ಪುಸ್ತಕದ ಹೆಸರು: ಸಾಹಿತ್ಯ ಆಸ್ವಾದನೆ (ವಿಮರ್ಶಾ ಸಂಕಲನ)
ಲೇಖಕರ ಹೆಸರು: ರಾಜಶೇಖರ ಬಿರಾದಾರ
ಪ್ರಕಾಶಕರು: ಅಂಕನಹಳ್ಳಿ ಪ್ರಕಾಶನ ರಾಮ ನಗರ ಜಿಲ್ಲೆ
ಮುಖ ಪುಟ: ಗಂಗರಾಜು ಎನ್ ಮತ್ತೀಕೆರೆ
ಪ್ರಥಮ ಮುದ್ರಣ: 2020 ನವಂಬರ
ಪುಟಗಳು: 144, ಬೆಲೆ ರೂ. 130=00.
ಸರ್ಕಾರಿ ಪ್ರಥಮದರ್ಜೆ ಕಾಲೇಜು ಯರಗಟ್ಟಿ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ರಾಜಶೇಖರ ಬಿರಾದಾರ ಅವರ ಪ್ರಥಮ ವಿಮರ್ಶಾ ಸಂಕಲನ “ಸಾಹಿತ್ಯ ಆಸ್ವಾದನೆ”. ಈ ಪುಸ್ತಕದ ಮುನ್ನಡಿಯನ್ನು “ಡಾ|| ವಿಠ್ಠಲರಾವ್ ಟಿ. ಗಾಯಕ್ವಾಡ್” ಕನ್ನಡ ವಿ.ವಿ. ಹಂಪಿಯವರು ಬರೆದಿದ್ದು, ಓದುಗರಲ್ಲಿ ಒಂದು ಬಗೆಯ ವಿಶಿಷ್ಟ ಸಂವೇದನೆಯನ್ನು ಉಂಟು ಮಾಡುವ ಸ್ವರೂಪದಲ್ಲಿವೆ ಎಂದು ಹೇಳುವುದಕ್ಕೆ ಸಂತೋಷವಾಗುತ್ತದೆ.
ಅತ್ಯಂತ ಆಳವಾದ ಅಧ್ಯಯನ ಮಾಡಿ ತಮ್ಮ ದೃಷ್ಟಿಕೋನಕ್ಕೆ ಅನುಗುಣವಾಗಿ ಅದರಲ್ಲಿನ ಅಂಶಗಳನ್ನೇ ಆಧರಿಸಿ ವಿವರಣೆ ಮತ್ತು ವಿಶ್ಲೇಷಣೆ ಮಾಡುತ್ತ ಹೋಗಿರುವುದು ಗಮನ ಸೆಳೆಯುತ್ತದೆ ಎಂದಿದ್ದಾರೆ.
ಪ್ರಕಾಶಕರಾದ “ಡಾ|| ಅಂಕನಹಳ್ಳಿ ಪಾರ್ಥ” ಅವರು ಈ ಕೃತಿಯು ಲೇಖಕರ ಸತತ ಓದು ವಿಸ್ತೃತ ಅಧ್ಯಯನಕ್ಕೆ ಸಾಕ್ಷಿಯಾಗಿದೆ. ಬಿರಾದಾರ ಅವರು ಸಂಶೋಧನಾ ಕ್ಷೇತ್ರದಲ್ಲಿ ಶಿಸ್ತು ಸಂಯಮವನ್ನು ಬೆಳೆಸಿಕೊಂಡು ಸಾಹಿತ್ಯ ಕೃಷಿಗೆ ತೊಡಗಿರುವುದು ಸಂತಸದ ವಿಷಯವಾಗಿದೆ ಎಂದಿದ್ದಾರೆ.
