ಬೀದರ – ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಶಾಸಕ ಬಸವರಾಜ ಪಾಟೀಲ ಯತ್ನಾಳ ವಿರುದ್ಧ ಸಚಿವ ಈಶ್ವರ ಖಂಡ್ರೆ ತಿರುಗೇಟು ನೀಡಿದ್ದು ಯತ್ನಾಳ ಅವರು ರಾಜಕೀಯ ದಲ್ಲಿ ಇರಲು ನಾಲಾಯಕ್ ಎಂದಿದ್ದಾರೆ.
ಸುದ್ದಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯತ್ನಾಳ ಅವರು ಯಾವಾಗಲೂ ಅನಾಗರಿಕವಾಗಿ ವರ್ತಿಸುತ್ತಾರೆ ಅದು ಅವರ ಸಂಸ್ಕೃತಿಯ ನ್ನು ತೋರಿಸುತ್ತದೆ ಇಂಥವರು ರಾಜಕೀಯದಲ್ಲಿ ಇರಲು ನಾಲಾಯಕ್ ಎಂದರು.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಮೊನ್ನೆ ನಡೆದ ಕೋಮುಗಲಭೆಯ ಹಿನ್ನೆಲೆ ಪ್ರತಿಪಕ್ಷಗಳ ವಾಗ್ದಾಳಿ ಕುರಿತಂತೆ ಮಾತನಾಡಿದ ಅವರು, ಪ್ರತಿಪಕ್ಷದವರಿಗೆ ಯಾವುದೇ ಕೆಲಸವಿಲ್ಲ, ಅಲ್ಲಿ ಇಲ್ಲಿ ಗಲಾಟೆ ಮಾಡಿಸುವುದು, ಸುಳ್ಳು ಆರೋಪ ಮಾಡುವುದು, ಅಭಿವೃದ್ಧಿ ಕುಂಠಿತ ಮಾಡುವುದು, ಜಾತಿ ಧರ್ಮಗಳ ಮಧ್ಯೆ ಜಗಳ ಹಚ್ಚುವುದೇ ಅವರ ಕೆಲಸ ಎಂದು ವಾಗ್ದಾಳಿ ನಡೆಸಿದರು.
ಈ ಪ್ರತಿಪಕ್ಷದವರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಬಾರದು ಎಂದೂ ಅವರು ಜನತೆಗೆ ಮನವಿ ಮಾಡಿಕೊಂಡರು.
ವರದಿ : ನಂದಕುಮಾರ ಕರಂಜೆ, ಬೀದರ