ಪುಸ್ತಕ ಪರಿಚಯ: ಸಾದ್ಯಂತ (ನಡೆ-ನುಡಿಗಳು)

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಪುಸ್ತಕದ ಹೆಸರು : ಸಾದ್ಯಂತ (ನಡೆ-ನುಡಿಗಳು)

ಲೇಖಕರು : ಸ.ರಾ. ಸುಳಕೂಡೆ
ಪ್ರಕಾಶನ : ನಿವೇದಿತ ಪ್ರಕಾಶನ ಬೆಂಗಳೂರು-28
ಪ್ರಥಮ ಮುದ್ರಣ :2020 ಪುಟಗಳು 288.

ಮುಖಪುಟ ಬಾಗೂರು ಮಾರ್ಕಂಡೇಯ
ಬೆಲೆ 300=00.

- Advertisement -

ಬೆಳಗಾವಿ ಹಿರಿಯ ಸಾಹಿತಿ ಸ.ರಾ. ಸುಳಕೂಡೆ ಅವರ ‘ಸಾದ್ಯಂತ ನಡೆ-ನುಡಿಗಳು’ ಬದುಕಿನ ಸಚೇತನದ ಅವಲೋಕನ ಡಿಸೆಂಬರ 2020 ರಲ್ಲಿ ಪ್ರಕಟವಾಗಿದ್ದು ಶ್ರೀ. ಮ.ನಿ.ಪ್ರ.ಜಾ ಶಿವಬಸವ ಮಹಾಸ್ವಾಮಿಗಳು ರುದ್ರಾಕ್ಷಿಮಠ ನಾಗನೂರು ಬೆಳಗಾವಿ ಇವರಿಗೆ ಸಮರ್ಪಣೆ ಮಾಡಿದ್ದಾರೆ.

ನಲ್ನುಡಿಯನ್ನು ಜಗದ್ಗುರು ತೋಂಟದ ಡಾ: ಸಿದ್ದರಾಮ ಮಹಾಸ್ವಾಮಿಗಳು ಡಂಬಳ, ಗದಗ ಇವರು ಬರೆದಿದ್ದು ಈ ಕೃತಿಯನ್ನು ಓದಿದ ಪ್ರತಿಯೊಬ್ಬರೂ ತಮ್ಮ ನಡೆ-ನುಡಿಗಳನ್ನು ವಿಮರ್ಶಿಸಿಕೊಂಡು ಮುನ್ನಡೆಯುತ್ತಾರೆ. ತಮ್ಮ ನೈತಿಕ ನೆಲೆಗಳನ್ನು ಭದ್ರವಾಗಿಸಿಕೊಳ್ಳುತ್ತಾರೆ. ಆಗ ಅವರು ದುರ್ಗುಣಗಳನ್ನು ದೂರವಿಟ್ಟು ಚಿಂತೆಗಳನ್ನು ಬಿಟ್ಟು ಹಾಯಾಗಿ ಬದುಕಲು ಪ್ರಾರಂಭಿಸುತ್ತಾರೆ. ಹೀಗೆ ಬದುಕಿನ ಸಾರಸರ್ವಸ್ವವನ್ನು ರೂಪಿಸುವುದಕ್ಕಾಗಿ ಹತ್ತು ಹಲವು ಚಿಂತನೆಗಳಿಂದ ಪ್ರಸ್ತುತ ಕೃತಿ ರುಪಗೊಂಡಿರುವುದು ವಿಶೇಷ. ಎಂದಿದ್ದಾರೆ.

ಮುನ್ನುಡಿಯನ್ನು ಡಾ. ಪ್ರಜ್ಞ ಮತ್ತಿಹಳ್ಳಿ ಧಾರವಾಡ ಅವರು ಬರೆದಿದ್ದು ಶರಣರ ನಡೆ-ನುಡಿಗಳು ವಚನಗಳು ಬದುಕಿನ ಸಾರ-ಸತ್ವಗಳನ್ನು ಶರಣರ ಚರಿತೆಯೊಳಗಿದೆ ಮಾನವತೆಯ ಘನತೆ ಎಂಬ ಅಂಶಗಳು ಸಾದ್ಯಂತವಾಗಿ ಈ ಕೃತಿಯೊಳಗೆ ಹರಡಿಕೊಂಡಿವೆ ಎಂದು ಹಾರೈಸಿದ್ದಾರೆ.