ಈ ಪುಸ್ತಕದಲ್ಲಿ 14 ಲೇಖನಗಳು ಇದ್ದು, ನಯಸೇನನ ಧರ್ಮಾಮೃತ, ಬಸವಣ್ಣನವರು ಮತ್ತು ಜಾಗತಿಕ ದಾರ್ಶನಿಕರು, ಶಬ್ದಮಣಿ ದರ್ಪಣದ ಕಾವ್ಯಾಂಶಗಳು, ರಾಘವಾಂಕನ ಹರಿಶ್ಚಂದ್ರ ಕಾವ್ಯದ ಒಂದು ಪದ್ಯ, 14 ಸಂಭಾಷಣೆಗಳು, ತತ್ವ ಪದಕಾರ, ಬಸವನಗೌಡ ತಳವಾರಗೇರಿ, ಕೆ.ಎಸ್. ನ ಅವರ ಪ್ರಣಯೇತರ ಕವಿತೆ, ಚಂದ್ರಗಿರಿ ತೀರದಲ್ಲಿ, ‘ಕಾಡುವ ಕಾಡೂರು’ ‘ದೇಜಾವು” ಎಂಬ ಮಾನವಿಯೊಳಗೆ ನಾವೆಲ್ಲರೂ ಖೈದಿಗಳು ಜಾನಪದ ವಿಜ್ಞಾನ ಬೇರು ಆಧುನಿಕ ವಿಜ್ಞಾನ, ಹೂವು ಕನ್ನಡ ಸಾಹಿತ್ಯ ಮತ್ತು ಅಂತರ್ಜಾಲ, ಯುವಜನತೆ ಮತ್ತು ಪರಿಸರ ಸಮತೋಲನ, ನನ್ನೂರು ನನಗೆ ಸನಿಬೆಲ್ಲ, ಸಾತಪ್ಪ ಭ. ಟೋಪಣ್ಣವರ ವೀರ ಸ್ವಾತಂತ್ರಯೋಧ, ಹೀಗೆ 14 ಲೇಖನಗಳು ಪ್ರಬುದ್ಧವಾಗಿವೆ.
ಬೆನ್ನುಡಿಯನ್ನು ಡಾ|| ಕಲ್ಯಾಣರಾವ ಜಿ. ಪಾಟೀಲ, ಅವರು ಬರೆದಿದ್ದು ಎಲ್ಲ ಲೇಖನಗಳನ್ನು ಜಗತ್ ಪ್ರಸಿದ್ದ ಉದ್ದರಣೆ ಕಾವ್ಯೋಕ್ತಿಗಳೊಂದಿಗೆ ಪ್ರಾರಂಭಿಸಿರುವುದು ನಡು-ನಡುವೆ ಅಚ್ಚುಕಟ್ಟಾದ ಅಡಿ ಟಿಪ್ಪಣಿಗಳನ್ನು ಉಲ್ಲೇಖಿಸಿರುವುದು ಕೊನೆಯಲ್ಲಿ ವ್ಯವಸ್ಥಿತವಾಗಿ ಆಕರ ಕೃತಿಗಳನ್ನು ನಮೂದಿಸಿರುವುದು ಲೇಖಕರ ವಿಸ್ತೃತ ಅಧ್ಯಯನಕ್ಕೆ ನಿದರ್ಶನವಾಗಿವೆ ಎಂದಿದ್ದಾರೆ.
ಹೊಸಗನ್ನಡದಲ್ಲಿ ಕಾವ್ಯ ರಚಿಸುವೆನೆಂದು ಹೇಳಿಕೊಂಡು ಸಂಸ್ಕೃತವನ್ನು ಬಳಸುವವನು ಕವಿಯೇ? ಕನ್ನಡ ಭಾಷೆಗೆ ಸಾಕಷ್ಟು ಸತ್ವವಿರುವಾಗ ಅದನ್ನೇ ಕಾವ್ಯದ ಭಾಷೆಯನ್ನಾಗಿ ರೂಢಿಸಿಕೊಳ್ಳಬೇಕು ಎಂಬ ವಾದಕ್ಕೆ ಮುನ್ನುಡಿ ಬರೆದವನು ನಯಸೇನ.
ಬಸವಣ್ಣನವರು ಮತ್ತು ಜಾಗತಿಕ ದಾರ್ಶನಿಕರು, ಎಂಬ ಲೇಖನವು ಬಸವಣ್ಣ ಮತ್ತು ಬುದ್ಧ ಮಹಾವೀರ, ಮಹಮ್ಮದ್ ಪೈಗಂಬರ್, ಏಸು, ಸಾಕ್ರೆಟಿಸ್, ಪ್ಲೇಟೋ, ಅರಿಸ್ಟಾಟಲ್, ಕನ್‍ಫ್ಯೂಸಿಯಸ್. ಮಾರ್ಟಿನ್ ಲೂಥರ್ ಕಿಂಗ್, ಕಾರ್ಲ್ ಮಾರ್ಕ್ಸ್, ನೆಲ್ಸನ್ ಮಂಡೇಲಾ, ಮದರ ತೆರೆಸಾ, ಆಲ್ಬರ್ಟ ಐನ್‍ಸ್ಟೆನ್, ಜಾಗತಿಕ ದಾರ್ಶನಿಕರೊಂದಿಗೆ ಬಸವಣ್ಣನವರ ದೃಷ್ಟಿ ಧೋರಣೆಗಳನ್ನು ಕುರಿತು ಚರ್ಚಿಸಿದ್ದಾರೆ.
