತ್ತದೆ.

” ಮತ್ತೆ ವಸಂತದಲ್ಲಿ ” ಕ್ಷಿತಿಯ ಬಣ್ಣ ಬದಲಾದದ್ದು ವಸಂತನಿಂದಲೇ ಅದು ರತಿ ನಾಚುವಂತಿದೆ ಎಂದು ಬಣ್ಣಿಸುತ್ತಾರೆ.

“ನನ್ನವರು” ಕವಿತೆಯಲ್ಲಿ ಕವಿಯ ನಾಡಾಭಿಮಾನ ಕಾಣುತ್ತೇವೆ.
ಸನ್ನ್ಯಾಸ ಜೀವನ ಸ್ವೀಕರಿಸಿ ಆ ಜೀವನ ಜ್ಯೋತಿಯಿಂದ ಯೋಗಿಗಳು, ಸನ್ಯಾಸಿಗಳು ಸಮಾಜ ಕಟ್ಟುತ್ತಾರೆ. ಕವಿಗಳಿಗೆ ಅವರನ್ನು ಕುರಿತು ಎಷ್ಟು ಬರೆದರೂ ತೀರದ ದಾಹವಿದೆ. ಪ್ರೀತಿಯಿದೆ. ಈ ಸಂಕಲನದಲ್ಲಿ ಮಹಾಂತ ಶಿವಯೋಗಿಗಳನ್ನು ಕವಿಗಳು ಅನೇಕ ವಿಧವಾಗಿ ನೆನೆದಿದ್ದಾರೆ. ಮಹಾಂತ ಜೋಳಿಗೆಯಲ್ಲಿ ಶಿವಯೋಗಿಗಳು ಜನರಿಂದ ಭಿಕ್ಷೆ ಬೇಡದೇ ಜನರ ನಾನಾ ವಿಧವಾದ ಕೆಟ್ಟ ಚಟಗಳನ್ನು ಬೇಡುತ್ತಾ ಆರೋಗ್ಯಪೂರ್ಣ ಸಮಾಜಕ್ಕಾಗಿ ಯೋಗಿಗಳು ಸೇವೆಯನ್ನು ಕವಿ ಬಿಡಿಸಿದ್ದಾರೆ.

ಪ್ರತೀ ಕವಿತೆಗಳು ತಮ್ಮ ಸ್ವಶಕ್ತಿಯಿಂದ ತೂಗಿವೆ ತೊನೆದಿವೆ.
ಸಂಕಲನದ ಎಲ್ಲ ಕವಿತೆಗಳು ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುತ್ತವೆ. ಕವಿತೆಯ ಚರಣಗಳು ಪ್ರಾಸ ಬದ್ದವಾಗಿದ್ದು ಭಾವ ಅರ್ಥ ಸ್ಪುರಣೆಯಲ್ಲಿ ಯಶಸ್ವಿಯಾಗಿವೆ. ಕವಿತೆಗಳು ಸರಳ ಹಾಗೂ ಲಾಲಿತ್ಯಪೂರ್ಣವಾಗಿವೆ.

ಯಮುನಾ.ಕಂಬಾರ ರಾಮದುರ್ಗ

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!