ಡಾ. ರಾಜಶೇಖರ ಇಚ್ಚಂಗಿ ಅವರು, ಶ್ರೀ. ಸ. ರಾ. ಸುಳಕೂಡೆಯವರು ಹೆಸರು ಹೊಗಳಿಕೆ ಬಯಸದ ಅತೀ ಸುಖಕೆಳಸದ ನೇಗಿಲಯೋಗಿ ಇದ್ದಂತಿದ್ದಾರೆ. ತೊಂಬತ್ತಕ್ಕಿಂತ ಹೆಚ್ಚು ಕೃತಿಗಳನ್ನು ರಚಿಸಿದ ಇವರು ಸಾವಿರಾರು ವೈಚಾರಿಕ ಲೇಖನಗಳು ಹತ್ತಾರು ಸಂದರ್ಭ ಸಂಚಿಕೆಗಳನ್ನು ಸಂಪಾದಿಸಿ ಜನಸಾಮಾನ್ಯರ ಓದಿಗೆ ನೆರವಾಗಿದ್ದಾರೆ ಎಂಬ ಅಭಿಪ್ರಾಯ ಬರೆದಿದ್ದಾರೆ.

ಶರಣರು ಬದುಕಿ ತೋರಿಸಿದ ದಾರಿಯಲ್ಲಿ ನಯ ವಿನಯಗಳೇ, ತುಂಬಿಕೊಂಡಿವೆ. ಆದ್ದರಿಂದ ಸಕಲರೂ ಶರಣರ ಅನುಭವವನ್ನು ಬದುಕಿನಲ್ಲಿ ಅಳವಡಿಸಿಕೊಂಡು ನಯ ವಿನಯದಿಂದ ಬದುಕುವುದು ಅಗತ್ಯವಾಗಿದೆ. ಶರಣರ ಅನುಭವದೊಳಗೆ ಮೂಡಿ ಬಂದ ನಡೆನುಡಿಗಳನ್ನು ಅನುಸರಿಸಿಕೊಂಡು ಬದುಕನ್ನು ಮುನ್ನಡೆಸೋಣ ಈ ಕೃತಿ ರಚಿಸಲು ನೇರವಾದ ಎಲ್ಲರಿಗೂ ಧನ್ಯವಾದಗಳನ್ನು ಸ.ರಾ.ಸುಳಕೂಡೆ ಅವರು ಸಲ್ಲಿಸಿದ್ದಾರೆ.

ಪ್ರಕಾಶಕರಾದ ಉಮೇಶ ನಾಗಮಂಗಲ ಶರಣರ, ಸಂತರ ನಡೆ ನುಡಿಗಳನ್ನು ಇಂದಿನ ಜನಾಂಗ ಅರಿತುಕೊಂಡು ಮುನ್ನಡೆಯಲು ಪೂರಕ ಸಾಹಿತ್ಯ ಒದಗಿಸುವಲ್ಲಿ ಕ್ರಿಯಾಶೀಲವಾಗಿದೆ. ಈ ದಿಶೆಯಲ್ಲಿ ‘ಸಾದ್ಯಂತ ನಡೆನುಡಿಗಳು’ ಎಂಬ ಕೃತಿಯನ್ನು ಪ್ರಕಟಿಸಿ ಶರಣ ಸಂಸ್ಕೃತಿಯ ಹೆಗ್ಗಳಿಕೆಯನ್ನು ಮನನ ಮಾಡಿಕೊಡಲು ಮುಂದಾಗಿದೆಯೆಂದು ಅಭಿಮಾನದಿಂದ ಹೇಳಲು ಹರ್ಷಿಸುತ್ತದೆ.
ನಮ್ಮ ಪ್ರಕಾಶನವು ಸಮಕಾಲೀನ ಅಭಿರುಚಿಗೆ ತಕ್ಕಂತೆ ವೈವಿಧ್ಯಮಯವಾದ ಸಾಹಿತ್ಯಿಕ ಧಾರ್ಮಿಕ ಸಾಂಸ್ಕೃತಿಕ ಜನಪದೀಯ ಕೃತಿಗಳನ್ನು ಪ್ರಕಟಿಸುತ್ತ ಬಂದಿದೆ ಎಂದಿದ್ದಾರೆ.

