ಸಿಂದಗಿ- ಪ್ರಜಾಪ್ರಭುತ್ವದ ಗಟ್ಟಿ ನೆಲೆಯಾಗಿರುವ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಶಾಲಾ ಸಂಸತ್ತಿನ ಚುನಾವಣೆಯನ್ನು ಚುನಾವಣೆಯ ಪ್ರಕ್ರಿಯೆಗಳ ಎಲ್ಲಾ ಹಂತಗಳ ಆಧಾರದ ಮೇಲೆ ಮೂಡಿಸಲಾಗುತ್ತಿದೆ ಎಂದು ಪ್ರಾಚಾರ್ಯ ವಿ. ಬಿ. ಲಮಾಣಿ ಹೇಳಿದರು.
ಅವರು ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಶ್ರೀ ಪದ್ಮರಾಜ ಪಬ್ಲಿಕ್ ಶಾಲೆಯಲ್ಲಿ 2024-25 ನೇ ಸಾಲಿನ ಶಾಲಾ ಸಂಸತ್ತು ರಚನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಚುನಾವಣೆಯ ಪ್ರಕ್ರಿಯೆಗಳ ಜ್ಞಾನವನ್ನು ಮಕ್ಕಳಲ್ಲಿ ಮೂಡಿಸುವುದು ಅಗತ್ಯವಾಗಿದೆ. ಇಂದಿನ ಮಕ್ಕಳೇ ನಾಳಿನ ನಾಗರಿಕರು ಎಂಬ ಮಾತಿನಂತೆ ನಾಗರಿಕತ್ವದ ಪ್ರಜ್ಞೆಯನ್ನು ಹಾಗೂ ಚುನಾವಣಾ ಆಯೋಗದ ಅನೇಕ ನೀತಿ ನಿಯಮಗಳನ್ನು ಶಾಲಾ ಸಂಸತ್ತಿನ ಚುನಾವಣೆಯ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಶಾಲಾ ಸಂಸತ್ತು ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತು ತರಗತಿಯ ನಾಯಕನಿಗೆ ಮತ ಚಲಾವಣೆ ಮಾಡಿದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಚುನಾವಣಾ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ಶಾಲಾ ಸಂಸತ್ತು ರಚನಾ ಕಾರ್ಯಕ್ರಮದಲ್ಲಿ ಶಾಲೆಯ ಸಿಬ್ಬಂದಿಗಳಾದ ರಾಣಿ ಜೋಗೂರ, ಕೆ.ಎಸ್.ಲಾತೂರ, ಎಸ್.ಎಸ್.ಪೋದ್ದಾರ, ಸಾವಿತ್ರಿ ಹಾಲಕೇರಿ, ಶ್ರೀಧರ ಮಲ್ಲೇದ, ಅರುಣಾ ಕವಲಗಿ, ಅಕ್ಷತಾ ಕಿಣಗಿ, ವಿಜಯಲಕ್ಷ್ಮೀ ಚೌಧರಿ, ಭಾರತಿ ಹಿರೇಮಠ, ನೀಲಮ್ಮ ಮಾರ್ಸ್ನಳ್ಳಿ, ನೀಲಮ್ಮ ಬಿರಾದಾರ್, ಅಭಿಷೇಕ ಬಿರಾದಾರ, ಕಲಾವತಿ ಹಿರೇಮಠ, ಸುರೇಶ ಸುಣಗಾರ ಸೇರಿದಂತೆ ಇತರರು ಇದ್ದರು.