ಶಬ್ದಮಣಿ ದರ್ಪಣದಲ್ಲಿ ವ್ಯಕ್ತವಾದ ಕೇಶಿರಾಜನ ಪ್ರತಿಭೆ ಪಾಂಡಿತ್ಯ ಹಾಗೂ ರಸಿಕತೆಗಳು ಅದ್ವಿತೀಯವಾದವು. ಸೂತ್ರ ಮತ್ತು ವೃತ್ತಿಗಳಲ್ಲಿ ಅವನ ಕವಿತಾ ಶಕ್ತಿಯು ತನಗೆ ಬೇಕಾದ ರೀತಿಯಲ್ಲಿ ಪ್ರಕಟವಾಗಿದ್ದರೆ, ಪ್ರಯೋಗ ಪದ್ಯಗಳಲ್ಲಿ ಬೃಹತ್ಪ್ರಮಾಣದಲ್ಲಿ ಬೆಳೆದಿದೆ. ಅವನ ಪದ ಪ್ರೌಢಿಮೆ, ಸುರ್ದಿರ್ಘ ಸಮ ಸೋಕ್ತಿಗಳಲ್ಲಿ ರಮ್ಯೋಕ್ತಿಗಳಿರುವುದು ಬೆರಗುಗೊಳಿಸುತ್ತದೆ.
ರಾಘವಾಂಕನ ಸಂಭಾಷಣಾ ಚತುರತೆಗೆ ಈ ಪದ್ಯವು ಅತ್ಯುತ್ತಮ ನಿದರ್ಶನವಾಗಿದೆ. ಆರು ಸಾಲಿನ ಈ ಒಂದೇ ಪದ್ಯದಲ್ಲಿ ರಾಘವಾಂಕನು ವಿಶ್ವಾಮಿತ್ರ-ಹರಿಶ್ಚಂದ್ರರ ಮಧ್ಯೆ ನಡೆದ 14 ಸಂಭಾಷಣೆಗಳನ್ನು ಸಂಗ್ರಹಗೊಳಿಸಿದ್ದಾನೆ. ಬೇರೆ ಯಾವ ಕವಿಗಳಲ್ಲಿಯೂ ಈ ರೀತಿಯ ಸಂಭಾಷಣಾ ಶಿಲ್ಪವನ್ನು ನಾವು ಕಾಣಲಾರೆವು, ಆ ಸಂಭಾಷಣೆಯನ್ನು ತಾವು ಓದಿಯೇ ಅರಿಯಬೇಕು.
ಚಂದ್ರಗಿರಿ ತೀರದಲ್ಲಿ ಮಾರ್ಕ್ಸ್ ಹೇಳುವಂತೆ ಒಂದು ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಸ್ರೀ-ಪುರುಷ ಸಂಬಂಧದ ಸ್ವರೂಪವು ಮಾನವನು ತನ್ನ ಪಶು ಸ್ಥಿತಿಯಿಂದ ಮಾನವತೆ ದಿಕ್ಕಿನಲ್ಲಿ ಎಷ್ಟು ದೂರ ಒಂದು ಕಾಲಘಟ್ಟದಲ್ಲಿ ಸಾಗಿದ್ದಾನೆಂಬುದನ್ನು ಸ್ಪಷ್ಟವಾಗಿ ಗುರುತಿಸುತ್ತದೆ.