ಈ ಕೃತಿಯಲ್ಲಿ ಒಟ್ಟು 26 ವೈವಿಧ್ಯಮಯ ಲೇಖನಗಳು ಇದ್ದು ನಾಗರಿಕ ಕರ್ತವ್ಯಗಳು ಅಲ್ಲಮ ಮತ್ತು ಅನುಭವ ಬಸವಣ್ಣನವರು ಶೋಷಿತರ ಆಶಾಕಿರಣ, ಧೀರತ್ವ ನೆನೆಯುತ, ಅನುಸರಣೆಯೇ ಸಭ್ಯತೆ ಏಕೋಭಾವದ ನಡೆನುಡಿಗಳು ನುಡಿಸ್ನಾನ, ಶರಣರ ಚರಿತೆಯೊಳಗಿದೆ ಮಾನವತೆಯ ಘನತೆ ಪರಿಸರ ಮತ್ತು ಸ್ವಾನುಭವ, ಪ್ರಾಯಶ್ಚಿತ ಮತ್ತು ಸದಾಚಾರ, ಭಕ್ತಿಯು ಡೊಂಬ ಕುಂಭಿನಿಯ ತಿರುಗಿದಂತೆಲ್ಲ ಆಸೆಯಿಂದಲೇ ಘಾಸಿತನ ಕಾಯಕ ಮತ್ತು ಗಳಿಕೆಯ ಸದ್ವಿನಿಯೋಗ ಹದುಳ ಮಾರ್ಗದ ನಡೆ ನುಡಿಗಳು ಅಂತೆ-ಕಂತೆಯಾಚೆಯ ಬದುಕಿನ ಬೆಳಕು ವಚನಗಳು ಬದುಕಿನ ಸಾರ ಸತ್ವಗಳು, ಪ್ರಕೃತಿಯ ಪರಿಶೀಲನೆ ಸತ್ಪಾತ್ರರಿಗೆ ಎಲ್ಲಿಲ್ಲದ ಜೀವನವದೇಶ? ಆಚಾರವಂತಿಕೆಯ ಶೀಲ. ದೂರ ದುರ್ಜನರ ಸಂಗವದು ಭಂಗನನ್ನೂ.

ನಿಜ ತತ್ವದಾಚರಣೆಯೇ ಸದ್ಭಕ್ತಿ ನೀನೆತ್ತ? ನಿನ್ನ ಅನುಭಾವವೆತ್ತ? ಸಮಾನತೆಯ ಶಕ್ತಿಯೇ. ಬಸವಣ್ಣ ಕಾಯಕದ ನಿಷ್ಠೆಯ ಭಕ್ತಿ, ಶರಣರು ಬೆಳಗಿನ ನಡೆ-ನುಡಿಗಳು ಅರಿತು ಆಚಾರ ಮತ್ತು ಲಿಂಗನೆದ್ದಿ ಅನುಬಂಧ ಹೀಗೆ 26 ಉತ್ತಮ ಲೇಖನಗಳಿವೆ.

ಬಸವಣ್ಣನವರು ಶೋಷಿತರ ಆಶಾಕಿರಣದಲ್ಲಿ ಜೀವನ ಹೊಸಜೀವನದ ಆವಿಷ್ಕಾರದಲ್ಲಿ ತರ್ಕ-ವಿತರ್ಕಗಳನ್ನೆಲ್ಲ ಸ್ಮರಿಸುತ್ತ ಸರಿಸಮಾನತೆ, ಸಮತೆ, ಮಮತೆ, ಅಂತಃಕರಣ ಮಾನವ ಪ್ರೀತಿ, ಮಾಧುರ್ಯ ಸಕಲರಿಗೂ ಲೇಸನ್ನೇ ತರುವ ಹಂಬಲ, ದಾಸೋಹ, ದನ ಪ್ರಾಣಿಗಳ ರಕ್ಷಣೆ, ಯಜ್ಞ-ಯುಗಾದಿಗಳ ಉಚ್ಚಾಟನೆ, ಜಾತಿ-ಕುಲ ಕನವರಿಕೆಯನ್ನು ಶಮನಗೊಳಿಸಿದ ಪ್ರಖರತೆ, ಮಡಿ-ಹುಡಿ ಪಂಚಾಂಗಗಳತ್ತ ಗಮನ ಹರಿಸದ ದಿಟ್ಟ ನಿಲುವು. ಸತ್ಯ ನುಡಿವುದೇ ಸ್ವರ್ಗ. ಸರ್ವರೆಲ್ಲರನ್ನು ಒಗ್ಗೂಡಿಸುವ ಜೀವನ ಸಿದ್ದಿ ಸಾಹಸಗಳನ್ನು ಮಾನವ ನುಡಿ ತೋರಿಸಿದ ಬಸವಣ್ಣನವರ ಜೀವನ ಸಂದೇಶ ಸಕಲರಿಗೂ ಪ್ರೇರಕ, “ಕಲ್ಯಾಣ ಕ್ರಾಂತಿ” ತ್ರಿಕಾಲ ಬಾಧಿತ ಬದುಕಿನ ನೆಮ್ಮದಿಗೆ ಉದಾಹರಣೆಯಾಗಿದೆ.

