ಪ್ರತಿದಿನವೂ ಪರಿಸರ ಕಾಳಜಿ ಮಾಡಬೇಕು – ಸಿದ್ಧಲಿಂಗ ಚೌಧರಿ

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

ಸಿಂದಗಿ: ಪರಿಸರವನ್ನು ಉಳಿಸಿದರೆ ಪರಿಸರ ನಮ್ಮನ್ನು ಉಳಿಸುತ್ತದೆ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು. ಊರಿಗೊಂದು ವನ, ಮನೆಗೊಂದು ಮರ ಎನ್ನುವ ಧ್ಯೇಯವಾಕ್ಯವನ್ನು ಪಾಲಿಸಿದರೆ ಮಾತ್ರ ಮುಂಬರುವ ದಿನಗಳಲ್ಲಿ ಭೂಮಿ ಮೇಲೆ ಜೀವರಾಶಿಗಳು ಬದುಕಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿದ್ಧಲಿಂಗ ಚೌಧರಿ ಹೇಳಿದರು.

ತಾಲೂಕಿನ ಬೂದಿಹಾಳ ಪಿ ಹೆಚ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರದಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಡೆದ ವಿಶ್ವ ಪರಿಸರ ದಿನದ ಪ್ರಯುಕ್ತ “ವಿಶ್ವ ಬಂಧು ಪರಿಸರ ಬಳಗ” ಅಧಿಕೃತ ಉದ್ಘಾಟನೆಗೊಳ್ಳುವ ಮೂಲಕ ಶಾಲಾ ಆವರಣದಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಡುವ  ಮೂಲಕ  ಅವರು ಮಾತನಾಡಿ, ವಿಶ್ವ ಬಂಧ ಪರಿಸರ ಬಳಗವು ಮುಂಬರುವ ದಿನಗಳಲ್ಲಿ ತಾಲೂಕಿನ 29 ಗ್ರಾಪಂಗಳಲ್ಲಿ 5 ಸಸಿಗಳಂತೆ ನೆಡುವ ಸಂಕಲ್ಪ ಇಟ್ಟುಕೊಂಡಿದ್ದು ಎಲ್ಲ ಗ್ರಾಮದ ಪ್ರತಿ ಮನೆ ಮನೆಯ  ಅಂಗಳಗಳಲ್ಲಿ  ಆಮ್ಲಜನಕದ ಸಮತೋಲನಕ್ಕೆ ಗಿಡ ಮರವು ಸಹಕಾರಿಯಾಗುವವು ಎಂದು ತಿಳಿಸಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ ಮಾತನಾಡಿ, ಕಾಡುಗಳು ನಾಶವಾಗಿ ಕಾಂಕ್ರೀಟ್‍ಮಯವಾಗುತ್ತಿದ್ದು ಕಾಂಕ್ರೀಟ್ ರಸ್ತೆಗಳಿಂದ ಮಳೆ ನೀರು  ಇಂಗದೇ  ಅಂತರ್ಜಲ ಕೊರತೆ ಕಾಡುತ್ತಿದೆ ಕಾರಣ ಮನೆ ಕಟ್ಟಲು ಪರವಾನಿಗೆ  ಕೊಡುವ   ಸಂದರ್ಭದಲ್ಲಿ  ಪಂಚಾಯ್ತಿ ಮತ್ತು ನಗರ ಸಭೆಗಳು  ಕಡ್ಡಾಯವಾಗಿ ಮರ ಬೆಳೆಸಬೇಕೆನ್ನುವ ಕಾನೂನು ಜಾರಿ ಮಾಡಬೇಕು ಅಲ್ಲದೆ ಸಿ ಸಿ ರಸ್ತೆಗಳ ಪಕ್ಕದಲ್ಲಿ ಗಿಡ ಮರ ಬೆಳೆಸಲು  ಸ್ಥಳ  ಬಿಡಬೇಕು ಹಸಿರು ಸಿರಿ ಬೆಳೆಯಲು ಸಾಧ್ಯ. ವರ್ಷಕ್ಕೊಮ್ಮೆ ಮಾತ್ರ ಪರಿಸರ ದಿನಾಚರಣೆ ಮಾಡದೆ ದಿನವೂ ಪರಿಸರದ ಕಾಳಜಿ ಮಾಡಬೇಕು ಎಂದರು.

- Advertisement -

ಕಾರ್ಯಕ್ರಮದಲ್ಲಿ ಬಂದಾಳ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಎ.ಎ.ದುರ್ಗದ ಹಾಗೂ ಕಾರ್ಯದರ್ಶಿ ಆರ್ ಎಂ.ಮುಜಾವರ, ಅರಣ್ಯ  ಇಲಾಖೆಯ ಅಧಿಕಾರಿ ಮಿಟ್ಟೆಸಾಬ ಮುಲ್ಲಾ ,ಪ್ರೌಢ ಶಾಲೆಯ ಶಿಕ್ಷಕರ ಸಂಘದ ಅಧ್ಯಕ್ಷ ಆರ್ ಎಚ್ ಬಿರಾದಾರ, ವಿಸ್ತರಣಾಧಿಕಾರಿ ಸುಭಾಸ ಪಾಟೀಲ ಹಾಗೂ  ಅಬಕಾರಿ  ಉಪ  ನೀರಿಕ್ಷಕ ಡಿ .ವಿ .ರಜಪೂತ, ಸಿಬ್ಬಂದಿ ಎನ್ ಎಸ್ ಸಾತಲಗಾಂವ, ಪ್ರಶಾಂತ ಗೌಡ ಪಾಟೀಲ, ಸಂಗನಗೌಡ ಪಾಟೀಲ, ಶಿಕ್ಷಕ ಮಹಾಂತಗೌಡ ತ.ಪಾಟೀಲ, ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಆನಂದ ಮಾಡಗಿ, ಶಿಕ್ಷಕರಾದ ಬಿ ಎಸ್ ದೇವರಮನಿ, ಆರ್.ಪಿ ಕಾಂಬಳೆ, ಪತ್ರಕರ್ತ ಪಂಡಿತ ಯಂಪೂರೆ, ಕಸಾಪ ಗೌರವ ಕಾರ್ಯದರ್ಶಿ ಬಸವರಾಜ ಅಗಸರ, ದೇವರ ಹಿಪ್ಪರಗಿ ಎನ್ ಪಿ ಎಸ್ ಶಿಕ್ಷಕರ ಸಂಘದ ಅಧ್ಯಕ್ಷ ಶಿವುಕುಮಾರ ಕಲ್ಲೂರ, ಮಾಹಾಂತೇಶ ನೂಲನವರ, ಸುನಂದಾ ಸಿಂದಗಿ, ಜಿ.ಎಂ.ಬಿರಾದಾರ, ಪರಸು ಬ್ಯಾಕೋಡ ಹಾಗೂ ಬೂದಿಹಾಳ ಪಿ ಹೆಚ್  ಗ್ರಾಮಸ್ಥರು  ಇದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!