ಪುಸ್ತಕದ ಹೆಸರು : ಮಂಜು ಮುಸುಕಿದ ಹಾದಿ ( ಕಾದಂಬರಿ )
ಲೇಖಕರು : ವಿದ್ಯಾ ರೆಡ್ಡಿ
ಪ್ರಕಾಶಕರು : ಬಿಂದು ಲಿಲತ ಕಲೆ ಹಾಗೂ ಜಾನಪದ ಅಧ್ಯಯನ ಕೇಂದ್ರ, ಗೋಕಾಕ
ದ್ವಿತೀಯ ಮುದ್ರಣ : ೨೦೨೧
ಪುಟಗಳು : ೧೨೨
ಬೆಲೆ : ೧೩೦/-
ಮಂಜು ಮುಸುಕಿದ ಹಾದಿ ಕಾದಂಬರಿ ಆಜೂರ ಪ್ರಶಸ್ತಿ” ಪಡೆದ ಕೃತಿ ಆಗಿದೆ ಹಾಗೂ ವಿದ್ಯಾ ರೆಡ್ಡಿಯವರು ಈ ಕಾದಂಬರಿಯನ್ನು ತನ್ನ ಅತ್ತೆ-ಮಾವಂದಿರ ಅನಂತ ಪ್ರೀತಿಗೆ ಅರ್ಪಣೆ ಮಾಡಿದ್ದಾರೆ, ಇದು ವಿಶೇಷ.
ಮುನ್ನಡಿಯನ್ನು ಹಿರಿಯ ಸಾಹಿತಿ ಮಹಾಲಿಂಗ ಮಂಗಿ ಅವರು ಬರೆದಿದ್ದಾರೆ. ಕಾದಂಬರಿಗಾರ್ತಿ ತಮ್ಮ ಅನುಭವದ ಸಾಧ್ಯತೆಯ ಮಿತಿಯಲ್ಲಿ ಯಶಸ್ವಿಯಾಗಿದ್ದಾರೆ. ನರಸಾಪುರ ಹಳ್ಳಿ ಕೇಡುಗಾಲಕ್ಕೆ ನಿಂಗಪ್ಪಾ ಎಂಬ ಮಾಟ-ಮಂತ್ರ ಯಂತ್ರ-ತಂತ್ರ ವಿದ್ಯೆಯಲ್ಲಿ ವಾಮಾಚಾರಿಯಾಗಿ ವರ್ತಿಸುತ್ತಾನೆ. ಮೋಸ ವಂಚನೆಯೇ ಅವನ ದಂಧೆ, ಪರಮನೀಚ ಪಾಪಿ ಭಿಕಾರಿಯಾಗಿ ಕೈ ಬೀಸಿಕೊಂಡು ಬಂದು ಸಾಕಷ್ಟು ಆಸ್ತಿ ಗಳಿಸುತ್ತಾನೆ. ಮಾಲಾ, ಶೀಲಾ ಮತ್ತೊಬ್ಬ ದಂಡಪಿಂಡ ಮೂರು ಮಕ್ಕಳು ಪಾಪದ ಕೊಡ ತುಂಬಿ ವಾಮಾಚಾರ ಕ್ಷಯ ರೋಗದಿಂದ ಹಾಸಿಗೆ ಹಿಡಿಯುತ್ತಾನೆ. ನೋಯ್ದು ನವೆದು ಆತನ ಸ್ಥಿತಿ ಹದಗೆಡುತ್ತದೆ.
ಮಾಲಾ ಹಿರಿಯ ಮಗಳು ಬಿಂಕದ ಸಿಂಗಾರಿ ದಾರಿಬಿಟ್ಟ ಹೆಣ್ಣು, ಎರಡನೇಯಾಕೆ ಕಥಾನಾಯಕಿ ಶೀಲಾ ಸಾಮಾನ್ಯ ರೂಪಿನ ಮಾನವೀಯ ಸಾತ್ವಿಕ ಹೆಣ್ಣು ಮಗಳು. ಕೊನೆಯ ಮಗ ಉಡಾಳ ಫಟಿಂಗ ಕೇಡಿ ಮನೆಯಲ್ಲಿದ್ದದ್ದನ್ನು ದೋಚುವ ಮನೆಹಾಳ ಸರ್ವಗುಣ ಸಂಪನ್ನ. ನಿಂಗಪ್ಪನ ಪತ್ನಿಯು ಆಜಾರಿ ಬಿದ್ದು, ಮಗ ದೊಡ್ಡ ಮಗಳು ಪರಾರಿಯಾದಾಗ ಶೀಲಾ ತಂದೆ-ತಾಯಿ ಸೇವೆ ಮಾಡುತ್ತಾಳೆ.