ಜನರ ಜೀವನವೇ ಶ್ರೇಷ್ಠ. ಶೀಲ ಸಂಸ್ಕ್ರತಿಯ ಪ್ರತೀಕ. ಅರಿವು ಅನುಭವದ ಅರವಟ್ಡಿಗೆ ಅಂತ್ಯಜರಿಗಾಗಿ ಬದುಕು ಜೀವನದ ಕ್ಷಣ-ಕ್ಷಣಗಳಲ್ಲಿ ಸ್ವರ್ಗ ನರಕ. ಭೋಧನೆ ಮಾತ್ರವಲ್ಲ ಆಚರಣೆ-ಸದಾಚರಣೆಗೆ ಆದ್ಯತೆ.

ಭಕ್ತ, ಭಕ್ತರೆಂದು ನುಡಿಯಿರಿ
ಭಕ್ತರೆಂತಾದಿರೊ ನೀವು?
ನಿತ್ಯ ನಿರಂತರ ಜನಲಿಂಗ ಹಸ್ತದೊಳಗಿದ್ದು
ಪೃಥ್ವಿಯ ಮೇಲಣ ಪ್ರತಿಷ್ಠೆಗೆರಗುವ
ವ್ಯರ್ಥರನೇನೆಂಬವಯ್ಯ, ಕಲಿದೇವಯ್ಯ?

ಬೆನ್ನುಡಿಯನ್ನು ಡಾ. ಅಶೋಕ ನರೋಡೆ ಅವರು ಪ್ರಸ್ತುತ “ಸಾದ್ಯಂತ ನಡೆ ನುಡಿಗಳು” ಕೃತಿಯು ಸಮಕಾಲೀನ ಸಮಾಜಕ್ಕೆ ಕೈದೀವಿಯಾಗಿದೆ. ಈ ಗ್ರಂಥದಲ್ಲಿ 26 ಮೌಲಿಕ ವೈವಿಧ್ಯಮಯ ಲೇಖನಗಳಿವೆ. “ನಾಗರಿಕ ಕರ್ತವ್ಯಗಳು” ಪರಿಸರ ಮತ್ತು ಸ್ವಅನುಭವ ಪ್ರಾಯಶ್ಚಿತ ಮತ್ತು ಸದಾಚಾರ, ಆಸೆಯಿಂದಲೇ ಘಾಸಿತನ, ಬದುಕಿನ ಭಾಗ್ಯದ ನಡೆನುಡಿಗಳು ವಚನಗಳು ಬದುಕಿನ ಸಾರಸತ್ವಗಳು ಮುಂತಾದವು ಮೌಲಿಕವಾಗಿವೆ.
ಈ ಕೃತಿಯ ವಿಭಿನ್ನ ನಡೆ-ನುಡಿ ಹೊಂದಿದವರಿಗೆ ಆತ್ಮಾವಲೋಕನಕ್ಕೆಂದು ಅವಕಾಶ ಮಾಡಿಕೊಡುತ್ತದೆಯೆಂದು ಹೇಳುತ್ತ ಶ್ರೀ ಸ. ರಾ. ಸುಳಕೂಡೆ ಅವರಿಂದ ಚಿಂತನತರ ಇನ್ನಷ್ಟು ಕೃತಿಗಳು ಬೆಳಕಿಗೆ ಬರಲೆಂದು ಆಶಿಸುವೆನು.
ಇವರ ಚರವಾಣಿ 9844453343

ಶ್ರೀ. ಎಂ. ವೈ. ಮೆಣಸಿನಕಾಯಿ
ಬೆಳಗಾವಿ.
94449209570.

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!