ಆದರೆ ಇಂತಹ ಕ್ರೂರ ನಿಯಮಗಳಿಂದಾಗಿ ನಾವಿನ್ನೂ ಪಶು ಸ್ಥಿತಿಯಲ್ಲಿಯೇ ಇದ್ದೇವೆ, ಎನ್ನುವುದನ್ನು ಸಂಪ್ರದಾಯವಾದಿಗಳು ಪ್ರತಿಪಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು “ತ್ರಿವಳಿ ತಲಾಖ್ ನಿಷೇಧ” ಕಾನೂನು ಜಾರಿಗೆ ತಂದಿರುವದು ಆಶಾದಾಯಕ ಬೆಳವಣಿಗೆಯಾಗಿದ್ದು, ಈ ಕಾದಂಬರಿಯ ಪ್ರಮುಖ ಕಾಳಜಿಯಾಗಿದೆ.
‘ಕಾಡುವ ಕಾಡೂರು’ ನಿಜವಾಗಿಯೂ ಓದುಗರನ್ನು ಕಾಡುವ ಚಿಂತನೆಗೆ ಹಚ್ಚುವ ಕಾದಂಬರಿಯಾಗಿದೆ. ಬಿ.ಎಲ್. ವೇಣು ಅವರು ಜನರು ಓದಭೌದ್ರಿ ಎಂದು ಪ್ರಶಂಸಿಸುತ್ತಾರೆ.
‘ದೇಜಾವು’ ಎಂಬ ಮಾನವಿಯೊಳಗೆ ಅನುಷ್ ಶೆಟ್ಟಿಯವರ ಖೈದಿಯಾಗಲೇಬೇಕು ಅದರಲ್ಲೂ ಕಾದಂಬರಿಯಲ್ಲಿ ಗಿಲ್ಬರ್ಟನ ಡೈರಿಯಲ್ಲಿನ ಹೇಳಿಕೆ ವಿವರಗಳು ಕೈ ಬರಹಗಳಂತೆಯೇ ಇರುವುದು ನೀವು ನಿಮ್ಮೊಳಗೆ ಕಳೆದು ಹೋಗಲು ‘ಖೈದಿ’ ಯಾಗಲು ನಿಜವಾದ ಸ್ವಾತಂತ್ರ್ಯದ ಅನುಭವ ಪಡೆಯಲು ಈ ಕಾದಂಬರಿಯನ್ನು ಒಮ್ಮೆ ಓದಿನೋಡಿ.
ಕನ್ನಡ ಸಾಹಿತ್ಯ ಮತ್ತು ಅಂತರ್ಜಾಲ ಎಂಬ ಲೇಖನ ಬ್ಲಾಗ್‍ಗಳು ಯುಟ್ಯೂಬಗಳು ವಾಟ್ಸಪ್, ಇನಸ್ಟಾಗ್ರಾಂ, ಮೆಸೆಂಜರ್, ಟ್ವಿಟರ್ ಮತ್ತು ಮುಖಪುಟಗಳಂತೆ ಆ್ಯಪ್ ಗಳಲ್ಲಿ ಸಾಹಿತ್ಯ ಪ್ರಕಟಣೆ ಮತ್ತು ಚರ್ಚೆಗಳು ಹೇಗೆಲ್ಲಾ ನಡೆಯುತ್ತಿವೆ, ಇದರಿಂದ ಓದುವ ವರ್ಗಕ್ಕೆ ಆಗುವಂತಹ ಉಪಯೋಗಗಳೇನು ಎಂಬುದರ ಬಗೆಗೆ ಮಾಹಿತಿ ನೀಡಲಾಗಿದೆ. 21 ನೇ ಶತಮಾನದಲ್ಲಿ ಆಧುನಿಕ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿನ ಕ್ಷಿಪ್ರ ಪ್ರಗತಿಯ ಜನಮನದತ್ತ ಸಾವಧಾನವಾಗಿ ಸಾಗುತ್ತಿದ್ದ, ಕಾಲ ಇದೀಗ ಅಂತ್ಯಗೊಳ್ಳುತ್ತದೆ.
ರಾಜಶೇಖರ ಬಿರಾದಾರ ಅವರಿಂದ ಇನ್ನೂ ಹೆಚ್ಚಿನ ಕೃತಿಗಳು ಹೊರಬರಲಿ ಎಂದು ಕನ್ನಡ ಶೌರತ್ವದ ಲೋಕದ ಪರವಾಗಿ ಹಾರೈಸುತ್ತೇನೆ.
ಇವರ ಚರವಾಣಿ 9740954140.
ಶ್ರೀ ಎಂ.ವಾಯ್.ಮೆಣಸಿನಕಾಯಿ
ಬೆಳಗಾವಿ
9449209570.