ಅಕ್ಷರ ಓದದೆ ಹೋದರೂ ಮನೆ ಅಡವಿಟ್ಟು ಮೋಸಕ್ಕೆ ಬಲಿಯಾಗಿ ಬೀದಿ ಪಾಲಾಗಿ ಪಾತಕ ಲೋಕದಲ್ಲಿ ಸಿಕ್ಕವರು ರಣಹದ್ದುಗಳು ಹೃದಯವಂತರ ಮನಸ್ಸು ಹಿಂಡಿ ಮರುಕ ತರುತ್ತವೆ. ಕೊನೆಗೆ ಮಗ ಸಹ ತಿರಸ್ಕರಿಸುತ್ತಾನೆ. ಉತ್ತಮ ಕಥಾ ಹಂದರವಿದೆ ಎಂದಿದ್ದಾರೆ.
ಪ್ರೋ. ಟಿ.ಬಿ. ತಳವಾರ ಪ್ರಾಚಾರ್ಯರು ಹಾರೈಕೆ ಮಾಡಿದ್ದು ಈ ಕಾದಂಬರಿಯಲ್ಲಿ ಒಂದು ಶೋಷಿತ ಹೆಣ್ಣಿನ ಬಾಲ್ಯ ಜೀವನದಲ್ಲಿ ಅವಳು ಅನುಭವಿಸಿದ ಕಷ್ಟ, ಮೌನದಲ್ಲಿ ತನ್ನನ್ನು ತಾನು ಕಾಪಾಡಿಕೊಳ್ಳಲು ಪಟ್ಟ ಪಾಡು, ಹೊಟ್ಟೆಗಾಗಿ ಪಡಬೇಕಾದ ಕಷ್ಟ ಮತ್ತು ಅವಳ ಜೀವನದ ದಾರುಣ ಅಂತ್ಯ, ಕಾದಂಬರಿ ಮೂಲಕ ಸಮಾಜದ ಕಣ್ಣು ತೆರೆಯುವಂತೆ ಬರೆದಿದ್ದಾರೆ, ಎಂದು ಹಾರೈಸಿದ್ದಾರೆ.
ಡಾ. ವೈ.ಎಂ.ಯಾಕೊಳ್ಳಿ ಸಾಹಿತಿಗಳು, ಸವದತ್ತಿ ಆಶಯ ನುಡಿಯಲ್ಲಿ ಕಾದಂಬರಿಕಾರರ ನಿರೂಪಣಾ ಶೈಲಿ ಅತ್ಯುತ್ತಮವಾಗಿದೆ ಎಂದಿದ್ದಾರೆ. ಶೀಲಾಳ ಯಾವುದೇ ತಪ್ಪಿಲ್ಲದಿದ್ದರೂ ಆಕೆ ಅನುಭವಿಸುತ್ತಾ ಬಂದ ದುಖಃ ಶಾಪವಾಗಿ ಕಾಡುತ್ತದೆ. ಇಡೀ ಕಾದಂಬರಿಯಲ್ಲಿ ವ್ಯಾಪಿಸಿರುವ ಪಾತ್ರ ಶೀಲಾಳದು. ಎಷ್ಟೇ ಕಷ್ಟ ಬಂದರೂ ಅಂಜದ ಗಟ್ಟಿ ಹೆಣ್ಣುಮಗಳು ಆಕೆ, ಆದರೆ ಅವಳ ಬಾಳಿನಲ್ಲಿ ಬಂದ ದುರಂತವನ್ನು ಕಾದಂಬರಿಕಾರರು ಎಲ್ಲಿಯೂ ಅತಿಯಾಗಿ ಕತ್ರಿಮಕ್ಕೆಳಸದೇ ಸಹಜವಾಗಿ ಚಿತ್ರಿಸಿದ್ದಾರೆ. ಈ ಕಾದಂಬರಿ ಎಲ್ಲರ ಮನ ಸೆಳೆಯುತ್ತದೆ, ಎಂದಿದ್ದಾರೆ.
ಪ್ರೋ. ಸಂಗಮೇಶ ಗುಜಗೊಂಡ ಪ್ರಾಧ್ಯಾಪಕರು, ಮುನ್ನುಡಿ ಬರೆದಿದ್ದು ಈ ಕಾದಂಬರಿ ಸ್ರ್ತೀ ಶೋಷಣೆಯ ಸುತ್ತ ಹೆಣೆದುಕೊಂಡಿದೆ. ವಸ್ತುವನ್ನು ಸುಂದರವಾಗಿ ವಿನ್ಯಾಸಗೊಳಿಸಿ ಓದುಗರಿಗೆ ಮುದ ನೀಡುವಂತೆ ಬರೆದಿದ್ದಾರೆ. ಮೊದಲ ಹೆಜ್ಜೆಯಲ್ಲಿ ಯಶದ ಗುರುತುಗಳನ್ನು ಮೂಡಿಸಿದ್ದಾರೆ.
