ಮೂಡಲಗಿ: ಗರ್ಭಿಣಿ ಮತ್ತು ಬಾಣಂತಿಯರು, ಮಕ್ಕಳು ಪೌಷ್ಠಿಕ ಆಹಾರವನ್ನು ಸೇವಿಸಿ, ಸದೃಢವಾಗಿರಬೇಕೆಂದು ಮೂಡಲಗಿ ಶಿಶು ಯೋಜನಾಧಿಕಾರಿ ವಾಯ್. ಜಿ. ಗುಜನಟ್ಟಿ ಸಲಹೆ ನೀಡಿದರು.
ಕಲ್ಲೋಳಿ ಪಟ್ಟಣದ ಸಾಯಿ ಮಂದಿರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅರಭಾವಿ ಶಿಶು ಯೋಜನಾಧಿಕಾರಿ ಮೂಡಲಗಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಪೋಷಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ತಾಯಂದಿರು ಮತ್ತು ಮಕ್ಕಳ ಆರೋಗ್ಯದ ಕಡೆಗೆ ನಮ್ಮ ಇಲಾಖೆ ಗಮನ ಹರಿಸುತ್ತಿದೆ. ಪ್ರತಿ ತಿಂಗಳೂ ಪೌಷ್ಠಿಕ ಆಹಾರವನ್ನು ಅಂಗನವಾಡಿ ಕಾರ್ಯಕರ್ತರು ಮನೆ ಮನೆ ಮುಟ್ಟಿಸುತ್ತಾರೆ ಎಂದರು.
ಪೋಷಣಾ ಅಭಿಯಾನ, ಸೀಮಂತ ಕಾರ್ಯಕ್ರಮ, ಅನ್ನಪ್ರಾಶನ ಸೇರಿದಂತೆ ಸರ್ಕಾರದ ಯೋಜನೆಗಳು ಯಶಸ್ವಿಯಾಗಲು ತಾಯಂದಿರ ಪಾತ್ರ ಮುಖ್ಯ ಎಂದರು. ತಾಯಂದಿರಿಗೆ ರಂಗೋಲಿ, ಚಮಚೆ ಲಿಂಬು ಸ್ಪರ್ಧೆ ಸೇರಿದಂತೆ ಅನೇಕ ಸ್ಪರ್ಧೆಯನ್ನು ಏರ್ಪಡಿಸಿ ಇಲಾಖೆಯಿಂದ ಬಹುಮಾನಗಳನ್ನು ವಿತರಿಸಲಾಯಿತು.
ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷೆ ಕಸ್ತೂರಿ ಕುರಬೇಟ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾದ ಪಟ್ಟಣ ಪಂಚಾಯತ ಸದಸ್ಯೆ ರುಕ್ಮವ್ವ ನಾಂವಿ ದೀಪ ಬೆಳಗಿಸಿದರು. ಮಂಜುಳಾ ಹಿರೇಮಠ ಕೇಕ್ ಕತ್ತರಿಸುವ ಮೂಲಕ ವಿಶ್ವ ಮಹಿಳಾ ದಿನಾಚರಣೆಗೆ ಚಾಲನೆ ನೀಡಿದರು.
ಅತಿಥಿಗಳಾಗಿ ಸಹಾಯಕ ಶಿಶು ಯೋಜನಾಧಿಕಾರಿ ಶ್ರೀಮತಿ ಆರ್. ಡಿ ಭೋವಿ, ಉಮಾ ಬಳೊಳ್ಳಿ, ಮೇಲ್ವಿಚಾರಕಿ ಚಂಪಾ ಸುಣಗಾರ, ಅಶ್ವಿನಿ ನಡಗಡ್ಡಿ, ಅವಕ್ಕಾ ಬಡಿಗೇರ, ಪ್ರೇಮಕಲಾ ಹತಪಾಕಿ, ಮಂಗಲಾ ಪತ್ತಾರ, ರತ್ನವ್ವಾ ಕಂಕಣವಾಡಿ, ಕಮಲಾ ಕುರಬೇಟ, ರತ್ನವ್ವಾ ಪಾಟೀಲ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪರಿಜಾನ ನದಾಫ್ ಸ್ವಾಗತಿಸಿದರು. ದೀಪಾ ಪತ್ತಾರ ಕಾರ್ಯಕ್ರಮ ನಿರೂಪಿಸಿದರು ಶಿಲ್ಪಾ ಸೋಮನಟ್ಟಿ ವಂದಿಸಿದರು.