ಮಾರುತಿ ದಾಸಣ್ಣವರ ಸಹಸ್ಪಂದನದಲ್ಲಿ ಲೇಖಕಿಯೊಳಗಿನ ಸ್ತ್ರೀ ತನ್ನ ಅಭಿವ್ಯಕ್ತಿಯಲ್ಲಿ ಮುಕ್ತವಾಗುತ್ತಿದ್ದಾಳೆ, ದಿಟ್ಟೆಯಾಗುತ್ತಿದ್ದಾಳೆ. ಇದನ್ನು ಪುರುಷ ವರ್ಗವು ತೆರೆದ ಮನಸ್ಸಿನಿಂದ ಸ್ವಾಗಿತಿಸುವುದು ಆರೋಗ್ಯಕರ ನಡೆ ಎಂದಿದ್ದಾರೆ.
ಪ್ರೋ ಎಸ್. ಯು. ಸಜ್ಜನ ಶೆಟ್ಟಿ, ಗದಗ ಅವರು ಒಟ್ಟು ಕಾದಂಬರಿಯ ಹತ್ತು ಅಧ್ಯಾಯಗಳಲ್ಲಿ ಹಿಡಿದಿಡುವ ಪ್ರಯತ್ನ ಪರಿಪೂರ್ಣವಾಗಿದೆ. ಸಮಾಜದಲ್ಲಿ ಎಷ್ಟೆ ಕಷ್ಟಗಳು ಎದುರಾದರೂ ದಿಟ್ಟವಾಗಿ ನಿಲ್ಲಬೇಕು, ಇದ್ದು ಸಾಧಿಸಬೇಕು ಎಂಬ ಸಂದೇಶ ರವಾಣಿಸಿದರೆ, ಇನ್ನೂ ಆ ಪಾತ್ರ ಕಾದಂಬರಿಗೇ ಹೊಸ ಬೆಳಕು ಮೂಡುವುದೇನು? ಎಂಬುವುದು ನನ್ನ ಅಭಿಮತ ಎಂದಿದ್ದಾರೆ.
ಸಹನಾ ಕಾಂತಬೈಲು ಮಡಿಕೇರಿ ಡಾ. ಸಂಗಮೇಶ ತಮ್ಮನಗೌಡ್ರ, ಪ್ರೋ. ಗಂಗಾಧರ ಮಳಗಿ, ಎಸ.ಆರ್. ಹಿರೇಮಠ, ಶ್ರೀ. ಡಿ.ಎಸ್. ವಂಟಗೂಡಿ, ಶ್ರೀಮತಿ. ಭಾಗೀರಥಿ ಕುಳಲಿ, ರಾಜೇಶ್ವರಿ ಕಾಮೋಜಿ, ಶ್ರೀದೇವಿ ಮದ್ದಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕಾದಂಬರಿಯು ಸಮಾಜಕ್ಕೆ ಕೇವಲ ಸಂದೇಶ ನೀಡದು, ಸಮಾಜದ ಅನೇಕ ಸಮಸ್ಯೆಗಳಿಗೆ ಸಮಾಧಾನ, ಅನೇಕ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತದೆ. ಉತ್ತರ ಕರ್ನಾಟಕದ ಗಟ್ಟಿ ಭಾಷೆ ಇದೆ. ಮಾಡಬಾರದು, ಮಾಡಿದರೆ ಆಗಬಾರದ್ದು ಆಗುತ್ತದೆ ಎಂದು ತೋರಿಸುತ್ತದೆ. ಕೊನೆಗೆ ಇಹಲೋಕ ತ್ಯಜಿಸುವಲ್ಲಿ ಮುಗಿಯುವ ಈ ಕಾದಂಬರಿ ಬದಲಾಗುತ್ತಿರುವ ಸಾಮಾಜಿಕ ಸಂದರ್ಭದ ಮೇಲೆ ಬೆಳಕು ಚೆಲ್ಲುತ್ತದೆ. ಮುಖಪುಟ ಕಾದಂಬರಿ ಹೆಸರಿಗೆ ತಕ್ಕಂತೆ ಇದೆ, ಮುದ್ರಣ ಚೆನ್ನಾಗಿದೆ. ಓದುಗನನ್ನು ಓಡಿಸಿಕೊಂಡು ಕಥಾ ಹಂದರ ಸಾಗುತ್ತದೆ.
ಅಂದವಾದ ಮುಖಪುಟ, ಅಂದವಾದ ಮುದ್ರಣ ಹಾಗೂ ಆರೂಜ ಪ್ರಶಸ್ತಿ ಪಡೆದ ಕೀರ್ತಿ ಇದೆ. ಇವರ ಸಾಹಿತ್ಯ ಕೃಷಿ ನಿರಂತರವಾಗಿ ಸಾಗಲಿ, ಜನ-ಮನ ಗೆಲ್ಲಲಿ ಎಂದು ಆತ್ಮೀಯವಾಗಿ ಶುಭ ಹಾರೈಸುತ್ತೇನೆ. ಇವರ ಚರವಾಣಿ 9242252521.
ಎಮ್.ವೈ. ಮೆಣಸಿನಕಾಯಿ.
ಬೆಳಗಾವಿ
ಮೋ ನಂ. 9449209570.